ಅಭಿಪ್ರಾಯ / ಸಲಹೆಗಳು

ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವ ಬಗ್ಗೆ

                 

 

 

                                                                 

 

 

 

ದಿನಾಂಕ:08.08.2023 ರಂದು ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯೊಂದು ವರದಿಯಾಗಿದ್ದು,  ಬೆಂಗಳೂರಿಗೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಬರುವವರು ಯಾವುದೇ ಸಂದರ್ಭದಲ್ಲೂ ರಾತ್ರಿ ಬರಲು ಪ್ರಯತ್ನಿಸಬೇಡಿ,     ಪ್ರಸ್ತುತ ಎಕ್ಸ್‌ಪ್ರೆಸ್ ಹೈವೇ ಕಾರುಗಳಲ್ಲಿ ಪುಂಡರು ಮತ್ತು ದರೋಡೆಕೋರರು ತಿರುಗಾಡುತ್ತಿದ್ದಾರೆ ಎಂದು ಇತ್ಯಾದಿಯಾಗಿ  ಫೇಸ್‌ ಬುಕ್‌ ನಲ್ಲಿ  ವರದಿ ಮಾಡಿರುತ್ತಾರೆ.

ಸದರಿ ವಿಚಾರವನ್ನು ಫ್ಯಾಕ್ಟ್‌ ಚೆಕ್‌ ಮಾಡಿ ನೋಡಲಾಗಿ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಲಾಗಿದ್ದ ಪೋಟೊ ಬೆಂಗಳೂರು – ಮೈಸೂರು ಹೆದ್ದಾರಿಗೆ ಸಂಬಂಧಿಸಿರುವುದಿಲ್ಲ. ಇದಲ್ಲದೆ ಸದರಿ ವಿಚಾರದಲ್ಲಿ ಹೇಳಿರುವಂತೆ ಅಂತಹ ಪ್ರಕರಣಗಳು ವರದಿಯಾಗಿರುವುದಿಲ್ಲ. ಈ ಹಿಂದೆ ವರದಿಯಾಗಿದ್ದ ಬಹುತೇಕ ಪ್ರಕರಣಗಳನ್ನು ಪತ್ತೆ ಮಾಡಲಾಗಿರುತ್ತದೆ. ಇದೋಂದು ಸುಳ್ಳು ಸುದ್ದಿಯಾಗಿದ್ದು ಸಾರ್ವಜನಿಕರು ಇದನ್ನು ನಂಬದಂತೆ ಈ ಮೂಲಕ ಕೋರಲಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ  ಸಾರ್ವಜಿನಿಕರು 24*7 ನಿರ್ಭೀತಿಯಿಂದ ಸಂಚರಿಸಬಹುದಾಗಿದ್ದು, ಸಾರ್ವಜನಿಕರ ಸುಗಮ ಪ್ರಯಾಣಕ್ಕೆ ಅನೂಕುಲವಾಗುವಂತೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ  ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸಲಿದ್ದಾರೆ.  ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ 112 ಗೆ ಕರೆ ಮಾಡಿ ಪೊಲೀಸ್‌ ಸಹಾಯ ಪಡೆಯಬಹುದಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-08-2023 04:48 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಮನಗರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080