ಅಭಿಪ್ರಾಯ / ಸಲಹೆಗಳು

ನಮ್ಮ- 112

ತುರ್ತು ಸ್ಪಂದನ ಸಹಾಯ ವ್ಯವಸ್ಥೆ

 

      ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಎಂ.ಎಹೆಚ್.ಎ ದೆಹಲಿ, ಪ್ರಾರಂಭಿಸಿದ ಯೋಜನೆಯಾಗಿದ್ದು. ಇದನ್ನು ದಿನಾಂಕ: 31.10.2019 ರಂದು ಉದ್ಘಾಟಿಸಲಾಯಿತು. ಸಿಸ್ಟಮ್ ಕೇಂದ್ರೀಕೃತ  ಕರೆ ಸ್ವಾಗತವನ್ನು ಒದಗಿಸುತ್ತದೆ. 112 ತುರ್ತು ಸಂಪರ್ಕ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ತುರ್ತು ಸಂದರ್ಭಗಳು, ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ಇಆರ್‍ಆರ್‍ಎಸ್)-112 ಅನ್ನು ಒದಗಿಸುವ ಉದ್ದೇಶದಿಂದ  ಭಾರತ ಸರ್ಕಾರದ  ಉಪಕ್ರಮ ಪ್ಯಾನ್ ಇಂಡಿಯಾ ಸಿಂಗಲ್ ತುರ್ತು ಸಹಾಯವಾಣಿ ಸಂಖ್ಯೆ 112 ನಂತಹ ಎಲ್ಲಾ ತುರ್ತು ಸೇವೆಗಳನ್ನು ಸಂಯೋಜಿಸುತ್ತದೆ. ಪೊಲೀಸ್ (100), ಅಗ್ನಿಶಾಮಕ (101), ಆಂಬ್ಯುಲೆನ್ಸ್ (102/108) ಮತ್ತು ಇತರರು ತೊಂದರೆಯಲ್ಲಿರುವ ಜನರ ವಿನಂತಿಯನ್ನು ಧ್ವನಿ ಕರೆ, ಎಸ್‍ಎಂಎಸ್, ಇ-ಮೇಲ್, ಪ್ಯಾನಿಕ್ ಎಸ್‍ಒಎಸ್ ವಿನಂತಿ, ವೆಬ್ ವಿನಂತಿ ಮತ್ತು 112 ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಹರಿಸಬಹುದಾಗಿದೆ. ಸದರಿ 112 ಮುಖ್ಯ ಸರ್ವರ್ ಹೆಚ್ಚುವರಿ ಮಹಾ ನಿರ್ದೇಶಕರು  ಸಿಎಲ್ & ಎಂ ಕಛೇರಿ, ಎಂ.ಜಿ. ರಸ್ತೆ, ಬೆಂಗಳೂರಿನಲ್ಲಿದೆ.

 

