Feedback / Suggestions

febrauary 2022

ದಿನಾಂಕ:04-02-2022 ರಂದು ರಾಮನಗರ ಜಿಲ್ಲೆಯಲ್ಲಿ ವರದಿಯಾದ ಅಪರಾಧ ಪ್ರಕರಣಗಳು

 

Sl. No

Police Station Name

FIR No

FIR Date

Crime Group - Crime Head

Stage of case

1

Akkur PS

 

Cr.No:0024/2022

(IPC 1860 U/s 323,324,504,506,34 )

 

04/02/2022

CASES OF HURT - Simple Hurt

 

Under Investigation

 

 

ದಿನಾಂಕ  04.02.2022 ರಂದು ಮದ್ಯಾಹ್ನ  2.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 03.02.2022 ರಂದು ರಾತ್ರಿ  9.45 ಗಂಟೆಯ ಸಮಯದಲ್ಲಿ  ನಾನು ನಮ್ಮ ಮನಯ ಬಳಿ ಇರಬೇಕಾದರೆ ನಮ್ಮ  ಪಕ್ಕದ ಬೀದಿಯಲ್ಲಿ  ನಮ್ಮ ಗ್ರಾಮದ ವಾಸಿಯಾದ ಹಾಗೂ  ನಮ್ಮ ಜನಾಂಗದವರಾದ ತಿಮ್ಮಯ್ಯ ರವರು ನಮ್ಮ ಗ್ರಾಮ ದೇವತೆ ಮಾರಮ್ಮ ದೇವರ ಹಬ್ಬಕ್ಕೆ  ಖರ್ಚು ವೆಚ್ಚಕ್ಕಾಗಿ ಹಣ ಎತ್ತುವುದಕ್ಕೆ ತಮಟೆ ಮೂಖಾಂತರ ಸಾರುತ್ತಿದ್ದು  ಸಮಯದಲ್ಲಿ  ನಾನು ಯಾವುದಕ್ಕಾಗಿ ನೀನಿ ಸಾರುತ್ತಿದ್ದಿಯಾ ದೇವರ ಹಬ್ಬದ ವಿಚಾರ ನಮಗೆ ತಿಳಿದಿರುವುದಿಲ್ಲ  ಅಂತ ಕೇಳುತ್ತಿದ್ದ ಸಂಧರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ವಾಸಿಯಾದ ಗಂಗಾಧರ, ಲೋಕೇಶ್ನಟರಾಜ್ ರವರು ಸಹಾ ಅಲ್ಲಿಗೆ ಬಂದು ಕೇಳುತ್ತಿದ್ದಾಗ ನಮ್ಮ ಗ್ರಾಮದ ವಾಸಿಗಳಾದ ರವೀಂದ್ರ, ನಾಗೇಶ್, ಬೈರ ರವರುಗಳು ನಮ್ಮಗಳನ್ನು  ಇದನ್ನು ಕೇಳಲು ನೀವು ಯಾರು ಬೋಳಿ ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆ ನನಗೆ ಹಾಗೂ ಎಲ್ಲರಿಗೂ  ಖಾರದ ಪುಡಿಯನ್ನು ನಮ್ಮ ಮುಖಕ್ಕೆ ಎರಚಿ ರವೀಂದ್ರ ಹಾಗೂ ನಾಗೇಶ್ ರವರುಗಳು ಕಾಲಿನಿಂದ ಹೊಟ್ಟೆಯ ಕೆಳಗೆ ಒದ್ದು, ನೋವುಂಟು ಮಾಡಿ ಅಷ್ಟರಲ್ಲಿ ಗಂಗಾಧರ್, ಲೋಕೇಶ್, ನಟರಾಜು ರವರು ಹಾಗೂ ನಮ್ಮ ದೊಡ್ಡಮ್ಮ ಲಕ್ಷ್ಮಮ್ಮ ರವರು ಬಿಡಿಸಲು ಬಂದಾಗ  ಗಂಗಾಧರ ರವರುಗಳಿಗೆ ಕಲ್ಲಿನಿಂದ ರವೀಂದ್ರ, ನಾಗೇಶ್ ಬೈರ ರವರುಗಳು ಕಲ್ಲುಗಳಿಂದ ಮೈ ಕೈಗಳಿಗೆ ಹೊಡೆದು ನೋವುಂಟು ಮಾಡಿ ನಮ್ಮ ದೊಡ್ಡಮ್ಮ ಲಕ್ಷ್ಮಮ್ಮ ರವರನ್ನ ಇವರುಗಳೆ ಚರಂಡಿಗೆ ತಳ್ಳಿದಾಗ ನಮ್ಮ ದೊಡ್ಡಮ್ಮ ರವರಿಗೆ ತಲೆಗೆ ಪೆಟ್ಟುಬಿದ್ದು ಈಕೆಯನ್ನು ನಾವುಗಳು ಹಾಗೂ ನಮ್ಮ ಗ್ರಾಮದ ವಾಸಿಯಾದ ಪುರುಷೋತ್ತಮಲಿಂಗಣ್ಣರವರು ಉಪಚರಿಸಿ 108 ವಾಹನದ ಮೂಲಕ ಚನ್ನಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ದಿನ ತಡವಾಗಿ  ಬಂದು ದೂರು ನೀಡುತ್ತೇನೆ ಆದ್ದರಿಂದ ನನಗೆ ಹಾಗೂ ಗಂಗಾಧರ್, ಲೋಕೇಶ್, ನಟರಾಜ್, ಲಕ್ಷ್ಮಮ್ಮ ರವರಿಗೆ ಕಾಲಿನಿಂದ ಒದ್ದು, ಕಲ್ಲಿನಿಂದ ಒದ್ದುಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ  ಹಾಕಿರುವ ರವೀಂದ್ರ, ನಾಗೇಶ್, ಬೈರ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂತ ಕೊಟ್ಟ ದೂರಿನ ಮೇರೆಗೆ ಪ್ರ ವರದಿ.

2

Akkur PS

 

Cr.No:0025/2022

(IPC 1860 U/s 323,324,504,506,149 )

 

04/02/2022

CASES OF HURT - Simple Hurt

 

Under Investigation

 

 

ದಿನಾಂಕ 04.02.2022 ರಂದು ಮಧ್ಯಾಹ್ನ  3.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ದಿನಾಂಕ 03.02.2022 ರಂದು ರಾತ್ರಿ  9.45 ಗಂಟೆಯ ಸಮಯದಲ್ಲಿ ನಮ್ಮೂರಿನ ಗ್ರಾಮ ದೇವತೆ ಮಾರಮ್ಮ ದೇವಿಯ ಪ್ರತಿಷ್ಠಾಪನೆ ವಿಚಾರವಾಗಿ ಹಣದ ಬಗ್ಗೆ ವಿಚಾರ ತಿಳಿಸಲು ನಮ್ಮ ಗ್ರಾಮದ ವಾಸಿಯಾದ ತಿಮ್ಮಯ್ಯ ರವರ ಮುಖಾಂತರ ಗ್ರಾಮದಲ್ಲಿ ತಮಟೆ ಮೂಲಕ ತಿಳಿಸುತ್ತಿದ್ದಾಗ ನಮ್ಮ ಗ್ರಾಮದ ವಾಸಿಗಳಾದ ನವೀನ್ ಕುಮಾರ, ಪುರುಷೋತ್ತಮ, ನಟರಾಜ, ಪ್ರಸನ್ನ, ಲೋಕೇಶ ರವರುಗಳು ತಿಮ್ಮಯ್ಯನನ್ನು ನೀನು ನಮ್ಮಗಳನ್ನು ಕೇಳದೆ ಯಾಕೆ ಗ್ರಾಮದಲ್ಲಿ ಸಾರುತ್ತಿದ್ದಯಾ ಅಂತ ಕೇಳುತ್ತಿದ್ದಾಗ ಅಷ್ಟರಲ್ಲಿ ನಾನುರವೀಂದ್ರ, ಬೈರ ರವರುಗಳು ಸೇರಿ ತಿಮ್ಮಯ್ಯನಿಗೆ ಯಾಕೆತೊಂದರೆ ನೀಡುತ್ತಿದ್ದಿರಿ ಎಂದು ಕೇಳಿದ್ದಕ್ಕೆ ಇವರುಗಳೆಲ್ಲರೂ ನಮಗೆ ಬಾಯಿಗೆ ಬಂದಂತೆ ಬೈಯ್ದು, ನವೀನ್ ಕುಮಾರ ಮತ್ತು  ಪುರುಷೋತ್ತಮ, ನಟರಾಜ ರವರುಗಳು ಕಲ್ಲಿನಿಂದ ನನಗೆ ಹಾಗೂ ಬೈರರವರಿಗೆ ಹೊಡೆದಿದ್ದು ಇದರಿಂದ ದೇಹದ ಮೇಲೆ ರಕ್ತ ಬಂದು ನೋವುಂಟಾಗಿರುತ್ತದೆ    ಅಷ್ಟರಲ್ಲಿ  ಬಿಡಿಸಲು ಬಂದ ನಮ್ಮ ಅತ್ತಿಗೆ ರತ್ನಮ್ಮ  ರವರಿಗೂ ಸಹಾ ಬಾಯಿಗೆ ಬಂದಂತೆ ಬೈಯ್ದು, ಗಲಾಟೆಯ ಸಮಯಕ್ಕೆ  ಮಂಜ, ಗಂಗಾ, ವೆಂಕಟೇಶ, ವಿಷಕಂಠಯ್ಯ ಉರುಪ್ ಸಣ್ಣಪ್ಪ ರವರುಗಳು ರತ್ನಮ್ಮ ರವರನ್ನ ಕೈಗಳಿಂದ ಚರಂಡಿಗೆ ತಳ್ಳಿದಾಗ ಆಕೆಗೆ ಏಟಾಗಿರುತ್ತದೆ ಗಲಾಟೆಯ ಸಮಯದಲ್ಲಿ ಇವರುಗಳು ನಿಮಗೆ ಇವತ್ತಲ್ಲ  ನಾಳೆ ಒಂದು ಗತಿ ಕಾಣಿಸುತೇವೆಂದು ಬೆದರಿಕೆ ಹಾಕಿದರು ನಂತರ ಏಟಾಗಿದ್ದ  ನನಗೆರತ್ನಮ್ಮ ಹಾಗೂ ಬೈರ ರವರುಗಳನ್ನ  ನಮ್ಮ ಗ್ರಾಮದ ವಾಸಿಗಳಾದ ಲೋಕೇಶ ಮತ್ತು ವೆಂಕಟಚಲ ರವರು ಜಗಳ ಬಿಡಿಸಿ ಉಪಚರಿಸಿ ನಂತರ ಕಾರಿನಲ್ಲಿ   ಚನ್ನಪಟ್ಟಣ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ದಿನ ತಡವಾಗಿ ಬಂದು ನಮ್ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಹೊಡೆದು, ಕೈಗಳಿಂದ ತಳ್ಳಿ,   ಬೆದರಿಕೆ ಹಾಕಿರುವ ಮೇಲ್ಕಂಡ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ  ನೀಡಿದ ದೂರಿನ ಮೇರೆಗೆ

 

3

Bidadi PS

 

Cr.No:0042/2022

(IPC 1860 U/s 454,380 )

 

04/02/2022

BURGLARY - DAY - At Residential Premises

 

Under Investigation

 

 

ದಿನಾಂಕ-04-02-2022 ರಂದು ಸಂಜೆ 6-30 ಗಂಟೆಗೆ ಪಿರ್ಯಾದುದಾರರಾದ ದೇವರಾಜಮ್ಮ ಕೋಂ ಲೇ|| ಶ್ರೀನಿವಾಸಗೌಡ, 52 ವರ್ಷ, ಗಾರ್ಮೆಂಟ್ಸ್ ನಲ್ಲಿ ಕೆಲಸಇಂದಿರಾನಗರ, ರೈಲ್ವೆ ಸ್ಟೇಷನ್ ಹಿಂಭಾಗ, ಬಿಡದಿ ಟೌನ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಸುಮಾರು 8 ವರ್ಷಗಳಿಂದ ಗಾರೆ ಚೆನ್ನಪ್ಪ ಬಿನ್ ಲೇ|| ಬೋರಯ್ಯ ರವರ ಮನೆಯಲ್ಲಿ ಬಾಡಿಗೆಗೆ ನೆಲ ಮಹಡಿಯಲ್ಲಿ ವಾಸವಾಗಿರುತ್ತೇವೆ. ನಾನು ನನ್ನ ಮಗ ಸೂರಜ್  ಮತ್ತು ಮಗಳು ಗಗನಶ್ರೀ ಇದ್ದು ಮಗ ಚೆನ್ನೈನಲ್ಲಿ ಇದ್ದು, ನಾವಿಬ್ಬರೇ ಮನೆಯಲ್ಲಿ ವಾಸವಾಗಿರುತ್ತೇವೆ. ನಾನು ಮತ್ತು ಮಗಳು ಇಬ್ಬರು ಬೆಳಿಗ್ಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುತ್ತೇವೆ. ನಮ್ಮ ಮನೆಯ ಮೊದಲನೆ ಮಹಡಿಯಲ್ಲಿ ಅಭಿಷೇಕ್.ಆರ್.ಪಿ ಮತ್ತು ಆತನ ಹೆಂಡತಿ ಚೈತ್ರ ರವರು ಬಾಡಿಗೆ ವಾಸವಿರುತ್ತಾರೆ. ಅವರು ಇಬ್ಬರು ಸಹ ಪ್ರೈವೇಟ್ ಕೆಲಸಕ್ಕೆ ಹೋಗುತ್ತಾರೆ ನಮ್ಮ ಎರಡು ಮನೆಯವರು ಮನೆಗಳಿಗೆ ಬೀಗ ಹಾಕಿ ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ವಾಪಸ್ಸು ಮನೆಗೆ ಬರುತ್ತೇವೆ. ದಿನ ಮಾಮೂಲಿನಂತೆ ಬೆಳಗ್ಗೆ 8-00 ಗಂಟೆಗೆ ಕೆಲಸಕ್ಕೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದೆವು. ನನಗೆ ಮದ್ಯಾಹ್ನ 3-30 ಗಂಟೆಗೆ ನಮ್ಮ ಮನೆಯ ಮಾಲಿಕರು ಕರೆ ಮಾಡಿ ನಿಮ್ಮ ಮನೆ ಮತ್ತು ಅಭಿಷೇಕ್ ಮನೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆನೀವು ಬೇಗ ಬನ್ನಿ ಎಂದು ತಿಳಿಸಿರುತ್ತಾರೆ. ನಾನು ಗಾಬರಿಯಿಂದ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಮುಂದಿನ ಬಾಗಿಲನ್ನು ಮೀಟಿ ಯಾರೋ ಕಳ್ಳರು ಒಳ ಪ್ರವೇಶಿಸಿ ಬೆಡ್ ರೂಂ ನಲ್ಲಿದ್ದ ಎರಡು ಬೀರುಗಳನ್ನು ಮೀಟಿ ಬಾಗಿಲನ್ನು ಮುರಿದು ಬೀರುವಿನಲ್ಲಿ ಇಟ್ಟಿದ್ದ ನಮ್ಮ ಚಿನ್ನದ ಒಡವೆಗಳಾದ 1] ಲಾಂಗ್ ಚೈನ್ 35 ಗ್ರಾಂ 2] ಹ್ಯಾಂಗಿಂಗ್ಸ್ 7 ಗ್ರಾಂ 3] ಜುಮುಕಿ 3 ಗ್ರಾಂ 5] ಬಿಳಿ ಕಲ್ಲಿನ ಓಲೆ  4 ಗ್ರಾಂ 5] ಎರಡು ಉಂಗುರಗಳು 6 ಗ್ರಾಂ ಕಳ್ಳತನವಾಗಿರುತ್ತದೆ.

        ನಮ್ಮ ಮನೆಯ ಮೇಲೆ ಮೊದಲನೆ ಮಹಡಿಯಲ್ಲಿ ವಾಸವಾಗಿರುವ ಅಭಿಷೇಕ್.ಆರ್.ಪಿ ರವರ ಮನೆಯ ಮುಂದಿನ ಬಾಗಿಲನ್ನು ಮೀಟಿ ಯಾರೋ ಕಳ್ಳರು ಒಳ ಪ್ರವೇಶಿಸಿ ಬೆಡ್ ರೂಮಿನಲ್ಲಿದ್ದ ಕಬೋರ್ಡ್ ನಲ್ಲಿ ಇಟ್ಟಿದ್ದ 1] ಚಿನ್ನದ ಗೆಜ್ಜೆ ಮಾಟಿ 10 ಗ್ರಾಂ, 2] ಚಿನ್ನದ ಉಂಗುರ 4 1/2 ಗ್ರಾಂ  3] ಬೆಳ್ಳಿಯ ಕಾಲು ಚೈನು 200 ಗ್ರಾಂ ಇವುಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಒಡವೆಗಳ ಮೌಲ್ಯ ಸುಮಾರು 2,25,000/- (ಎರಡು ಲಕ್ಷ ಇಪ್ಪತ್ತೈದು ಸಾವಿರ) ರೂಗಳಾಗಿರುತ್ತದೆ. ಘಟನೆಗೆ ಕಾರಣರಾದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಒಡವೆಗಳನ್ನು ಕೊಡಿಸಿ ಕೊಡಬೇಕೆಂದು ಕೋರುತ್ತೇನೆಂದು ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಸಿದೆ.

 

4

Bidadi PS

 

Cr.No:0043/2022

(IPC 1860 U/s 454,380 )

 

04/02/2022

BURGLARY - DAY - At Residential Premises

 

Under Investigation

 

 

ದಿನಾಂಕ-04-02-2022 ರಂದು ಸಂಜೆ 7-15 ಗಂಟೆಗೆ ಪಿರ್ಯಾದುದಾರರಾದ ಸಿದ್ದಲಿಂಗಯ್ಯ ಬಿನ್ ಲೇ|| ಚಿಕ್ಕಸಿದ್ದಯ್ಯ, 36 ವರ್ಷ, .ಜಾಹೂವಿನ ವ್ಯಾಪಾರ, ವಾಸ-ಮಲ್ಲೇಶಯ್ಯ ರವರ ಬಾಡಿಗೆ ಮನೆಯಲ್ಲಿ ವಾಸ, ಚರ್ಚ್ ರಸ್ತೆ, ಸಂಜೀವಿನಿ ಲೇಔಟ್, ಬಿಡದಿ ಟೌನ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನ ದಿನಾಂಕ-04-02-2022 ರಂದು ನಾವು ಎಂದಿನಂತೆ ಹೂ ಅಂಗಡಿ ವ್ಯಾಪಾರಕ್ಕೆ ನಾನು ನನ್ನ ಹೆಂಡತಿ ಮನೆಗೆ ಬೀಗ ಹಾಕಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಹೋಗಿದ್ದೆವು ನಂತರ ಸಂಜೆ 06ಗಂಟೆಗೆಯಲ್ಲಿ ಮನೆಗೆಬಂದು ನೋಡಿದಾಗ ಮನೆಯ ಬಾಗಿಲನ್ನು ಯಾರೋ ಯಾವುದೋ ಆಯುಧದಿಂದ ದೊಡೆದು ಮನೆಯ ಬೀರುವಿನಲ್ಲಿದ್ದ 50000ರೂ ನಗದು ಹಣ ಮತ್ತು ಚಿನ್ನದ ನೆಕ್ ಲೇಸ್ 2 ಜೊತೆ ಓಲೆ ಮತ್ತು ಹ್ಯಾಂಗಿಗ್ಸ್ ಅನ್ನು ಬೀರುವಿನ ಬಾಗಿಲನ್ನು ಹೊಡೆದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಓಡೆವೆಗಳ ಅಂದಾಜು ಬೆಲೆ ಸುಮಾರು 1,90,000ರೂ ಗಳಾಗುತ್ತೆ ಆದ್ದರಿಂದ ನಮ್ಮ ಮನೆಯ ಬೀರುವಿನ ಬಾಗಿಲನ್ನು ಹೊಡೆದು ಹಣ ಮತ್ತು ಓಡವೆಗಳನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ನಮ್ಮ ಹಣ ಮತ್ತು ಒಡವೆಗಳನ್ನು ಕೊಡಿಸಿ ಕೊಡಬೇಕೆಂದು ಹಾಗೂ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತದೆ.

 

5

Channapatna Rural PS

 

Cr.No:0024/2022

(IPC 1860 U/s 370 ; BONDED LABOUR SYSTEM (ABOLITION) ACT, 1976 U/s 16,17,18 )

 

04/02/2022

BONDED LABOUR SYSTEM - BONDED LABOUR SYSTEM

 

Under Investigation

 

 

ದಿನಾಂಕ. 04-02-2022 ರಂದು ಸಂಜೆ 06-30 ಗಂಟೆಗೆ ಚನ್ನಪಟ್ಟಣ ತಾಲ್ಲೂಕು ದಂಢಾಧಿಕಾರಿಗಳ ಕಛೇರಿಯಿಂದ ಬಂದ ಟಪಾಲು ದೂರನ್ನು ಸ್ವೀಕರಿಸಿದ್ದು ಸದರಿ ದೂರಿನ ಸಾರಾಶಂವೇನೆಂದರೆ, ದಿನಾಂಕ. 15-07-2017 ರಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಅಕ್ರಮ ಜೀತದಾಳುಗಳ ಕೈಯಲ್ಲಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ತಾಲ್ಲೂಕು ದಂಢಾಧಿಕಾರಿಯವರಾದ ಶ್ರೀ ಕೆ. ರಮೇಶ್, ಕಾಮರ್ಿಕ ನಿರೀಕ್ಷಕರಾದ ಶ್ರೀ ಮಂಜುನಾಥ್, ರಾಜಸ್ವನಿರೀಕ್ಷಕರಾದ ಶ್ರೀ ಕಾಂತರಾಜು, ಗ್ರಾಮ ಲೆಕ್ಕಾಧಿಕಾರಿಗಳಾದ ಮೋಹನ್ ಕುಮಾರ್ ರವರುಗಳ ತಂಡ ನೀಲಸಂದ್ರ ಗ್ರಾಮದ . ನಂ. 171 ರಲ್ಲಿರುವ ಕೋಳಿ ಪಾರಂಗೆ ಮಧ್ಯಾಹ್ನ ಸುಮಾರು 03-30 ಗಂಟೆಗೆ ದಾಳಿ ಮಾಡಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ಇವರುಗಳನ್ನು ಜೀತದಿಂದ ವಿಮುಕ್ತಗೊಳಿಸಲಾಗಿರುತ್ತದೆ.

 

ಸದರಿ ಸಮಯದಲ್ಲಿ ಕೋಳಿ ಪಾರಂ ಮಾಲೀಕರು ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಯಾವುದೇ ಪ್ರಕರಣ ದಾಖಲಿಸಿರುವದಿಲ್ಲ ನಂತರ ಈಗ ಕನರ್ಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಕೈಗೊಂಡಿರುವ ಕ್ರಮದ ಬಗ್ಗೆ ಹಾಗು ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ಕೇಳಿದ್ದು, ತಾವುಗಳು ಮೇಲ್ಕಂಡ ಆರೋಪಿತ ಕೃಷ್ಣ ಬಿನ್ ನಿಂಗೇಗೌಡರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರ..ವರದಿ.

 

6

Kaggalipura PS

 

Cr.No:0035/2022

(IPC 1860 U/s  279,337 )

 

 

04/02/2022

MOTOR VEHICLE ACCIDENTS NON-FATAL - National Highways

 

Under Investigation

 

 

ದಿನಾಂಕ  04.02.2022 ರಂದು ಮದ್ಯಾಹ್ನ 1:00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 03.02.2022 ರಂದು ತನ್ನ ಮಗ ಆತನ ತಾತ ಅನ್ವರ್ ಪಾಷಾ ಜೊತೆ ಬೆಂಗಳೂರು ದಕ್ಷಿಣ ತಾಲ್ಲೂಕು ರಾವುಗೋಡ್ಲು ಗೇಟ್ ಬಳಿ ಇರುವ ವೆಂಕಟಾದ್ರಿ ಕಲ್ಯಾಣ ಮಂಟಕ್ಕೆ ಮದುವೆಗೆ ಹೋಗಿದ್ದು ಅದೇ ದಿನ ಮದ್ಯಾಹ್ 3:45 ಗಂಟೆ ಸಮಯದಲ್ಲಿ ನನ್ನ ಮಗ ಅಬ್ದುಲ್ ಸಾಧಿಖ್ ಕಲ್ಯಾಣ ಮಂಟಪದ ಎದುರು ಇರುವ ರಸ್ತೆಯನ್ನು ದಾಟಲು ರಸ್ತೆ ಮಧ್ಯ ಇರುವ ಡಿವೈಡರ್ ಬಳಿ ನಿಂತಿದ್ದವನಿಗೆ ಬೆಂಗಳೂರು ಕಡೆಯಿಂದ ಕನಕಪುರ ಕಡೆಗೆ ಬರುತಿದ್ದ ಕೆಎ 01 ಎಎಫ್ 8640 ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ರಸ್ತೆಯ ಬಲಭಾಗಕ್ಕೆ ಹೋಗಿ ಅಬ್ದುಲ್ ಸಾಧಿಖ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಲಕಾಲಿಗೆ ಏಟಾಗಿದ್ದು ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿ ದಿನ ತಡವಾಗಿ ಬಂದು ದೂರು ನೀಡುತಿದ್ದು, ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ

 

7

Kaggalipura PS

 

Cr.No:0036/2022

(IPC 1860 U/s 447,427 )

04/02/2022

CRIMINAL TRESPASS - Land

 

Under Investigation

 

 

ದಿನಾಂಕ 04/02/2022 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಕಗ್ಗಲೀಪುರ ಗ್ರಾಮ ಪಂಚಾಯ್ತಿ ಕಛೇರಿಯ ಪಿ.ಡಿ.. ಶ್ರೀ ಜೆ. ವಿಶ್ವನಾಥ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಉತ್ತರಿ ಗ್ರಾಮದ ಸರ್ವೆ ನಂ. 111 ರಲ್ಲಿ 2 ಎಕರೆ ಜಮೀನನ್ನು ಮಾನ್ಯ ತಹಶೀಲ್ದಾರ್ ರವರು ಸಂಖ್ಯೆ ಎಲ್.ಎನ್.ಡಿ.(ಎಸ್)ಸಿಆರ್/217/2020-21 ದಿ:- 28/07/2021 ರಲ್ಲಿ ಸ್ವಚ್ಚ್ ಭಾರತ್ ಮಿಷನ್ ಗ್ರಾಮೀಣ ಯೋಜನೆಗೆ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಕಾಯ್ದಿರಿಸಿ ಆದೇಶವಾಗಿದ್ದು ಹದ್ದುಬಸ್ತು ಗುರ್ತಿಸಿ ಸುಬರ್ದಿಗೆ ನೀಡಲಾಗಿರುತ್ತದೆ. ಸದರಿ ಜಮೀನಿನಲ್ಲಿ ಕಾಂಪೌಂಡ್ ಕಾಮಗಾರಿ ಮಾಡಲು ಗುತ್ತಿಗೆದಾರರಾದ ಕಾರ್ತಿಕ್ ರವರಿಗೆ ನೀಡಿದ್ದು, ಅವರು ಕಾಮಗಾರಿಗೆ ಕಟ್ಟಡ ಸಾಮಗ್ರಿಗಳನ್ನು ತಂದು ಹಾಕಿದ್ದು, ದಿನಾಂಕ 30/01/2022 ರಂದು ಕಗ್ಗಲೀಪುರದ ನಾರಾಯಣಪ್ಪ ಬಿನ್ ನಾಗಪ್ಪ ಎಂಬುವರು ಮೇಲ್ಕಂಡ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕಲ್ಲುಕುಚಗಳನ್ನು ಹಾಕಿಕೊಂಡು ತಂತಿ ಬೇಲಿ ಅಳವಡಿಸಿರುತ್ತಾರೆ. ಅಲ್ಲದೇ ಕಟ್ಟಡದ ಸಾಮಗ್ರಿಗಳನ್ನು ಬಳಸಿಕೊಂಡಿರುತ್ತಾರೆ. ಬಗ್ಗೆ ದೂರು ನೀಡಲು ಕಾರ್ಯ ನಿರ್ವಾಹಕ ಅಧಿಕಾರಿಯವರು ಅನುಮತಿ ನೀಡಿದ್ದು, ನಾರಾಯಣಪ್ಪ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

 

8

Kaggalipura PS

 

Cr.No:0037/2022

(CODE OF CRIMINAL PROCEDURE, 1973 U/s 41(D),102 ; IPC 1860 U/s 379 )

 

04/02/2022

CrPC - Preventive Arrest (Sec 41 Class D,102)

 

Under Investigation

 

 

ದಿನಾಂಕ 04/02/2022 ರಂದು ರಾತ್ರಿ 9-45 ಗಂಟೆಗೆ  ಶ್ರೀ ಬರ್ಲಿಂಗಪ್ಪ ಪಿಸಿ 813 ರವರು ನೀಡಿದ ವರದಿ ಏನೆಂದರೆ ದಿನಾಂಕ 04/02/2022 ರಂದು ನನಗೆ ಮತ್ತು ಪಿಸಿ 161 ಶಿವರಾಜು ತೇಲಿ ರವರಿಗೆ ನಮ್ಮ ಠಾಣೆಯಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಠಾಣಾ ಭ್ರೀಪಿಂಗ್ ನಲ್ಲಿ ಪಿ. ಸಾಹೇಬರವರು ನಮಗೆ ಸೂಚಿಸಿ ನೇಮಕ ಮಾಡಿದ್ದರು. ಅದರಂತೆ ನಾನು ಪತ್ತೆ ಕಾರ್ಯಕ್ಕಾಗಿ ಹೊರಟು ತಲಘಟ್ಟಪುರ, ತಾತಗುಣಿ, ದೇವಗೆರೆ, ಹೆಚ್. ಗೊಲ್ಲಹಳ್ಳಿ, ಕಾರುಬೆಲೆ, ಮುಂತಾದ ಕಡೆಗಳಲ್ಲಿ ಭೇಟಿ ನೀಡಿ ಬಾತ್ಮಿ ಸಂಗ್ರಹಿಸುತ್ತಿದ್ದಾಗ ರಾತ್ರಿ 9-15 ಗಂಟೆ ಸಮಯದಲ್ಲಿ ಅಗರ ಕ್ರಾಸ್ ಬಳಿ ಒಬ್ಬ ಅಪರಿಚಿತ ವ್ಯಕ್ತಿ ಒಂದು ಡಿಯೋ ಗಾಡಿಯನ್ನು ನಿಲ್ಲಿಸಿಕೊಂಡು ನಿಂತಿದ್ದು, ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದನು. ನಂತರ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮೋಟಾರು ಸೈಕಲ್ ನ್ನು ಸ್ಪಾರ್ಟ್ ಮಾಡಿಕೊಂಡು ಹೋಗಲು ಪ್ರಾರಂಭಿಸಿದನು. ಕೂಡಲೇ ಅವನನ್ನು ನಾವು ಹೋಗಿ ಸುತ್ತುವರೆದು ಹಿಡಿದುಕೊಂಡು ವಿಚಾರ ಮಾಡಿದಾಗ ತಡವರಿಸುತ್ತಾ ತಾನು ಬೆಂಗಳೂರು ವಾಸಿ ಎಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಸೋಮಶೇಖರ್ ಸಿ ಬಿನ್ ಲೇಟ್  ಚಿನ್ನಪ್ಪ, ರಾಜೀವ್ ಗಾಂಧಿ ರಸ್ತೆ, ರಾಜಮ್ಮ ಗಾರ್ಡನ್, ಜೆ.ಪಿನಗರ 6ನೇ ಹಂತ, ಜರಗನಹಳ್ಳಿ, ಎಂದು ಹಾಲಿ ಕೃಷ್ಣಪ್ಪ ರವರ ಮನೆಯಲ್ಲಿ ಬಾಡಿಗೆಗೆ ವಾಸ, ಶನಿಮಹಾತ್ಮ ದೇವಸ್ಥಾನದ ಹತ್ತಿರ, ಕನಕನಗರ, ಯಲಚೇನಹಳ್ಳಿಯಲ್ಲಿ ವಾಸವಾಗಿರುವುದಾಗಿ ತಿಳಿಸಿರುತ್ತಾನೆ. ಈತನ ಬಳಿ ಒಂದು ಡಿಯೋ ಗಾಡಿ ಇದ್ದುಯಲಚೇನಹಳ್ಳಿಯಲ್ಲಿ ಕಳ್ಳತನ ಮಾಡಿದ್ದೆಂದು ತಿಳಿಸಿದನು. ಸದರಿ ಗಾಡಿಯನ್ನು ಪರಿಶೀಲಿಸಲಾಗಿ ಕಪ್ಪು ಬಣ್ಣದ ಡಿಯೋ ಗಾಡಿ ಆಗಿದ್ದು, ಹಿಂದೆ ಮುಂದೆ ನಂಬರ್ ಪ್ಲೇಟ್ ಇರುವುದಿಲ್ಲಸದರಿ ಡಿಯೋ ಗಾಡಿಯನ್ನು ಅರೋಪಿಯು ಕಳ್ಳತನ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆರೋಪಿ ಮತ್ತು ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಪ್ರ..ವರದಿಯನ್ನು ದಾಖಲು ಮಾಡಿರುತ್ತದೆ.

