ಅಭಿಪ್ರಾಯ / ಸಲಹೆಗಳು

ರಾಮನಗರದ ಇತಿಹಾಸ

ರಾಮನಗರದ ಇತಿಹಾಸ

       ರಾಮನಗರ ಜಿಲ್ಲೆಯು ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 2007 ಆಗಸ್ಟ್ 23 ರಂದು ವಿಭಜನೆಗೊಂಡು ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ.  ರಾಮನಗರವು ಭಾರತ ದೇಶದ ಕರ್ನಾಟಕ ರಾಜ್ಯದ ನಗರ ಮತ್ತು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಟಿಪ್ಪು ಸುಲ್ತಾನ್ ಆಡಳಿತದ ಕಾಲದಲ್ಲಿ ಈ ಪಟ್ಟಣವನ್ನು ಶಂಸೆರಾಬಾದ್ ಎಂದು ಕರೆಯಲಾಗುತ್ತಿತ್ತು. ಅನಂತರ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಬ್ಯಾರಿ ಕ್ಲೋಸ್ (1756-1813) ಎಂಬುವರ ಅವಧಿಯಲ್ಲಿ ಇದನ್ನು ಕ್ಲೋಸ್ ಪೆಟ್ ಎಂದು ಕರೆಯುತ್ತಿದ್ದರು.  ಸ್ವಾತ್ರಂತ್ಯದ ನಂತರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ  ಕೆಂಗಲ್ ಹನುಮಂತಯ್ಯ ರವರು ಕ್ಲೋಸ್ ಪೆಟ್ ಅನ್ನು ರಾಮನಗರ ಎಂದು ಮರು ನಾಮಕರಣ ಮಾಡಿದರು. 2007 ನೇ ಸಾಲಿನಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಮನಗರ ಜಿಲ್ಲೆಯು ವಿಭಜನೆಗೊಂಡು ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿಸಿ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲ್ಲೂಕು ಗಳೊಂದಿಗೆ ಮರು ನಿರ್ಮಾಣ ಮಾಡಲಾಯಿತು. ರಾಮನಗರ ಜಿಲ್ಲೆಯು 2011 ನೇ ಸಾಲಿನಲ್ಲಿ 10,82,739 (ಹತ್ತು ಲಕ್ಷದ ಎಂಭತ್ತೆರಡು ಸಾವಿರದ ಏಳು ನೂರ ಮೂವತ್ತೊಂಭತ್ತು) ಜನಸಂಖ್ಯೆಯನ್ನು ಹೊಂದಿರುತ್ತದೆ.

 

ರಾಮನಗರ ಇತಿಹಾಸದ ಮೈಲಿಗಲ್ಲುಗಳು

 • 1800 - ಬ್ರಿಟಿಷ್ ಅಧಿಕಾರಿ ಸರ್ ಬ್ಯಾರಿ ಕ್ಲೋಸ್ ಅವರ ನೆನಪಿಗಾಗಿ, ಇದನ್ನು " ಕ್ಲೋಸ್‌ ಪೇಟೆ” ಎಂದು ಹೆಸರಿಸಲಾಯಿತು.
 • 1801 - ಪ್ರಸಿದ್ಧ ಇಂಗ್ಲೀಷ್ ಇತಿಹಾಸಕಾರದ ಫ್ರಾನ್ಸಿಸ್ ಬುಕಾನಿನ್ ರವರು ರಾಮನಗರಕ್ಕೆ ಭೇಟಿ ನೀಡಿದರು.
 • 1827 - ತಾಲ್ಲೂಕು ಸ್ಥಾನಮಾನವನ್ನು ಕ್ಲೋಸ್‌ಪೇಟ್‌ಗೆ ನೀಡಲಾಯಿತು.
 • 1884 - ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ಉಪ ವಿಭಾಗವು ಕ್ಲೋಸ್‌ಪೇಟ್‌ನ ವ್ಯಾಪ್ತಿಗೆ ಬಂದಿತು.
 • 1893 – ಮೋಟಿ ನಗರದಲ್ಲಿ ಸರ್ಕಾರಿ ಜನರಲ್ ಆಸ್ಪತ್ರೆಯನ್ನು ಪ್ರಾರಂಭಿಸಲಾಯಿತು.
 • 1927 - ಮಹಾತ್ಮ ಗಾಂಧೀಜಿಯವರು ರಾಮನಗರಕ್ಕೆ ಭೇಟಿ ನೀಡಿದರು.
 • 1928 - ಪಟ್ಟಣಕ್ಕೆ ವಿದ್ಯುತ್ ಲಭ್ಯವಾಯಿತು.
 • 1931 - ಜಿಲ್ಲಾ ನ್ಯಾಯಾಲಯವನ್ನು ಸ್ಥಾಪಿಸಲಾಯಿತು.
 • 1936 - ಆರೋಗ್ಯ ಕಚೇರಿ ಸ್ಥಾಪಿಸಲಾಯಿತು.
 • 1937 - ನಾಗರೀಕರಿಗೆ ನೀರಿನ ಸೌಲಭ್ಯ ಲಭ್ಯವಾಯಿತು.
 • 1956 - ಸಹಾಯಕ ಕಾರ್ಯನಿರ್ವಾಹಕ ಕಛೇರಿ ಸ್ಥಾಪಿಸಲಾಯಿತು.
 • 1975 - “SHOLAY” ಚಿತ್ರೀಕರಣದ ನಂತರ ಈ ಸ್ಥಳವು “ರಾಮ್‌ಘಡ್” ಎಂದು ವಿಶ್ವ ಪ್ರಸಿದ್ಧವಾಯಿತು.
 • 23- ಆಗಸ್ಟ್ -2007 - ಕರ್ನಾಟಕ ರಾಜ್ಯ ನಕ್ಷೆಯಲ್ಲಿ 28 ನೇ ಜಿಲ್ಲೆಯಾಗಿ ಸೇರಿಸಲಾಗಿದೆ.

 

 

 

ಇತ್ತೀಚಿನ ನವೀಕರಣ​ : 30-01-2021 01:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಮನಗರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080