   ತೊಂದರೆಯಲ್ಲಿರುವ ವ್ಯಕ್ತಿಯು ಯಾವುದೇ ವಿಧಾನಗಳಲ್ಲಿ ತೊಂದರೆಯ ಸಂಕೇತವನ್ನು ಕಳುಹಿಸಿದಾಗ, ಆ ಸಂಕೇತವನ್ನು ಪಿಎಸ್‍ಎಪಿ ಗೆ ರವಾನಿಸಲಾಗುತ್ತದೆ. ಸಿಆರ್‍ಎಂ ಏಜೆಂಟ್ ಸದರಿ ಸಂಕೇತವನ್ನು/ಸಿಗ್ನಲ್‍ನ್ನು ಸ್ವೀಕರಿಸುತ್ತಾನೆ. ಅಗತ್ಯ ಮಾಹಿತಿಯನ್ನು ತೆಗೆದುಕೊಂಡು ಮತ್ತು  ಅಗತ್ಯ ಸೇವೆಯನ್ನು ಗುರುತಿಸುವ  ಮೂಲಕ ಅದನ್ನು ನೊಂದಾಯಿಲಾಗುತ್ತದೆ. ನಂತರ ಅದನ್ನು ರವಾನೆಯ ಭಾಗವಾಗಿ ಸಂಬಂಧಿತ ಜಿಲ್ಲೆ ಸಿಎಡಿ (Computer Aided Dispatcher) ಕನ್ಸೋಲ್‍ಗೆ ಈವೆಂಟ್‍ನ್ನು ಕಳುಹಿಸಲಾಗುವುದು. ಕಳುಹಿಸಿದ ಈವೆಂಟ್‍ನ್ನು ಸಿಎಡಿ (Computer Aided Dispatcher) ಏಜೆಂಟ್ ಅದನ್ನು ಹತ್ತಿರದ ಇಆರ್‍ವಿ ವಾಹನಕ್ಕೆ ರವಾನಿಸಿ ಅವರನ್ನು ನಿಯೋಜಿಸಲಾಗುತ್ತದೆ. ಇಆರ್‍ವಿ ವಾಹನಕ್ಕೆ ನಿಯೋಜನೆಗೊಂಡವರು ಸದರಿ ಈವೆಂಟ್‍ನ್ನು ಸ್ವೀಕರಿಸಿ  ನೊಂದವರ  ಕರೆಗೆ ತುರ್ತಾಗಿ  ಸ್ಪಂದಿಸಿ ಸೇವೆಯನ್ನು ಒದಗಿಸಿ ಅವರ ಸಮಸ್ಯೆಯನ್ನು ಪರಿಹರಿಸುತ್ತಾರೆ. ನಂತರ ಅವರು ಸದರಿ ಎಲ್ಲಾ ಮಾಹಿತಿಯನ್ನು ಜಿಲ್ಲೆಯಲ್ಲಿರುವ  ಡಿಸಿಸಿ (District Co-Ordination Center) ಗೆ ತಿಳಿಸಿ ತನ್ನು ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ. ನಂತರ ಡಿಸಿಸಿ ಯವರು ಅದನ್ನು ಪಿಎಸ್‍ಎಪಿ ಗೆ ರವಾನಿಸಿ ವಿನಂತಿಸಿದ ತುರ್ತು ಸೇವೆಯನ್ನು ಪೂರ್ಣಗೊಳಿಸಲಾಗುತ್ತದೆ. ಕೆಲಸದ ಒಟ್ಟಾರೆ ಮೇಲ್ವಿಚಾರಣೆಯನ್ನು ಪಿಎಸ್‍ಎಪಿ ಯಲ್ಲಿ ಮಾಡಲಾಗುತ್ತದೆ ಮತ್ತು  ದೈನಂದಿನ ವರದಿಗಳನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ.

 

    ರಾಮನಗರ  ಜಿಲ್ಲೆಯಲ್ಲಿ ಡಿಸಿಸಿ (District Co-Ordination Center) ಕೇಂದ್ರವಿದ್ದು ಅದು ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ಕಂಟ್ರೋಲ್ ರೂಂನಲ್ಲಿದ್ದು, ಡಿಸಿಸಿಯಲ್ಲಿ 03 ಸಿಎಡಿ (District Co-Ordination Center) ಗಳಿದ್ದು ಈಗ 09  ತುರ್ತು ಇಆರ್‍ವಿ ವಾಹನಗಳಿದ್ದು ಅವುಗಳಿಗೆ ಎಂಡಿಟಿ ಗಳನ್ನು ಅಳವಡಿಸಲಾಗಿದೆ. ಅವುಗಳನ್ನು ತುರ್ತು ಸಂದರ್ಭಗಳಿಗೆ ಸ್ಪಂದಿಸಲು ರಾಮನಗರ  ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ತುರ್ತು ಪ್ರತಿಕ್ರಿಯೆ ವಾಹನವು ತೊಂದರೆಯ ಸ್ಥಳವನ್ನು ಗುರುತಿಸಿ ಸರಿಯಾದ ಸಮಯಕ್ಕೆ ತಲುಪಿ ಸಮಸ್ಯಯನ್ನು ಪರಿಹರಿಸುತ್ತದೆ.

 

   ಅದರ ನಂತರ ತುರ್ತು ಪ್ರತಿಕ್ರಿಯೆ ವಾಹನದ ಉಸ್ತುವಾರಿಯಲ್ಲರುವ ಅಧಿಕಾರಿಯು ಎಂಡಿಟಿ ಮೂಖಾಂತರ ತನಗೆ ವಹಿಸಿದ ಈವೆಂಟ್‍ನ್ನು ಪೂರ್ಣಗೊಳಿಸಿದ ನಂತರ ಡಿಸಿಸಿ ಮತ್ತು ಪಿಎಸ್‍ಎಪಿ ಯವರಿಂದ ಕರೆ ಮಾಡಿದವರಿಂದ ಫೀಡ್ ಬ್ಯಾಕ್ ತೆಗೆದುಕೊಂಡು ಅದನ್ನು ದಾಖಲು ಮಾಡಿಕೊಳ್ಳಲಾಗುತ್ತದೆ.

 

 

 

 

 

 

 

ಇತ್ತೀಚಿನ ನವೀಕರಣ​ : 13-09-2021 04:04 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಮನಗರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080