 

9

Kanakapura Town PS

 

Cr.No:0010/2022

(IPC 1860 U/s 380,457 )

04/02/2022

BURGLARY - NIGHT - At Residential

 

Under Investigation

 

 

ದಿನಾಂಕ-04/02/2022 ರಂದು  ಮಧ್ಯಾಹ್ನ 2.00 ಗಂಟೆಗೆ ಫಿರ್ಯಾದಿ ಬಸವರಾಜುರವರು ಪೊಲೀಸ್ ಠಾಣೆಗೆ ಹಾಜರಾಗಿ, ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಕನಕಪುರ ಟೌನ್ ಕುಂಭಾರ ಬೀದಿಯ ಚಲುವಯ್ಯರವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು, ದಿನಾಂಕ-02/02/2022 ರಂದು ನನ್ನ ಹೆಂಡತಿ ಮಂಜುಳ ಅವರ ತವರು ಮನೆಗೆ ಹೋಗಿದ್ದುನಾನು ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದುದಿನಾಂಕ-03/02/2022 ರಂದು ನಾನು ಸಂಜೆ 5.00 ಗಂಟೆಗೆ ರಾತ್ರಿ ಲಾರಿ ಕೆಲಸಕ್ಕೆ ಹೊಗಿ ವಾಪಸ್ಸ್ ದಿನಾಂಕ-04/02/2022 ರಂದು ಬೆಳಿಗ್ಗೆ 8.30 ಗಂಟೆಗೆ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗವನ್ನು ತೆಗೆದು ಮನೆಯೊಳಗೆ ಹೊಗಿ ರೂಮಿನಲ್ಲಿಟ್ಟಿದ್ದ ಬೀರುವನ್ನು ಹೊಡೆದು ಅದರಲ್ಲಿಟ್ಟಿದ್ದ ಒಂದು ಜೊತೆ ಹ್ಯಾಂಗಿಗ್ಸ್, ಒಂದು ಜೊತೆ ಓಲೆ, ಮಾಟಿ ಮತ್ತು ಒಂದು ಉಂಗುರವನ್ನು ಒಟ್ಟು ಸುಮಾರು 20 ಗ್ರಾಂ ತೂಕದ ಚಿನ್ನದ ವಡೆವೆಗಳು ಮತ್ತು ಸುಮಾರು 25 ಸಾವಿರ ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಚಿನ್ನದ ವಡೆವೆಗಳು ನನ್ನ ಮದುವೆ ಕಾಲದಲ್ಲಿ ತೆಗೆದುಕೊಂಡಿದ್ದು, ಸುಮಾರು ಐವತ್ತು ಸಾವಿರ ರೂಪಾಯಿಗಳಾಗ ಬಹುದು, ಕಳ್ಳತನ ಮಾಡಿಕೊಂಡು ಹೋಗಿರುವ ಚಿನ್ನದ ವಡೆವೆಗಳು ಮತ್ತು ಹಣವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ

 

10

Kodihalli PS

 

Cr.No:0019/2022

(IPC 1860 U/s 279,337 )

04/02/2022

MOTOR VEHICLE ACCIDENTS NON-FATAL - Other Roads

 

Under Investigation

 

 

ದಿನಾಂಕ: 04.02.2022 ರಂದು ಮಧ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಶೋಭ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಗರಳಾಪುರ ಗ್ರಾಮದ ನನ್ನ ತಂದೆ 68 ವಯಸ್ಸುಳ್ಳ ಸೊಂಭುಲಿಂಗೇಗೌಡ ಬಿನ್ ಲೇಟ್ ಕುಳ್ಳೇಗೌಡ ಎಂಬುವರು ಮತ್ತು ನಾನು ಇಬ್ಬರು ದಿನಾಂಕ: 02.02.2022 ರಂದು ಮಧ್ಯಾಹ್ನ 1.30 ಗಂಟೆಯಲ್ಲಿ ನಮ್ಮ ಮನೆಯಿಂದ ಬರೋಡ ಬ್ಯಾಂಕ್ ಕಡೆಎಗ ನಡೆದುಕೊಂಡು ಹೋಗುತ್ತಿದ್ದೋ ನನ್ನ ತಂದೆ ಸೊಂಭುಲಿಂಗೇಗೌಡ ಮುಂದೆ ಹೋಗುತ್ತಿದ್ದರು ನಾನು ಹಿಂದೆ ಹೋಗುತ್ತಿದ್ದೆ ನನು ನನ್ನ ತಂದೆ ಎಡ ರಸ್ತೆ ಪಕ್ಕದ ಗೌಡ್ರು ಮಿಲ್ಟ್ರಿ ಹೋಟೆಲ್ ಹತ್ತಿರ ನಡೆದು ಹೋಗುತ್ತಿದಾಗ ಹುಣಸನಹಳ್ಳಿ  ಬಸ್ ಸ್ಯಾಂಡ್ ಕಡೆಯಿಂದ ಬಂದ ಕೆಎ-42-ಇಎ-2874 ಹಿರೋಹೊಂಡಾ ಸ್ಪ್ಲೆಂಡರ್ ಬೈಕ್ ಚಾಲಕ ಅತಿ ವೇಘ ಮತ್ತು ಅಜಾಗರೂಕತೆಯಿಂದ ಬೈಕ್ ಚಲಿಸಿ ನಮ್ಮ ತಂದೆ ಹಿಂಭಾಗಕ್ಕೆ ಡಿಕ್ಕಿಹೊಡೆಸಿದ್ದಾನೆ.ನಮ್ಮ ತಮದೆ ಎಡಕಾಲು ಮೂಳೆ ಮುರಿದಿರುತ್ತದೆ. ತಕ್ಷಣ ಆಂಬುಲೆನ್ಸ್ ಕರೆಯಿಸಿಕೊಂಉ ನಮ್ಮ ತಂದೆ ಸೊಂಭುಲಿಂಗೇಗೌಡನನ್ನು ಕರೆದುಕೊಂಡು ಕನಕಪುರದ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯಾಧಿಕಾರಿಗೆ ತೋರಿಸಿದೆ. ಅಲ್ಲಿನ ವೈದ್ಯಾಧಿಕಾರಿಯೂ ಮೂಳೆ ಮುರಿದಿದೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ತಿಳಿಸಿದರು ಆನಂತರ ಅದೇ ಆಂಬುಲೆನ್ಸ್ ನಿಂದ ನನ್ನ ತಂದೆ ರವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಪಡಿಸಿರುತ್ತೇನೆ. ಅಲ್ಲಿನ ವೈದ್ಯಾಧಿಕಾರಿಯೂ ಮೂಲೆ ಮುರಿದಿರುವುದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ ಆದ್ದರಿಂದ ಅಪಘಾತವನ್ನುಂಟು ಮಾಡಿರುವ ಕೆಎ-42-ಇಎ-2874 ಹಿರೋ ಹೊಂಡಾ ಅಪಘಾತವುಂಟು ಮಾಡಿರುವ ಕೆಎ-42-ಇಎ-2874 ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ಚಾಲಕನ ಮೇಲೆ ಕಾನೂನು ರೀತಿ ಕ್ರಮವನ್ನು ಜರುಗಿಸಲು ಕೋರುತ್ತೇನೆ. ನಾನು ನಮ್ಮ ತಂದೆಯವರನ್ನು ಆಸ್ಪತ್ರೆಗೆ ದಾಖಲು ಮಾಡಿ ತಡವಾಗಿ ಬಂದು ದೂರು ಕೊಟ್ಟಿರುತ್ತೇನೆಂದು ನೀಡಿದ ದೂರಿನ ಮೇರೆಗೆ.

 

11

Kodihalli PS

 

Cr.No:0020/2022

(IPC 1860 U/s 279,337 )

 

04/02/2022

MOTOR VEHICLE ACCIDENTS NON-FATAL - Other Roads

 

Under Investigation

 

 

ದಿನಾಂಕ: 04.02.2022 ರಂದು ಮಧ್ಯಾಹ್ನ 1.30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 02.02.2022 ರಂದು ನನ್ನ ಯಜಮಾಣರಾದ ಬಾಬ್ತು ದ್ವಿಚಕ್ರ ವಾಃನ ಅದರ ಸಮಖ್ಯೆ ಕೆಎ-42-ಇಬಿ-6477 ವಾಹನವನ್ನು ನನ್ನ ಯಜಮಾನರಾದ ನೀಲಕಂಠರೆಡ್ಡಿ ರವರು ಚಲಾಯಿಸಿಕೊಂಡು ಹಿಂಬದಿಯಲ್ಲಿ ಶಿವಕುಮಾರ್ ಕೆ.ಎನ್ ಬಿನ್ ಕೆ.ಎನ್.ನಂಜುಂಡಸ್ವಾಮಿ ಕಲ್ಲಂಬಾಳು ಗ್ರಾಮ, ತರಗೂರು ತಾಲ್ಲೂಕು, ಮೈಸೂರು ಜಿಲ್ಲೆಯವರು ಹಾಲಿ ವಾಸ ಕನಕಪುರ ಟೌನ್ ನಲ್ಲಿ ವಾಸಿಸುತ್ತಿದ್ದು ನನ್ನ ಯಜಮಾನರಾದ ನೀಲಕಂಠರೆಡ್ಡಿ ರವರು ಕನಕಪುರ ಟೌನಿನಲ್ಲಿರುವ ಫೈನಾನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಮತ್ತು ನನ್ನ ಯಯಜಮಾನರ ದ್ವಿಚಕ್ರ ವಾಹನದಲ್ಲಿ ಹಿಂಬದಿಯ ಸವಾರನಗಿ ಸವಾರಿ ಮಾಡುತ್ತಿದ್ದ ಶಿವಕುಮಾರ್ ಕೆ.ಎನ್ ರವರು ಅದೇ ಪೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಂಪನಿಯ ಕೆಲಸದ ನಿಮಿತ್ತ ಅರಕೆರೆಗೆ ಹೋಗಿದ್ದು ಕೆಲಸ ಮುಗಿಸಿಕೊಂಡು ಗರಳಾಪುರ ಗ್ರಾಮದ ಶಿವರಾಮು ರವರ ಮನೆಯ ಹತ್ತಿರ ವಾಹನ ಚಲಿಸಿಕೊಂಡು ಸುಮಾರು ಸಂಜೆ 5.30 ಸಮಯದಲ್ಲಿ ವಾಪಸ್ ಕನಕಪುರಕ್ಕೆ ಬರುತ್ತಿದ್ದಾಗ ಒಂದು ಕಾರು ಅದರ ಸಂಖ್ಯೆ ಕೆಎ-01-ಎಹೆಚ್-0655 ಮಹೇಂದ್ರ ಕಾರಿನ ಚಾಲಕ ತನ್ನ ವಾಃನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಯಜಮಾಣರು ಸವಾರಿ ಮಾಡುತ್ತಿದ್ದ ಮೇಲೆಕಂಸ ದ್ವಿಚಕ್ರ ವಾಹನಕ್ಕೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಯಜಮಾಣರು ಹಾಗೂ ಹಿಂಬದಿಯ ಸವಾರರಾದ ಶಿವಕುಮಾರ್ ಕೆ.ಎನ್ ರವರು ಗಾಡಿ ಸಮೇತ ಕೆಳಕ್ಕೆ ಬಿದ್ದಾಗ ನನ್ನ ಯಜಮಾನರಿಗೆ ಬಲ ತೊಡೆ ಮತ್ತು ಎರಡೂ ಕಾಲುಗಳ ಮಂಡಿಗಳಿಗೆ ಹಾಗೂ ಇತರ ದೇಹದ ಭಾಗಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಅಲ್ಲಿಯೇ ಇದ್ದ ಯಾರೋ ದಾರಿ ಹೋಕರು ಇಬ್ಬರನ್ನು ಪ್ರಧಮ ಚಿಕಿತ್ಸೆಗಾಗಿ ಕನಕಪುರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನಗೆ ಅಪಘಾತ ನಡೆದ ವಿಚಾರವನ್ನು ಫೋನ್ ಮುಖಾಂತರ ತಿಳಿಸಲಾಗಿ ನನು ತಕ್ಷಣ ಕನಕಪುರ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಅಪಘಾತವಾದ ವಿಚಾರ ಸತ್ಯವಾಗಿದ್ದು ನನ್ನ ಯಜಮಾಣರಿಗೆ ಹಾಗೂ ಶಿವಕುಮಾರ್ ಕೆ.ಎನ್. ರವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನನ್ನ ಯಜಮಾನರನ್ನು ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಕೋಣನಕುಮಟೆಯಲ್ಲಿರುವ ಆಸ್ಟ್ರಾ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿ ನನ್ನ ಯಮಾನರಿಗೆ ಬಲ ತೊಡೆಯ ಮೂಳೆ ಮುರಿದ್ದಿದ್ದರಿಂದ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲೆ ಕಾರಣ ಮತ್ತು ಮತ್ತೊಂದು ಆಂಬುಲೆನ್ಸ್ ನಲ್ಲಿ ಶಿವಕುಮಾರ್.ಕೆ.ಎನ್ ರವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿ ಅವರಿಗೂ ಕೂಡ ಅವರ ಕಡೆಯವರು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿದ್ದು ವಿಚಾರ ತಿಳಿದುಕೊಂಡು ನಾನು ದಿನ ತಡವಾಗಿ  ಬಂದು ದೂರು ಸಲ್ಲಿಸುತ್ತಿದ್ದೇನೆ. ಆದುದ್ದರಿಂದ ಮೇಲ್ಕಂಡ ಮಹೇಂದ್ರ ಕಾರ್ ಅದರ ಸಂಖ್ಯೆ ಕೆಎ-01-ಎಹೆಚ್-0655 ಚಾಲಕನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಪ್ರಾಥರ್ಿಸಿಕೊಳ್ಳುತ್ತೇನೆ. ಎಂದು ದೂರು

 

 

12

Kudur PS

 

Cr.No:0051/2022

(IPC 1860 U/s 279,337 )

 

04/02/2022

MOTOR VEHICLE ACCIDENTS NON-FATAL - National Highways

 

Under Investigation

 

 

ಪಿರ್ಯಾದಿ ದಿನಾಂಕ 04/02/2022 ರಂದು ಮಧ್ಯಾಹ್ನ 12-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಮಗ ಕೃಷ್ಣನಿಗೆ ಸುಮಾರು  45 ವರ್ಷ ವಯಸ್ಸಾಗಿದ್ದು ಬೆಂಗಳೂರಿನ ಕೆಂಪೇಗೌಡನಗರ, ಬ್ಯಾಡರಹಳ್ಳಿಯಲ್ಲಿ ಸಂಸಾರ ಸಮೇತವಾಗಿ ವಾಸವಾಗಿದ್ದು, ಕುಣಿಗಲ್ ಬಳಿ ಇರುವ ಹಾಲಪ್ಪನ ಗುಡ್ಡೆ ಬಳಿ ಮೆಡಿಕಲ್ ಶಾಫ್ ಇಟ್ಟುಕೊಂಡಿದ್ದು, ಆಗಾಗ್ಗೆ ಬೆಂಗಳೂರಿನಲ್ಲಿರುವ ಮನೆಗೆ ಹೋಗಿ ಬರುತ್ತಿದ್ದನು. ದಿನಾಂಕ 28/12/2021 ರಂದು ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಮನೆಯಲ್ಲಿರುವಾಗ್ಗೆ ಕೃಷ್ಣನ ಮೋಬೈಲ್ನಿಂದ ಯಾರೋ ಸಾರ್ವಜನಿಕರು  ನನಗೆ ಪೋನ್ ಮಾಡಿ  ನಿಮ್ಮ ಮಗ ಕೃಷ್ಣ ದಿನಾಂಕ  28/12/2021 ರಂದು ಮಧ್ಯಾಹ್ನ ಸುಮಾರು  2-00 ಗಂಟೆ ಸಮಯಕ್ಕೆ  ಕೆ. 02 .ಎನ್ 8804 ಟಿ.ವಿ.ಎಸ್ ವಿಕ್ಟರ್ ಬೈಕಿನಲ್ಲಿ ಎನ್.ಹೆಚ್. 75 ಕುಣಿಗಲ್ ನೆಲಮಂಗಲ ರಸ್ತೆ, ಗುಡೇಮಾರನಹಳ್ಳಿ ಬಳಿ ಇರುವ ಸನ್ ಪ್ಯೂರ್ ಆಯಿಲ್ ಪ್ಯಾಕ್ಟರಿ ನೇರದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಬೈಕನ್ನು ಓಡಿಸುತ್ತಿದ್ದ ನನ್ನ ಮಗ ಕೃಷ್ಣ ನಿರ್ಲಕ್ಷತೆಯಿಂದ ಬೈಕನ್ನು ಚಾಲನೆ ಮಾಡಿ ಮುಂದೆ ಹೋಗುತ್ತಿದ್ದ ಯಾವುದೋ ವಾಹನದ ಹಿಂಭಾಗಕಕ್ಕೆ ಡಿಕ್ಕಿ ಹೊಡೆಸಿಕೊಂಡು ಬಿದ್ದು  ಹೋಗಿದ್ದು, ಪರಿಣಾಮವಾಗಿ ತಲೆ ಹಾಗೂ ಇತರೆ ಕಡೆಗಳಿಗೆ ಏಟುಗಳಾಗಿದ್ದು ಗಾಯಾಳುವನ್ನು ಉಪಚರಿಸಿ ನೆಲಮಂಗಲ ಕೇರ್ ಏಶೀಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆಂದು ತಿಳಿಸಿದ ಮೇರೆಗೆ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಆಕ್ಸಿಡೆಂಟ್  ನಿಂದಾಗಿ ನನ್ನ ಮಗನಿಗೆ ಏಟುಗಳಾಗಿದ್ದವು, ನಂತರ ವೈದ್ಯರ ಸಲಹೆ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ ಅದೆ ದಿನ ರಾತ್ರಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲುಮಾಡಿ ಚಿಕಿತ್ಸೆಯನ್ನು ಕೊಡಿಸಿ, ನನ್ನ ಮಗನ ಜೊತೆಯಲ್ಲಿದ್ದು ಆತನಿಗೆ ಚಿಕಿತ್ಸೆಯನ್ನು ಕೊಡಿಸಿ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಇತ್ಯಾದಿಯಾಗಿ.

 

13

Kudur PS

 

Cr.No:0052/2022

(IPC 1860 U/s 279 )

 

04/02/2022

MOTOR VEHICLE ACCIDENTS NON-FATAL - National Highways

 

Under Investigation

 

 

ದಿನಾಂಕ-04/02/2022 ರಂದು ಮದ್ಯಾಹ್ನ 3.00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲೆ ತಿಳಿಸಿದ ವಿಳಾಸದಲ್ಲಿ ವಾಸವಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆದಿನಾಂಕ  31/01/2022 ರಂದು ಕೆಲಸದ ನಿಮಿತ್ತವಾಗಿ ಪುತ್ತೂರಿನಿಂದ ಬೆಂಗಳೂರಿಗೆ ಹೋಗುವ  ಸಲುವಾಗಿ ಕೆ. 09 ಜೆಡ್ 3407 ಕಾರಿನಲ್ಲಿ ಹೊರಟೆನು, ಕಾರನ್ನು ನಾನೆ ಓಡಿಸುತ್ತಿದ್ದು, ಬೆಳಗ್ಗೆ ಸುಮಾರು 8-20 ಸುಮಾರಿಗೆ ಎನ್.ಹೆಚ್ 75, ಕುಣಿಗಲ್ ನೆಲಮಂಗಲ ರಸ್ತೆ, ಭದ್ರಾಪುರ ಗೇಟ್ ಬಳಿ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಅದೆ ಸಮಯಕ್ಕೆ ಪಕ್ಕದ ರಸ್ತೆಯಾದ ನೆಲಮಂಗಲ ಕಡೆಯಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯ ಮೂಲಕ ಬಂದ ಕೆ. 51 .ಎಫ್ 1649 ಖಾಸಗಿ ಬಸ್ಸಿನ ಚಾಲಕ ಬಸ್ಸನ್ನು ಅತಿವೇ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೆ ಏಕಾಏಕಿ ಯೂ ತಿರುವಿನ ಬಳಿ ತಿರುವು ಪಡೆದು ಬೆಂಗಳೂರು ಕಡೆಗೆ ಹೋಗುವ ರಸ್ತೆಗೆ ಬಂದಿದ್ದು, ಪರಿಣಾಮವಾಗಿ ನಾನು ಚಾಲನೆ ಮಾಡುತ್ತಿದ್ದು ಕಾರು ಬಸ್ಸಿನ ಎಡಭಾಗದ ಮಧ್ಯ ಭಾಗಕ್ಕೆ ಡಿಕ್ಕಿಯಾಯಿತು, ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಃಗೊಂಡಿರುತ್ತೆ.   ಆಕ್ಸಿಡೆಂಟ್ನಿಂದಾಗಿ ಯಾರಿಗೂ ಯಾವುದೇ ಏಟುಗಳಾಗಿರುವುದಿಲ್ಲಅಪಘಾತಕ್ಕೆ ಕಾರಣನಾದ  ಬಸ್ಸಿನ ಚಾಲಕ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿ ರಾಜಿಗೆ ಬಾರದ ಕಾರಣ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಸದರಿ ಅಪಘಾತಕ್ಕೆ ಕಾರಣನಾದ ಕೆ. 51 .ಎಫ್ 1649 ಖಾಸಗಿ ಬಸ್ಸಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದೆ.

 

14

Kudur PS

 

Cr.No:0053/2022

(IPC 1860 U/s 00MP )

 

04/02/2022

MISSING PERSON - Women

 

Under Investigation

 

 

ದಿನಾಂಕ 04/02/2022 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ್ಗೆ ಸುಮಾರು 4 ವರ್ಷಗಳ ಹಿಂದೆ ದೇವಮ್ಮ ರವರನ್ನು ಮಧುವೆಯಾಗಿದ್ದು ನಮಗೆ 2. 1/2 ವರ್ಷದ ದುರುಣ ಎಂಬ ಹೆಣ್ಣು ಮಗಳಿರುತ್ತಾಳೆ. ದಿನ ದಿನಾಂಕ: 04/02/2022 ರಂದು 8.30 ಗಂಟೆಯಲ್ಲಿ ನಾನು ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ನನ್ನ ಹೆಂಡತಿಗೆ ಹೇಳಿ ಹೋಗಿದ್ದೆನು. ಬೆಳಿಗ್ಗೆ ಸುಮಾರು 11.00 ಗಂಟೆಯಲ್ಲಿ ನನ್ನ ಹೆಂಡತಿ ದೇವಮ್ಮ ನನ್ನ ಮಗಳನ್ನು ಕರೆದುಕೊಂಡು ಮನೆಯ ಮಾಲಿಕರಾದ ಜಯಲಕ್ಷ್ಮಿ ರವರಿಗೆ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಬೆಳಿಗ್ಗೆ ಸುಮಾರು 11.30 ಗಂಟೆಗೆ ನನ್ನ ಹೆಂಡತಿಯ ಮೊಬೈಲ್ ನಂಬರ್. 8904845573 ಗೆ ಫೋನ್ ಮಾಡಲಾಗಿ ಫೋನ್ ಸ್ವೀಚ್ ಆಫ್ ಆಗಿರುತ್ತೆ. ನಾನು ತಕ್ಷಣ ಮನೆಗೆ ಬಂದು ನೋಡಲಾಗಿ ನನ್ನ ಹೆಂಡತಿ & ಮಗಳು ಮನೆಯಲ್ಲಿ ಇರಲಿಲ್ಲ. ಆಸ್ಪತ್ರೆಯಿಂದ ಎಲ್ಲಿಗೆ ಹೋದರು ಎಂದು ತಿಳಿದಿಲ್ಲ. ಆದ್ದರಿಂದ ನಾನು ಭಯದಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ಹೆಂಡತಿ & ನನ್ನ ಮಗಳನ್ನು ಪತ್ತೆ ಮಾಡಿ ಕೊಡಬೇಕೆಂದು ಕೋರುತ್ತೇನೆ ಇತ್ಯಾದಿಯಾಗಿ

 

15

Kudur PS

 

Cr.No:0054/2022

(KARNATAKA EXCISE ACT, 1965 U/s 15(A),32(3) )

 

04/02/2022

KARNATAKA STATE LOCAL ACTS -  Karnataka Excise Act 1965

 

 

Under Investigation

 

 

ದಿನಾಂಕ 04/02/2022 ರಂದು ಸಂಜೆ 5-45 ಗಂಟೆಗೆ ಠಾಣಾ ಎಎಸ್ಐ-ರಾಮಕೃಷ್ಣಯ್ಯ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನ ದಿನಾಂಕ: 04.02.2022 ರಂದು ಸಂಜೆ ಎಎಸ್ ರಾಮಕೃಷ್ಣಪ್ಪ ಆದ ನಾನು ಮತ್ತು ಪಿಸಿ 630 ಸುಭಾಸ ಪಿಸಿ 812 ಚೇತನ ರವರ ಜೊತೆಯಲ್ಲಿ ಖಾಸಗಿ ವಾಹನದಲ್ಲಿ ಗಸ್ತಿನಲ್ಲಿದ್ದಾಗ, ಮರೂರು ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 3.30 ಗಂಟೆ ಹೊತ್ತಿಗೆ ತಿಪ್ಪಸಂದ್ರ ಗ್ರಾಮಕ್ಕೆ ಹೋದಾಗ, ತಿಪ್ಪಸಂದ್ರ  ಗ್ರಾಮದ ರಸ್ತೆ ಪಕ್ಕದಲ್ಲಿರುವ ಒಂದು ಮನೆಯ ಪಕ್ಕದ ಶೆಡ್ಡಿನ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು 4-5 ಜನ ಮಧ್ಯ ಸೇವನೆ ಮಾಡುತ್ತಿದ್ದು, ಮಧ್ಯ ಸೇವಿಸುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿ ಹೋಗಿರುತ್ತಾರೆ, ಸ್ಥಳದಲ್ಲಿ ಮಧ್ಯದ ಪೌಚ್ ಗಳು ಹಾಗೂ ಪ್ಲಾಸ್ಟಿಕ್ ಲೋಟಗಳು ಇದ್ದು, ನಾವು ಅನುಮಾನಗೊಂಡು, ಸ್ಥಳದಲ್ಲಿದ್ದ ಆಸಾಮಿಯನ್ನು ವಿಚಾರ ಮಾಡಿದ್ದು, ತನ್ನ ಹೆಸರು ಹರೀಶ ಬಿನ್ ಗಂಗಪ್ಪ 46 ವರ್ಷ, ಈಡಿಗ  ಜನಾಂಗ, ವವ್ಯಸಾಯ ಕೆಲಸ ವಾಸ: ತಿಪ್ಪಸಂದ್ರ  ಗ್ರಾಮ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾ, ರಾಮನಗರ ಜಿಲ್ಲೆ ಎಂದು ತಿಳಿಸಿದ್ದು, ಸದರಿ ಆಸಾಮಿಯ ಬಳಿ ತನ್ನ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರ ಬಗ್ಗೆ ಪರವಾನಿಗೆಯನ್ನು ಹಾಜರ್ ಪಡಿಸುವಂತೆ ಸೂಚಿಸಿದಾಗ, ಸದರಿ ಆಸಾಮಿ ಯಾವುದೇ ಪರವಾನಿಗೆಯನ್ನು ಹಾಜರ್ ಪಡಿಸಿರುವುದಿಲ್ಲ. ಆಗ ಸ್ಥಳದಲ್ಲಿ ಪಂಚನಾಮೆಯನ್ನು ಕೈಗೊಳ್ಳಲು, ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಸ್ಥಳದಲ್ಲಿದ್ದ 90 ಎಂ.ಎಲ್ ಒರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು ಹಾಗೂ ಕುಮಾರ್ ಬಳಿ ಇದ್ದ 3 ಮಧ್ಯ ತುಂಬಿದ ಓರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು, ಹಾಗೂ 2 ಪ್ಲಾಸ್ಟಿಕ್ ಲೋಟಗಳನ್ನು ಸಂಜೆ 4.00 ಗಂಟೆಯಿಂದ ಸಂಜೆ 5.00 ಗಂಟೆ ವರೆಗೆ ಮಹಜರ್ ಮುಖೇನ ಅಮಾನತ್ತು ಪಡಿಸಿಕೊಂಡು, ಮಾಲು ಮತ್ತು ಆರೋಪಿ ಸಮೇತ ಠಾಣೆಗೆ ಕರೆದುಕೊಂಡು ಬಂದು ಸಂಜೆ 5.30 ಗಂಟೆಗೆ ವರದಿಯನ್ನು ತಯಾರಿಸಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿರುತ್ತೇನೆ ಇತ್ಯಾದಿಯಾಗಿ.

 

16

Kudur PS

 

Cr.No:0055/2022

(KARNATAKA EXCISE ACT, 1965 U/s 15(A),32(3) )

 

04/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನಾಂಕ 04.02.2022 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ  ಸೋಲೂರು ಹೋಬಳಿ ಲಕ್ಕೇನಹಳ್ಳಿ ಹ್ಯಾಂಡ್ ಪೋಸ್ಟ್, ಲಕ್ಕೇನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.45 ಗಂಟೆ ಸಮಯದಲ್ಲಿ ಠಾಣಾ ಸರಹದ್ದು ಎಣ್ಣೆಗೆರೆ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಬೈರೇಗೌಢ ಎಂಬುವವರಿಗೆ ಸೇರಿದ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ   2-3 ಜನರನ್ನು ಕೂಡಿಸಿಕೊಂಡು ಅವರಿಗೆ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದನ್ನು ಕಂಡು ಸ್ಥಳಕ್ಕೆ ಹೋದಾಗ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದವರು ಸ್ಥಳದಿಂದ ಓಡಿಹೋಗಿರುತ್ತಾರೆಬೈರೇಗೌಢ ಬಿನ್ ಲೇಟ್ ಹುಚ್ಚಪ್ಪ, 52 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಪೆಟ್ಟಿ ಅಂಗಡಿ ಎಣ್ಣೆಗೆರೆ ಗ್ರಾಮ ಸೋಲೂರು ಹೋಬಳಿ, ಅಂಗಡಿಯ ಬಳಿ ಹೋದಾಗ ಪಕ್ಕದ ಅಂಗಡಿ ಒಂದು ಚಿಲ್ಲರೆ ಅಂಗಡಿಯ ಮುಂದೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಆಗ ಅಂಗಡಿಯ ಬಳಿಯಲ್ಲಿಗೆ ಹೆಚ್.ಸಿ 308 ರವರು ಭೇಟಿ ನೀಡಿರುತ್ತಾರೆ. ಬೈರೇಗೌಡ ಬಿನ್ ಲೇಟ್ ಹುಚ್ಚಪ್ಪ ರವರು ತನ್ನ ಅಂಗಡಿಯ ಮುಂದಿನ ಸ್ಥಳದಲ್ಲಿ ಮದ್ಯಪಾನ ಮಾಡಿಕೊಟ್ಟಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ  ಸಂಬಂದಪಟ್ಟ ಇಲಾಖೆಯಿಂದ ಪಡೆದಿರುವ ಪರವಾನಗಿಯನ್ನು ಹಾಜರುಪಡಿಸುವಂತೆ ಸೂಚಿಸಿದಾಗ ಆತನು ಯಾವುದೇ ಪರವಾನಗಿಯನ್ನು ಹಾಜರುಪಡಿಸಿರುವುದಿಲ್ಲಆಗ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರುಗಳನ್ನು ಪರಿಚಯಿಸಿಕೊಂಡು ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ ಮಧ್ಯಪಾನ ಮಾಡಿ ಬಿಸಾಡಿದ್ದ ಒರಿಜಿನಲ್ ಚಾಯ್ಸ್ ಕಂಪನಿಯ 90 ಎಂ.ಎಲ್ ಪ್ರಮಾಣದ 02 ಖಾಲಿ ಪೌಚ್ ಗಳು  ಮತ್ತು 02 ಪ್ಲಾಸ್ಟಿಕ್ ಲೋಟಗಳು ಬಿದ್ದಿರುತ್ತವೆ. ಅಂಗಡಿಯಲ್ಲಿ ಪರಿಶೀಲಿಸಲಾಗಿ ಅಂಗಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ 90 ಎಂ.ಎಲ್ ಪ್ರಮಾಣದ ಒರಿಜಿನಲ್ ಚಾಯ್ಸ್ ಕಂಪನಿಯ ಮಧ್ಯವಿರುವ 02 ಪೌಚ್ ಗಳು, ವೋಲ್ಡ್ ಟ್ರಾವೆನ್ ವಿಸ್ಕಿ ಕಂಪನಿಯ 90 ಎಂ.ಎಲ್ ಪ್ರಮಾಣದ 01 ಪೌಚ್ ದೊರೆತಿರುತ್ತವೆ. ಇವುಗಳನ್ನು ಸಂಜೆ 6.00 ಗಂಟೆಯಿಂದ 6.30 ಗಂಟೆಯ ವರೆಗೆ ಕೈಗೊಂಡ ಪಂಚನಾಮೆ ಮೂಲಕ ವಶಕ್ಕೆ ಪಡೆದು, ಅಂಗಡಿಯ ಮಾಲೀಕರಾದ ಬೈರೇಗೌಢನನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 7.00ಗಂಟೆಯ ಸಮಯದಲ್ಲಿ ಠಾಣೆಗೆ ಹಾಜರುಪಡಿಸಿರುತ್ತೇನೆ. ತನ್ನ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದ ಬೈರೇಗೌಡ ಬಿನ್ ಲೇಟ್ ಹುಚ್ಚಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.

 

17

Kudur PS

 

Cr.No:0056/2022

(KARNATAKA EXCISE ACT, 1965 U/s 15(A),32(3) )

 

04/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನಾಂಕ 04.02.2022 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ  ಸೋಲೂರು ಹೋಬಳಿ ಲಕ್ಕೇನಹಳ್ಳಿ ಹ್ಯಾಂಡ್ ಪೋಸ್ಟ್, ಲಕ್ಕೇನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.45 ಗಂಟೆ ಸಮಯದಲ್ಲಿ ಠಾಣಾ ಸರಹದ್ದು ಎಣ್ಣೆಗೆರೆ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಬೈರೇಗೌಢ ಎಂಬುವವರಿಗೆ ಸೇರಿದ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ 2-3 ಜನರನ್ನು ಕೂಡಿಸಿಕೊಂಡು ಅವರಿಗೆ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದನ್ನು ಕಂಡು ಸ್ಥಳಕ್ಕೆ ಹೋದಾಗ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದವರು ಸ್ಥಳದಿಂದ ಓಡಿಹೋಗಿರುತ್ತಾರೆಬೈರೇಗೌಢ  ಅಂಗಡಿಯ ಬಳಿ ಹೋದಾಗ ಪಕ್ಕದ ಅಂಗಡಿ ಒಂದು ಚಿಲ್ಲರೆ ಅಂಗಡಿಯ ಮುಂದೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಆಗ ಅಂಗಡಿಯ ಬಳಿಯಲ್ಲಿಗೆ ನಾನು ಸಂಜೆ 6.00 ಗಂಟೆಗೆ ಭೇಟಿ ನೀಡಿದಾಗ ಮಧ್ಯಪಾನ ಮಾಡುತ್ತಿದ್ದವರು ಓಡಿ ಹೋಗಿರುತ್ತಾರೆ. ಅಂಗಡಿಯ ಮಾಲೀಕರನ್ನು ವಿಚಾರಿಸಿ ಅವರ ಹೆಸರು ಮತ್ತು ವಿಳಾಸ ಕೇಳಲಾಗಿ ಕೆಂಪೇಗೌಡ ಬಿನ್ ಮುನಿಯಪ್ಪ, 45 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಎಣ್ಣೆಗೆರೆ ಗ್ರಾಮ  ಎಂದು ತಿಳಿಸಿರುತ್ತಾರೆ. ಕೆಂಪೇಗೌಡ ಬಿನ್ ಮುನಿಯಪ್ಪ ರವರಿಗೆ ತನ್ನ ಅಂಗಡಿಯ ಮುಂದಿನ ಸ್ಥಳದಲ್ಲಿ ಮದ್ಯಪಾನ ಮಾಡಿಕೊಟ್ಟಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ  ಸಂಬಂದಪಟ್ಟ ಇಲಾಖೆಯಿಂದ ಪಡೆದಿರುವ ಪರವಾನಗಿಯನ್ನು ಹಾಜರುಪಡಿಸುವಂತೆ ಸೂಚಿಸಿದಾಗ ಆತನು ಯಾವುದೇ ಪರವಾನಗಿಯನ್ನು ಹಾಜರುಪಡಿಸಿರುವುದಿಲ್ಲಆಗ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರುಗಳನ್ನು ಪರಿಚಯಿಸಿಕೊಂಡು ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ ಮಧ್ಯಪಾನ ಮಾಡಿ ಬಿಸಾಡಿದ್ದ ಒರಿಜಿನಲ್ ಚಾಯ್ಸ್ ಕಂಪನಿಯ 180 ಎಂ.ಎಲ್ ಪ್ರಮಾಣದ 02 ಖಾಲಿ ಪೌಚ್ ಗಳು  ಮತ್ತು 02 ಪ್ಲಾಸ್ಟಿಕ್ ಲೋಟಗಳು ಬಿದ್ದಿರುತ್ತವೆ. ಅಂಗಡಿಯಲ್ಲಿ ಪರಿಶೀಲಿಸಲಾಗಿ ಅಂಗಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ 180 ಎಂ.ಎಲ್ ಪ್ರಮಾಣದ ಮ್ಯಾಕ್ ಡೊವೇಲ್ಸ್ ಕಂಪನಿಯ ಮಧ್ಯವಿರುವ 03 ಪೌಚ್ ಗಳು, ದೊರೆತಿರುತ್ತವೆ. ಇವುಗಳನ್ನು ಸಂಜೆ 6.15 ಗಂಟೆಯಿಂದ 6.45 ಗಂಟೆಯ ವರೆಗೆ ಕೈಗೊಂಡ ಪಂಚನಾಮೆ ಮೂಲಕ ವಶಕ್ಕೆ ಪಡೆದು, ಅಂಗಡಿಯ ಮಾಲೀಕರಾದ ಕೆಂಪೇಗೌಡ ಬಿನ್ ಮುನಿಯಪ್ಪ ನನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 7.30 ಗಂಟೆಯ ಸಮಯದಲ್ಲಿ ಠಾಣೆಗೆ ಹಾಜರುಪಡಿಸಿರುತ್ತೇನೆ. ತನ್ನ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದ ಬೈರೇಗೌಡ ಬಿನ್ ಲೇಟ್ ಹುಚ್ಚಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.

 

 

18

Kumbalagudu PS

 

Cr.No:0016/2022

(IPC 1860 U/s 454,457,380

04/02/2022

BURGLARY - NIGHT - At Residential Premises

 

Under Investigation

 

 

ದಿನಾಂಕ:-04/02/2022 ರಂದು 12=00 ಗಂಟೆಗೆ ಪಿರ್ಯಾದುದಾರರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿ ಮತ್ತು ಮಗಳೊಂದಿಗೆ ವಾಸವಾಗಿರುತ್ತೇನೆ, ನಮ್ಮ ಸ್ವಂತ ಊರಾದ ಕಾಳೇನಹಳ್ಳಿ ಗ್ರಾಮ ಹೊಣಕೇರೆ ಹೋಬಳಿ ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆ ಇಲ್ಲಿ ನಮ್ಮ ತಂದೆ-ತಾಯಿ ವಾಸವಾಗಿರುತ್ತಾರೆ, ದಿನಾಂಕ: 01-02-2022 ರಂದು ನಮ್ಮ ತಂದೆ ಕೃಷ್ಣಪ್ಪ ಕೆ.ಕೆ ರವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲು ನಾನು ಊರಿಗೆ ಹೋಗಿದ್ದು, ನಮ್ಮ ತಂದೆಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 03-02-2022 ರಂದು ಬೆಳಗಿನ ಜಾವ ಮರಣ ಹೊಂದಿರುತ್ತಾರೆ. ನಮ್ಮ ಊರಿಗೆ ಬರಲು ನನ್ನ ಹೆಂಡತಿ ಶ್ರೀಮತಿ.ರಶ್ಮೀ.ಎನ್.ವಿ ಹಾಗೂ ಮಗಳು ಪರಿಣಿಕಾ ರವರು ನನ್ನ ಬಾಬ್ತು ಕೊಮ್ಮಘಟ್ಟದ ಮನೆಗೆ ಬೀಗ ಹಾಕಿಕೊಂಡು ದಿನಾಂಕ: 03-02-2022 ರಂದು ಬೆಳಿಗ್ಗೆ 06-00 ಗಂಟೆಗೆ ಮನೆಯನ್ನು ಬಿಟ್ಟು ನಮ್ಮ ಊರಿಗೆ ಬಂದಿದ್ದರು. ನಮ್ಮ ತಂದೆಯ ಅಂತ್ಯ ಸಂಸ್ಕಾರವನ್ನು ಮುಗಿಸಿಕೊಂಡು ನನ್ನ ಹೆಂಡತಿ ಮಗಳನ್ನು ಊರಿನಲ್ಲಿ ಬಿಟ್ಟು ನಾನು ಬೆಂಗಳೂರಿಗೆ ಬಂದು ನನ್ನ ಅಕ್ಕ ಲತಾ ರವರ ಮನೆಯಲ್ಲಿ ಇದ್ದೆನು. ದಿನ ದಿನಾಂಕ: 04-02-2022 ರಂದು ಬೆಳಿಗ್ಗೆ 06-00 ಗಂಟೆಗೆ ನಮ್ಮ ಅಕ್ಕನ ಮನೆಯನ್ನು ಬಿಟ್ಟು ಕೊಮ್ಮಘಟ್ಟದ ಮನೆಗೆ ಬೆಳಿಗ್ಗೆ 07-00 ಗಂಟೆಗೆ ಹೋದಾಗ, ಯಾರೋ ಕಳ್ಳರು ನಮ್ಮ ಮನೆಯ 1ನೇ ಮಹಡಿಯ ಮುಂದಿನ ಬಾಗಿಲ ಬೀಗವನ್ನು ಹೊಡೆದು, ಬಾಗಿಲನ್ನು ಮೀಟಿ ಮನೆಯ ಒಳ ಹೋಗಿ, 2ನೇ ಮಹಡಿಯಲ್ಲಿದ್ದ ನನ್ನ ರೂಮಿನ ಬಾಗಿಲ ಬೀಗವನ್ನು ಹೊಡೆದು ಹಾಕಿ ರೂಮಿನಲ್ಲಿದ್ದ ವಾರ್ಡರೂಬ್ ನಲ್ಲಿಟ್ಟಿದ್ದ ನನ್ನ ಚಿನ್ನದ ಒಡವೆಗಳಾದ 1) 25 ಗ್ರಾಂ ತೂಕದ ಚಿನ್ನದ ಸರ, 2)06 ಗ್ರಾಂ ತೂಕದ ಒಂದು ಉಂಗುರ, 3) 05 ಗ್ರಾಂ ತೂಕದ ಚಿನ್ನದ ಉಂಗುರ, ನನ್ನ ಹೆಂಡತಿಯ ಬಾಬ್ತು 1) 04 ಗ್ರಾಂ ತೂಕದ ಚಿನ್ನದ ಉಂಗುರ, 2) 02 ಗ್ರಾಂ ತೂಕದ ಚಿನ್ನದ ಉಂಗುರ, 03) 07 ಗ್ರಾಂ ತೂಕದ ಕಿವಿಯ ಓಲೆ ಮತ್ತು 22,000/-ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಚಿನ್ನದ ಒಡವೆಗಳ ಒಟ್ಟು ಬೆಲೆ ಸುಮಾರು 1,13,000/- ರೂ ಆಗಿರುತ್ತದೆ. ಆದ್ದರಿಂದ ದಿನಾಂಕ: 03-02-2022 ಬೆಳಿಗ್ಗೆ 06-00 ಗಂಟೆಯಿಂದ ದಿನಾಂಕ: 04-02-2022 ರಂದು ಬೆಳಿಗ್ಗೆ 06-00 ಗಂಟೆಯ ಒಳಗೆ ನಮ್ಮ ಮನೆಯ ಬೀಗವನ್ನು ಹೊಡೆದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಚಿನ್ನದ ಒಡವೆಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆಂದು ಕೊಟ್ಟ ದೂರಿನ ಮೇರೆಗೆ ಪ್ರ..ವರದಿ.

 

19

Ramanagara CEN Crime PS

 

Cr.No:0007/2022

(INFORMATION TECHNOLOGY ACT 2008 U/s 66(C),66(D) ; IPC 1860 U/s 420 )

 

04/02/2022

CYBER CRIME - Information Technology Act 2000, 2009

Under Investigation

 

 

 

ದಿನಾಂಕ 04.02.2022 ರಂದು ಮದ್ಯಾಹ್ನ 12.00 ಗಂಟೆಗೆ  ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಆರ್ ಬಿ ಎಲ್ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್ ಪಡೆದುಕೊಡಿದ್ದು, ಇದರ ಸಂಖ್ಯೆ 5369077371091218 ಆಗಿದ್ದು, ದಿನಾಂಕ 03.02.2022 ರಂದು ನನ್ನ ಕ್ರೆಡಿಟ್ ಕಾರ್ಡ್ ಗೆ ಹಣ ಕಳಿಸಿದ್ದಕ್ಕೆ ಸಂದೇಶ ಬಾರದ ಕಾರಣ ಸಂಜೆ ಸುಮಾರು 4.00 ಗಂಟೆಯಲ್ಲಿ 18002082368 ನಂಬರ್ ಗೆ ಕರೆ ಮಾಡಿದ್ದು, 5-10 ನಿಮಿಷಗಳ ನಂತರ 8695335283 ನಂಬರಿನಿಂದ ನನಗೆ ಕರೆ ಮಾಡಿ ನಾವು ಕಸ್ಟಮರ್ ಕೇರ್ ನಿಂದ ಮಾತನಾಡುತ್ತಿದ್ದೇವೆ ಏನು ಸಮಸ್ಯೆ ಹೇಳಿ ಎಂದು ಕೇಳಿದಾಗ ನಾನು ನನಗಾದ ತೊಂದರೆಯನ್ನು ಹೇಳಿ ಆಪರೇಟ್ ಮಾಡಿ ಹೇಳುತ್ತಿದ್ದಂತೆ ಮೊದಲ ಬಾರಿ 50299 ರೂಗಳು, ಎರಡನೇ ಬಾರಿ 38372 ರೂಗಳು, ಮೂರನೇ ಬಾರಿ 5185 ರೂಗಳು, ನಾಲ್ಕನೇ ಬಾರಿ 3629 ರೂಗಳು ಹೀಗೆ ಒಟ್ಟು ನಾಲ್ಕು ಬಾರಿ 97487.42 ರೂಗಳನ್ನು ಮೋಸ ಮಾಡಿ ನನ್ನ ಕ್ರಡೆಟ್ ಕಾರ್ಡ್ ನಿಂದ ವರ್ಗಾಯಿಸಿಕೊಂಡಿರುತ್ತಾರೆ. ಇವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ..ವರದಿ

 

20

Ramanagara Rural PS

 

Cr.No:0036/2022

(IPC 1860 U/s  506,341,34,504,323,324 )

 

 

04/02/2022

CASES OF HURT - Simple Hurt

 

Under Investigation

 

 

ದಿನಾಂಕ-04-02-2022 ರಂದು ಪಿರ್ಯಾದಿಯಾದ ಸಿದ್ದರಾಜು ರವರು ಠಾಣೆಗ ಹಾಜರಾಗಿ ದಿನಾಂಕ-03-02-2022 ರಂದು ರಾತ್ರಿ 10-30 ಸಮಯದಲ್ಲಿ  ರಾಮನಗರದಿಂದ ನೆಲಮಲೆಗೆ ಬರಲು ರೇವಣಸಿದ್ದೇಶ್ವರ ಬೆಟ್ಟದ ಬಳಿ ಬಂದಾಗ ಅವ್ವೇರಹಳ್ಳಿ ಕಡೆಯಿಂದ ಕಾರಿನಲ್ಲಿ ಬಂದಂತಹ ನಮ್ಮ ಗ್ರಾಮದ ವೇಣುಗೋಪಾಲ ಎಂಬುುವನು ಕಾರನ್ನು ನಿಲ್ಲಿಸಿ ನನಗೆ ಹಿಂದೆ ಅದ ಗಲಾಟೆಯಾದ ವಿಚಾರದಲ್ಲಿ ನೀನು ಯಾಕೇ ಕಾತರ್ಿಕ್ನ ಕಡೆ ಇದ್ದೀಯಾ ಎಂದು ಬೈದನು, ಆಗ ನನಗೂ ಹಾಗೂ ವೇಣುಗೋಪಾಲನಿಗೂ ಸಣ್ಣ ಪುಟ್ಟ ಗಲಾಟೆಯಾಗಿದ್ದು, ನಂತರ ನಾನು ಊರಿಗೆ ಬರುತ್ತಿದ್ದಾಗ ವೇಣುಗೋಪಾಲ ಅರುಣ್ನನ್ನು ರಾತ್ರಿ 10-30 ಸಮಯದಲ್ಲಿ ಕರೆಸಿಕೊಂಡು ಪೂಜಾರಿದೊಡ್ಡಿ ಸ್ಕೂಲ್ ಹತ್ತಿರ ನನ್ನನ್ನು ಆಡ್ಡಗಟ್ಟಿ ನನಗೆ ಬೈದು ಕೈಗಳಿಂದ ಹೊಡೆದು ಗಲಾಟೆ ಮಾಡಿದ್ದು, ಆಗ ನಾನು ಕಾತರ್ಿಕ್ನಿಗೆ ಪೋನ್ ಮಾಡಿ ಗಲಾಟೆಯಾದ ವಿಚಾರವನ್ನು ತಿಳಿಸಿ ಸ್ಥಳಕ್ಕೆ ಕರೆಸಿದೆ ನಂತರ ಅರುಣ್ ಮತ್ತು ವೇಣುಗೋಪಾಲ ನನಗೆ ಹಾಗೂ ಕಾತರ್ಿಕ್ನಿಗೆ ಬಟ್ಟೆಯನ್ನು ಹರಿದು ಹಾಕಿ ಮುಖದ ಮೇಲೆ ಹೊಡೆದನು ಹಾಗೂ ದೊಣ್ಣೆಯಿಂದ ಅರುಣ್ ಮತ್ತು ವೇಣುಗೋಪಾಲ ರವರು ಹೊಡೆದರು. ನೀನು ಕಾತರ್ಿಕ್ನಿಗೆ ಸಪೋಟ್ ಮಾಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಸಹ ಹಾಕಿರುತ್ತಾರೆಂತ ತಾವುಗಳು ಮುಂದಿನ ರೀತಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಾಗಿರುತ್ತದೆ

 

21

Ramanagara Rural PS

 

Cr.No:0037/2022

(KARNATAKA POLICE (AMENDMENT) ACT, 2021 U/s 87 )

 

04/02/2022

 

KARNATAKA POLICE ACT 1963 - Street Gambling (87)

 

Under Investigation

 

 

ರಾಮನಗರ ಜಿಲ್ಲೆ, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಶ್ರೀ ನರಸಿಂಹಮೂರ್ತಿ ಆದ ನಾನು ಟೈಪ್ ಮಾಡಿಸಿ ನೀಡಿದ ವರದಿ ಏನೆಂದರೆ,

   ದಿನ ದಿನಾಂಕ: 04.02.2022 ರಂದು ಸಾಯಂಕಾಲ 4.00 ಗಂಟೆ ಸಮಯದಲ್ಲಿ ಗಸ್ತಿನಲ್ಲಿರುವಾಗ್ಗೆ  ಠಾಣಾ ಗುಪ್ತ ಮಾಹಿತಿ ಸಂಗಹ್ರಹ ಸಿಬ್ಬಂದಿಯಾದ ಪಿಸಿ 712 ಸುಮಂತ್ ರವರು ರಾಮನಗರ ತಾಲ್ಲೂಕ್, ಕೂಟಗಲ್ ಹೋಬಳಿ, ಚಿಕ್ಕಗಂಗವಾಡಿ ಗ್ರಾಮ, ಚಿಕ್ಕಗಂಗವಾಡಿ ವೀರುಪಸಂದ್ರ ರಸ್ತೆ, ಸಾವಂದಯ್ಯ ರವರ ಮಾವಿನ ತೋಟದ ಜಮೀನಿನಲ್ಲಿ ಸುಮಾರು 6-7 ಜನರು ಗುಂಪಾಗಿ ಕುಳಿತು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟವನ್ನು ಆಡುತ್ತಿದ್ದಾರೆಂತ ಖಚಿತ ಮಾಹಿತಿ ಬಂದ ಮೇರೆಗೆ  ನಾನು ಠಾಣಾ ಸಿಬ್ಬಂದಿಗಳಾದ ಸಿಪಿಸಿ 131 ನಂದೀಶ್, ಪಿಸಿ 712 ಸುಮಂತ್, ಪಿಸಿ 115 ಗಿರೀಶ್, ಪಿಸಿ 695 ಗಿರೀಶ್, ಪಿಸಿ 661 ಸುನೀಲ್ ಗೌಡ, ಪಿಸಿ 879 ಪವನಕುಮಾರ್ ರವರುಗಳನ್ನು ಕರೆದು ಅವರಿಗೆ ವಿಚಾರ ತಿಳಿಸಿ ನಂತರ ಇಬ್ಬರು ಸಾರ್ವಜನಿಕರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಸಾರ್ವಜನಿಕರಿಬ್ಬರಿಗೆ ಸದರಿ ಸ್ಥಳದಲ್ಲಿ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ನೀವುಗಳು ನಮ್ಮೊಂದಿಗೆ ಪಂಚರಾಗಿ ಬರಬೇಕೆಂದು ಕೋರಿದೆನು. ಅವರುಗಳು ಪಂಚರಾಗಲು ಒಪ್ಪಿಕೊಂಡರು, ಆಗ ನಾನು, ಪಂಚರು ಮತ್ತು ಸಿಬ್ಬಂದಿಗಳನ್ನು ಖಾಸಗಿ ವಾಹನದಲ್ಲಿ ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ ಸಾಯಂಕಾಲ 4.45 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ 6-7 ನರು ಗುಂಪಾಗಿ ವೃತ್ತಾಕಾರದಲ್ಲಿ ಕುಳಿತು ಹಣವನ್ನು ಪಣವಾಗಿ ಕಟ್ಟುತ್ತಾ ಅಂದರ್ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದರು. ನಾನು ಸಿಬ್ಬಂದಿಯವರಿಗೆ ಇಸ್ಪೀಟ್ ಆಟ ಆಡುತ್ತಿರುವವರನ್ನು ಸುತ್ತುವರೆಯುವಂತೆ ಸೂಚಿಸಿ ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಜೂಜಾಡುತ್ತಿದ್ದವರ ಸುತ್ತುವರೆದು ದಾಳಿಮಾಡಿ ಜೂಜಾಡುತ್ತಿದ್ದ 7 ಜನರನ್ನು ವಶಕ್ಕೆ ಪಡೆದುಕೊಂಡಿದ್ದು ಹೆಸರು ವಿಳಾಸ ಕೇಳಲಾಗಿ 1) ರಮೇಶ್ ಬಿನ್ ಚಿಕ್ಕಯ್ಯ, 30 ವರ್ಷ, ಡ್ರೈವರ್ ಕೆಲಸ, ಹೊಂಬೇಗೌಡನದೊಡ್ಡಿ ಗ್ರಾಮ, ಕೂಟಗಲ್ ಹೋಬಳಿ, ರಾನಮನಗರ ತಾ|| 2)  ಚಿಕ್ಕಬೈರಪ್ಪ ಬಿನ್ ಲೇಟ್ ಅಂದಾನಯ್ಯ,  62 ವರ್ಷ, ವ್ಯವಸಾಯ, ಒಕ್ಕಲಿಗರು, ವಾಸ: ಜಾಲಮಂಗಲ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 3) ಹೇಮಂತ್ ಕುಮಾರ್ ಬಿನ್ ಲೇಟ್ ಗೌರಿಶಂಕರ್, 35 ವರ್ಷ, ಲಿಂಗಾಯತರು, ವ್ಯವಸಾಯ, ದೊಡ್ಡಗಂಗವಾಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 4) ಮಹೇಶ್ ಬಿನ್ ಲೇಟ್ ವೀರಯ್ಯ 35 ವರ್ಷ, ಲಿಂಗಾಯತರು, ವ್ಯವಸಾಯ, ದೊಡ್ಡಗಂಗವಾಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 5) ಚಂದ್ರಶೇಖರ್ ಬಿನ್ ಲೇಟ್ ಬೋರಯ್ಯ,  50 ವರ್ಷ, ಪಜಾ, ವ್ಯವಸಾಯ, ಚಿಕ್ಕ್ಡಗಂಗವಾಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 6) ಸಿದ್ದಲಿಂಗಯ್ಯ ಬಿನ್ ಲೇಟ್ ಚನ್ನಯ್ಯ,  60 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ: ಹೊಂಬೇಗೌಡನದೊಡ್ಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 7) ಲೊಕೇಶ್ @ ರಂಗಸ್ವಾಮಿ ಬಿನ್ ಪಾಪಣ್ಣ ಬಿನ್ 40 ವರ್ಷ, ಒಕ್ಕಲಿಗರು, ವ್ಯವಸಾಯ, ಹೊಂಬೇಗೌಡನದೊಡ್ಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| ಎಂದು ತಿಳಿದಿರುತ್ತದೆ. ನಂತರ ಪಂಚಾಯ್ತಿದಾರರ ಸಮಕ್ಷಮ ಸ್ಥಳ ಪರಿಶೀಲನೆ ಮಾಡಲಾಗಿ ಇವರೆಲ್ಲಾ 4 ನ್ಯೂಸ್ ಪೆಪರ್ ಗಳನ್ನು ಹಾಸಿಕೊಂಡು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ವೀಟ್ ಜೂಜಾಟವಾಡುತ್ತಿದ್ದು, ಮೇಲ್ಕಂಡವರು ಅಂದರ್ ಬಾಹರ್ ಇಸ್ಪೀಟ್ ಆಟವಾಡುತ್ತಿದ್ದರಿಂದ ಇವರು ಆಟಕ್ಕೆ ಉಪಯೋಗಿಸುತ್ತಿದ್ದ 3460/-ರೂ ಹಣವನ್ನು, 4 ನ್ಯೂಸ್ ಪೇಪರ್ ಗಳನ್ನು, 52 ಇಸ್ಪೀಟ್ ಎಲೆಗಳನ್ನು ಸಾಯಂಕಾಲ 5.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಸ್ಥಳದಲ್ಲಿ ಲ್ಯಾಪಟಾಪ್ನಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮುಂದಿನ ತನಿಖೆ ಬಗ್ಗೆ ಇವುಗಳನ್ನು ಅಮಾನತ್ತು ಪಡಿಸಿಕೊಂಡು ನಾವು ವಶಕ್ಕೆ ಪಡೆದುಕೊಂಡಿದ್ದ ಮೇಲ್ಕಂಡ 7 ಜನ ಆಸಾಮಿಗಳನ್ನು ಹಾಗೂ ಅಮಾನತ್ತು ಪಡಿಸಿಕೊಂಡ 3460/- ರೂ ಹಣ, 4 ನ್ಯೂಸ್ ಪೇಪರ್ ಗಳನ್ನು, 52 ಇಸ್ಪೀಟ್ ಎಲೆಗಳನ್ನು ಸಂಜೆ 6.45 ಗಂಟೆಗೆ ಠಾಣೆಗೆ ವಾಪಸ್ ಬಂದು ಮೇಲ್ಕಂಡ ಒಟ್ಟು 7 ಜನ ಆಸಾಮಿಗಳ ವಿರುದ್ಧ ಮುಂದಿನ ಕ್ರಮಕ್ಕಾಗಿ ಎಸ್.ಹೆಚ್. ರವರಿಗೆ ಸೂಚಿಸಿ ವರದಿ ನೀಡಿರುತ್ತೇನೆ. ಎಂದು  ನೀಡಿದ  ವರದಿ ಪಡೆದುಕೊಂಡು  ಪ್ರಕರಣ ದಾಖಲು ಮಾಡಿಕೊಂಡಿರುತ್ತೆ.

 

22

Ramanagara Town PS

 

Cr.No:0007/2022

(KARNATAKA  EXCISE ACT, 1965 U/s 32(3) )

 

 

04/02/2022

 

KARNATAKA STATE LOCAL ACTS - Karnataka Excise Act 1965

 

Under Investigation

 

 

ರಾಮನಗರ ಪುರ ವೃತ್ತ ಕಛೇರಿಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ. ಮೋಹನ್ ರೆಡ್ಡಿ ಆದ ನಾನು ಟೈಪ್ ಮಾಡಿಸಿಕೊಟ್ಟ ವರದಿ.

       ದಿನ ದಿನಾಂಕ: 04-02-2021 ರಂದು ಮಧ್ಯಾಹ್ನ 03.00 ಗಂಟೆಯಲ್ಲಿ ನಾನು ಕಛೇರಿಯಲ್ಲಿರುವಾಗ್ಗೆ ನನಗೆ ರಾಮನಗರ ಟೌನ್ ಟಿಪ್ಪುನಗರ 3ನೇ ಕ್ರಾಸ್ ದಿನಸಿ ಅಂಗಡಿ ಬಳಿ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸಾರ್ವಜನಿಕರಿಗೆ ಸ್ಧಳದಲ್ಲಿ ಕುಡಿಯಲು ಕೊಡುತ್ತಿದ್ದಾನೆಂದು ಬಾತ್ಮೀದಾರರಿಂದ ಮಾಹಿತಿ ಬಂದಿದ್ದು ನಂತರ ನಾನು ಠಾಣೆಗೆ ಪಂಚಾಯ್ತರನ್ನು ಬರಮಾಡಿಕೊಂಡು ಠಾಣಾ ಸಿಬ್ಬಂದಿಗಳಾದ ಎಎಸ್ಐ ದೇವುಕುಮಾರ್, ಹೆಚ್.ಸಿ-246 ಶರತ್ ಕುಮಾರ್, ಹೆಚ್.ಸಿ-209 ನಾಗರಾಜಯ್ಯರವರುಗಳು ಮತ್ತು ಪಂಚಾಯ್ತರನ್ನು ಸರ್ಕಾರಿ ಜೀಪ್ ಕೆ.-42-ಜಿ-444ರಲ್ಲಿ ಚಾಲಕರಾಗಿ ಶಿವಕುಮಾರ್ ಎಹೆಚ್.ಸಿ- 107  ರವರಿದ್ದು ಮಧ್ಯಾಹ್ನ 03.05 ಗಂಟೆಗೆ ಠಾಣೆಯಿಂದ ಹೊರಟು ಸ್ಧಳಕ್ಕೆ ಮಧ್ಯಾಹ್ನ 03.15 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ನೋಡಲಾಗಿ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸುಮಾರು 12-15 ಜನರಿಗೆ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದು ಸದರಿ ವ್ಯಕ್ತಿಯ ಮೇಲೆ ಸಿಬ್ಬಂದಿ ಸಮೇತ ದಾಳಿ ಮಾಡಿದಾಗ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು ನಂತರ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಅಸ್ಲಂಪಾಷ ಬಿನ್ ಲೇ|| ಅಬ್ದುಲ್ ಅಜೀಸ್, 50 ವರ್ಷ, ಮುಸ್ಲಿಂ, ಫಿಲ್ಲೇಚರಿ ಫ್ಯಾಕ್ಟರಿ ಮಾಲೀಕರು, ವಾಸ: 3ನೇ ಕ್ರಾಸ್ ಮುನೀರ್ ರವರ ಮನೆ ಹತ್ತಿರ, 23 ನೇ ವಾರ್ಡ್, ಟಿಪ್ಪುನಗರ ರಾಮನಗರ ಟೌನ್ ಎಂದು ತಿಳಿಸಿರುತ್ತಾನೆ. ನಂತರ ನೆಲದ ಮೇಲೆ ಒಂದು ಪ್ಲಾಸ್ಟಿಕ್ ಕವರ್ ನಲ್ಲಿದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ 90 ML Haywards Cheers Whisky  ಮದ್ಯ ತುಂಬಿರುವ 22 ಪ್ಯಾಕೆಟ್ ಗಳು ಮತ್ತು ಸ್ಧಳದಲ್ಲಿ ಬಿದ್ದಿದ್ದ 90 ML Haywards Cheers Whisky 03 ಖಾಲಿ ಪ್ಯಾಕೆಟ್ ಗಳು, 90 ML Sliver Cup Brandy ಮದ್ಯ ತುಂಬಿರುವ 02 ಪ್ಯಾಕೆಟ್ ಗಳು ಹಾಗೂ 10 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 03.20 ಗಂಟೆಯಿಂದ ಸಂಜೆ 04.20 ಗಂಟೆಯವರೆಗೆ ಪಂಚನಾಮೆ ಜರುಗಿಸಿ ಮಾಲಿನ ಸಮೇತ ಆರೋಪಿಯನ್ನು ಸಂಜೆ 04.35 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಮದ್ಯ ಸೇವನೆಗೆ ನಿಯಮಾನುಸಾರ ಸ್ಧಳದ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಧಳದಲ್ಲಿ ನಿಯಮ ಬಾಹಿರವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಆರೋಪಿಯ ವಿರುದ್ಧ ವರದಿ ತಯಾರು ಮಾಡಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ.

 

23

Ramanagara Town PS

 

Cr.No:0008/2022

(KARNATAKA EXCISE ACT, 1965 U/s 32(3) )

 

04/02/2022

 

KARNATAKA STATE LOCAL ACTS - Karnataka Excise Act 1965

 

Under Investigation

 

 

ರಾಮನಗರ ಪುರ ವೃತ್ತ ಕಛೇರಿಯಲ್ಲಿ ಸಿ.ಪಿ. ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ ಮೋಹನ್ ರೆಡ್ಡಿ ಆದ ನಾನು ಟೈಪ್ ಮಾಡಿಸಿಕೊಟ್ಟ ವರದಿ.

  ದಿನ ದಿ: 04-02-2022 ರಂದು ಸಂಜೆ 05.40 ಗಂಟೆಯಲ್ಲಿ ನಾನು ರಾಮನಗರ ಪುರ ವೃತ್ತ ಕಛೇರಿಯಲ್ಲಿರುವಾಗ್ಗೆ ನನಗೆ ರಾಮನಗರ ಟೌನ್ ಬಾಲಗೇರಿಯ ಬಿಸಿಲು ಮಾರಮ್ಮ ದೇವಸ್ಥಾನದ ರಸ್ತೆ, ಚಿಲ್ಲರೆ ಅಂಗಡಿ ಮುಂಭಾಗ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ಗಳಿಗೆ ಹಾಕಿ ಸಾರ್ವಜನಿಕರಿಗೆ ಸ್ಧಳದಲ್ಲಿ ಕುಡಿಯಲು ಕೊಡುತ್ತಿದ್ದಾನೆಂದು ಬಾಲಗೇರಿ ಬೀಟ್ ಸಿಬ್ಬಂದಿ ಪಿ.ಸಿ-684 ಶ್ರೀ ಸುದರ್ಶನ್ ರವರು ಮಾಹಿತಿ ನೀಡಿದ್ದು, ನಾನು ಕಛೇರಿಗೆ ಪಂಚಾಯ್ತರನ್ನು ಬರಮಾಡಿಕೊಂಡು ಠಾಣಾ ಸಿಬ್ಬಂದಿಗಳಾದ ಹೆಚ್.ಸಿ-246 ಶ್ರೀ ಶರತ್, ಪಿಸಿ-851 ಶ್ರೀ ಮುನಿರಾಜ ನಾಯ್ಕ ರವರುಗಳು ಮತ್ತು ಪಂಚಾಯ್ತರನ್ನು ಸರ್ಕಾರಿ ಜೀಪ್ ಕೆ.-42-ಜಿ-444 ರಲ್ಲಿ ಚಾಲಕರಾಗಿ ಎಹೆಚ್.ಸಿ-107 ಶಿವಕುಮಾರ್ ರವರಿದ್ದು ಸಂಜೆ 06.00 ಗಂಟೆಗೆ ಠಾಣೆಯಿಂದ ಹೊರಟು ಸ್ಧಳಕ್ಕೆ ಸಂಜೆ 06.10 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ನೋಡಲಾಗಿ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ 15-20 ಜನ ಸಾರ್ವಜನಿಕರಿಗೆ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದು, ಸದರಿ ವ್ಯಕ್ತಿಯ ಮೇಲೆ ಸಿಬ್ಬಂದಿ ಸಮೇತ ದಾಳಿ ಮಾಡಿದಾಗ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು ನಂತರ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಪಿ. ಗಿರೀಶ್ ಬಿನ್ ವೆಂಕಟೇಶ್, 42 ವರ್ಷ, ಬೆಸ್ತರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಬಿಸಿಲು ಮಾರಮ್ಮ ದೇವಸ್ಥಾನದ ಹತ್ತಿರ, ವಾರ್ಡ್ ನಂ.17, ರಾಮನಗರ ಟೌನ್ ಎಂದು ತಿಳಿಸಿರುತ್ತಾನೆ. ನಂತರ ನೆಲದ ಮೇಲೆ ಕಪ್ಪು ಬಣ್ಣದ ಒಂದು ಪ್ಲಾಸ್ಟಿಕ್ ಕವರ್ ನಲ್ಲಿದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ 90 ML ಮದ್ಯ ತುಂಬಿರುವ Haywards Cheers Whisky  6 ಪ್ಯಾಕೆಟ್ಗಳು ಮತ್ತು 90 ML ಮದ್ಯ ತುಂಬಿರುವ Original Choice Deluxe Whisky 2 ಪ್ಯಾಕೆಟ್ ಗಳು, 90 ML ಮದ್ಯ ತುಂಬಿರುವ DK DOUBLE KIKE FINE WHISKY 7 ಪ್ಯಾಕೆಟ್ ಗಳು ಹಾಗೂ 90 ML ಮದ್ಯ ತುಂಬಿರುವ AMRUTH’S SILVER-CUP Rare INDIAN BRANDY 6 ಪ್ಯಾಕೆಟ್ ಗಳು ಹಾಗೂ ಸ್ಥಳದಲ್ಲಿ ಬಿದ್ದಿದ್ದ 90 ML Haywards Cheers Whisky  3 ಖಾಲಿ ಪ್ಯಾಕೆಟ್ ಹಾಗೂ 08 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಮಾನತ್ತುಪಡಿಸಿಕೊಂಡು ಸಂಜೆ 06.20 ಗಂಟೆಯಿಂದ ಸಂಜೆ 07.20 ಗಂಟೆಯವರೆಗೆ ಪಂಚನಾಮೆ ಜರುಗಿಸಿ ಮಾಲಿನ ಸಮೇತ ಆರೋಪಿಯನ್ನು ಸಂಜೆ 07.30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಮದ್ಯ ಸೇವನೆಗೆ ನಿಯಮಾನುಸಾರ ಸ್ಧಳದ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಧಳದಲ್ಲಿ ನಿಯಮ ಬಾಹಿರವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಆರೋಪಿಯ ವಿರುದ್ಧ ವರದಿ ತಯಾರು ಮಾಡಿ ಎಸ್.ಹೆಚ್..ರವರಿಗೆ ನೀಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ ಮೇರೆಗೆ.

 

24

Tavarekere PS

 

Cr.No:0043/2022

(KARNATAKA EXCISE ACT, 1965  U/s 15(A),32(3) )

 

 

04/02/2022

 

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನಾಂಕ:04.02.2022 ರಂದು ಸಂಜೆ 5.00 ಗಂಟೆಗೆ ಠಾಣಾ ಹೆಚ್.ಸಿ-331 ರವರು ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ: 04.02.2022 ರಂದು ಬೆಳಿಗ್ಗೆ ನನಗೆ ಹಾಗೂ ಲಕ್ಷ್ಮಿಕಾಂತ ಹೆಚ್ಸಿ-410 ರವರಿಗೆ ಠಾಣಾ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾವು ದೊಡ್ಡಾಲದಮರ, ಚಂದ್ರಪ್ಪ ಸರ್ಕಲ್, ಹುಣ್ಣಿಗೆರೆ ಕಡೆಗಳಲ್ಲಿ ಗಸ್ತು ಮಾಡುತ್ತಿರುವಾಗ್ಗೆ, ಮಧ್ಯಾಹ್ನ 3.00 ಗಂಟೆಗೆ ಮಾದಾಪಟ್ಟಣ ಗ್ರಾಮದ ಬಂಡೆ ಕ್ರಾಸ್ನಲ್ಲಿರುವ ಪೆಟ್ಟಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಪೆಟ್ಟಿ ಅಂಗಡಿಯ ಮಾಲೀಕ ರವಿ ಎಂಬುವನು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸ್ಥಳದಲ್ಲಿ ಸುಮಾರು 5-6 ಜನರು ಮಧ್ಯಪಾನ ಮಾಡುತ್ತಿರುತ್ತಾರೆಂದು ಮಾಹಿತಿ ಭಾತ್ಮಿ ಬಂದಿದ್ದು, ಕೂಡಲೇ ಹುಣ್ಣಿಗೆರೆ ಗ್ರಾಮದ ಬಳಿಗೆ ಪಂಚಾಯತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಪಂಚಾಯತಿದಾರರಾಗಿ ಹಾಜರಿದ್ದು ಸಹಕರಿಸಬೇಕೆಂದು ಕೋರಿದ ಮೇರೆಗೆ ಅವರು ಒಪ್ಪಿಕೊಂಡಿರುತ್ತಾರೆ.

            ನಂತರ ನಾವು ಪಂಚಾಯತಿದಾರರೊಂದಿಗೆ ಮಾದಾಪಟ್ಟಣದ ಬಂಡೆ ಕ್ರಾಸ್ನಲ್ಲಿರುವ ಪೆಟ್ಟಿ ಅಂಗಡಿಯ ಬಳಿಗೆ ಹೋಗಿ ದೂರದಲ್ಲಿ ನಿಂತು ನೋಡಲಾಗಿ ಸುಮಾರು 5-6 ಜನರು ಮಧ್ಯಪಾನ ಮಾಡುತ್ತಿರುವುದು ಕಂಡು ಬಂದ ಮೇರೆಗೆ ನಾವು ಅಲ್ಲಿಗೆ ಹೋಗುಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿದ್ದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ರವಿ ಬಿನ್ ತಿಮ್ಮೇಗೌಡ, 39 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಎಸ್.ಪಿ.ಜಿ ಬಡಾವಣೆ, ತಾವರೆಕೆರೆ ಟೌನ್, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಸ್ಥಳದಲ್ಲಿ ಸಾರ್ವಜನಿಕರು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ ಮೇರೆಗೆ ಆತನಿಗೆ ಪರವಾನಗಿಯನ್ನು ಹಾಜರುಪಡಿಸುವಂತೆ ಹೇಳಿದಾಗ, ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚಾಯತಿದಾರರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 90 ML HAYWARDS PUNCH 7 Pouch,  90 ML Hayards punch 04 Empty Pouch, 02 ಪ್ಲಾಸ್ಟಿಕ್ ಲೋಟ ದೊರೆತಿರುತ್ತವೆ. ಸ್ಥಳದಲ್ಲಿ 3.30 ಗಂಟೆಯಿಂದ ಸಂಜೆ 4.15 ಗಂಟೆವರೆಗೆ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡಿರುತ್ತೆ. ಮಾಲಿನ ಸಮೇತ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ರವಿ ಎಂಬುವನನ್ನು ಠಾಣೆಗೆ ಕರೆತಂದಿರುತ್ತದೆ.

           ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಮೇಲ್ಕಂಡ ಆರೋಪಿ ರವಿ ಎಂಬುವವನ ವಿರುದ್ದ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂದು ಇತ್ಯಾದಿಯಾಗಿ.

 

 

 

 

 

 

ದಿನಾಂಕ:03-02-2022 ರಂದು ರಾಮನಗರ ಜಿಲ್ಲೆಯಲ್ಲಿ ವರದಿಯಾದ ಅಪರಾಧ ಪ್ರಕರಣಗಳು

 

Sl. No

Police Station Name

FIR No

FIR Date

Crime Group - Crime Head

Stage of case

1

Akkur PS

Cr.No:0021/2022

(IPC 1860 U/s 323,324,354,427,504,506,34 )

 

03/02/2022

MOLESTATION - Other Places

 

Under Investigation

 

 

ದಿನಾಂಕ 03.02.2022 ರಂದು ಮಾನ್ಯ ಘನ ನ್ಯಾಯಾಲಯದಿಂದ ಬಂದ ಪಿಸಿಆರ್ 02/2022 ಸಾರಾಂಶವೇನೆಂದರೆ ದಿನಾಂಕ: 23.12.2021 ರಂದು ಬೆಳಿಗ್ಗೆ 10:15 ಗಂಟೆ ಸಮಯದಲ್ಲಿ ಚಂದನ್ ಮತ್ತು ನಾಗರಾಜು ರವರು ಮಾವಿನ ಮರಗಳಿಗೆ ಔಷದಿ ಹೊಡೆಯುತ್ತಿದ್ದಾಗ ಪಿರ್ಯಾದಿ ರವರು 1ನೇ ಆರೋಪಿಗೆ ನಮ್ಮ ಸೀಮೆ ಹುಲ್ಲಿಗೆ ತಾಗದಂತೆ ನಿಧಾನವಾಗಿ ಔಷದಿ ಹೊಡಿ ಎಂದು ಹೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಮಗನು ಮೊಬೈಲ್ ಪೋನ್ ನಿಂದ ಪಿರ್ಯಾದುದಾರರು ವಿಡಿಯೋ ಮಾಡುತ್ತಿದ್ದಾಗ ಚಂದನ್ ರವರು ಮೊಬೈಲ್ ನನ್ನು ಕಿತ್ತುಕೊಳ್ಳುತ್ತಾನೆ ತಡೆಯಲು ಬಂದ ಪಿರ್ಯಾದಿ ಮಗನಿಗೂ ಮತ್ತು ಪಿರ್ಯಾದಿಗೂ ಗೊದಮೊಟ್ಟೆಯಿಂದ ಹೊಡೆದು ಹಲ್ಲೆ ಮಾಡಿ ಮೊಬೈಲ್ ಹೊಡೆದುಹಾಕಿರುತ್ತಾನೆ. ದಿನಾಂಕ 30.12.2021 ರಂದು ಬೆಳಿಗ್ಗೆ 10:30 ಗಂಟೆ ಸಮಯದಲ್ಲಿ ನಾಗರಾಜು ರವರು ಪಿರ್ಯಾದುದಾರರ ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರರ ಮಗಳಾದ ಜಮುನಾ ರವರು ಪ್ರಶ್ನಿಸಲಾಗಿ ಇವಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕುಡುಗೋಲಿನಿಂದ ಹಲ್ಲೆ ಮಾಡಿ ಚಂದನ್ ರವರು ಜಮುನಾ ರವರ ಬಟ್ಟೆಯನ್ನು ಹಿಡಿದು ಎಳೆದಾಡಿ ಕೆಳಗೆ ಬೀಳಿಸಿ ಹಲ್ಲೆ ಮಾಡಿ ಪಿರ್ಯಾದಿ ಮಗನಿಗೆ ಕೊಲೆ ಬೆದರಿಕೆ ಹಾಕಿರುತ್ತಾನೆ.

  ದಿನಾಂಕ 10.01.2022 ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಮೇಲ್ಕಂಡ ಆರೋಪಿಗಳು ದೂರುದಾರರ ಮನೆಗೆ ಹೋಗಿ ಪಿರ್ಯಾದಿ ಮತ್ತು ಅವರ ಮಗನನ್ನು ಕೈಗಳಿಂದ ಹೊಡೆದು ಅವಾಚ್ಯವಾಗಿ ಬೈದು ಹೋಗಿರುತ್ತಾರೆಂತ ಇತ್ಯಾದಿಯಾಗಿ.

2

Akkur PS

Cr.No:0022/2022

(KARNATAKA EXCISE ACT, 1965 U/s 15(A),32(3) )

03/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ಅಕ್ಕೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಐ ಪುಟ್ಟಸ್ವಾಮಿ  ಆದ ನಾನು ಬೆರಳಚ್ಚು ಮಾಡಿಸಿ ಕೊಟ್ಟ ರಿಪೋರ್ಟ್ ಏನೆಂದರೆ.

ದಿನಾಂಕ   03.02.2022  ರಂದು  ಠಾಣಾ SHO ರವರು  ನನಗೆ ಮತ್ತು ಠಾಣಾ HC 224 ನರಸಿಂಹಮೂರ್ತಿ ರವರಿಗೆ  ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು  ಅದರಂತೆ ನಾವು  ಠಾಣಾ ಸರಹದ್ದಿನ  ಸುಳ್ಳೇರಿ, ವಿ ಹಳ್ಳಿ, ಸೊಗಾಲ, ಕೃಷ್ಣಾಪುರ, ಗರಕಹಳ್ಳಿ, ನೇರಳೂರು, ನುಣ್ಣೂರು  ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆಯ ಸಮಯದಲ್ಲಿ  ಇಗ್ಗಲೂರು ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ   ಬಾತ್ಮೀದಾರರಿಂದ ನನಗೆ  ಬಂದ ಮಾಹಿತಿ ಏನೆಂದರೆ    ಇಗ್ಗಲೂರು-ಗರಕಹಳ್ಳಿ ಮಾರ್ಗದಲ್ಲಿನ ಸ್ವಾಮಿ ಬಿನ್ ಲೇ ಚನ್ನೇಗೌಡ  ರವರು ತಮ್ಮ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದೆ ಮದ್ಯವನ್ನು ಮಾರಾಟ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಕುಡಿಯಲು ಅನುವು ಮಾಡಿ ಕೊಟ್ಟಿದ್ದಾರೆಂದು ಬಂದ ಮಾಹಿತಿ ಮೇರೆಗೆ   ಇಬ್ಬರು ಪಂಚರನ್ನು ಕರೆದುಕೊಂಡು  ಇವರಿಗೆ ಮೇಲ್ಕಂಡ ಮಾಹಿತಿಯನ್ನ  ತಿಳಿಸಿ  ಸಂಜೆ 4.20  ಗಂಟೆಗೆ  ಇಗ್ಗಲೂರು-ಗರಕಹಳ್ಳಿ  ಮಾರ್ಗದ ಸ್ವಾಮಿ ಬಿನ್ ಲೇ ಚನ್ನೇಗೌಡ  ರವರ  ಅಂಗಡಿಯ ನೇರದಲ್ಲಿ  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ  ಅಂಗಡಿಯ ಹೊರಗಡೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕುಳಿತ್ತಿದ್ದ ಸುಮಾರು 3-4 ಜನರು ಮಧ್ಯವನ್ನು ಪ್ಲಾಸ್ಟಿಕ್ ಲೋಟಕ್ಕೆ ಹಾಕಿಕೊಂಡು ಅದಕ್ಕೆ ನೀರನ್ನು ಬೆರಸಿ  ಕುಡಿಯುತ್ತಿದ್ದು ಅವರಿಗೆ ಮದ್ಯವನ್ನು ಒಬ್ಬ ಅಸಾಮಿಯು ಸರಬರಾಜು ಮಾಡುತ್ತಿದ್ದು ಅದನ್ನು ನಾವು ದೂರದಿಂದ ನೋಡಿ ಖಚಿತಪಡಿಸಿಕೊಂಡು  ನಾವು ಮತ್ತು ಪಂಚರು ಏಕ ಕಾಲಕ್ಕೆ ದಾಳಿ ಮಾಡಲಾಗಿ  ಅಲ್ಲಿ ಅಂಗಡಿ ಮುಂದೆ ಕುಡಿಯುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಅಂಗಡಿಯ ಮುಂಭಾಗದಲ್ಲಿ ನಿಂತುಕೊಂಡು ಅಲ್ಲಿದ್ದವರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದ ಒಬ್ಬ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು  ಮಧ್ಯ ಮಾರಾಟದ ಬಗ್ಗೆ ಪರವಾನಿಗೆ ಕೇಳಲಾಗಿ ಮಧ್ಯ ಮಾರಾಟ ಮಾಡಲು ಯಾವುದೇ ಪರವಾನಿಗೆ ಇಲ್ಲ ಎಂದು ತಿಳಿಸಿರುತ್ತಾರೆ ಮತ್ತು ಅಂಗಡಿ  ಮುಂದೆ  ಚಿಲ್ಲರೆಯಾಗಿ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತೀದ್ದೇವೆ ಎಂದು ತಿಳಿಸಿದ್ದು  ಈತನ ಹೆಸರು ವಿಳಾಸ ಕೇಳಲಾಗಿ ಸ್ವಾಮಿ ಬಿನ್ ಲೇ ಚನ್ನೇಗೌಡ 39 ವರ್ಷಒಕ್ಕಲಿಗರು, ವ್ಯಾಪಾರಇಗ್ಗಲೂರು ಗ್ರಾಮ ಎಂದು ತಿಳಿಸಿದ್ದುಸದರಿ ಅಂಗಡಿ ಮುಂದೆ  ಖಾಲಿ Haywards cheers whisky   90  ಎಂ.ಎಲ್. 03 ಪೌಚ್ ಗಳು, ಒಂದು ಅರ್ದ ಇರುವ Bagpiper 180 M L ಒಂದು ಪೌಚು 03 ಪ್ಲಾಸ್ಟಿಕ್ ಲೋಟ  ಮತ್ತು ಒಂದು ಲೀಟರ್ ಅರ್ದ ನೀರು ಇರುವ ಬಾಟಲು  ಇವುಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4.20 ಗಂಟೆಯಿಂದ  5.20 ಗಂಟೆಯ ವರೆಗೆ ಪಂಚನಾಮೆ ಬರೆದು ಅಮಾನತ್ತು ಪಡಿಸಿಕೊಂಡು  ಅಮಾನತ್ತು ಪಡಿಸಿದ ಮಾಲುಗಳು ಮತ್ತು  ಆರೋಪಿಯ ಸಮೇತ ಠಾಣೆಗೆ  ಬಂದು ವರದಿ  ತಯಾರಿಸಿ ಸಂಜೆ 6.15 ಗಂಟೆಗೆ ಮುಂದಿನ ಕ್ರಮದ ಬಗ್ಗೆ  ನೀಡಿದ ವರದಿಯ ಮೇರೆಗೆ

 

3

Akkur PS

Cr.No:0023/2022

(KARNATAKA EXCISE ACT, 1965 U/s 15(A),32(3) )

03/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ಅಕ್ಕೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ಪಿಎಸ್ಐ  ಆದ ನಾನು ಬೆರಳಚ್ಚು ಮಾಡಿಸಿ ಕೊಟ್ಟ ರಿಪೋರ್ಟ್ ಏನೆಂದರೆ.

ದಿನಾಂಕ   03.02.2022  ರಂದು   ಸಂಜೆ  6.00  ಗಂಟೆಯ ಸಮಯದಲ್ಲಿ  ನಾನು ಸರ್ಕಾರಿ ಜೀಪ್ ನಂ  KA.42.G.80 ರಲ್ಲಿ  ಠಾಣಾ ಸಿಬ್ಬಂದಿಗಳಾದ ಚಾಲಕ ಲೋಕೇಶ್, HC 443 ಸುನೀಲ್ ಕುಮಾರ್  ರವರ ಜೊತೆ  ಠಾಣಾ ಸರಹದ್ದಿನ ಇಗ್ಗಲೂರು ಗ್ರಾಮದಲ್ಲಿ  ಗಸ್ತಿನಲ್ಲಿದ್ದಾಗ   ಬಾತ್ಮೀದಾರರಿಂದ ನನಗೆ  ಬಂದ ಮಾಹಿತಿ ಏನೆಂದರೆ    ಇಗ್ಗಲೂರು-ಗರಕಹಳ್ಳಿ ಮಾರ್ಗದಲ್ಲಿನ ರಾಜೇಶ ಬಿನ್ ಸೋಮೇಗೌಡ ರವರು ತಮ್ಮ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದೆ ಮದ್ಯವನ್ನು ಮಾರಾಟ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಕುಡಿಯಲು ಅನುವು ಮಾಡಿ ಕೊಟ್ಟಿದ್ದಾರೆಂದು ಬಂದ ಮಾಹಿತಿ ಮೇರೆಗೆ   ಇಬ್ಬರು ಪಂಚರನ್ನು ಕರೆದುಕೊಂಡು  ಇವರಿಗೆ ಮೇಲ್ಕಂಡ ಮಾಹಿತಿಯನ್ನ  ತಿಳಿಸಿ  ಸಂಜೆ  6.20  ಗಂಟೆಗೆ  ಇಗ್ಗಲೂರು-ಗರಕಹಳ್ಳಿ  ಮಾರ್ಗದ ರಾಜೇಶ ಬಿನ್ ಸೋಮೇಗೌಡ ರವರ  ಅಂಗಡಿಯ ನೇರದಲ್ಲಿ  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ  ಅಂಗಡಿಯ ಹೊರಗಡೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕುಳಿತ್ತಿದ್ದ ಸುಮಾರು 3-4 ಜನರು ಮಧ್ಯವನ್ನು ಪ್ಲಾಸ್ಟಿಕ್ ಲೋಟಕ್ಕೆ ಹಾಕಿಕೊಂಡು ಅದಕ್ಕೆ ನೀರನ್ನು ಬೆರಸಿ  ಕುಡಿಯುತ್ತಿದ್ದು ಅವರಿಗೆ ಮದ್ಯವನ್ನು ಒಬ್ಬ ಅಸಾಮಿಯು ಸರಬರಾಜು ಮಾಡುತ್ತಿದ್ದು ಅದನ್ನು ನಾವು ದೂರದಿಂದ ನೋಡಿ ಖಚಿತಪಡಿಸಿಕೊಂಡು  ನಾವು ಮತ್ತು ಪಂಚರು ಏಕ ಕಾಲಕ್ಕೆ ದಾಳಿ ಮಾಡಲಾಗಿ  ಅಲ್ಲಿ ಅಂಗಡಿ ಮುಂದೆ ಕುಡಿಯುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಅಂಗಡಿಯ ಮುಂಭಾಗದಲ್ಲಿ ನಿಂತುಕೊಂಡು ಅಲ್ಲಿದ್ದವರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದ ಒಬ್ಬ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು  ಮಧ್ಯ ಮಾರಾಟದ ಬಗ್ಗೆ ಪರವಾನಿಗೆ ಕೇಳಲಾಗಿ ಮಧ್ಯ ಮಾರಾಟ ಮಾಡಲು ಯಾವುದೇ ಪರವಾನಿಗೆ ಇಲ್ಲ ಎಂದು ತಿಳಿಸಿರುತ್ತಾರೆ ಮತ್ತು ಅಂಗಡಿ  ಮುಂದೆ  ಚಿಲ್ಲರೆಯಾಗಿ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತೀದ್ದೇವೆ ಎಂದು ತಿಳಿಸಿದ್ದು. ಇವರ ಹೆಸರು ವಿಳಾಸ ಕೇಳಲಾಗಿ ರಾಜೇಶ ಬಿನ್ ಸೋಮೇಗೌಡ 32 ವರ್ಷ, ಒಕ್ಕಲಿಗರು, ವ್ಯಾಪಾರ, ಚಂದೂಪೂರ ಗ್ರಾಮ, ಸಿ ಕೆರೆ ಹೋಬಳಿ, ಮದ್ದೂರು ತಾಲ್ಲೂಕ್   ಎಂದು ತಿಳಿಸಿರುತ್ತಾರೆ. ಸದರಿ ಅಂಗಡಿ ಮುಂದೆ  ಖಾಲಿ Haywards cheers whisky   90  ಎಂ.ಎಲ್. 03 ಪೌಚ್ ಗಳು, ಒಂದು ಅರ್ದ ಇರುವ Old Admiral  ಬ್ರಾಂದಿ  180 M L ಪೌಚು 03 ಪ್ಲಾಸ್ಟಿಕ್ ಲೋಟ  ಮತ್ತು ಒಂದು ಲೀಟರ್ ಅರ್ದ ನೀರು ಇರುವ 02 ಬಾಟಲು  ಇವುಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 6.20 ಗಂಟೆಯಿಂದ  7.20 ಗಂಟೆಯ ವರೆಗೆ ಪಂಚನಾಮೆ ಬರೆದು ಅಮಾನತ್ತು ಪಡಿಸಿಕೊಂಡು  ಅಮಾನತ್ತು ಪಡಿಸಿದ ಮಾಲುಗಳು ಮತ್ತು  ಆರೋಪಿಯ ಸಮೇತ ಠಾಣೆಗೆ  ಬಂದು ವರದಿ  ತಯಾರಿಸಿ ರಾತ್ರಿ 8.00 ಗಂಟೆಗೆ ಮುಂದಿನ ಕ್ರಮದ ಬಗ್ಗೆ  ನೀಡಿದ ವರದಿಯ ಮೆರೆಗೆ

4

Bidadi PS

 

Cr.No:0041/2022

(IPC 1860 U/s 379 )

 

03/02/2022

THEFT - Jewellery

 

Under Investigation

 

 

ದಿನಾಂಕ:03/02/2022 ರಂದು ಸಂಜೆ 4.30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 03/02/2022 ರಂದು ಮನೆಯಿಂದ ಭೈರಮಂಗಲ ಗ್ರಾಮದಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಲ್ಲಿ ನಾನು ಅಡವಿಟ್ಟಿದ್ದ ಎರಡು ಎಳೆ ಚಿನ್ನದ ಏಲ್ಕಕಿ ಸರ ಮತ್ತು ಒಂದು ಎಳೆ ಚಿನ್ನದ ಸರವನ್ನು ಹಣ ಕಟ್ಟಿ ಬಿಡಿಸಿಕೊಂಡು ಮಧ್ಯಾಹ್ನ 1.30 ಗಂಟೆಗೆ ಭೈರಮಂಗಲ ಗ್ರಾಮದಿಂದ ಬಿಡದಿಗೆ ಬಂದು ನಂತರ ಮನೆಗೆ ಹೋಗಲು ಮಧ್ಯಾಹ್ನ 2.00 ಗಂಟೆಗೆ ಬಿಡದಿಯಿಂದ ಬಿ.ಎಂ.ಟಿ.ಸಿ ಬಸ್ಸನ್ನು  ಹತ್ತಿದ್ದಾಗ ನನ್ನ ಪ್ಯಾಂಟಿನ ಬಲ ಜೇಬಿನಲ್ಲಿದ್ದ 2 ಚಿನ್ನದ ಸರಗಳನ್ನು ಚೆಕ್ ಮಾಡಿದಾಗ ಇದ್ದವು, ನಂತರ ಬಸ್ಸು ವಂಡರ್ ಲಾ ಗೇಟ್ ಬಳಿ ಹೋಗುತ್ತಿದ್ದಾಗ ನನ್ನ  ಜೇಬಿನಲ್ಲಿದ್ದ 2 ಚಿನ್ನದ ಸರಗಳನ್ನು ಚೆಕ್ ಮಾಡಲಾಗಿ ಇರಲಿಲ್ಲ, ನಾನು ಗಾಬರಿಗೊಂಡು ಎಲ್ಲಾ ಕಡೆ ಹುಡುಕಿದರು ಸಿಗಲಿಲ್ಲ, ಯಾರೋ ಕಳ್ಳರು ನನ್ನ ಜೇಬಿನಲ್ಲಿದ್ದ 2 ಚಿನ್ನದ ಸರಗಳನ್ನು ಕಳ್ಳತನ ಮಾಡಿರುತ್ತಾರೆ. ನನ್ನ ಜೇಬಿನಲ್ಲಿದ್ದ 2 ಎಳೆ ಚಿನ್ನದ ಅವಲಕ್ಕಿ ಸರ 40 ಗ್ರಾಂ ಮತ್ತು ಒಂದು ಎಳೆ ಚಿನ್ನದ ಸರ 12 ಗ್ರಾಂ ಇರುತ್ತವೆ, ಎರಡೂ ಚಿನ್ನದ ಸರಗಳ ಬೆಲೆ ಸುಮಾರು ಎರಡು ಲಕ್ಷ ರೂ ಗಳಾಗಿರುತ್ತದೆ. ಆದ್ದರಿಂದ ಕಳುವಾದ ನನ್ನ 2 ಚಿನ್ನದ ಸರಗಳನ್ನು ಪತ್ತೆಮಾಡಿ ಕೊಡಬೇಕೆಂದು ಮತ್ತು ಕಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ.

5

Channapatna Rural PS

 

Cr.No:0022/2022

(IPC 1860 U/s 302 )

 

03/02/2022

MURDER - Due To OtherCauses

 

Under Investigation

 

 

ದಿನಾಂಕ. 03-02-2022 ರಂದು ಬೆಳಗಿನ ಜಾವ 01-00 ಗಂಟೆಗೆ ಕೇಸಿನ ಪಿರ್ಯಾದಿ ಮಧು @ ಮಾದುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಬಳಿ ಕೂಲಿ ಕೆಲಸ ಮಾಡಲು 04 ಜನರು ಇದ್ದು ಅವರುಗಳು ಎಂದರೆ ಮಂಡ್ಯದ ಬಾಲು ಬಿನ್ ಲೇ: ಹನುಮಂತ, ತಮಿಳುನಾಡಿನ ಕನ್ಯಾಕುಮಾರಿಯ ಕುಮಾರ ಬಿನ್ ಟ್ರಸಾಯಲಂ, ಆಂದ್ರದ ಚಿಕ್ಕ ತಿರುಪತಿಯ ಮಲ್ಲೇಶ ಬಿನ್ ರಾಮ, ಯಳಂದೂರು ತಾಲ್ಲೂಕಿನ ಹೊನ್ನೂರಿನ ಸುರೇಶ ಬಿನ್ ಶ್ರೀನಿವಾಸ್ ಆಗಿರುತ್ತಾರೆ. ಇದೇ ಚನ್ನಪಟ್ಟಣ ಟೌನ್ ಕರಿಯಪ್ಪನದೊಡ್ಡಿ ಗ್ರಾಮದ ಗ್ಲೋಬಲ್ ಸ್ಕೂಲ್ ಪಕ್ಕ ನದೀಮ್ ಎಂಬುವರ ಲೇಔಟ್ ನಲ್ಲಿ ಈಗ್ಗೆ 03 ದಿನದ ಹಿಂದೆ ಲೇಔಟ್ಗೆ ಟಾರ್ ಹಾಕುವ ಕೆಲಸವನ್ನು ಕಂಟ್ರಾಕ್ಟ್ ಕೆಲಸವನ್ನು ಗಣೇಶ್ರವರು ವಹಿಸಿದ್ದು ನಾನು ಮೇಲಿನ ನಮ್ಮ 04 ಕೆಲಸಗಾರರ ಕೈಯಲ್ಲಿ ರಸ್ತೆಗೆ ಟಾರ್ ಹಾಕುವ ಕೆಲಸ ಮಾಡಿಸುತ್ತಿದ್ದೆನು. ಎಂದಿನಂತೆ ದಿನಾಂಕ. 02-02-2022 ರಂದು ಮೇಲ್ಕಂಡ 04 ಜನರು ಹಾಗೂ ನಾನು ಸೇರಿಕೊಂಡು ಸದರಿ ಲೇಔಟ್ ಗೆ ಟಾರ್ ಹಾಕುವ ಕೆಲಸ ಮಾಡಿಸಿ ಸಂಜೆ ಅಲ್ಲೇ ಲೇಔಟ್ ಕೆಳಗೆ ಇರುವ ಟ್ಯಾಂಕ್ ಕೆಳಗೆ ಮಲಗಿಕೊಳ್ಳುತ್ತಿದ್ದರು. ನಾನು ಸಂಜೆ 06-00 ಗಂಟೆಗ 4 ಜನರಿಗೆ ಮಾಡಿಕೊಳ್ಳಿ ಎಂದು ಹಣ ಕೊಟ್ಟು ಮಂಡ್ಯದ ನನ್ನ ಮನೆಗೆ ಹೋದೆನು. ನಂತರ ಅದೇ ದಿನ ರಾತ್ರಿ 10-30 ಗಂಟೆಯಲ್ಲಿ ಗಣೇಶ್ ರವರು ನನಗೆ ಪೋನ್ ಮಾಡಿ ನೀವು ಕೆಲಸ ಮಾಡಲು ತಂದು ಇರಿಸಿದ್ದ 04 ಜನರಲ್ಲಿ ಬಾಲು ಎಂಬುವನನ್ನು ಯಾರೋ ರಿಪೀಸ್ ಪಟ್ಟಿಯಿಂದ ತಲೆಗೆ ಹೊಡೆದು ತಲೆಯನ್ನು ಕಲ್ಲಿನಿಂದ ಜಜ್ಜಿ ಸಾಯಿಸಿರುತ್ತಾರೆ ಬೇಗ ಬಾ ಎಂದರು, ತಕ್ಷಣ ನಾನು ಬಂದು ನೋಡಿದಾಗ ನದೀಮ್ ರವರ ಲೇಔಟ್ ಒಳಗೆ ಬಾಲು ಸತ್ತು ಬಿದ್ದಿದ್ದು ತಲೆಗೆ ಹೊಡೆದು ಸಾಯಿಸಿದ್ದರು. ನಂತರ ಆತನ ಜೊತೆ ಇದ್ದ ನನ್ನ ಕೆಲಸಗಾರರಾದ ಮೂರು ಜನರನ್ನು ವಿಚಾರ ಮಾಡಿದಾಗ ಏನೂ ಮಾತನಾಡದೇ ಇದ್ದು, ಮೂರು ಜನರು ಸೇರಿಕೊಂಡು ಯಾವುದೋ ದ್ವೇಷದಿಂದ ಬಾಲುವನ್ನು ನಾನು 06-00 ಗಂಟೆಗೆ ಮನೆ ಕಡೆಗೆ ಹೋದ ನಂತರ ಪೀಸ್ ಪಟ್ಟಿ ಮತ್ತು ಕಲ್ಲಿನಿಂದ ಬಾಲುವಿನ ತಲೆಗೆ ಹೊಡೆದು ಸಾಯಿಸಿರುತ್ತಾರೆ ಎಂಬುದಾಗಿ ನನಗೆ ಅನುಮಾನವಿರುತ್ತೆ ಬಾಲುವಿನ ಮೃತ ದೇಹ ಸ್ಥಳದಲ್ಲಿ ಇರುತ್ತೆ. ಬಾಲುವಿಗೆ ಹೆಂಡತಿಯಾಗಲಿ, ತಂದೆ ತಾಯಿ ಆಗಲಿ ಇರುವುದಿಲ್ಲ

ಇವರುಗಳು ಮೊದಲೇ ಸತ್ತು ಹೋಗಿರುತ್ತಾರೆ ಎಂಬುದಾಗಿ ನನಗೆ ಗೊತ್ತಿರುತ್ತೆ ತಾವುಗಳು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರ..ವರದಿ.

 

6

Channapatna Rural PS

 

Cr.No:0023/2022

(IPC 1860 U/s 00MP )

 

03/02/2022

MISSING PERSON - Women

 

Under Investigation

 

 

ದಿನಾಂಕ:-03-02-2022 ರಂದು ಸಂಜೆ 04-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ತಾಯಿಗೆ 03 ಜನ ಗಂಡು ಮಕ್ಕಳಿದ್ದು, ನಾನು ಮೊದಲನೇ ಮಗನಾಗಿರುತ್ತೇನೆ, 02ನೇ ಮಗ ಪುಟ್ಟಸ್ವಾಮಿ ಮೃತಪಟ್ಟಿರುತ್ತಾನೆ, 3ನೇಯವರು ಬೆಂಗಳೂರಿನಲ್ಲಿ ವಾಸವಾಗಿರುತ್ತಾನೆ. ನಮ್ಮ ತಂದೆ 45 ವರ್ಷಗಳ ಹಿಂದೆ ಮೃತಪಟ್ಟಿರುತ್ತಾನೆ. ನಮ್ಮ ತಾಯಿ ಮನೆಯಲ್ಲೇ ಇದ್ದರು ಅಂದರೆ ನಮ್ಮ ಕುಟುಂಬದ ಜೊತೆ ಇದ್ದರು, ದಿನಾಂಕ:-31-01-2022 ರಂದು ಮದ್ಯಾಹ್ನ ಸುಮಾರು 03-00 ಗಂಟೆ ಸಮಯದಲ್ಲಿ ನಾನು ನನ್ನ ಪತ್ನಿ ಭಾರತಿ, ಮಗಳು ಚೈತ್ರ ತೋಟದ ಬಳಿ ಹೋಗಿದ್ದೆವು. ನಮ್ಮ ತಾಯಿ ನಿಂಗಮ್ಮರವರು ಮನೆಯಲ್ಲೇ ಇದ್ದರು, ತೋಟದಿಂದ ವಾಪಸ್ ಸಂಜೆ 04-00 ಗಂಟೆಗೆ ಹಸುಗಳನ್ನು ಹಿಡಿದುಕೊಂಡು ಮನೆಗೆ ಬಂದಾಗ ಮನೆಯ ಬಾಗಿಲು ಚಿಲಕ ಹಾಕಿತ್ತು. ಮನೆಯ ಒಳಗೆ ನಮ್ಮ ತಾಯಿ ಇರಲಿಲ್ಲ ರಾತ್ರಿಯಾದರು ನಮ್ಮ ತಾಯಿ ನಮ್ಮ ಮನೆಗೆ ಬರದಿದ್ದರಿಂದ ಊರಿನಲ್ಲಿ ಎಲ್ಲಾ ಕಡೆ ಹುಡುಕಾಡಿದವು.ನಂತರ ಪರಿಚಯದವರು ಸಂಬಂದಿಕರ ಕಡೆಗಳಲ್ಲಿ ವಿಚಾರಿಸಿದ್ದೆವು. ಪತ್ತೆ ಆಗಲಿಲ್ಲ ಇದುವರೆವಿಗೂ ಎಲ್ಲಾ ಕಡೆ ಹುಡುಕಿ ಪತ್ತೆಯಾಗದೇ ಇದ್ದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೆನು. ನಮ್ಮ ತಾಯಿಯನ್ನು ಪತ್ತೆ ಮಾಡಿಕೊಡಬೇಕೆಂದು ಕೋರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರ..ವರದಿ.

7

Channapatna Town PS

 

Cr.No:0009/2022

(IPC 1860 U/s 380,457 )

 

03/02/2022

BURGLARY - NIGHT - At Commercial Places / Establishments

 

Under Investigation

 

 

ದಿನಾಂಕ:03-02-2022 ರಂದು ಬೆಳಿಗ್ಗೆ 11-15 ಗಂಟೆಗೆ ಚನ್ನಪಟ್ಟಣ ಟೌನ್ ಮಾರುತಿ ಬಡಾವಣೆ  ವಾಸಿ, ರಮೇಶ್ ಬಿನ್ ಲೇಟ್ ತಿಮ್ಮೇಗೌಡ 47 ವರ್ಷಒಕ್ಕಲಿಗರು, ವ್ಯಾಪಾರ ವೃತ್ತಿ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಚನ್ನಪಟ್ಟಣ ಟೌನ್ ಮಾರುತಿ ಬಡಾವಣೆಯ ತಿಟ್ಟಮಾರನಹಳ್ಳಿ ರಸ್ತೆಯಲ್ಲಿ ಭೂಮಿಕಾ ಟಿಫನ್ ಸೆಂಟರ್ ಇಟ್ಟುಕೊಂಡು ಜೀವನ ನಡೆಸಿಕೊಂಡಿರುತ್ತೇನೆ. ನಾನು ದಿನಾಂಕ:02-02-2022 ರಂದು ಸಂಜೆ 6-00 ಗಂಟೆಯವರೆಗೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ನಂತರ ಅಂಗಡಿ ಬಾಗಿಲು ಹಾಕಿಕೊಂಡು, ಹೋಗಿದ್ದು, ನಂತರ ಎಂದಿನಂತೆ ದಿನಾಂಕ:03-02-2022 ರಂದು ಬೆಳಿಗ್ಗೆ 6-00 ಗಂಟೆಗೆ ಅಂಗಡಿ ತೆಗೆಯಲು ಅಂಗಡಿ ಬಳಿ ಬಂದಾಗ ಯಾರೋ ಕಳ್ಳರು ರಾತ್ರಿವೇಳೆಯಲ್ಲಿ ನಮ್ಮ ಅಂಗಡಿಯ ರೋಲಿಂಗ್ ಶೆಲ್ಟರ್ ಅನ್ನು ಮೀಟಿ ರೋಲಿಂಗ್ ಶೆಲ್ಟರ್  ಗೆ ಹಾಕಿದ್ದ ಬೀಗವನ್ನು ಹೊಡೆದಿದ್ದು, ಕಂಡು ಬಂದಿದ್ದು, ಆಗ ನಾನು ಶೆಲ್ಟರ್  ತೆಗೆದು ಒಳಗೆ ಹೋಗಿ  ಗಲ್ಲ ಮತ್ತು ಡ್ರಾಯರ್ ನೋಡಲಾಗಿ  ನನ್ನ ಅಂಗಡಿಯ ಡ್ರಾಯರ್ ಮತ್ತು ಗಲ್ಲದಲ್ಲಿಟ್ಟಿದ್ದ ಚಿಲ್ಲರೆ ಹಣ ಮತ್ತು ನಗದು ಹಣ ಸೇರಿ ಒಟ್ಟು ಸುಮಾರು 18,000/- ರೂಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳರನ್ನು ಪತ್ತೆ ಮಾಡಿ  ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಅಂತ ಇತ್ಯಾದಿಯಾಗಿ.

 

8

Kanakapura Rural PS

 

Cr.No:0021/2022

(KARNATAKA EXCISE ACT, 1965 U/s 15(A),32(3) )

 

03/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ಕನಕಪುರ ಗ್ರಾಮಾಂತರ ಪೊಲೀಸ್ಠಾಣೆಯಲ್ಲಿ ಸಬ್ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೇಮಂತ್ ಕುಮಾರ್.ಎಂ. ಪಿ.ಎಸ್. ಆದ ನಾನು ದಿನಾಂಕ-03.02.2022 ರಂದು ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ನಾನು ಪೊಲೀಸ್ ಠಾಣೆಯಲ್ಲಿರುವಾಗ ಯಾರೋ ಬಾತ್ಮಿದಾರರು ಫೋನ್ ಮಾಡಿ, ಕೆರಳಾಳುಸಂದ್ರ ಗ್ರಾಮದಲ್ಲಿ ಜಯಮ್ಮ ಕೋಂ ಮಾಯಿಗಣ್ಣಗೌಡರವರಿಂದ ಬಾಡಿಗೆ ಪಡೆದಿರುವ ಲಿಂಗಪ್ಪನು ತಮ್ಮ ಅಂಗಡಿಯ ಮುಂಭಾಗದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ ಎಂದು ಬಂದ ಮಾಹಿತಿ ಮೇರೆಗೆ ನಾನು, ಪಂಚಾಯ್ತಿದಾರರನ್ನು ಮತ್ತು ಸಿಬ್ಬಂದಿಯವರನ್ನು ಮದ್ಯಾಹ್ನ 3.45 ಗಂಟೆಗೆ ನನ್ನ ಕೊಠಡಿಗೆ ಬರಮಾಡಿಕೊಂಡು, ಸದರಿಯವರಿಗೆ ಬಾತ್ಮೀ ವಿಚಾರವನ್ನು ತಿಳಿಸಿ, ದಾಳಿ ಕಾಲದಲ್ಲಿ ಪಂಚಾಯ್ತಿದಾರರಾಗಿ ಬರಬೇಕೆಂದು ತಿಳಿಸಿದಾಗ, ಅವರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚಾಯ್ತಿದಾರರಿಗೆ ನೋಟಿಸ್ ಜಾರಿ ಮಾಡಿ, ಪಂಚಾಯ್ತಿದಾರರನ್ನು ಮತ್ತು ಸಿಬ್ಬಂದಿಯವರನ್ನು KA-42-G-923 ಸರ್ಕಾರಿ ಜೀಪ್ ನಲ್ಲಿ ಕೆರಳಾಳುಸಂದ್ರ ಗ್ರಾಮಕ್ಕೆ ಸಂಜೆ 4.30 ಗಂಟೆಗೆ ಕರೆದುಕೊಂಡ ಹೋಗಿ, ಲಿಂಗಪ್ಪರವರ ಬಾಡಿಗೆ ಅಂಗಡಿಯ ಬಳಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಮರೆಯಲ್ಲಿ ನಿಂತು ನೋಡಲಾಗಿ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ 4-5 ಜನರು ಕುಳಿತುಕೊಂಡಿರುತ್ತಾರೆ. ಒಬ್ಬ ಗಂಡಸು ಮದ್ಯಪಾನ ಮಾಡುತ್ತಿದ್ದವರಿಗೆ ಮಧ್ಯವನ್ನು ಮತ್ತು ನೀರನ್ನು ಪ್ಲಾಸ್ಟಿಕ್‌‌ ಲೋಟಕ್ಕೆ ಹಾಕುತ್ತಿದ್ದು, ಮಧ್ಯಪಾನ ಮಾಡುತ್ತಿದ್ದ ಜಾಗಕ್ಕೆ ನಾವುಗಳು ಮತ್ತು ಪಂಚಾಯ್ತಿದಾರರು ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮದ್ಯಪಾನ ಮಾಡುತ್ತಿದ್ದವರು  ಓಡಿದರು. ನಂತರ ಮದ್ಯಪಾನ ಮಾಡಲು ಸ್ಥಳ ಹಾಗೂ ಮದ್ಯಪಾನ ಮಾಡಲು ನೀರು ಹಾಗೂ ಪ್ಲ್ಯಾಸ್ಟಿಕ್ ಲೋಟಗಳನ್ನು ಕೊಟ್ಟು ಸಹಕರಿಸುತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿಲಿಂಗಪ್ಪ ಬಿನ್ ಲಿಂಗೇಗೌಡ, 40 ವರ್ಷ, ಒಕ್ಕಲಿಗರು, ವ್ಯಾಪಾರಕೆರಳಾಳುಸಂದ್ರ ಗ್ರಾಮ, ಕಸಬಾ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದನು. ನಂತರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಲಿಂಗಪ್ಪ ರವರನ್ನು ವಶಕ್ಕೆ ಪಡೆದು ಹಾಗೂ ಸ್ಥಳದಲ್ಲಿದ್ದ 90 ML HAYWARDS CHEERS WISHKY ಓಪನ್ ಆಗಿರುವ 04 ಪಾಕೇಟ್ ಗಳು ಮತ್ತು ಓಪನ್ ಆಗಿರದ 90 ML HAYWARDS CHEERS WISHKY 02 ಪಾಕೇಟ್ಗಳು ಮತ್ತು 08 ಪ್ಲಾಸ್ಟಿಕ್‌‌ ಲೋಟಗಳು ಇದ್ದು, ಇವುಗಳನ್ನು ಕೇಸಿನ ಮುಂದಿನ ತನಿಖೆಯ ಬಗ್ಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಸಂಜೆ 6.10 ಗಂಟೆಗೆ ವಾಪಸ್ಸು ಪೊಲೀಸ್ ಠಾಣೆಗೆ ಬಂದು, ಸದರಿ ಆಸಾಮಿಯ ಮೇಲೆ ಸ್ವ ವರದಿಯನ್ನು ತಯಾರು ಮಾಡಿ ಸಂಜೆ 6.20 ಗಂಟೆಗೆ ಠಾಣಾ ಮೊ.ಸಂ-21/2022 ಕಲಂ 15(A) 32(3) K.E ACT ರೀತ್ಯಾ ಕೇಸು ದಾಖಲು ಮಾಡಿರುತ್ತೆ.

9

Kodihalli PS

 

Cr.No:0018/2022

(Scheduled Castes and Scheduled Tribes (Prevention of Atrocities) Amendment Ordinance 2014 U/s 3(2)(5a) ; IPC 1860 U/s 504,324 )

 

03/02/2022

SCHEDULED CASTE AND THE SCHEDULED TRIBES - Scheduled Tribes

 

Under Investigation

 

 

ದಿನಾಂಕ: 03.02.2022 ರಂದು ಮಧ್ಯಾಹ್ನ 3.15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 02.02.2022 ರಂದು ನಮ್ಮ ಗ್ರಾಮದ ಸಿದ್ದೇಗೌಡ ರವರು ತೀರಿಕೊಂಡಿರುತ್ತಾರೆ. ಆದುದ್ದರಿಂದ ಅವರ ಕಡೆಯವರು ಗುಂಡಿ ತೋಡಕ್ಕೆ ಕಡೆದರು ನಾನು ಗುಂಡಿ ಹೊಡೆಯಲು ಹೋಗಿದ್ದೆ ಅದೇ ಸಮಯದಲ್ಲಿ ಮಧ್ಯಾಹ್ನ 3.00 ಗಂಟೆ ಆಗಿತ್ತು ಸಮಯದಲ್ಲಿ ನಮ್ಮ ಗ್ರಾಮದ ಮರೀಗೌಡ ಬಿನ್ ಸಿದ್ದೇಗೌಡ ಎಂಬುವರು ಗುಂಡಿ ಅಂಗೆ ತೋಡಿದ್ದೀಯಾ ಹಿಂಗೆ ತೋಡಿದ್ದೀಯಾ ಸರಿಯಿಲ್ಲ ಎಂದು ನನಗೆ ಬಾಯಿಗೆ ಬಂದಂತೆ ಬೈದು ಗಲಾಟೆ ಮಾಡಿದ ಅದೇ ದಿನ ಸಾಯಂಕಾಲ 4.30 ಗಂಟೆ ಸಮಯದಲ್ಲಿ ನಾನು ಮನೆ ಹತ್ತಿರ ಇದ್ದಾಗ ನಮ್ಮ ಮನೆಯ ರೋಡಿನಲ್ಲಿ ಮೇಲ್ಕಂಡ ಮರೀಗೌಡ ಬಿನ್ ಸಿದ್ದೇಗೌಡ ಬಂದು ನಮ್ಮ ನಮ್ಮ ಮನೆ ಹತ್ತಿರ ನಿಂತು ಕೈಯಲ್ಲಿ ಕುಡ್ಲು ಹಿಡಿದುಕೊಂಡು ಬೋಳಿಮಗನೆ ಮಟ್ಟಾಗಿ ಗುಂಡಿ ತೋಡಿದ್ದಿಯೇನೋ ಎಂದು ಕೆಟ್ಟ ಅವ್ಯಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಕೈಯಲ್ಲಿದ್ದ ಕುಡ್ಲುವಿನಿಂದ ನನ್ನ ಬಲಗೈ ತೋಳಿಗೆ ಹೊಡೆದು ರಕ್ತಗಾಯ ಮಾಡಿದ್ದಾನೆ ನನ್ನ ಹೆಂಡತಿ ಈರಮ್ಮ ರವರು ಕೇಳಲು ಹೋದ್ರ ನನ್ನ ಹೆಂಡತೀಗೂ ಮರಿಗೌಡ ಬಾಯಿಗೆ ಬಂದಂತೆ ಕೆಟ್ಟ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ ಆದ್ದರಿಂದ ತಾವು ಮೇಲ್ಕಂಡ ಮರೀಗೌಡನನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿ ನನಗೆ ನ್ಯಾಯ ತೀರ್ಮಾನ ಮಾಡಿಕೊಡಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ.

10

Kudur PS

 

Cr.No:0047/2022

(IPC 1860 U/s 323,324,504,506,34 )

 

03/02/2022

CASES OF HURT - Simple Hurt

 

Under Investigation

 

 

ದಿನಾಂಕ 03/02/2022 ರಂದು ಮದ್ಯಾಹ್ನ 3.00 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಗೆ ಮುಪ್ಪೇನಹಳ್ಳಿ ಗ್ರಾಮದ ಕಾನಿಷ್ಮಾರಿ ನಂ  32,33,35 ರಲ್ಲಿ  ನಮ್ಮದು ಖಾಲಿ ಜಾಗವಿದ್ದು, ನಮ್ಮ ದೊಡ್ಡಪ್ಪ ಮರುಳಸಿದ್ದಯ್ಯ ರವರಿಂದ  ರೇಖಾ ಕೋಂ ಮೋಹನ್ ಕುಮಾರ್ ರವರು ಖಾಲಿ ಜಾಗವನ್ನು ಕ್ರಯಕ್ಕೆ ತೆಗೆದುಕೊಂಡಿರುತ್ತೇವೆ. ಎಂದು  ನಾವು ವಾಸವಿರುವ  ಹಾಗೂ ಖಾಲಿ ಜಾಗದ ಬಳಿ ದಿನಾಂಕ 12/01/2022  ರಂದು ಮದ್ಯಾಹ್ನ 2.00 ಗಂಟೆಯಲ್ಲಿ  ರೇಖಾ ಹಾಗೂ  ಮೋಹನ್ ರವರು ಅಲ್ಲಿಗೆ ಬಂದು ಖಾಲಿ ಜಾಗ  ನಮಗೆ ಸೇರಿದ್ದು ಎಂದು ಜಗಳ ತೆಗೆದು ಅವ್ಯಾಚ್ಯ ಶಬ್ದಗಳಿಂದ  ಬಾಯಿಗೆ ಬಂದಂತೆ, ರೇಖಾ ಕೈಯಿಂದ  ನನ್ನ ಮೈಮೇಲೆಲ್ಲಾ  ಹೊಡೆದು ನಂತರ ದೊಣ್ಣೆಯಿಂದ  ನನ್ನ ಬಲಗೈ  ಹೆಬ್ಬೆರಳಿಗೆ  ಹೊಡೆದು ಗಾಯ ಪಡಿಸಿರುತ್ತಾರೆನಂತರ ಬಿಡಿಸಲು ಬಂದ ನಮ್ಮ ಅಜ್ಜಿ  ಪುಟ್ಟಮ್ಮ  ಮತ್ತು ಕಣ್ಣು ಕಾಣದ ನನ್ನ ಅತ್ತೆ ಸಿದ್ದಮ್ಮನನ್ನು ತಳ್ಳಾಡಿರುತ್ತಾರೆ. ರೇಖಾ ಕೈಯಿಂದ ಹೊಡೆದಿರುತ್ತಾರೆ. ಮೋಹನ್ ಕುಮಾರ್  ಇವರನ್ನು ಇಷ್ಟಕ್ಕೆ ಬಿಡಬೇಡ  ಹೊಡೆದು  ಸಾಯಿಸು  ಎಂದು  ಬೆದರಿಕೆ ಹಾಕಿರುತ್ತಾರೆ.ನಂತರ ನಮ್ಮ ಊರಿನ ಯತೀಶಕುಮಾರ್  ಬಿನ್ ಬಸವರಾಜು ಜಗಳ ಬಿಡಿಸಿದರು, ನಾನು  ನೆಲಮಂಗಲ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ಗ್ರಾಮದಲ್ಲಿ  ಪಂಚಾಯಿತಿಗೆ ಒಪ್ಪಿದ್ದು, ಇವರು ಪಂಚಾಯಿತಿಗೆ  ಬರದ ಕಾರಣ  ತಡವಾಗಿ ಬಂದು ದೂರು  ನೀಡುತ್ತಿದ್ದೇನೆ. ರೇಖಾ ಮತ್ತು  ಮೋಹನ್ ಕುಮಾರ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ಕೋರುತ್ತೇನೆ.

11

Kudur PS

 

Cr.No:0048/2022

(IPC 1860 U/s 279,337 )

03/02/2022

MOTOR VEHICLE ACCIDENTS NON-FATAL - National Highways

 

Under Investigation

 

 

ದಿನಾಂಕ-03/02/2022 ರಂದು ಸಂಜೆ 04.00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡದ ದೂರಿ ಸಾರಾಂಶವೆನೆಂದರೆ, ನನ್ನ ಮಗನಾದ ಜಗದೀಶ್ ಕೆ.ರವರು ರಸ್ತೆ ಅಪಘಾತದಿಂದ ಮೃತಪಟ್ಟಿರುತ್ತಾರೆ. ಅವರ ಅಂತ್ಯಕ್ರಿಯೆಯನ್ನು ಕುಣಿಗಲ್ ತಾಲ್ಲೂಕು, ಯಡಿಯೂರು ಹೋಬಳಿ, ಹುರುಳಿಗೆರೆ ಗ್ರಾಮದಲ್ಲಿ  ದಿನಾಂಕ 31/01/2022 ರಂದು  ನಡೆಸಿರುತ್ತೇವೆ. ನನ್ನ ಗಂಡ  ಕುಮಾರ್ ಕೆ. ಬಿನ್ ಲೇಟ್ ಚಲುವೇಗೌಡ, 49 ವರ್ಷ, ವಕ್ಕಲಿಗರುಕೂಲಿ ಕೆಲಸ, ಸಿದ್ದಲಿಂಗಯ್ಯ/ಲಲಿತ        ಬಿಲ್ಡಿಂಗ್,ಚಕ್ರನಗರ, ಆಂದ್ರಹಳ್ಳಿ, ಬೆಂಗಳೂರು-91 ರವರು ಕಾರ್ಯವನ್ನು ಮುಗಿಸಿಕೊಂಡು ವಾಪಾಸ್ ಬೆಂಗಳೂರಿಗೆ ಹೋಗಲು ತನ್ನ ಬಾಬ್ತು ಕೆ..41..ಎಸ್.8891 ದ್ವಿಚಕ್ರ ವಾಹನದಲ್ಲಿ ದಿನಾಂಕ 01/02/2022 ರಂದು  ಹೊರಟಿರುತ್ತಾರೆಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ  ನನ್ನ ಗಂಡ ಕುಮಾರ್ ರವರ ಪೋನ್ ನಿಂದ ಕರೆ ಬಂದಿದ್ದು  ಬೆಳಿಗ್ಗೆ 10.30 ಸುಮಾರಿನಲ್ಲಿ  ಕುಣಿಗಲ್-ನೆಲಮಂಗಲ ಮುಖ್ಯರಸ್ತೆಯ ಕುದೂರು ಪೊಲೀಸ್ ಠಾಣಾ ಸರಹದ್ದು  ಸೋಲೂರು ಬಳಿ ಇರುವ ಕಾಮಧೇನು ಹೊಟೇಲ್ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದಾಗ  ಏಕಮುಖ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಬಂದ ಅಂದರೆ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಕಡೆಯಿಂದ ಕೆ..42.ಎಸ್.8676 ಬೈಕ್ ಚಾಲಕ ತನ್ನ ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ನನ್ನ ಗಂಡ ಕುಮಾರ್ ಕೆ. ರವರು ಹೋಗುತ್ತಿದ್ದ  ಬೈಕ್ ಗೆ ಮುಖಾಮುಖಿಯಾಗಿ ಡಿಕ್ಕಿ ಮಾಢಿ ಅಪಘಾತಪಡಿಸಿರುತ್ತಾನೆ. ಅಪಘಾತದಿಂದ  ನನ್ನ ಗಂಡ ಕುಮಾರ್ ಕೆ. ರವರಿಗೆ  ಕಣ್ಣಿನ ಬಳಿಯಲ್ಲಿ ಕಾಲು ಕಡೆಗಳಲ್ಲಿ ರಕ್ತಗಾಯಗಳಾಗಿರುತ್ತವೆವಿರುದ್ದ ದಿಕ್ಕಿನಲ್ಲಿ ಬಂದು ಡಿಕ್ಕಿಮಾಡಿ ಅಪಘಾತಪಡಿಸಿದ  ಬೈಕ್ ನಲ್ಲಿದ್ದ ಇಬ್ಬರಿಗೂ ಸಹಾ ಕೆಳಕ್ಕೆ ಬಿದ್ದು ಅವರಿಗೆ ಗಾಯಗಳಾಗಿರುತ್ತವೆನ್ನುವ ವಿಚಾರವನ್ನು ತಿಳಿದು ತಕ್ಷಣ ಸೋಲೂರು ಆಸ್ಪತ್ರೆಗೆ ಬಂದು ನೋಡಿದಾಗ ಅಪಗಾತದಿಂದ ಗಾಯಗೊಂಡಿರುವುದು ನಿಜವಾಗಿರುತ್ತೆನಂತರ ನಾನು ನನ್ನ ಗಂಡ ಕುಮಾರ್ ಕೆ. ನನ್ನು ಹೆಚ್ಚಿನ ಚಿಕಿತ್ಸೆ ಸಲುವಾಗಿ ಬೆಂಗಳೂರಿನ ಯಶವಂತಪುರ ಸ್ಪಷರ್್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಕೊಡಿಸಿ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ಆದ್ದರಿಂದ  ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತಪಡಿಸಿರುವ ಕೆ..42.ಎಸ್.8676 ಬೈಕ್ ಚಾಲಕನ ಮೇಲೆ ಕಾನೂನು ರೀತ್ಯಾ  ಕ್ರಮ ಕೈಗೊಳ್ಳಲು ಕೋರುತ್ತೇನೆ

12

Kudur PS

 

Cr.No:0049/2022

(KARNATAKA EXCISE ACT, 1965 U/s 15(A),32(3) )

 

03/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನಾಂಕ  03/02/2022 ರಂದು ಸಂಜೆ  7-00 ಗಂಟೆ  ಪಿ. ಕುದೂರು ಪೊಲೀಸ್ ಠಾಣೆ ರವರು ಠಾಣೆಗೆ ಬಂದು  ದಿನಾಂಕ 03/02/2022 ರಂದು ಸಂಜೆ ಪಿ.ಸಿ 578 ಶ್ರೀ ಶರಣಬಸು ಮತ್ತು ಪಿ.ಸಿ 738 ಸುನೀಲ್ ರವರೊಂದಿಗೆ ಠಾಣಾ ಸರಹದ್ದು ಗಸ್ತುಮಾಡಿಕೊಂಡು ಸಂಜೆ ಸುಮಾರು  5-00 ಗಂಟೆ ಸಮಯಕ್ಕೆ ಸೋಲೂರು ಹೋಬಳಿ ಕಡೆ ಗಸ್ತುಮಾಡಿಕೊಂಡು ವಡ್ಡರಹಳ್ಳಿ ಗ್ರಾಮದ ಬಳಿ ಇರುವ ಚಿಲ್ಲರೆ ಅಂಗಡಿ ಬಳಿ ಹೋದಾಗ ಅಂಗಡಿ ಮುಂಭಾಗದ ಸಾರ್ವಜನಿಕ ಸ್ದಳದಲ್ಲಿ 2-3ಜನರು ನಿಂತುಕೊಂಡು  ಏನನ್ನೋ ಕುಡಿಯುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿದ  ಜನರು ಅಲ್ಲಿಂದ ಓಡಿಹೋಗಿದ್ದು ನಾವು ಅನುಮಾನಗೊಂಡು ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ  ಅಂಗಡಿ ಮುಂಭಾಗದಲ್ಲಿ ಖಾಲಿಯಾಗಿರುವ ಮಧ್ಯದ ಪೌಚ್ಗಳು ಹಾಗೂ ಪ್ಲಾಸ್ಟಿಕ್ ಗ್ಲಾಸ್ಗಳು ಬಿದಿದದ್ದುಅಂಗಡಿಯಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ, ಚಿಲ್ಲರೆ ಅಂಗಡಿಯಲ್ಲಿ  ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದು, ಮಧ್ಯ ಮಾರಾಟ ಮಾಡಲು ಪರವಾನಿಗೆಯನ್ನು ಹಾಜರುಪಡಿಸುವಂತೆ ತಿಳಿಸಿದಾಗ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ ಮೇರೆಗೆ. ಸ್ದಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಪಂಚರನ್ನು ಬರಮಾಡಿಕೊಂಡು ಅವರಿಗೆ ಕೇಸಿನ ವಿಚಾರವನ್ನು ತಿಳಿಸಿ, ಸ್ತಳದಲ್ಲಿದ್ದ ಆಸಾಮಿಯ ಹೆಸರು ವಿಳಾಸವನ್ನು ಪಂಚರ ಸಮಕ್ಷಮ ವಿಚಾರ ಮಾಡಲಾಗಿ, ಬಾಬುರಾವ್ ಸಿಂಧೆ ಬಿನ್ ಭುಜಂಗರಾವ್, 50 ವರ್ಷ, ಮರಾಠ ಜನಾಂಗ, ವ್ಯವಸಾಯ ವಾಸ: ವಡ್ಡರಹಳ್ಳಿ, ಸೋಲೂರು ಹೋಬಳಿ, ಮಾಗಡಿ ತಾ, ರಾಮನಗರಜಿಲ್ಲೆ ಎಂದು ತಿಳಿಸಿದ್ದು ನಂತರ ಅಂಗಡಿಯನ್ನು ಶೋಧನೆ ಮಾಡಲಾಗಿ ಅಂಗಡಿಯಲ್ಲಿ  3 ಖಾಲಿ 90 ಎಂ.ಎಲ್ ಒರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು, 90 ಎಂ.ಎಲ್ 4 ಒರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು ಹಾಗೂ 3 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ದೊರೆತಿದ್ದು, ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಸಂಜೆ  5-30 ಗಂಟೆಯಿಂದ ಸಂಜೆ 6-30 ಗಂಟೆ ವರೆಗೆ ಅಮಾನತ್ತುಪಡಿಸಿಕೊಂಡು ಆರೋಪಿ ಬಾಬುರಾವ್ ಸಿಂಧೆಯೊಂದಿಗೆ ಠಾಣೆಗೆ ಬಂದು ವರದಿಯನ್ನು ತಯಾರುಮಾಡಿ 15 (), 32(3) ಕೆ. ಆಕ್ಟ್ ರೀತ್ಯ ಪ್ರಕರಣ ದಾಖಲುಮಾಡುವಂತೆ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲುಮಾಡಿರುತ್ತೆ.

13

Kudur PS

 

Cr.No:0050/2022

(KARNATAKA POLICE ACT, 1963 U/s 87 )

03/02/2022

KARNATAKA POLICE ACT 1963 - Street Gambling (87)

Under Investigation

 

 

ನಾನು ಕುದೂರು ಪೊಲೀಸ್ ಠಾಣೆಯಲ್ಲಿ ಈಗ್ಗೆ ಸುಮಾರು 06 ತಿಂಗಳಿನಿಂದ ಪಿ. ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ:03/02/2022 ರಂದು ಸಂಜೆ 7.10 ಗಂಟೆಯ ಸಮಯದಲ್ಲಿ ಬಾತ್ಮೀದಾರರಿಂದ ಬಂದ ಮಾಹಿತಿಯಲ್ಲಿ ಸಂಘಿಘಟ್ಟ ಗ್ರಾಮದ ಕೆರೆಯ ದಡದಲ್ಲಿರುವ ಆಲದಮರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಹಣವನ್ನು ಪಣಕ್ಕಿಟ್ಟು ಇಸ್ಟೀಟ್ ಜೂಜಾಟ ಆಡುತ್ತಿರುವುದಾಗಿರುವ ಮಾಹಿತಿ ಬಂದಿದ್ದು, ನಾನು ಪಂಚರನ್ನು ಹಾಗೂ ಠಾಣಾ ಸಿಬ್ಬಂಧಿಗಳಾದ ಹೆಚ್ಸಿ 430, ಹೆಚ್ಸಿ 438, ಹೆಚ್ಸಿ 395, ಹೆಚ್.ಸಿ 367, ಪಿಸಿ 630 ರವರುಗಳನ್ನು ಕರೆದುಕೊಂಡು ಜೊತೆಯಲ್ಲಿ ತನಿಖಾ ಪರಿಕರಗಳ ಸಮೇತ, ನಮ್ಮಗಳಲ್ಲಿ ಜೂಜಾಟದ ಪರಿಕರಗಳು ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಸಕರ್ಾರಿ ವಾಹನದಲ್ಲಿ ಸಂಜೆ 7.20 ಗಂಟೆಯ ಸಮಯದಲ್ಲಿ ಠಾಣೆಯಿಂದ ಹೊರಟು ಸಂಜೆ 7.45 ಗಂಟೆಗೆ ತಿಪ್ಪಸಂದ್ರ ಹೋಬಳಿ ಸಂಘಿಘಟ್ಟ ಗ್ರಾಮದ ಕೆರೆಯ ದಡದಲ್ಲಿರುವ ಆಲದಮರದ ಬಳಿ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಟೀಟ್ ಎಲೆಗಳಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದ ಆಸಾಮಿಗಳ ವಿವರ ಕೆಳಕಂಡಂತಿರುತ್ತೆ.

1.     ರವೀಶ ಬಿನ್ ಕಲ್ಲುಬಸವಯ್ಯ, 39 ವರ್ಷ, ಒಕ್ಕಲಿಗರು, ವ್ಯವಸಾಯ, ತಾಳೆಕೆರೆ ಗ್ರಾಮ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು.

2.     ರಾಜಣ್ಣ ಬಿನ್ ಲೇಟ್ ಗಂಗಣ್ಣ, 40 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ: ಬಗಿನಗೆರೆ ಗ್ರಾಮ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು.

3.     ಸುನೀಲ್ ಬಿನ್ ಲೇಟ್ ಅಡವೀಶ್, 31 ವರ್ಷ, ಲಿಂಗಾಯಿತರು, ವ್ಯವಸಾಯ, ವಾಸ: ಸಂಘೀಘಟ್ಟ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು.

4.     ಶ್ರೀನಿವಾಸ ಬಿನ್ ದ್ವಾರಕನಾಥ, 46 ವರ್ಷ, ನಾಯಕರು, ಡ್ರೈವರ್ ಕೆಲಸ, ವಾಸ: ಸಂಘೀಘಟ್ಟ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು.

5.     ನಾಗರಾಜು ಬಿನ್ ಲೇಟ್ ಕಾಳಲಿಂಗೇಗೌಡ, 59 ವರ್ಷ, ಒಕ್ಕಲಿಗರು, ವಾಸ: ಬಗಿನಗೆರೆ ಗ್ರಾಮ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು.

6.     ನಾಗರಾಜು ಪಿಕೆ ಬಿನ್ ಲೇಟ್ ಕಾಳಲಿಂಗೇಗೌಡ, 63 ವರ್ಷ, ಒಕ್ಕಲಿಗರು, ವಾಸ: ಬಗಿನಗೆರೆ ಗ್ರಾಮ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು.

ವಶಪಡಿಸಿಕೊಂಡ ಜೂಜಾಟ ಪರಿಕರಗಳು.

1.     52 ಇಸ್ಟೀಟ್ ಎಲೆಗಳು

2.     ಒಂದು ಹಳೆಯ ಪ್ಲಾಸ್ಟೀಕ್ ಚೀಲ

ಸದರಿ ಮೇಲ್ಕಂಡ ಆಸಾಮಿಗಳು ಇಸ್ಟೀಟ್ ಎಲೆಗಳನ್ನು ಬಳಸಿಕೊಂಡು ಅಂದರ್-ಬಾಹರ್ ಜೂಜಾಟವನ್ನು ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದುದು ಕಂಡು ಬಂದಿರುತ್ತೆ. ಆದ್ದರಿಂದ ಮೇಲ್ಕಂಡ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ಮೇಲ್ಕಂಡ 06 ಜನರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸುತ್ತಾ ಇದರೊಂದಿಗೆ ಜೂಜಾಟ ಆಡಲು ಬಳಸಿದ್ದ 52 ಇಸ್ಟೀಟ್ ಎಲೆಗಳು, ಒಂದು ಹಳೆಯ ಪ್ಲಾಸ್ಟೀಕ್ ಚೀಲ ದಾಳಿ ಪಂಚನಾಮೆ ಮತ್ತು ಜೂಜಾಟ ಆಡಲು ಪಣಕ್ಕಿಟ್ಟಿದ್ದ 11,500/- ರೂ ಇವುಗಳನ್ನು ಹಾಗೂ ಜೂಜಾಟ ಆಡುತ್ತಿದ್ದ 06 ಜನ ಆಸಾಮಿಗಳನ್ನು ರಾತ್ರಿ 9.10 ಗಂಟೆಗೆ ಹಾಜರುಪಡಿಸಿರುತ್ತೇನೆ.

14

Kumbalagudu PS

 

Cr.No:0014/2022

(KARNATAKA EXCISE ACT, 1965 U/s 15(A),32(3) )

 

03/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನಾಂಕ: 03-02-2022 ರಂದು ಸಂಜೆ 5-30 ಗಂಟೆಗೆ ಶ್ರೀ ಅಣ್ಣಯ್ಯ ಸಿ.ಎಸ್ .ಎಸ್. ರವರು ಕೊಟ್ಟ ದೂರಿನ ಸಾರಾಂಶವೆನೆಂದರೆ, ದಿನಾಂಕ;-03-02-2022 ರಂದು ನನಗೆ ಠಾಣಾ ಬ್ರಿಪಿಂಗ್ ನಲ್ಲಿ ಠಾಣಾ ವ್ಯಾಪ್ತಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ನಾನು ಗಸ್ತಿನಲ್ಲಿದ್ದಾಗ ಕೆ.ಕೃಷ್ಣಸಾಗರ/ಹೊಸಪಾಳ್ಯ ಗ್ರಾಮದ ಗಸ್ತಿನಲ್ಲಿದ್ದ ಸಿಬ್ಬಂದಿ ಮುರಳೀದರ್ ಹೆಚ್.ಆರ್ ಸಿಪಿಸಿ 794 ರವರು ಮಧ್ಯಾಹ್ನ 4-20 ಗಂಟೆಯಲ್ಲಿ ಬಾಬಸಾಬರಪಾಳ್ಯ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಬೇಕರಿಯ ಎದುರು ಪ್ರಕಾಶ ಎಂಬುವವರು ತನ್ನ ಕಬಾಬ್ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ ಚಿಲ್ಲರೆಯಾಗಿ ಸಾರ್ವಜನಿಕರಿಗೆ ಮಧ್ಯದ ಸಚೆಟ್ ಗಳನ್ನು ಮಾರಾಟ ಮಾಡುತ್ತಿದ್ದು ಹಾಗೂ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿರುತ್ತಾರೆಂದು ವಿಚಾರ ತಿಳಿಸಿದ್ದು ಅದರಂತೆ ಸಮವಸ್ತ್ರದಲ್ಲಿದ್ದ ನಾನು ಹಾಗೂ ಠಾಣಾ ಸಿಬ್ಬಂದಿಗಳಾದ ಮುರಳೀದರ್ ಹೆಚ್.ಆರ್ ಸಿಪಿಸಿ 794 ಮತ್ತು ಸಂತೋಷ ಸಿಪಿಸಿ 808 ರವರರೊಂದಿಗೆ ಜೊತೆಯಲ್ಲಿ ಪಂಚರನ್ನು ಕರೆದುಕೊಂಡು ಹೋಗಿ ದಿನ ಮಧ್ಯಾಹ್ನ 4-30 ಗಂಟೆಯಲ್ಲಿ ಬಾಬಸಾಬರಪಾಳ್ಯ ಗ್ರಾಮಕ್ಕೆ ಹೋಗಿ ಪ್ರಕಾಶ ರವರ ಕಬಾಬ್ ಅಂಗಡಿಯಿಂದ ಸ್ವಲ್ಪ ದೂರ ನಿಂತು ನೋಡಲಾಗಿ ಕಬಾಬ್ ಅಂಗಡಿಯಿಂದ ಯಾರೋ ಒಬ್ಬ ಅಸಾಮಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅನುಕೂಲ ಮಾಡಿಕೊಟ್ಟು ಮಧ್ಯದ ಸಚೆಟ್ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂತು. ತಕ್ಷಣ ನಾನು ಸಿಬ್ಬಂದಿಗಳನ್ನು ಹಾಗೂ ಪಂಚರೊಂದಿಗೆ ದಾಳಿ ಮಾಡಿದಾಗ ಮಧ್ಯಪಾನ ಮಾಡಲು ಕುಳಿತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದು ಅಂಗಡಿಯನ್ನು ನಡೆಸುತ್ತಿದ್ದ ಅಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಆರೋಪಿಯು ತನ್ನ ಹೆಸರು ಮತ್ತು ವಿಳಾಸವನ್ನು ಪ್ರಕಾಶ ಬಿನ್ ಲೇಟ್.ರಾಮಯ್ಯ 38 ವರ್ಷ ಪರಿಶಿಷ್ಟ ಜಾತಿ ಕಬಾಬ್ ಅಂಗಡಿಯ ವ್ಯಾಪಾರ ವಾಸ: ಕೆ/ಆಪ್ ಮುನಿರಾಜು ಬಾಬಸಾಬರಪಾಳ್ಯ ಗ್ರಾಮ ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಅಂಗಡಿಯ ಮುಂದೆ ಖಾಲಿ ಮಧ್ಯದ ಸಚೆಟ್ಗಳು ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿದ್ದು ನಂತರ ಪಂಚರ ಸಮಕ್ಷಮ ಅಂಗಡಿಯನ್ನು ಪರಿಶೀಲಿಸಲಾಗಿ ಅಂಗಡಿಯ ಪಕ್ಕದಲ್ಲಿ ಒಂದು ಸ್ಟೂಲ್ ಕೆಳಗೆ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಹ್ಯಾಂಡ್ ಕವರ್ ನಲ್ಲಿ 1) 500 ಎಂ.ಎಲ್ ಕಿಂಗ್ ಪಿಶರ್ ಸ್ಟ್ರಾಂಗ್ ಟಿನ್ ಬಿಯರ್ 3 ಟಿನ್ ಗಳು, 2) 90 ಎಂ.ಎಲ್ ಹೈವರ್ಡ ಪಂಚ್ 10 ಟೆಟ್ರಾ ಪ್ಯಾಕ್ ಸಚೆಟ್ ಗಳು, 3) 180 ಎಂ.ಎಲ್ ಓಲ್ಡ್ ಟವೆರನ್ ವಿಸ್ಕಿಯ 3 ಟೆಟ್ರಾ ಪ್ಯಾಕ್ ಸಚೆಟ್ ಗಳು, ಸದರಿ ಮಧ್ಯದ ಟೆಟ್ರಾ ಪ್ಯಾಕ್ ಸಚೆಟ್ ಗಳನ್ನು ಹಾಗೂ ಅಂಗಡಿಯ ಮುಂಭಾಗದಲ್ಲಿ ಬಿದ್ದಿದ್ದ 02 ಖಾಲಿ ಪ್ಲಾಸ್ಟಿಕ್ ಲೋಟಗಳು ಹಾಗೂ ಎರಡು ಖಾಲಿ 90 ಎಂ.ಎಲ್ ಹೈವರ್ಡ ಪಂಚ್ ಟೆಟ್ರಾ ಪ್ಯಾಕ್ ಸಚೆಟ್ ಗಳನ್ನು ಪಂಚರ ಸಮಕ್ಷಮ ದಿನ ಮಧ್ಯಾಹ್ನ 4-40 ಗಂಟೆಯಿಂದ ಸಂಜೆ 5-20 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಮಾಲುಗಳನ್ನು ಅಮಾನತುಪಡಿಸಿಕೊಂಡು ಮೇಲ್ಕಂಡ ಆರೋಪಿಯನ್ನು ಹಾಗೂ ಮಾಲುಗಳನ್ನು ಠಾಣೆಗೆ ಕರೆ ತಂದು ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಸಂಜೆ 5-30 ಗಂಟೆಗೆ ಕೊಟ್ಟ ವರದಿ ಮೇರೆಗೆ ಪ್ರ..ವರ

 

15

Kumbalagudu PS

 

Cr.No:0015/2022

(KARNATAKA EXCISE ACT, 1965 U/s 15(A),32(3) )

 

03/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನಾಂಕ: 03-02-2022 ರಂದು ಸಂಜೆ 7-15 ಗಂಟೆಗೆ ಶ್ರೀ ಅಣ್ಣಯ್ಯ ಸಿ.ಎಸ್ .ಎಸ್. ರವರು ಕೊಟ್ಟ ದೂರಿನ ಸಾರಾಂಶವೆನೆಂದರೆ, ದಿನಾಂಕ;-03-02-2022 ರಂದು ನನಗೆ ಠಾಣಾ ಬ್ರಿಪಿಂಗ್ ನಲ್ಲಿ ಠಾಣಾ ವ್ಯಾಪ್ತಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ನಾನು ಗಸ್ತಿನಲ್ಲಿದ್ದಾಗ ಕೆ.ಕೃಷ್ಣಸಾಗರ/ಹೊಸಪಾಳ್ಯ ಗ್ರಾಮದ ಗಸ್ತಿನಲ್ಲಿದ್ದ ಸಿಬ್ಬಂದಿಗಳಾದ ಶೀಲವಂತರ್ ಸಿ.ಹೆಚ್.ಸಿ 401 ಮತ್ತು ಮುರಳೀದರ್ ಹೆಚ್.ಆರ್ ಸಿಪಿಸಿ 794 ರವರು ಸಂಜೆ 6-00 ಗಂಟೆಯಲ್ಲಿ ಕೆ.ಕೃಷ್ಣಸಾಗರ/ಹೊಸಪಾಳ್ಯದಲ್ಲಿ ಎಸ್.ರಾಜು ರವರು ದರ್ಶನ್ ರಾಜ್  ಕಾಂಡಿಮೆಂಟ್ಸ್ ಸ್ಟೋರ್ (ಚಿಲ್ಲರೆ ಅಂಗಡಿ) ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ ಚಿಲ್ಲರೆಯಾಗಿ ಸಾರ್ವಜನಿಕರಿಗೆ ಮಧ್ಯದ ಸಚೆಟ್ ಗಳನ್ನು ಮಾರಾಟ ಮಾಡುತ್ತಿದ್ದು ಹಾಗೂ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿರುತ್ತಾರೆಂದು ವಿಚಾರ ತಿಳಿಸಿದ್ದು ಅದರಂತೆ ಸಮವಸ್ತ್ರದಲ್ಲಿದ್ದ ನಾನು ಹಾಗೂ ಠಾಣಾ ಸಿಬ್ಬಂದಿಗಳಾದ ಶೀಲವಂತರ್ ಸಿ.ಹೆಚ್.ಸಿ 401 ಮತ್ತು ಮುರಳೀದರ್ ಹೆಚ್.ಆರ್ ಸಿಪಿಸಿ 794 ರವರೊಂದಿಗೆ ಜೊತೆಯಲ್ಲಿ ಪಂಚರನ್ನು ಕರೆದುಕೊಂಡು ಹೋಗಿ ದಿನ ಸಂಜೆ 6-15 ಗಂಟೆಯಲ್ಲಿ ಕೆ.ಕೃಷ್ಣಸಾಗರ/ ಹೊಸಪಾಳ್ಯದ ಎಸ್.ರಾಜು ರವರ ದರ್ಶನ್ ರಾಜ್ ಕಾಂಡಿಮೆಂಟ್ಸ್ ಸ್ಟೋರ್ (ಚಿಲ್ಲರೆ ಅಂಗಡಿ) ನಿಂದ ಸ್ವಲ್ಪ ದೂರ ನಿಂತು ನೋಡಲಾಗಿ ಅಂಗಡಿಯಿಂದ ಯಾರೋ ಒಬ್ಬ ಅಸಾಮಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅನುಕೂಲ ಮಾಡಿಕೊಟ್ಟು ಮಧ್ಯದ ಸಚೆಟ್ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂತು. ತಕ್ಷಣ ನಾನು, ಸಿಬ್ಬಂದಿಗಳನ್ನು ಹಾಗೂ ಪಂಚರೊಂದಿಗೆ ದಾಳಿ ಮಾಡಿದಾಗ ಮಧ್ಯಪಾನ ಮಾಡಲು ಕುಳಿತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದು ಅಂಗಡಿಯನ್ನು ನಡೆಸುತ್ತಿದ್ದ ಅಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಆರೋಪಿಯು ತನ್ನ ಹೆಸರು ಮತ್ತು ವಿಳಾಸವನ್ನು ಎಸ್.ರಾಜು ಬಿನ್ ಲೇಟ್ ಶಂಭುಗೌಡ 42 ವರ್ಷ ಒಕ್ಕಲಿಗರು ದರ್ಶನ್ ರಾಜ್ ಕಾಂಡಿಮೆಂಟ್ಸ್ ಸ್ಟೋರ್ (ಚಿಲ್ಲರೆ ಅಂಗಡಿ) ವ್ಯಾಪಾರ ಹೊಸಪಾಳ್ಯ ಗ್ರಾಮ ಕೆಂಗೇರಿ ಹೋಬಳಿ ಬೆಂಗಳೂರು ದಕ್ಷಿಣ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಅಂಗಡಿಯ ಮುಂದೆ ಖಾಲಿ ಮಧ್ಯದ ಸಚೆಟ್ಗಳು ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿದ್ದು ನಂತರ ಪಂಚರ ಸಮಕ್ಷಮ ಅಂಗಡಿಯನ್ನು ಪರಿಶೀಲಿಸಲಾಗಿ ಅಂಗಡಿಯ ಮುಂದೆ ಕಡಪ ಕಲ್ಲಿನ ಕಟ್ಟೆಯ ಕೆಳಗೆ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಹ್ಯಾಂಡ್ ಕವರ್ ನಲ್ಲಿ 1) 180 ಎಂ.ಎಲ್ ಮ್ಯಾಕ್ ಡೋವಲ್ಸ್ ಬ್ರಾಂದಿ 06 ಸಚೇಟ್ ಪಾಕೇಟ್ ಗಳು 2) 90 ಎಂ.ಎಲ್ ಹೈವರ್ಡ ಪಂಚ್ 10 ಟೆಟ್ರಾ ಪ್ಯಾಕ್ ಸಚೆಟ್ ಗಳು, 3) 90 ಎಂ.ಎಲ್ ಓರಿಜಿನಲ್ ಚಾಯ್ಸ್ 10 ಟೆಟ್ರಾ ಪ್ಯಾಕ್ ಸಚೆಟ್ ಗಳು, 4) 180 ಎಂ.ಎಲ್ ಓಲ್ಡ್ ಟವೆರನ್ ವಿಸ್ಕಿಯ 01 ಟೆಟ್ರಾ ಪ್ಯಾಕ್ ಸಚೆಟ್, 5) 180 ಎಂ.ಎಲ್ ಒಂದು ಬ್ಯಾಗ್ ಪೈಪರ್ ಟೆಟ್ರಾ ಪ್ಯಾಕ್ ಸಚೆಟ್, ಸದರಿ ಮಧ್ಯದ ಟೆಟ್ರಾ ಪ್ಯಾಕ್ ಸಚೆಟ್ ಗಳನ್ನು ಹಾಗೂ ಅಂಗಡಿಯ ಮುಂಭಾಗದಲ್ಲಿ ಬಿದ್ದಿದ್ದ 02 ಖಾಲಿ ಪ್ಲಾಸ್ಟಿಕ್ ಲೋಟಗಳು ಹಾಗೂ ಎರಡು ಖಾಲಿ 90 ಎಂ.ಎಲ್ ಹೈವರ್ಡ ಪಂಚ್ ಟೆಟ್ರಾ ಪ್ಯಾಕ್ ಸಚೆಟ್ ಗಳನ್ನು ಪಂಚರ ಸಮಕ್ಷಮ ದಿನ ಸಂಜೆ 6-30 ಗಂಟೆಯಿಂದ ಸಂಜೆ 7-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಮಾಲುಗಳನ್ನು ಅಮಾನತುಪಡಿಸಿಕೊಂಡು ಮೇಲ್ಕಂಡ ಆರೋಪಿಯನ್ನು ಹಾಗೂ ಮಾಲುಗಳನ್ನು ಠಾಣೆಗೆ ಕರೆ ತಂದು ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಸಂಜೆ 7-15 ಗಂಟೆಗೆ ಕೊಟ್ಟ ವರದಿ ಮೇರೆಗೆ ಪ್ರ..ವರದಿ

16

Magadi PS

 

Cr.No:0027/2022

(KARNATAKA EXCISE ACT, 1965 U/s 15(A),32(3) )

 

03/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನಾಂಕ.03.02.2022 ರಂದು ರಾತ್ರಿ 08.45 ಗಂಟೆಗೆ ಠಾಣಾ .ಎಸ್. ದೇವರಾಜು ರವರು ನೀಡಿದ ವರದಿ ಏನೆಂದರೆ, 03.02.2022 ರಂದು ನಾನು ಠಾಣಾ ಪಿಸಿ-762 ರವರೊಂದಿಗೆ ಠಾಣಾ ವ್ಯಾಪ್ತಿ ಚಂದೂರಾಯನಹಳ್ಳಿ, ಕಲ್ಯಾ, ಶ್ರೀಪತಿಹಳ್ಳಿ ಕಾಳಾರಿ ಮುಂತಾದ ಕಡೆ ಗಸ್ತು ಮಾಡಿಕೊಂಡು ಸಂಜೆ 07.15 ಗಂಟೆಯಲ್ಲಿ ಹುಚ್ಚಹನುಮೇಗೌಡನಪಾಳ್ಯ ಬಳಿ ಮಾಗಡಿ-ಕುಣಿಗಲ್ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ರಸ್ತೆಯ ಪಕ್ಕದಲ್ಲಿರುವ ಸೌಮ್ಯಶ್ರೀ ಢಾಭಾ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸುಮಾರು 5-6 ಜನರು ಮದ್ಯಪಾನ ಮಾಡುತ್ತಾ ಕುಳಿತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅವರು ಅಲ್ಲಿಂದ ಓಡಿ ಹೋಗಿದ್ದು, ಬಗ್ಗೆ ಸ್ಥಳದಲ್ಲಿದ್ದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ವೆಂಕಟೇಶ್ ಬಿನ್ ಗಿರಿಯಪ್ಪ, 47 ವರ್ಷ, ವಕ್ಕಲಿಗರು, ಸೌಮ್ಯಶ್ರೀ ಢಾಭಾ ಮಾಲೀಕರು, ಹುಚ್ಚಹನುಮೇಗೌಡನಪಾಳ್ಯ, ಕಸಬಾ ಹೋಬಳಿ, ಮಾಗಡಿ ತಾಲ್ಲೂಕ್, ರಾಮನಗರ ಜಿಲ್ಲೆ ಎಂದು ತಿಳಿಸಿದ್ದು, ಸ್ಥಳದಿಂದ ಓಡಿ ಹೋದ ಜನರ ಗುಂಪಿನ ಬಗ್ಗೆ ವಿಚಾರ ಮಾಡಲಾಗಿ ಸ್ಥಳದಲ್ಲಿ ನಾನು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿರುತ್ತಾನೆ, ಪರವಾನಗಿ ಬಗ್ಗೆ ಕೇಳಲಾಗಿ ನಾನು ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತೇನೆ ಎಂದು ತಿಳಿಸಿದ ಮೇರೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸ್ಥಳವನ್ನು ಪರಿಶೀಲಿಸಲಾಗಿ 90 ML Haywards punch 06 Pouch,  90 ML Haywards punch 07 Empty Pouch, 08 ಪ್ಲಾಸ್ಟಿಕ್ ಲೋಟ ಇದ್ದು, ಸದರಿ ಮಾಲುಗಳನ್ನು ಮಹಜರ್ ಮುಖೇನ ದಿನ ಸಂಜೆ 07.30 ರಿಂದ 08.00 ಗಂಟೆವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿರುತ್ತದೆ. ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಮೇಲ್ಕಂಡ ಆರೋಪಿ ವೆಂಕಟೇಶ್ ಬಿನ್ ಗಿರಿಯಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ. ಎಂದು ನೀಡಿದ ವರದಿ ಮೇರೆಗೆ ಪ್ರ..ವರದಿ.

 

17

Ramanagara CEN Crime PS

 

Cr.No:0006/2022

(INFORMATION TECHNOLOGY ACT 2008 U/s 67 )

 

03/02/2022

CYBER CRIME - Information Technology Act 2000, 2009

 

Under Investigation

 

 

ಫಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಶಿಕ್ಷಕರಾಗಿ ಮುತ್ತಾಸಾಗರ ಕುದೂರು ಹೋಬಳಿ, ಮಾಗಡಿ ತಾಲ್ಲೂಕ್ ಇಲ್ಲಿ ಕರ್ತವ್ಯ ಮಾಡಿಕೊಂಡಿರುತ್ತೇನೆ. ನಾನು ಫೇಸ್ಬುಕ್ ನಲ್ಲಿ ಯಾವುದೇ ಖಾತೆಯನ್ನು ಹೊಂದಿರುವುದಿಲ್ಲ. 8884572755  ನಂಬರಿನಲ್ಲಿ ವಾಟ್ಸಾಪ್ ನ್ನು ಮಾತ್ರ ಬಳಕೆ ಮಾಡುತ್ತಿದ್ದೇನೆ. ಮಾಗಡಿ ಶಿಕ್ಷಕರು ಎಂಬ ವಾಟ್ಸಾಪ್ ನ್ನು ಶಿವರಾಮಯ್ಯ ಎಂಬ ಶಿಕ್ಷಕರು ಕ್ರಿಯೇಟ್ ಮಾಡಿ ತಾವೇ ಅಡ್ಮಿನ್ ಆಗಿರುತ್ತಾರೆ. ದಿನಾಂಕ 31-08-2021 ರಂದು 01:14 ಗಂಟೆಗೆ ಮಾಗಡಿ ಶಿಕ್ಷಕರು ಎಂಬ ಗ್ರೂಪ್ ಗೆ ಒಂದು ಮೇಸೇಜ್ ಬಂದಿದ್ದು, ನನ್ನ ಮಗ ಹಾಗೂ ಆತನ ಸಹಪಾಠಿಯ ವಿಚಾರವಾಗಿ ಮೇಸೆಜ್ನಲ್ಲಿ ಅಪ್ರಾಪ್ತ ಹುಡುಗಿ ಹಾಗೂ ಹುಡುಗ ಲಾಡ್ಜ್ ನಲ್ಲಿ ಸರಸ ಸಲ್ಲಾಪದ ಸಂದರ್ಭದಲ್ಲಿ ಪೊಲೀಸ್ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಆರೋಪಿ ಅಪ್ರಾಪ್ತ ವಯಸ್ಕ ಹುಡುಗಿಯನ್ನು ಪುಸಲಾಯಿಸಿ ಪ್ರೀತಿ, ಪ್ರೇಮ ಇತ್ಯಾದಿ ಎಂದು ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ ಇತ್ಯಾದಿಯಾಗಿ ಕೆಟ್ಟದಾಗಿ ಮೇಸೇಜ್ಗಳನ್ನು, ಸುಳ್ಳುಸುದ್ದಿಗಳನ್ನು ಹಾಕಿರುತ್ತಾರೆ ಮತ್ತು ಅದೇ ಸಂದೇಶವನ್ನು ಹಳ್ಳಿ ವಾರ್ತೆ ಎಂಬ ಫೇಸ್ ಬುಕ್ ಖಾತೆಯನ್ನು ತೆರೆದು ನನ್ನ ಮಗ ಹಾಗೂ ಆತನ ಸಹಪಾಠಿ ಹಾಗೂ ನನ್ನ ಪೋಟೋವನ್ನು ಹಾಕಿರುತ್ತಾರೆ. ನನಗೆ ಶಿವರಾಮಯ್ಯ 9900292221, 9964095714 ಹಾಗೂ ಪ್ರೇಮಲತಾ 9740177396 ಹಾಗೂ ಇತರರ ಮೇಲೆ ಅನುಮಾನವಿರುತ್ತದೆ. ಇದರಿಂದ ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ಮಾನಸಿಕವಾಗಿ ನೋವುಂಟಾಗಿ ಗೌರವಕ್ಕೆ ಧಕ್ಕೆ ಆಗುತ್ತಿದೆ. ಹಾಗೂ ಯಾರೋ ನನ್ನ  ಮೇಲಿನ ವೈಯಕ್ತಿಕ ದ್ವೇಷದಿಂದ ರೀತಿ ಮಕ್ಕಳ ಮೇಲೆ ಸುಳ್ಳುಸುದ್ದಿಯನ್ನು ಹರಡಿರುತ್ತಾರೆ. ಸಂದೇಶದಿಂದ ನನ್ನ ಮಗ ಹಾಗೂ ಆತನ ಸಹಪಾಠಿಯ ಓದಿನ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಕೆಟ್ಟದಾಗಿ ಮೇಸೇಜ್ಗಳನ್ನು, ಸುಳ್ಳುಸುದ್ದಿಗಳನ್ನು ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ ಹಾಕಿದ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂದು ತಮ್ಮಲ್ಲಿ ಕೋರುತ್ತೇನೆ.

 

18

Ramanagara Rural PS

 

Cr.No:0035/2022

(IPC 1860 U/s 279,337

03/02/2022

MOTOR VEHICLE ACCIDENTS NON-FATAL - Other Roads

 

Under Investigation

 

 

ದಿನಾಂಕ-03-02-2022 ರಂದು ಪಿರ್ಯಾದಿ ಠಾಣೆಗೆ ಹಾಜರಾಗಿ ದಿನಾಂಕ-03-02-2022 ಬೆಳಿಗ್ಗೆ 5-30 ಸಮಯದಲ್ಲಿ ನನ್ನ ಅಣ್ಣನಾದ ಜನಾರ್ಧನ ಎಂಬುವನು ನನಗೆ ಕರೆ ಮಾಡಿ ತಿಳಿಸಿದ ವಿಚಾರವೆನೆಂದರೆ ನಾನು ಕೆಎ-64-3824 ಬಲೋರಾ ಮಾಕ್ಸಿ ಪ್ಲಸ್ ವಾಹನದಲ್ಲಿ ಹಾರೋಹಳ್ಳಿಯ ಕಿರಣಗೇರೆಯಿಂದ ರೇಷ್ಮೇ ಚಾಕಿಯನ್ನು ತೆಗೆದು ಕೊಂಡು ಮದುಗಿರಿಗೆ ಬರಲು ಇದೇ ದಿವಸ ಬೆಳಿಗಿನ ಜಾವ 5-10 ಸಮಯದಲ್ಲಿ ಸುಗ್ಗನಹಳ್ಳಿ ಬೆಜ್ಜರಹಳ್ಳಿಕಟ್ಟೆ ಮಾರ್ಗವಾಗಿ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿರುವಾಗ ಸಮಯಕ್ಕೆ ಎದರುಗಡೆಯಿಂದ ಬಂದಂತಹ ಯಾವುದೋ ಒಂದು ಟಯೋಟದ ವಾಹನದ ಬೆಳಕು ನನ್ನ ಕಣ್ಣಿಗೆ ಬಿದ್ದ ಪರಿಣಾಮ ನಾನು ವಾಹನವನ್ನು ಬಲಭಾಗಕ್ಕೆ ತಿರುಗಿಸಿದ ಪರಿಣಾಮ ವಾಹನ ಬಲಭಾಗಕ್ಕೆ ಬಿದ್ದ ಪರಿಣಾಮ ನನಗೆ ಬಲತೋಳು, ಮುಖ ಹಾಗೂ ಬೆನ್ನಿನ ಹಿಂಭಾಗದ ಕಡೆ ಏಟುಗಳಾಗಿದ್ದು ನನ್ನನ್ನು ಸ್ಥಳೀಯ ಸಾರ್ವಜನಿಕರು ರಾಮನಗರದ ಸಕರ್ಾರಿ ಆಸ್ವತ್ರೆಗೆ ಕಳುಹಿಸಿಕೊಟ್ಟಿರುತ್ತಾರೆಂತ ಎಂದು ತಿಳಿಸಿದ ಮೇರೆಗೆ ನಾನು ಸಹ ರಾಮನಗರ ಸಕರ್ಾರಿ ಆಸ್ವತ್ರೆಗೆ ಬಂದು ನೋಡಲಾಗಿ ನನ್ನ ಅಣ್ಣನಿಗೆ ಮೇಲ್ಕಂಡ ರೀತಿ ಏಟುಗಳಾಗಿದ್ದು, ನಂತರ ನಾನು ಅಪಘಾತವಾದ ಸ್ಥಳಕ್ಕೆ ಹೋಗಿ ವಾಹನವನ್ನು ನೋಡಲಾಗಿ ವಾಹನದ ಮುಂಭಾಗದ ಕ್ಯಾಬೀನ್ ಜಾಸರ್ಿ, ಇಂಜಿನ್ ಹಾಗೂ ಇತರೆ ಕಡೆ ಡ್ಯಾಮೇಜ್ ಆಗಿದ್ದು, ನನ್ನ ಅಣ್ಣ ನನಗೆ ಸೇರಿದ ವಾಹನವನ್ನು ಸುಗ್ಗನಹಳ್ಳಿ ಕಡೆಯಿಂದ ಬೆಜ್ಜರಹಳ್ಳಿ ಕಡೆಗೆ ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಹೋಗಿ ವಾಹನವನ್ನು ಬಲಭಾಗಕ್ಕೆ ಕೆಡವಿದ್ದು ತಾವುಗಳು ಸ್ಥಳಕ್ಕೆ ಬಂದು ಮುಂದಿನ ರೀತಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ

 

19

Sathanoor PS

 

Cr.No:0027/2022

(IPC 1860 U/s 279,337 )

 

03/02/2022

MOTOR VEHICLE ACCIDENTS NON-FATAL - National Highways

 

Under Investigation

 

 

 

ಪಿರ್ಯಾದುದಾರರು ದಿನಾಂಕ 03.02.2022 ರಂದು ಮಧ್ಯಾಹ್ನ 12:15 ಗಂಟಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ವಿಶಕಂಠರವರು ಸಾತನೂರು ಬಳಿ ಇರುವ ಹೊನ್ನಿಗಾನಹಳ್ಳಿ ಸೈಟಿನ ಬಳಿ ಕಾವೇರಿ ನೀರಿಗೆ ಪೈಪ್ ಅಳವಡಿಸುವ ಕೆಲಸ ಮಾಡುತ್ತಿರುತ್ತಾರೆ, ಜೊತೆಯಲ್ಲಿ ನಮ್ಮ ಗ್ರಾಮ ಸುರೇಶ್ ಮತ್ತು ಚಿಕ್ಕರಾಜು ರವರು ಸಹ ಕೆಲಸ ಮಾಡುತ್ತಿರುತ್ತಾರೆದಿನಾಂಕ 31.01.2022 ರಂದು ಸುರೇಶ್ ಮತ್ತು ನಮ್ಮ ತಂದೆ ವಿಶಕಂಠ ರವರು ಕೆ.-42 ಕ್ಯೂ-3775 ಹೋರೋ ಸ್ಪ್ಲೆಂಡರ್ ಬೈಕಿನಲ್ಲಿ  ಊಟ ತರಲು ಸಾತನೂರಿಗೆ ಬಂದು ಊಟ ಕಟ್ಟಿಸಿಕೊಂಡು ನನ್ನ ತಂದ ವಿಶಕಂಠ ರವರು ಊಟ ಹಿಡಿದುಕೊಂದು ಬೈಕಿನ ಹಿಂದೆ ಕುಳಿತ್ತಿದ್ದು ಸುರೇಶ್ ಬೈಕು ಓಡಿಸುತ್ತಿದ್ದರು ಇಬ್ಬರೂ ಊಟ ತೆಗದುಕೊಂಡು ಮಧ್ಯಾಹ್ನ 02:00 ಗಂಟೆ ಸಮಯದಲ್ಲಿ ಸಾತನೂರು ಹಲಗೂರು ಮುಖ್ಯ ರಸ್ತೆಯ ರಾಯರದೊಡ್ಡಿ ಮುಂದೆ ಇರುವ ಹೊನ್ನಿಗಾನಹಳ್ಳಿ ಸೈಟಿಗೆ ಹೋಗುವಾಗ ಇವರ ಹಿಂದೆಯಿಂದ ಹೋಂಡೈ ನಂ ಕೆ.-53 ಪಿ-2675 ಕಾರು ಬರುತ್ತಿದ್ದು  ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಸುರೇಶ್ ರವರು ಚಾಲನೆ ಮಾಡುತ್ತಿದ್ದ ಕೆ.-42 ಕ್ಯೂ-3775 ಹೋರೋ ಸ್ಪ್ಲೆಂಡರ್ ಬೈಕಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಸುಮಾರು 100ಮೀ ದೂರ ಹೋಗಿ ಬಿದ್ದರುತ್ತಾರೆ  ನನ್ನ ತಂದೆ ವಿಶಕಂಠರವರಿಗೆ  ತೀವ್ರಸ್ವರೂಪದ ಗಾಯಗಳಾಗಿದ್ದು ಸುರೇಶನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತೆ, ಅದೆ ಸಮಯಕ್ಕೆ ಅಲ್ಲೆ ಹೊನ್ನಿಗಾನಹಳ್ಳಿ ಸೈಟಿನಲ್ಲಿ ಕೆಲಸ ಮಾಡುತಿದ್ದ ನಲ್ಲಹಳ್ಳಿಯ ಚಿಕ್ಕರಾಜುರವರಿಗೆ ಅಪಘಾತದ ವಿಚಾರ ತಿಳಿದು ಓಡಿ ಹೋಗಿ ನೋಡಿ ತಕ್ಷಣ ಗಾಯಾಳುಗಳನ್ನು ಉಪಚರಿಸಿ ತಕ್ಷಣ ಯಾವುದೋ  ಆಟೋ ಕರೆಸಿ ಗಾಯಾಳುಗಳನ್ನು ಸಾತನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಕನಕಪುರ ಸಕರ್ಾರಿ ಆಸ್ಪತ್ರೆಗೆ ತೋರಿಸಿ ಹೆಚ್ಚಿನ ಚಿಕತ್ಸೆಗಾಗಿ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಚಿಕ್ಕರಾಜು ನನಗೆ ಪೋನ್ ಮುಖಾಂತರ ಅಪಘಾತದ ವಿಚಾರ ತಿಳಿಸಿದರು ನಾನು ಬಂದು ನೋಡಲಾಗಿ ನಮ್ಮ ತಂದೆ ನಿಮಾನ್ಸ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ನಂತರ ವೈದ್ಯರ ಸಲಹೆ ಮೇರೆಗೆ ದಿಗ್ವಿಜಯ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅಪಘಾತ ಮಾಡಿ ಹೊಂಡೈ KA53P2675 ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆಂದು ನೀಡಿದ ದೂರು.

20

Sathanoor PS

 

Cr.No:0028/2022

(IPC 1860 U/s 279,337 )

 

03/02/2022

MOTOR VEHICLE ACCIDENTS NON-FATAL - National Highways

 

Under Investigation

 

 

ಪಿರ್ಯಾದುದಾರರು ದಿನಾಂಕ:03.02.2022 ರಂದು ಮಧ್ಯಾಹ್ನ 02:30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮಗನಾದ ಶಿವಕುಮಾರ್ 25 ವರ್ಷ ರವರು ದಿನಾಂಕ 25/01/2022 ರಂದು ರಾತ್ರಿ 9:45 ಸಮಯದಲ್ಲಿ ನಮ್ಮ ಊರಿನಲ್ಲಿಯೇ ಇದ್ದು ಅದೇ ರಾತ್ರಿ 12:05  ಗಂಟೆ ಸಮಯದಲ್ಲಿ ಕನಕಪುರ ತಾಲ್ಲೂಕು ಸಾತನೂರು ಬಳಿ ಕನಕಪುರ ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಬೈಕ್ ನಂ KA-42 U-2050 ಬೈಕನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಸಾತನೂರು ಸಂತೆಮಾಳ ಸರ್ಕಲ್ ಬಳಿ ಬಿದ್ದ ಪರಿಣಾಮ ತುಂಬ ರಕ್ತಸ್ರಾವವಾಗಿದೆ ಎಂದು ಸಾತನೂರು ಪೊಲೀಸ್ ಠಾಣೆಯಿಂದ ಮಾಹಿತಿ ಬಂದಿತ್ತು ನಾವು ಬರುವಷ್ಟರಲ್ಲಿ ಯಾರೋ ಸಾತನೂರು ಸಕರ್ಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ವಾಹನದಲ್ಲಿ ಬೆಂಗಳೂರಿನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳುಹಿಸಿದ್ದು ನಾವು ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿರುತ್ತೆ, ನಂತರ ಅಲ್ಲಿಂದ ವೈದ್ಯರೆ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ವಿಕ್ಟೋರಿಯ ಆಸ್ವತ್ರೆಯ ತುರ್ತು ನಿಗಾಘಟಕದಲ್ಲಿ ದಾಖಲಿಸಿದ್ದು ಇನ್ನು ಅವನಿಗೆ ಪ್ರಙ್ಞೆ ಬಂದಿರುವುದಿಲ್ಲ ಆದ್ದರಿಂದ ಇದರ ಬಗ್ಗೆ  ಸೂಕ್ತ ತನಿಖೆ ಮಾಡಿ ನ್ಯಾಯ ದೊರಕಿಸಿ ಕೊಡಬೇಕೆಂದು ನೀಡಿದ ದೂರು.

 

 

 

 

ದಿನಾಂಕ:02-02-2022 ರಂದು ರಾಮನಗರ ಜಿಲ್ಲೆಯಲ್ಲಿ ವರದಿಯಾದ ಅಪರಾಧ ಪ್ರಕರಣಗಳು

 

Sl. No

Police Station Name

FIR No

FIR Date

Crime Group - Crime Head

Stage of case

1

Bidadi PS

 

Cr.No:0039/2022

(IPC 1860 U/s 379 )

 

02/02/2022

THEFT - Of Cultural - Others

 

Under Investigation

 

 

ದಿನಾಂಕ 02/02/2022 ರಂದು ರಾತ್ರಿ 8.45 ಗಂಟೆಗೆ ಪಿರ್ಯಾದಿ ಆದರ್ಶ್ ಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ ನಾನು ಈಗ್ಗೆ ಒಂದುವರೆ ವರ್ಷದಿಂದ ಡಿ.ಬಿ.ಎಲ್ ಕಂಪನಿಯಲ್ಲಿ ಲೈಜನಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ರಾಮನಹಳ್ಳಿ ಗ್ರಾಮದಲ್ಲಿ ಡಿಬಿಎಲ್ ಕಂಪನಿಯ ಕ್ರಷರ್ ಇದ್ದು ಕ್ರಷರ್ ನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ನಮ್ಮ ಕ್ರಷರ್ ಗೆ ಸಂಬಂದಪಟ್ಟ ಕಬ್ಬಿಣಗಳು ಕಳ್ಳತನವಾಗಿರುತ್ತವೆ. ದಿನಾಂಕ 31/01/2022 ರಂದು ರಾತ್ರಿ ಸುಮಾರು 12.30 ಗಂಟೆಗೆ ವೆಂಕಟೇಶ, ಶ್ರೀನಿವಾಸ ಮತ್ತು ಚೌಡಯ್ಯ ಎಂಬುವರು ಸುಮಾರು 2 ಟನ್ ಪ್ರಮಾಣದಷ್ಟು ಕಬ್ಬಿಣಗಳನ್ನು ಕಳ್ಳತನ ಮಾಡಿರುತ್ತಾರೆ ಇದರ ಬೆಲೆ ಸುಮಾರು 74 ಸಾವಿರ ಆಗಿರುತ್ತದೆ. ಎಂದು ನಮ್ಮ ಕಂಪನಿಯ ಸೆಕ್ಯೂರಿಟಿಗಳು ತಿಳಿಸಿರುತ್ತಾರೆ. ಆದ್ದರಿಂದ ಕಬ್ಬಿಣ ಕಳ್ಳತನ ಮಾಡಿರುವ ವೆಂಕಟೇಶ, ಶ್ರೀನಿವಾಸ, ಚೌಡಯ್ಯ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊನಂ 39/2022 ಕಲಂ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತದೆ.

2

Bidadi PS

 

Cr.No:0040/2022

(KARNATAKA EXCISE ACT, 1965 U/s 32,34

02/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ಘನ ನ್ಯಾಯಾಲಯದಲ್ಲಿ ರಾಮನಗರ ಜಿಲ್ಲೆ, ಬಿಡದಿ ಪೊಲೀಸ್ ಠಾಣೆಯ .ಎಸ್. ಶ್ರೀ ಸೋಮಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ: 02/02/2022 ರಂದು ಸಂಜೆ 6-00 ಗಂಟೆಯಲ್ಲಿ ನಾನು ಮತ್ತು ಠಾಣಾ ಪಿಸಿ-681 ಪ್ರದೀಪ ರವರು ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗಸ್ತಿನಲ್ಲಿರುವಾಗ ಬಾತ್ಮಿದಾರರಿಂದ ಬಿಡದಿ ಹೋಬಳಿ, ಶ್ಯಾನಮಂಗಲ ಗ್ರಾಮದ ಬಿಡದಿ ಕೈಗಾರಿಕಾ ಪ್ರದೇಶದ ಮಂದೆಬಯಲಿನ ಸರ್ಕಲ್ ಬಳಿಯಿರುವ ಚಿಲ್ಲರೆ ಅಂಗಡಿಯಲ್ಲಿ  ರವಿಕುಮಾರ್ ಎಂಬುವವನು ಅಕ್ರಮವಾಗಿ ಮಧ್ಯದ ಪೌಚ್ ಗಳನ್ನು  ಇಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾರೆ ಬಂದ ಖಚಿತ ಮಾಹಿತಿ ಮೇರೆಗೆ ನಾನು ಪಂಚಾಯಿತಿದಾರರನ್ನು ಬರಮಾಡಿಕೊಂಡು ಸದರಿಯವರಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಸಮಯದಲ್ಲಿ ಪಂಚಾಯಿತಿದಾರರಾಗಿ ಇರುವಂತೆ ತಿಳಿಸಿ ನೋಟೀಸ್ ಜಾರಿ ಮಾಡಿದೆನು

ಠಾಣಾ ಸಿಬ್ಬಂದಿಗಳಾದ ಪಿಸಿ-681 ಪ್ರದೀಪ ರವರೊಂದಿಗೆ ಪಂಚರನ್ನು ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ  6-30 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ನಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ನೋಡಲಾಗಿ ಅಂಗಡಿ ಒಳಗಿದ್ದ ವ್ಯಕ್ತಿಗೆ ಎರಡು ಮೂರು ಜನರು ಹಣವನ್ನು ನೀಡಿ ಮದ್ಯದ ಪೌಚ್ಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು.

 ತಕ್ಷಣ ಪಂಚರ ಸಮಕ್ಷಮ ಮೇಲ್ಕಂಡ ಚಿಲ್ಲರೆ ಅಂಗಡಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ 10*10 ಅಡಿ ವಿಸ್ತೀರ್ಣದ ತಗಡಿನ ಶೀಟಿನ ಹೋಟೆಲ್ ಆಗಿದ್ದು, ಪೂರ್ವಕ್ಕೆ ಬಾಗಿಲಿರುತ್ತದೆ. ಅಂಗಡಿ ಒಳಗಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಿದಾಗ  ರವಿಕುಮಾರ್ ಬಿನ ಲೇ|| ನಾರಾಯಣಪ್ಪ, 35 ವರ್ಷ, ಗಾಣಿಗಶೆಟ್ಟರು, ಆಟೋ ಡ್ರೈವರ್, ಶಾನಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು  ಎಂದು ತಿಳಿಸಿರುತ್ತಾರೆ. ಅಂಗಡಿ ಒಳಗೆ ಪರಿಶೀಲಿಸಲಾಗಿ ಟೇಬಲ್ ಹತ್ತಿರ ಒಂದು ರಟ್ಟಿನ ಬಾಕ್ಸ್ ಇದ್ದು ಇದರಲ್ಲಿ ಮದ್ಯದ ಪ್ಯಾಕೇಟ್ ದಾಸ್ತಾನು ಮಾಡಿರುತ್ತಾರೆ.

ರಟ್ಟಿನ ಬಾಕ್ಸ್ನಿಂದ ಮದ್ಯದ ಪಾಕೇಟ್ಗಳನ್ನು ಹೊರಗಡೆ ತೆಗೆಯಿಸಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ 1] MC Dowells  180 ML RUM ಎಂದು ಇರುವ 5 ಟೆಟ್ರಾ ಪ್ಯಾಕ್ಗಳು 2] MC Dowells  90 ML RUM ಎಂದು ಇರುವ 3 ಟೆಟ್ರಾ ಪ್ಯಾಕ್ಗಳು 3] Old Tavern 180 ML whisky ಎಂದು ಇರುವ 7 ಟೆಟ್ರಾ ಪ್ಯಾಕ್ಗಳು 4] Old Tavern whisky 90 ML ಎಂದು ಇರುವ 4 ಟೆಟ್ರಾ ಪ್ಯಾಕ್ಗಳು 5] Bagpiper 180 ML Whisky ಎಂದು ಇರುವ 3 ಟೆಟ್ರಾ ಪ್ಯಾಕ್ಗಳು 6] 8PM 180 ML Whisky ಎಂದು ಇರುವ 2 ಟೆಟ್ರಾ ಪ್ಯಾಕ್ಗಳು 7] Haywards Cheers whisky 90 ML ಎಂದು ಇರುವ 6 ಟೆಟ್ರಾ ಪ್ಯಾಕ್ಗಳು. ಇವುಗಳನ್ನು ಶೇಖರಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಪರವಾನಿಗೆ ಇದೆಯೇ ಎಂದು ಚಿಲ್ಲರೆ ಅಂಗಡಿಯಲ್ಲಿದ್ದ ರವಿಕುಮಾರ್ ಬಿನ್ ಲೇ|| ನಾರಾಯಣಪ್ಪ ರವರನ್ನು ವಿಚಾರ ಮಾಡಿದಾಗ ತನ್ನ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಹಾಗೂ ಮೇಲ್ಕಂಡ ಮದ್ಯದ ಟೆಟ್ರಾ ಪ್ಯಾಕ್ಗಳನ್ನು ದಿನ ಸಂಜೆ 6-45 ಗಂಟೆಯಿಂದ ರಾತ್ರಿ 8-15 ಗಂಟೆಯವರೆಗೆ ಅಂಗಡಿ ವಿದ್ಯುತ್ ದೀಪದ ಬೆಳಕಿನಲ್ಲಿ ಸ್ಥಳದಲ್ಲಿ ಲ್ಯಾಪ್ಟಾಪ್ ಮೂಲಕ ಮಹಜರ್ ಕ್ರಮ ಜರುಗಿಸಿ ಮುಂದಿನ ಕ್ರಮದ ಬಗ್ಗೆ ಅಮಾನತ್ತು ಪಡಿಸಿಕೊಂಡಿರುತ್ತೆ.

ಚಿಲ್ಲರೆ ಅಂಗಡಿಯಲ್ಲಿ  ಮೇಲ್ಕಂಡ ಮದ್ಯದ ಟೆಟ್ರಾ ಪ್ಯಾಕ್ಗಳನ್ನು ಆಕ್ರಮವಾಗಿ ಶೇಖರಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ರವಿಕುಮಾರ್ ಹಾಗೂ  ಮಾಲುಗಳೊಂದಿಗೆ  ರಾತ್ರಿ 9-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಹೆಚ್. ರವರಿಗೆ ಸೂಚಿಸಿ ವರದಿ ನೀಡಿರುತ್ತೇನೆ.

3

Channapatna Rural PS

 

Cr.No:0019/2022

(IPC 1860 U/s 00MP )

 

02/02/2022

MISSING PERSON - Women

 

Under Investigation

 

 

ದಿನಾಂಕ. 02-02-2022 ರಂದು ಮಧ್ಯಾಹ್ನ 12-30 ಗಂಟೆಗೆ ಕೇಸಿನ ಪಿರ್ಯಾದಿ ಶ್ರೀ ಪ್ರಭುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ. 31-01-2022 ರಂದು ರಾತ್ರಿ ಮಲಗಿರುವಾಗ ನನ್ನ ಮಗಳು ಅಳುತ್ತಿದ್ದು ನೋಡಿದಾಗ ಮಗಳು ರೀಸಸ್ ಮಾಡಿಕೊಂಡು ಬಟ್ಟೆ ತೇವ ಆಗಿರುತ್ತೆ ನನ್ನ ಹೆಂಡತಿ ಪ್ರಿಯಾಂಕಗೆ ಮಗುವಿನ ಬಟ್ಟೆ ಬದಲಿಸು ಎಂದಾಗ ನನಗೂ ನನ್ನ ಹೆಂಡತಿ ಪ್ರಿಯಾಂಕ ಆದ ನಮಗೆ ಜಗಳ ಆಗಿತ್ತು. ಎಂದಿನಂತೆ ದಿನಾಂಕ. 01-02-2022 ರಂದು ಬೆಳಿಗ್ಗೆ 07-30 ಗಂಟೆಗೆ ಮನೆಯಿಂದ ಕೆಲಸಕ್ಕೆ ಬೇಕರಿಗೆ ಹೋಗಿ ಕೆಲಸ ಮಾಡುತ್ತಿರುವಾಗ, ಮಧ್ಯಾಹ್ನ 12-30 ಗಂಟೆಯಲ್ಲಿ ಪ್ರಿಯಾಂಕ ತನ್ನ ಮೊಬೈಲ್ ನಂಬರ್. 7795254682 ನಿಂದ ಪೋನ್ ಮಾಡಿ ಅಮವಾಸೆ ಇದೇ ದೇವಸ್ಥಾನಕ್ಕೆ ಹೊಗೋಣ ಬಾ ಎಂದರು ನಂತರ ನಾನು ಮಧ್ಯಾಹ್ನ 03-50 ಗಂಟೆಗೆ ಮನೆಗೆ ಬಂದಾಗ ನನ್ನ ಮಗಳು ದೀಪ್ತಿ ಮೆಟ್ಟಿಲ ಬಳಿ ನಿಂತುಕೊಂಡು ಅಳುತ್ತಿದ್ದು ಮಗುವನ್ನು ಎತ್ತಿಕೊಂಡು ಓಳಗೆ ಹೋದಾಗ ಅಲ್ಲಿ ನನ್ನ ಹೆಂಡತಿ ಇರಲಿಲ್ಲ ಎಲ್ಲಾ ಕಡೆ ನೋಡಿದಾಗ ಸಿಗಲಿಲ್ಲ ನಂತರ ನನ್ನ ಹೆಂಡತಿ ಮೊಬೈಲ್ ನಂಬರ್. 7795254682 ಗೆ ಪೋನ್ ಮಾಡಿದಾಗ ಸ್ವಿಚ್ ಆಫ್ ಅಂತ ಬಂತು ನಂತರ ನಮ್ಮ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದಾಗ ಅವರು ಸಹ ಬಂದಿಲ್ಲ ಎಂದರು ನಾನು ಎಲ್ಲಾ ಕಡೆ ಹುಡುಕಾಡಿ ಹಾಗೂ ನನ್ನ ಸ್ವಂತ ಊರಾದ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಸಿದ್ದಾಪುರಕ್ಕೆ ಪೋನ್ ಮಾಡಿ ವಿಚಾರ ಹೇಳಿ ಬಂದಿದ್ದಾರ ಎಂದು ವಿಚಾರಿಸಿದಾಗ ಅವರು ಸಹ ಬಂದಿಲ್ಲ ಎಂದರು ಎಲ್ಲಾ ಕಡೆ ಹುಡುಕಾಡಿದರೂ ಸಿಗದ ಕಾರಣ ಈಗ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಹೆಂಡತಿ ಪ್ರಿಯಾಂಕ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ಚಹರೆಯೊಂದಿಗೆ ನೀಡಿದ ದೂರಿನ ಮೆರೆಗೆ ಪ್ರ..ವರದಿ

4

Channapatna Rural PS

 

Cr.No:0020/2022

(IPC 1860 U/s 279,337 ; INDIAN MOTOR VEHICLES ACT, 1988 U/s 187 )

 

02/02/2022

MOTOR VEHICLE ACCIDENTS NON-FATAL - Other Roads

 

Under Investigation

 

 

ದಿನಾಂಕ. 02-02-2022 ರಂದು ಸಂಜೆ 04-00 ಗಂಟೆಗೆ ಕೇಸಿನ ಪಿರ್ಯಾದಿ ಶ್ರೀಮತಿ ಎಂ. ಚೈತ್ರರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ. 01-02-2022 ರಂದು ಬೆಳಿಗ್ಗೆ 07-10 ಗಂಟೆಯಲ್ಲಿ ನಾನು ಮನೆಯಲ್ಲಿರುವಾಗ ನಮ್ಮ ಗ್ರಾಮದ ಸಿದ್ದರಾಮುರವರು ನನಗೆ ಪೋನ್ ಮಾಡಿ ನಿಮ್ಮ ಯಜಮಾನರು  ಶಿವಲಿಂಗರಾಜುರವರಿಗೆ ಕೂಡ್ಲೂರು-ಚಿಕ್ಕಮಳೂರು ರಸ್ತೆ, ವಾಲೆ ತೋಪು ಬಳಿ ಕೂಡ್ಲೂರು ಕೆರೆಯ ಎರಿಯ ರಸ್ತೆಯಲ್ಲಿ ಅಪಘಾತವಾಗಿದೆ ತಕ್ಷಣ ಬನ್ನಿ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಅತ್ತೆ ಕೆಂಪಮ್ಮರವರು ಸದರಿ ಅಪಘಾತದ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ಅಪಘಾತಕ್ಕೆ ಸಂಬಂದಿಸಿದಂತೆ ಸಿದ್ದರಾಮುರವರನ್ನು ವಿಚಾರಿಸಲಾಗಿ ನಿಮ್ಮ ಯಜಮಾನರು ದಿನ ಬೆಳಿಗ್ಗೆ ಸುಮಾರು 07-00 ಗಂಟೆಯಲ್ಲಿ ಚನ್ನಪಟ್ಟಣ ಕಡೆಯಿಂದ ಕೂಡ್ಲೂರು ಕಡೆಗೆ ಹೋಗಲು ಕೆಎ-42-ಡಬ್ಲೂ-4715 ಹೋಂಡಾ ಆಕ್ಟೀವಾ ಮೋಟಾರ್ ಸೈಕಲ್ ನ್ನು ಕೂಡ್ಲೂರು ಕೆರೆಯ ಎರಿಯ ಮೇಲೆ ಚಾಲನೆ ಮಾಡಿಕೊಂಡು ಬರುತ್ತಿರುವಾಗ, ಅದೇ ಸಮಯಕ್ಕೆ ಗರಕಹಳ್ಳಿ ಕಡೆಯಿಂದ ಚನ್ನಪಟ್ಟಣ ಕಡೆಗೆ ಹೋಗಲು ಕೆಎ-16--5354 ಖಾಸಗಿ ಬಸ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ಯಜಮಾನರು ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದರ ಪರಿಣಾಮ, ವಾಹನ ಸಮೇತ ಕೆಳಗೆ ಬಿದ್ದು ಬಲಗಾಲಿನ ಬೆರಳಿಗೆ, ಬಲಗೈಗೆ ತೀವ್ರತರದ ಪೆಟ್ಟು ಬಿದ್ದು ದೇಹದ ಇತರೆಡೆ ರಕ್ತ ಗಾಯಗಳು ಉಂಟಾದವು ಎಂದು ತಿಳಿಸಿದ್ದು, ನಾನು ಮತ್ತು ಸಿದ್ದರಾಮು ಗಾಯಗೊಂಡ ನಮ್ಮ ಜಯಮಾನರನ್ನು ಸಾರ್ವಜನಿಕ ಸಹಾಯದಿಂದ ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಚನ್ನಪಟ್ಟಣ ಬಿ.ಜೆ. ಲಿಂಗೇಗೌಡ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು, ನನ್ನ ಯಜಮಾನರನ್ನು ನೋಡಿಕೊಳ್ಳುವರು ಯಾರೂ ಇಲ್ಲದ ಕಾರಣ ನಾನೇ ನೋಡಿಕೊಳ್ಳುತ್ತಿದ್ದು ಈಗ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ಹಾಗೂ ಅಪಘಾತಪಡಿಸಿದ ಖಾಸಗಿ ಬಸ್ ನ್ನು ಚಾಲಕ ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ಅಪಘಾತಕ್ಕೆ ಒಳಗಾದ ನಮ್ಮ ಯಜಮಾನರ ದ್ವಿಚಕ್ರ ವಾಹನ ಅಪಘಾತ ಸ್ಥಳದಲ್ಲಿ ನಿಂತಿರುತ್ತೆ. ಅಪಘಾತಕ್ಕೆ ಕಾರಣವಾದ ಕೆಎ-16--5354 ಖಾಸಗಿ ಬಸ್ ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ..ವರದಿ.

 

5

Cr.No:0021/2022

(KARNATAKA POLICE ACT, 1963 U/s 87 )

 

Cr.No:0021/2022

(KARNATAKA POLICE ACT, 1963 U/s 87 )

 

02/02/2022

KARNATAKA POLICE ACT 1963 - Street Gambling (87)

Under Investigation

 

 

ದಿನಾಂಕ. 02-02-2022 ರಂದು ಸಂಜೆ 05-00 ಗಂಟೆಗೆ ಪಿಎಸ್.. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ. 02-02-2022 ರಂದು ಮಧ್ಯಾಹ್ನ 02-30 ಗಂಟೆಯಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ನನಗೆ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಎನೆಂದರೆ, ಠಾಣಾ ಸರಹದ್ದು ಮೈಲನಾಯ್ಕನಹಳ್ಳಿ ಗ್ರಾಮದ ಹೊರ ವಲಯದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಅಕ್ರಮ ಚಟುವಟಿಕೆ ನಡೆಯುತ್ತಿದೆಯೆಂದು ಬಾತ್ಮಿದಾರರ ಬಾತ್ಮಿ ಮೇರೆಗೆ, ದಾಳಿ ಮಾಡಲು ನಾನು ಠಾಣಾ ಸಿಬ್ಬಂದಿಯವರಾದ ಸಿ.ಹೆಚ್.ಸಿ. 366 ಶ್ರೀ ದುರ್ಗಪ್ಪ ಸಿ.ಪಿ.ಸಿ. 98 ಶ್ರೀ ಸಿದ್ದಗಂಗಪ್ಪ, ಸಿ.ಪಿ.ಸಿ. 121 ಹನುಮಂತಶೆಟ್ಟಿ, ಸಿ.ಪಿ.ಸಿ. 701 ಶ್ರೀ ನಾಗಪ್ಪ ಪರಮನಹಟ್ಟಿ, ಸಿ.ಪಿ.ಸಿ. 660 ಶ್ರೀ ವೀರೇಶ್ ಗುಡ್ಲಮನಿ, ಸಿ.ಪಿ.ಸಿ. 717 ಶ್ರೀ ಖಾದೀರ್ ಪಟೇಲ್ ರವರುಗಳಿಗೆ ವಿಚಾರ ತಿಳಿಸಿ ದಾಳಿ ಮಾಡಲು ಸದರಿವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಕೆಎ-42-ಜಿ-73 ಪೊಲೀಸ್ ಜೀಪ್ ನಲ್ಲಿ ಚಾಲಕ .ಪಿ.ಸಿ. 204 ಶ್ರೀ ಮಹೇಶ್  ರವರ ಜೊತೆ ಮಧ್ಯಾಹ್ನ 03-00 ಗಂಟೆಗೆ ಠಾಣೆಗೆ ಹೊರಟು ಮೈಲನಾಯ್ಕನಹಳ್ಳಿ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ವಿಷಯವನ್ನು ತಿಳಿಸಿ ನೋಟೀಸನ್ನು ಜಾರಿ ಮಾಡಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಮಧ್ಯಾಹ್ನ 03-30 ಗಂಟೆಗೆ ಮೈಲನಾಯ್ಕನಹಳ್ಳಿ ಗ್ರಾಮದಿಂದ ಮುಂದೆ ತೊರೆಹೊಸೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಾರಾಯಣರವರ ಜಮೀನಿನ ಬಳಿ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ, ಸದರಿ ತೋರೆಹೊಸೂರು ಕಡೆಗೆ ಹೋಗುವ ರಸ್ತೆಯಲ್ಲಿ 08 ಜನರು ವೃತ್ತಾಕಾರವಾಗಿ ಕುಳಿತುಕೊಂಡು, ನ್ಯೂಸ್ ಪೇಪರ್ ಗಳನ್ನು ಹಾಕಿ ಅದರಲ್ಲಿ ಹಣವನ್ನು ಪಣವಾಗಿ ಕಟ್ಟುತ್ತಾ ಹಣ ಸಂಪಾದನೆಗಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟವಾಡುತ್ತಿರುವುದು ಕಂಡು ಬಂದಿದ್ದು, ಅಲ್ಲಿಗೆ ದಾಳಿ ಮಾಡಿ ಸುತ್ತುವರಿದು ಅವರುಗಳನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ನಾಗಣ್ಣ ಬಿನ್ ಮರಿಗೌಡ, 53 ವರ್ಷ, ಒಕ್ಕಲಿಗರು, ವ್ಯವಸಾಯ, ತೊರೆಹೊಸೂರು ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 2) ಎಂ.ಬಿ. ಮನು ಬಿನ್ ಬಸವರಾಜು, 22 ವರ್ಷ, ಒಕ್ಕಲಿಗರು, ಖಾಸಗಿಯಲ್ಲಿ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 3) ಶೇಖರ್ ಬಿನ್ ವೆಂಕಟಣ್ಣ, 45 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 4) ಸತೀಶ ಬಿನ್ ಬಸವರಾಜು, 33 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 5) ಮಹದೇವ ಬಿನ್ ಜವರಪ್ಪ, 48 ವರ್ಷ, ಒಕ್ಕಲಿಗರು, ವ್ಯವಸಾಯ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 6) ಪ್ರವೀಣ್ ಬಿನ್ ಅಪ್ಪಾಜಿಗೌಡ, 38 ವರ್ಷ, ಒಕ್ಕಲಿಗರು, ಪೈಂಟಿಂಗ್ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 7) ಹೇಮಂತ ಬಿನ್ ಗಂಗಯ್ಯ, 22 ವರ್ಷ, ಒಕ್ಕಲಿಗರು, ಅಡುಗೆ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 8) ಅಪ್ಪಾಜಿ ಬಿನ್ ಬನಿಗೇಗೌಡ, 56 ವರ್ಷ, ಒಕ್ಕಲಿಗರು, ವ್ಯವಸಾಯ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು ಅಂತ ತಿಳಿಸಿದರು. ಸದರಿಯವರು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಮೂರು ಹಳೆಯ ನ್ಯೂಸ್ ಪೇಪರ್ ಇದ್ದು ಅದರ ಮೇಲೆ 52 ಇಸ್ಫೀಟ್ ಎಲೆಗಳು ಬಿದ್ದಿದ್ದವು, ಸದರಿ ಎಂಟು ಜನರ ಅಂಗಶೋದನೆ ಮಾಡಲಾಗಿ ಅವರು ಪಣವಾಗಿಟ್ಟಿದ್ದ 6630/- ಇದ್ದು, ಅವುಗಳನ್ನ ಮಧ್ಯಾಹ್ನ 03-40 ಗಂಟೆಯಿಂದ ಸಂಜೆ 04-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಅಮಾನುತ್ತುಪಡಿಸಿಕೊಂಡ ವಸ್ತುಗಳು ಮತ್ತು ಆರೋಪಿಗಳೊಂದಿಗೆ ಸಂಜೆ 05-00 ಗಂಟೆಗೆ ಬಂದು ವರದಿ ನೀಡಿದ ಮೇರೆಗೆ ಠಾಣಾ ಮೊ. ನಂ. 21/2022 ಕಲಂ. 87 ಕೆ.ಪಿ. ಆಕ್ಟ್ ರೀತ್ಯಾ ಪ್ರ..ವರದಿ.

6

Channapatna Town PS

 

Cr.No:0007/2022

(IPC 1860 U/s 00MP )

 

02/02/2022

MISSING PERSON - Women

 

Under Investigation

 

 

ದಿನಾಂಕ:02.02.2022 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಗಂಡ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು ಜೀವನ ಸಾಗಿಸುತ್ತಿರುತ್ತೇನೆ. ನನ್ನ ಮಗಳು ಸಿಂದು @ ಮಧುಶ್ರೀ ಬಿನ್ ಮುದ್ದೇಗೌಡ, 22 ವರ್ಷ ಇವಳು ರಾಮನಗರ ಡಿಪ್ಲೋಮಾ ಕಾಲೇಜಿನಲ್ಲಿ ಅಂತಿಮ ಸೆಮಿಸ್ಟರ್ ವ್ಯಾಸಾಂಗ ಮಾಡುತ್ತಿದ್ದು. ಆದರೆ ದಿನಾಂಕ:31.01.2022 ರಂದು ಮದ್ಯಾಹ್ನ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ನನ್ನ ಎರಡನೇ ಮಗಳು ಹೋಗಿದ್ದು ವಾಪಸ್ಸು ಮನೆಗೆ ಬಂದಿರುವುದಿಲ್ಲ. ನಾವು ಎಲ್ಲಾ ಕಡೆಗಳಲ್ಲಿ ಹುಡುಕಿ ನಮ್ಮ ಸಂಬಂಧಿಕರ ಮನೆಯಲ್ಲಿ ಹುಡುಕಿ ಸಿಗದೆ ಇದ್ದುದರಿಂದ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇವೆ. ಹಾಗೂ ನನ್ನ ಮಗಳ ಸ್ನೇಹಿತೆಯನ್ನು ವಿಚಾರ ಮಾಡಲಾಗಿ ಮಾಗಡಿ ಹತ್ತಿರ ಇರುವ ಬ್ಯಾಲಕೆರೆ ಮಂಜು ಜೊತೆ ಹೋಗಿರುವುದಾಗಿ ಅನುಮಾನ ಇರುತ್ತೆ. ನನ್ನ ಮಗಳು 5.2 ಅಡಿ ಎತ್ತರ ಇದ್ದು. ಕೋಲು ಮುಖ, ಕೆಂಪು ಕಂದು ಬಣ್ಣ, ಕಪ್ಪು ಕೂದಲು, ಹಾಗೂ ಹೊರಗಡೆ ಹೋಗುವಾಗ ಕಪ್ಪು ಪ್ಯಾಂಟ್ ಹಾಗೂ ಕಪ್ಪು ಟಾಪ್ ಹಾಕಿರುತ್ತಾಳೆ ಆದ್ದರಿಮದ ಸದರಿ ನನ್ನ ಮಗಳಾದ ಸಿಂದು @ ಮಧುಶ್ರೀ ರವರನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾಧಿಯಾಗಿ ನೀಡಿದ ದೂರಿನ ಮೇರೆಗೆ.

 

7

Channapatna Town PS

 

Cr.No:0008/2022

(KARNATAKA POLICE ACT, 1963 U/s 87 )

 

02/02/2022

KARNATAKA POLICE ACT 1963 - Street Gambling (87)

 

Under Investigation

 

 

ದಿನಾಂಕ:02.02.2022 ರಂದು ರಾತ್ರಿ-11.45 ಗಂಟೆಗೆ ಠಾಣಾ ಪಿಎಸ್ಐ ರವರು ಹಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂರೆ ದಿನಾಂಕ:02.02.2022 ರಂದು ರಾತ್ರಿ 9.30 ಗಂಟೆಯಲ್ಲಿ ನಾನು ಠಾಣೆಯಲ್ಲಿ ಈರುವಾಗ್ಗೆ ನನಗೆ ಬಾತ್ಮೀದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ಠಾಣಾ ಸರಹದ್ದು ಮಂಜುನಾಥನಗರ ಬಡಾವಣೆಯಲ್ಲಿ ಯಾವುದೋ ಅಕ್ರಮ ಚಟುವಟಿಕೆ ನಡೆಯುತ್ತಿದೆಯೆಂದು ಬಾತ್ಮೀದಾರರ ಬಾತ್ಮೀ ಮೇರೆಗೆ ನಾನು ಠಾಣಾ ಸಿಬ್ಬಂದಿಗಳಾದ .ಎಸ್. ಸಿದ್ದರಾಜು, ಸಿಪಿಸಿ-133 ಶಿವು ಎನ್.ಪಿ, ಸಿಪಿಸಿ-544 ಸುನೀಲ್, ಸಿಪಿಸಿ-662 ಪವನ್ ಕುಮಾರ್ ರವರುಗಳಿಗೆ ವಿಚಾರ ತಿಳಿಸಿ ದಾಳಿ ಮಾಡಲು ಸದರಿಯವರನ್ನು ಜೊತೆಯಲ್ಲಿ ಕರೆದುಕೊಂಡು ಕೆಎ-42-ಜಿ-197 ಪೊಲೀಸ್ ಜೀಪ್ ನಲ್ಲಿ ಚಾಲಕ .ಹೆಚ್.ಸಿ-80 ಶ್ರೀ ರಮೇಶ್ ರವರ ಜೊತೆ ರಾತ್ರಿ 10.00 ಗಂಟೆಗೆ ಮಂಜುನಾಥನಗರ ಬಡಾವಣೆಗೆ ಹೋಗಿ ಪಂಚಯ್ತಿದಾರರಿಗೆ ವಿಷಯ ತಿಳಿಸಿ ಪಂಚರಾಗಿ ಬರುವಂತೆ ನೋಟಿಸ್ ಅನ್ನು ಜಾರಿ ಮಾಡಿ ಪಂಚರು ಹಾಗೂ ಸಿಬ್ಬಂದಿಯವರು ಪೊಲೀಸ್ ಜೀಪ್ ಅನ್ನು ಚಾನಲ್ ರಸ್ತೆಯಲ್ಲಿ ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ಸದರಿ ಮಂಜುನಾಥನಗರ 02ನೇ ಕ್ರಾಸ್ ರಸ್ತೆಯಲ್ಲಿ ನಾಲ್ಕು ಜನರು ವೃತ್ತಾಕಾರವಾಗಿ ಕುಳಿತುಕೊಂಡು ನ್ಯೂಸ್ ಪೇಪರ್ಗಳನ್ನು ಹಾಕಿ ಅದರಲ್ಲಿ ಹಣವನ್ನು ಪಣವಾಗಿ ಕಟ್ಟುತ್ತಾ ಹಣ ಸಂಪಾದನೆಗಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಂದರ್ ಬಾಹರ್ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟ ಆಟವಾಡುತ್ತಿರುವುದು ಕಂಡು ಬಂದಿರುತ್ತೇ. ಜೂಜು ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಸುತ್ತುವರೆದು ಅವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 01) ಮಹಾಂತೇಶ್ ಬಿನ್ ಯಂಕಪ್ಪ, 26 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ವಾಸ:ಜನಮಟ್ಟಿ ಗ್ರಾಮ, ಬೆಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಹಾಲಿ ವಾಸ: 02ನೇ ಕ್ರಾಸ್ ಮಂಜುನಾಥನಗರ, ಚನ್ನಪಟ್ಟಣ ಟೌನ್. 02) ವೆಂಕಟೇಶ್ ಬಿನ್ ಲೇಟ್ ವೆಂಕಟಪ್ಪ, 67 ವರ್ಷ, ಒಕ್ಕಲಿಗರು, ಕೂಲಿಕೆಲಸ, ವಾಸ: ಕೋಡಿಪುರ ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ. 03) ನಾಗರಾಜು.ಕೆ ಬಿನ್ ಭದ್ರಪ್ಪ, 29 ವರ್ಷ, ಭಾರಿಕ್ ಜನಾಂಗ, ಕೂಲಿ ಕೆಲಸ, ವಾಸ:ಇಟಗಿ ಗ್ರಾಮ, ಹೂವಿನ ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಹಾಲಿ ವಾಸ: 02ನೇ ಕ್ರಾಸ್, ಮಂಜುನಾಥನಗರ, ಚನ್ನಪಟ್ಟಣ ಟೌನ್. 04) ಕುಶಾಲ.ಡಿ ಬಿನ್ ದೊಡ್ಡಯ್ಯ, 19 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ, ವಾಸ: ದೇವರಹಳ್ಳಿ ಗ್ರಾಮ, ಚನ್ನಪಟ್ಟಣ ತಾಲ್ಲೂಕು ಅಂತ ತಿಳಿಸಿದರು, ಸದರಿಯವರು ಜೂಜಾಟವಾಡುತ್ತಿದ್ದ ಸ್ಥಳದಲ್ಲಿ 02 ನ್ಯೂಸ್ ಪೇಪರ್ ಇದ್ದು ಅದರ ಮೇಲೆ 52 ಇಸ್ಪೀಟ್ ಎಲೆಗಳು ಬಿದ್ದಿದ್ದು. ಸದರಿ ನಾಲ್ಕು ಜನರ ಅಂಗ ಶೋದನೆ ಮಾಡಲಾಗಿ ಅವರುಗಳು ಪಣವಾಗಿ ಇಟ್ಟಿದ್ದ ಒಟ್ಟು 2230/- ಇದ್ದು ಅವುಗಳನ್ನು ರಾತ್ರಿ 10.45 ಗಂಟೆಯಿಂದ ರಾತ್ರಿ 11.30 ಗಂಟೆವರೆಗೆ ಪಂಚರ ಸಮಕ್ಷಮ ರಸ್ತೆಯ ಪಕ್ಕದ ವಿದ್ಯುತ್ ದೀಪದ ಬೆಳಿಕಿನ ಸಹಾಯದಿಂದ ಮಹಜರ್ ಕ್ರಮ ಜರುಗಿಸಿ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ಅಮಾನತ್ತು ಪಂಚನಾಮೆ ಜರುಗಿಸಿ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ವಸ್ತುಗಳನ್ನು ಹಾಗೂ ಆರೋಪಿಗಳನ್ನು ರಾತ್ರಿ 11.45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿದ ಮೇರೆಗೆ

8

Ijoor PS

 

Cr.No:0010/2022

(IPC 1860 U/s 379 )

 

02/02/2022

THEFT - Other Items Not Included Above

 

Under Investigation

 

 

ದಿನ ದಿ.02.02.2022 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದುದಾರರು ಠಾಣಾ ದಿನಚರಿ ಪ್ರಭಾರದಲ್ಲಿ ಇದ್ದಾಗ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಚನ್ನಪಟ್ಟಣದ ಕುವೆಂಪುನಗರದ 4ನೇ ಕ್ರಾಸ್ ವಾಸಿಯಾಗಿದ್ದು, ಬರೆಸಿ ನೀಡುತ್ತಿರುವ ದೂರು ಏನೆಂದರೆ, ನಾನು ಸಪ್ತಗಿರಿ ಚಿಕನ್ ಸೆಂಟರ್ ನಲ್ಲಿ ಕೋಳಿಗಳನ್ನು ಫಾರಂಗಳಿಂದ ಅಂಗಡಿಗಳಿಗೆ ವಿತರಿಸುವ ಕೆಲಸವನ್ನು ಹಾಗೂ ಡ್ರೈವರ್ ಕೆಲಸವನ್ನು ಸುಮಾರು 7 ವರ್ಷಗಳಿಂದ ಮಾಡಿಕೊಂಡಿರುತ್ತೇನೆ. ಸುಮಾರು 3 ದಿನಗಳ ಹಿಂದೆ ಅಂದರೆ, ದಿ.30.01.2022 ರಂದು ಸಪ್ತಗಿರಿ ಚಿಕನ್ ಸೆಂಟರ್ ಕಡೆಯಿಂದ ದ್ರುವಕುಮಾರ್ ಮತ್ತು ಇನ್ನಿಬ್ಬರು ಕೂಲಿ ಆಳುಗಳು ಸೇರಿಕೊಂಡು ಬೆಳಗಿನ ಜಾವ ಕಾಡನಕುಪ್ಪೆ ಬಳಿಯ ಕೋಳಿ ಫಾರಂನಿಂದ ಅಂಗಡಿಗಳಿಗೆ ವಿತರಿಸಲು ಕೋಳಿಗಳನ್ನು 407 ವಾಹನ ಸಂಖ್ಯೆ: KA42-2906 ರಲ್ಲಿ ತುಂಬಿಕೊಂಡು ಎಂದಿನಂತೆ ನಮ್ಮ ಚಿಕನ್ ಸೆಂಟರ್ ನಿಂದ ಕೋಳಿಗಳನ್ನು ಪಡೆಯುವ ರಾಮನಗರ ಟೌನ್ ಮಹಿಳಾಪಾಲಿಟೆಕ್ನಿಕ್ ಕಾಲೇಜು ಎದುರಿಗಿರುವ ಸೂರಿ ಚಿಕನ್ ಸೆಂಟರ್ ಅಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ದಿನ ಬೆಳಗಿನ ಜಾವ 04.00 ಗಂಟೆ ಸುಮಾರಿನಲ್ಲಿ 06 ಬಾಕ್ಸ್ ಕೋಳಿಗಳನ್ನು ಇಳಿಸಿರುತ್ತಾರೆ. ಮೇಲ್ಕಂಡ 06 ಬಾಕ್ಸ್ ಕೋಳಿಗಳಲ್ಲಿ 03 ಬಾಕ್ಸ್ ಮಾಂಸದ ಕೋಳಿಗಳಿದ್ದು, ಇನ್ನೂಳಿದ ಮೂರು ಬಾಕ್ಸ್ ಗಳಲ್ಲಿ ಮೊಟ್ಟೆಕೋಳಿಗಳಿದ್ದವು. ಇವುಗಳ ಮೌಲ್ಯ ಸುಮಾರು ರೂ.30,000/-ರೂಪಾಯಿಗಳಾಗಿರುತ್ತವೆ. ಬಗ್ಗೆ ಇನ್ ವಾಯ್ಸ್ ನ್ನು ಸೂರಿ ಚಿಕನ್ ಸೆಂಟರ್ ಅಂಗಡಿಯ ಬಾಗಿಲಿಗೆ ಸಿಲುಕಿಸಿ ಮುಂದಿನ ಅಂಗಡಿಗಳಿಗೆ ಕೋಳಿಯನ್ನು ವಿತರಿಸಲು ಹೋಗಿರುತ್ತಾರೆ. ನಂತರ ದಿನ ಬೆಳಿಗ್ಗೆ 06.00 ಗಂಟೆ ಸುಮಾರಿಗೆ ಸೂರಿ ಚಿಕನ್ ಸೆಂಟರ್ ಮಾಲೀಕರಾದ ಸೂರಿರವರು ಸಪ್ತಗಿರಿ ಚಿಕನ್ ಸೆಂಟರ್ ಗೆ ಕರೆ ಮಾಡಿ ನೀವು ಇಳಿಸಿರುವ ಕೋಳಿಗಳ ಬಾಕ್ಸ್ ಸ್ಥಳದಲ್ಲಿ ಇಲ್ಲವೆಂದು ತಿಳಿಸಿರುತ್ತಾರೆ. ನಾವು ತಕ್ಷಣ ಸೂರಿ ಚಿಕನ್ ಸೆಂಟರ್ ಬಳಿಗೆ ಬಂದು ಅಕ್ಕ-ಪಕ್ಕ ಹುಡುಕಾಡಿದರೂ 06 ಬಾಕ್ಸ್ನ ಕೋಳಿಗಳು ಕಂಡು ಬಂದಿರುವುದಿಲ್ಲ. ನಮ್ಮ ಚಿಕನ್ ಸೆಂಟರ್ ಮತ್ತು ಕೋಳಿ ಅಂಗಡಿಯ ಮಾಲೀಕರ ಒಡಂಬಡಿಕೆಯಂತೆ ನಾವು ಅವರ ಅನುಪಸ್ಥಿತಿಯಲ್ಲಿ ಬೆಳಗಿನ ಜಾವ ಕೋಳಿ ಬಾಕ್ಸ್ ಗಳನ್ನು ಇಳಿಸಿ ಹೋಗುವುದು ಇರುತ್ತದೆ. ಆದ್ದರಿಂದ ದಿ.30.01.2022 ರಂದು ಬೆಳಗಿನ ಜಾವ ಸುಮಾರು 04.00 ಗಂಟೆ ಸಮಯದಲ್ಲಿ ಸೂರಿ ಚಿಕನ್ ಸೆಂಟರ್ ಅಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಇಳಿಸಿದ್ದ 06 ಕೋಳಿಗಳಿರುವ ಬಾಕ್ಸ್ ನ್ನು ಬೆಳಿಗ್ಗೆ 06.00 ಗಂಟೆಯೊಳಗಿನ ಸಮಯದಲ್ಲಿ ಯಾವಾಗಲೋ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಬಗ್ಗೆ ನಮ್ಮ ಮಾಲೀಕರೊಂದಿಗೆ ಚರ್ಚಿಸಿ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುತ್ತೇನೆ. ಕಳ್ಳತನವಾಗಿರುವ 06 ಕೋಳಿಗಳಿರುವ ಬಾಕ್ಸ್ ಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರುತ್ತೇನೆ. ಇದರೊಂದಿಗೆ ಸೂರಿ ಚಿಕನ್ ಸೆಂಟರ್ ಗೆ ನೀಡಿದ ಇನ್ ವಾಯ್ಸ್ ಪ್ರತಿಯನ್ನು ಲಗತ್ತಿಸಿರುತ್ತೇನೆ. ಬೆಳಗಿನ ಜಾವ ಆದ್ದರಿಂದ ಯಾರೋ ಕಳ್ಳರು ಆರು ಬಾಕ್ಸ್ ಕೋಳಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿದ್ದ ಮೇರೆಗೆ ಠಾಣಾ ಮೊ.ನಂ.10/2022 ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತೆ.

9

Ijoor PS

 

Cr.No:0011/2022

(KARNATAKA EXCISE ACT, 1965 U/s 15(A),32(3) )

 

02/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನ ದಿ:-02.02.2022 ರಂದು ಮದ್ಯಾಹ್ನ 1.15 ಗಂಟೆಯಲ್ಲಿ  ಐಜೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಮಂಜುನಾಥ.ಬಿ ರವರು ನೀಡಿದ ವರದಿ ಏನೆಂದರೆ ದಿನ ದಿನಾಂಕ: 02.02.2022  ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ, ಕನಕಪುರ ಸರ್ಕಲ್, ಕನಕಪುರ ರಸ್ತೆಯಲ್ಲಿರುವ ಪ್ರಕಾಶ್ ಎಂಬುವವರ ಚಿಲ್ಲರೆ ಪೆಟ್ಟಿ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಡುತ್ತಿರುತ್ತಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಠಾಣೆಗೆ ಪಂಚಾಯ್ತಿದಾರರನ್ನು ಕರೆಸಿ ಸದರಿ ವಿಚಾರವನ್ನು ತಿಳಿಸಿ, ಸಿಬ್ಬಂದಿಗಳಾದ ಶ್ರೀ.ರವಿಚಂದ್ರ ಸಿಪಿಸಿ-677, ಶ್ರೀ.ಸಂಜೀವ್, ಪಿಸಿ-633 ಮತ್ತು ಜೀಪ್ ಚಾಲಕ ನರಸಿಂಹಯ್ಯ .ಹೆಚ್.ಸಿ.59  ರವರನ್ನು ಜೊತೆಯಲ್ಲಿ ಕರೆದುಕೊಂಡು ಸರ್ಕಾರಿ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 12-00 ಗಂಟೆಗೆ ಕನಕಪುರ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ಪ್ರಕಾಶ್ ರವರ ಚಿಲ್ಲರೆ ಅಂಗಡಿಯಲ್ಲಿ ಮದ್ಯವನ್ನು ಎರಡು ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ಮದ್ಯಪಾನ ಮಾಡಲು ಇಬ್ಬರು ಆಸಾಮಿಗಳಿಗೆ ಮಾರಾಟ ಮಾಡಿ ಸ್ಥಳದಲ್ಲಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದುದು ಕಂಡು ಬಂದಿರುತ್ತದೆ. ಕೂಡಲೇ ನಾವುಗಳು ಪಂಚರ ಸಮಕ್ಷಮ ದಾಳಿ ಮಾಡಿದಾಗ ಮದ್ಯವನ್ನು ತೆಗೆದುಕೊಂಡು ಕುಡಿಯುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಮದ್ಯ ಮಾರಾಟ ಮಾಡಲು ಪರವಾನಗಿ ಇದೆಯೆ? ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ಸದರಿ ಆಸಾಮಿಯ ಬಗ್ಗೆ ವಿಚಾರ ಮಾಡಿ ಹೆಸರು ವಿಳಾಸ ಕೇಳಲಾಗಿ ಪ್ರಕಾಶ್ ಬಿನ್ ಲೇ.ರಂಗಸ್ವಾಮಿ, 55 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹೂವಾಡಿಗರ ಬೀದಿ, ರಾಮನಗರ ಟೌನ್ ಮೊ.ನಂ-9741291942 ಎಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಪರಿಶೀಲಿಸಲಾಗಿ ಅಂಗಡಿಯಲ್ಲಿದ್ದ  HYWARDS CHEERS WHISKHY 90 ML 35.13 ರೂ ಬೆಲೆಯ 18 ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಮೂಲೆಯಲ್ಲಿ ಓಪನ್ ಮಾಡಿ ಕುಡಿದು ಬಿಸಾಡಿದ್ದ 90 ML  HYWARDS CHEERS WHISKHY ಒಟ್ಟು 02 ಖಾಲಿ ಪಾಕೇಟ್ ಹಾಗೂ 02 ಖಾಲಿ ಪ್ಲಾಸ್ಟಿಕ್ ಲೋಟಗಳು ದೊರೆತಿದ್ದು, ಪಂಚರ ಸಮಕ್ಷಮ ಬೆಳಿಗ್ಗೆ ಮಧ್ಯಾಹ್ನ 12-10 ರಿಂದ 1-00 ಗಂಟೆಯರವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ನಂತರ ಠಾಣೆಗೆ  ಬಂದು ವರದಿಯನ್ನು ತಯಾರು ಮಾಡಿ ಮಧ್ಯಾಹ್ನ 1-15  ಗಂಟೆಗೆ ಪ್ರಕರಣ ದಾಖಲಿಸುವಂತೆ ನೀಡಿದ  ವರದಿ ಯನ್ನು ಪಡೆದು ಠಾಣಾ ಮೊ.ನಂ-11/2022 ಕಲಂ 15(),32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

10

Ijoor PS

 

Cr.No:0012/2022

(KARNATAKA EXCISE ACT, 1965

 

02/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ದಿನ ದಿ:-02.02.2022 ರಂದು ಮದ್ಯಾಹ್ನ 03.45 ಗಂಟೆಯಲ್ಲಿ ಐಜೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಮಂಜುನಾಥ.ಬಿ ರವರು ನೀಡಿದ ವರದಿ ಏನೆಂದರೆ, ದಿನ ದಿನಾಂಕ:02.02.2022 ರಂದು ಮಧ್ಯಾಹ್ನ 2-15 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ, ಕನಕಪುರ ಸರ್ಕಲ್, ಕನಕಪುರ ರಸ್ತೆಯಲ್ಲಿರುವ ಶ್ರೀಮತಿ ಮಹದೇವಮ್ಮ ಎಂಬುವವರ ಚಿಲ್ಲರೆ ಪೆಟ್ಟಿ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಡುತ್ತಿರುತ್ತಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಠಾಣೆಗೆ ಪಂಚಾಯ್ತಿದಾರರನ್ನು ಕರೆಸಿ ಸದರಿ ವಿಚಾರವನ್ನು ತಿಳಿಸಿ, ಸಿಬ್ಬಂದಿಗಳಾದ ಶ್ರೀ.ಸಂಜೀವ್, ಪಿಸಿ-633, ಶ್ರೀಮತಿ ಸುಧಾ, ಮಪಿಸಿ-645 ಮತ್ತು ಜೀಪ್ ಚಾಲಕ ನರಸಿಂಹಯ್ಯ .ಹೆಚ್.ಸಿ.59  ರವರನ್ನು ಜೊತೆಯಲ್ಲಿ ಕರೆದುಕೊಂಡು ಸರ್ಕಾರಿ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 2-30 ಗಂಟೆಗೆ ಕನಕಪುರ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ಮಹದೇವಮ್ಮ ರವರ ಚಿಲ್ಲರೆ ಅಂಗಡಿಯಲ್ಲಿ ಮದ್ಯವನ್ನು ಎರಡು ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ಮದ್ಯಪಾನ ಮಾಡಲು ಇಬ್ಬರು ಆಸಾಮಿಗಳಿಗೆ ಮಾರಾಟ ಮಾಡಿ ಸ್ಥಳದಲ್ಲಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದುದು ಕಂಡು ಬಂದಿರುತ್ತದೆ. ಕೂಡಲೇ ನಾವುಗಳು ಪಂಚರ ಸಮಕ್ಷಮ ದಾಳಿ ಮಾಡಿದಾಗ ಮದ್ಯವನ್ನು ತೆಗೆದುಕೊಂಡು ಕುಡಿಯುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಮಹಿಳೆಯನ್ನು ವಶಕ್ಕೆ ಪಡೆದು ಮದ್ಯ ಮಾರಾಟ ಮಾಡಲು ಪರವಾನಗಿ ಇದೆಯೆ? ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಮಹಿಳೆಯನ್ನು ವಿಚಾರ ಮಾಡಿ ಹೆಸರು ವಿಳಾಸ ಕೇಳಲಾಗಿ ಮಹದೇವಮ್ಮ ಕೋಂ ಲೇ.ಗೋಪಾಲ್, 50ವರ್ಷ, ತಿಗಳರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಚನ್ನಮಾನಹಳ್ಳಿ, ಕೈಲಂಚಾ ಹೋಬಳಿ, ರಾಮನಗರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಪರಿಶೀಲಿಸಲಾಗಿ ಅಂಗಡಿಯಲ್ಲಿದ್ದ SILVER CUP Indian Brandy 90ML 27.98 ರೂ ಮುಖಬೆಲೆಯ 10 ಪೌಚ್ ಗಳು, HYWARDS CHEERS WHISKHY 90 ML 35.13 ರೂ ಬೆಲೆಯ 6 ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಮೂಲೆಯಲ್ಲಿ ಓಪನ್ ಮಾಡಿ ಕುಡಿದು ಬಿಸಾಡಿದ್ದ 90 ML HYWARDS CHEERS WHISKHY ಒಟ್ಟು 02 ಖಾಲಿ ಪಾಕೇಟ್ ಹಾಗೂ 02 ಖಾಲಿ ಪ್ಲಾಸ್ಟಿಕ್ ಲೋಟಗಳು ದೊರೆತಿದ್ದು, ಪಂಚರ ಸಮಕ್ಷಮ ಮಧ್ಯಾಹ್ನ 2-40 ರಿಂದ ಮಧ್ಯಾಹ್ನ 3-30 ಗಂಟೆಯರವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ನಂತರ ಠಾಣೆಗೆ ಬಂದು ವರದಿಯನ್ನು ತಯಾರು ಮಾಡಿ ಮಧ್ಯಾಹ್ನ 3-45  ಗಂಟೆಗೆ ಪ್ರಕರಣ ದಾಖಲಿಸುವಂತೆ ನೀಡಿದ  ವರದಿ ಯನ್ನು ಪಡೆದು ಠಾಣಾ ಮೊ.ನಂ-12/2022 ಕಲಂ 15(),32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

11

Kaggalipura PS

 

        Cr.No:0034/2022

(IPC 1860 U/s 354,504,506 )

 

02/02/2022

MOLESTATION - Public Place

 

Under Investigation

 

 

ದಿನಾಂಕ 02.02.2022 ರಂದು ಮಧ್ಯಾಹ್ನ 12-15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 01/02/2022 ರಂದು  ನಮ್ಮ ಗ್ರಾಮದ ಲಕ್ಷ್ಮಣ ಎಂಬುವನು ಅವನ ಹೆಂಡತಿ ಜೊತೆ ಜಗಳ ಮಾಡುತ್ತಿದ್ದುಅವರ ಮಗ ಮತ್ತು ಅಜ್ಜಿ ಶಿವಮ್ಮ ರವರು ನಮ್ಮ ಮನೆ ಬಳಿ ಬಂದಿದ್ದು, ಕತ್ತಲೆಯಾಗಿದ್ದರಿಂದ ಲಕ್ಷ್ಮಣ ರವರ ಮಗನನ್ನು ಅವರ ಮನೆ ಬಳಿ ಬಿಡಲು ಹೋದಾಗ ರಾತ್ರಿ ಸುಮಾರು 11-15 ಗಂಟೆ ಸಮಯದಲ್ಲಿ ಲಕ್ಷ್ಮಣ ಜಗಳ ತೆಗೆದು ನನಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಸೀರೆಯನ್ನು ಹಿಡಿದು ಎಳೆದಾಳಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಲಕ್ಷ್ಮಣನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ

12

Kanakapura Rural PS

 

Cr.No:0020/2022

(KARNATAKA POLICE (AMENDMENT) ACT, 2021 U/s 87 )

 

02/02/2022

KARNATAKA POLICE ACT 1963 - Street Gambling (87)

 

Under Investigation

 

 

ನಾನು ಈಗ್ಗೆ 06 ತಿಂಗಳಿನಿಂದ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್. ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿವಸ ದಿನಾಂಕ-02.02.2022 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಯಾರೋ ಬಾತ್ಮಿದಾರರು ನನಗೆ ಫೋನ್ ಮಾಡಿ, ದೊಡ್ಡಕಲ್ಬಾಳು ಗ್ರಾಮದಲ್ಲಿರುವ ಕಾಂತರಾಜು ರವರ ತೆಂಗಿನ ತೋಟದಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು, ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂದು ತಿಳಿಸಿದ್ದು, ನಂತರ ಪಂಚಾಯ್ತಿದಾರರು ಹಾಗೂ ಸಿಬ್ಬಂದಿಗಳೊಂದಿಗೆ KA-42 G-923 ಠಾಣಾ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ ಕರೆದುಕೊಂಡು ಹೋಗಿ, ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ, ಮರೆಯಲ್ಲಿ ನಿಂತು ನೋಡಲಾಗಿ 9-10 ಜನರು ಅಕ್ರಮವಾಗಿ ಗುಂಪುಕಟ್ಟಿಕೊಂಡು, ಒಂದು ಪ್ಲಾಸ್ಟಿಕ್‌‌ ಚೀಲವನ್ನು ಹಾಕಿಕೊಂಡು, ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬನು 100/- ರೂ ಅಂದರ್ ಎಂತಲೂ ಮತ್ತೊಬ್ಬನು 100/- ರೂ ಬಾಹರ್ ಎಂತಲೂ ಕೂಗುತ್ತಿದ್ದನು. ಪಂಚರ ಸಮಕ್ಷಮ ನಾವುಗಳು ಸದರಿ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ, 06 ಜನ ಆಸಾಮಿಗಳನ್ನು ಹಿಡಿದುಕೊಂಡಿದ್ದು, 04 ಜನರು ಓಡಿ ಹೋಗಿರುತ್ತಾರೆ. ನಂತರ 100/-ರೂ ಅಂದರ್ ಎಂದು ಕೂಗುತ್ತಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ, 1.ರಘು ಬಿನ್ ಸಿದ್ದರಾಮಯ್ಯ. 32 ವರ್ಷ, ಉಪ್ಪಾರ ಜನಾಂಗ, ವ್ಯಾಪಾರ, ಹಾರೋಹಳ್ಳಿ ಗ್ರಾಮ, ಕಸಬಾ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 2550/- ರೂ ರೂ ಹಣ ಮತ್ತು 21 ಇಸ್ಪೀಟ್ ಎಲೆಗಳು ದೊರೆತ್ತಿರುತ್ತದೆ, ಬಾಹರ್ ಎಂದು ಕೂಗುತ್ತಿದ್ದವನ ಹೆಸರು ವಿಳಾಸದ ಬಗ್ಗೆ ಕೇಳಲಾಗಿ, 2.ಪ್ರಸನ್ನ ಬಿನ್ ಲಿಂಗರಾಜಯ್ಯ, 27 ವರ್ಷ, ವಕ್ಕಲಿಗರು, ವ್ಯವಸಾಯ, ಅತ್ತಿಕುಪ್ಪೆ ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 2300/- ರೂ ಹಣ ದೊರೆತ್ತಿರುತ್ತದೆ. 3.ರಘು.ಜಿ.ಎನ್ ಬಿನ್ ಲೇಟ್ ನಾಗರಾಜು, 28 ವರ್ಷ, ವಕ್ಕಲಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ಗಾಣಾಳುದೊಡ್ಡಿ ಗ್ರಾಮ, ಹಾರೋಹಳ್ಳಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 2100/- ರೂ ದೊರೆತ್ತಿರುತ್ತದೆ. 4.ಗಿರೀಶ್ ಬಿನ್ ನಟರಾಜು, 29 ವರ್ಷ, ವಕ್ಕಲಿಗರು, ಡ್ರೈವರ್, ನರಿಪುರ ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 1600/- ರೂ ದೊರೆತ್ತಿರುತ್ತದೆ. 5.ಶ್ರೀಕಾಂತ್ ಬಿನ್ ಲೇಟ್ ಪುಟ್ಟಸ್ವಾಮಿ. 37 ವರ್ಷ, ವಕ್ಕಲಿಗರು, ಡ್ರೈವರ್, ನಂ-13, 11ನೇ ಮುಖ್ಯ ರಸ್ತೆ, ಚಂದ್ರನಗರ, ಕುಮಾರಸ್ವಾಮಿ ಲೇಔಟ್, ಬೆಂಗಳೂರ ಎಂದು ತಿಳಿಸಿದ್ದು, ಈತನ ಬಳಿ 2200/- ರೂ ದೊರೆತ್ತಿರುತ್ತದೆ. 6.ಶಿವಕುಮಾರ್ ಬಿನ್ ಲೇಟ್ ಪಂಚಲಿಂಗಯ್ಯ, 33 ವರ್ಷ, ವಕ್ಕಲಿಗರು, ಕೇಬಲ್ ಆಪರೇಟರ್, ಚೀಲೂರು ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 1900/- ರೂ ದೊರೆತ್ತಿರುತ್ತದೆ. ಇಸ್ಪೀಟ್ ಅಡ್ಡೆಯಲ್ಲಿ 31 ಇಸ್ಪೀಟ್ ಎಲೆಗಳು ಮತ್ತು 1500/- ರೂ ಹಣ ದೊರೆತ್ತಿರುತ್ತದೆ. ನಂತರ ಓಡಿ ಹೋದವರ ಬಗ್ಗೆ ಸಿಕ್ಕಿ ಬಿದ್ದವರನ್ನು ಕೇಳಲಾಗಿ, 7.ಶ್ರೀಕಾಂತ್, ಬಸವನಬನ್ನಿಕುಪ್ಪೆ ಗ್ರಾಮ, 8.ಯಶವಂತ್, ಕಾಂಚಿಕಾಳನಹಳ್ಳಿ ಗ್ರಾಮ, ರಾಮನಗರ, 9.ಕೃಷ್ಣ, ದೊಡ್ಡಕಲ್ಬಾಳು ಗ್ರಾಮ, 10.ಸಂಜಯ್ @ ಪವರ್, ಗಬ್ಬಾಡಿ ಎಂದು ತಿಳಿಸಿದರು. ನಂತರ ಸ್ಥಳದಲ್ಲಿ 1)KA-05 KW-9087 Suzuki Acceses, 2)KA-42 K-6926 Passion Pro, 3)KA-11 EF-2541 Honda Activa ಮೋಟಾರ್ ಬೈಕ್ ಗಳು ನಿಂತಿದ್ದು, ನಂತರ ಕೇಸಿನ ಮುಂದಿನ ತನಿಖೆಯ ಬಗ್ಗೆ ಒಟ್ಟು 14,150/- ರೂಪಾಯಿ ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲ ಮತ್ತು ಮೇಲ್ಕಂಡ 03 ಮೋಟಾರ್ ಬೈಕ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು, ನಂತರ ವಶಕ್ಕೆ ಪಡೆದುಕೊಂಡಿದ್ದ 06 ಜನ ಆಸಾಮಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ಸದರಿ ಅಸಾಮಿಗಳ ಮೇಲೆ ಸ್ವ ವರದಿಯನ್ನು ತಯಾರಿಸಿ, ಸಂಜೆ 5.15 ಗಂಟೆಗೆ ಠಾಣಾ ಮೊ.ನಂ-20/2022,  ಕಲಂ- 87 KP Act ರೀತ್ಯಾ ಕೇಸು ದಾಖಲು ಮಾಡಿರುತ್ತೆ.

 

13

Kodihalli PS

 

Cr.No:0016/2022

(IPC 1860 U/s 341,143,147,148,504,323,326,354,114,427,506,379,149 )

 

02/02/2022

RIOTS - Others

 

Under Investigation

 

 

ದಿನಾಂಕ:02.02.2022 ರಂದು ಪಿರ್ಯಾದಿ ಸರೋಜಮ್ಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಅನಾರೋಗ್ಯದ ನಿಮಿತ್ತ ನನ್ನ ಮಗನಾದ ಮಣಿಕಂಠ ನನನ್ನು ನೋಡಲು ಬೆಂಗಳೂರಿನಿಂದ ಊರಿಗೆ ಬಂದ ಸಂದರ್ಭದಲ್ಲಿ ದಿನಾಂಕ:01.02.2022 ಮಂಗಳವಾರ ರಾತ್ರಿ ಸುಮಾರು 10.30 ಸಮಯದಲ್ಲಿ ನನ್ನ ಮಗನ ಮೇಲಿನ ಹಳೆಯ ದ್ವೇಷದಿಂದ ನಮ್ಮ ಮನೆಯ ಮುಂಭಾಗದಲ್ಲಿ ಏಕಾಏಕಿ ಅಡ್ಡಗಟ್ಟಿ ಇದೇ ಗ್ರಾಮದ ವಾಸಿಗಳಾದ ಮಹದೇವ ಬಿನ್ ಪೆರುಮಾಳ್ , ಸೂರಿ ಬಿನ್ ಪೆರುಮಾಳ್ ನು, ಕೊಟ್ರಾಜು , ಮಹದೇವಿ ಕೋಂ ಕೊಟ್ರಾಜು, ತಂಬಿ ಬಿನ್ ಲೇಟ್ ಕರಿಯಪ್ಪ, ಪೆರುಮಾಳು ಬಿನ್ ಕರಿಯಪ್ಪ, ಭಾಗ್ಯ ಕೋಂ ಬೈರಪ್ಪ, ಜೀನ ಬಿನ್ ತಂಬಿ, ಮಾದೇಶ ಬಿನ್ ತಂಬಿ, ಚಾಮಕ್ಕ , ನಿತ್ಯ, ಶಬರಿ ಮತ್ತು ಇತರರು ನನ್ನ ಮಗನನ್ನು ಮರ್ಡರ್ ಮಾಡುವ ಉದ್ದೇಶದಿಂದ ಮಹದೇವ ಮತ್ತು ಸೂರಿ ಮೊದಲೇ ತಂದಿದ್ದ ಮಚ್ಚು ಮತ್ತು ಕುಡ್ಲು ನಿಂದ ಮಣಿಯ ಕತ್ತನ್ನು ಕತ್ತರಿಸುವ ಉದ್ದೇಶದಿಂದ ಬೀಸಿದಾಗ ಗಲಾಟೆ ಶಬ್ದಕ್ಕೆ ಬಂದಿದ್ದ ಅವರ ತಮ್ಮನಾದ ಸುರೇಶನು ಮಣಿಗೆ ಅಡ್ಡ ಬಂದ ಕಾರಣ ಸುರೇಶನ ತಲೆಯ ಎಡ ಬಲಭಾಗವೆಲ್ಲಾ ರಕ್ತಾಯವಾಗಿದ್ದು, ತಲೆಯ ಎಡಭಾಗಕ್ಕೆ 4 ಹೊಲಿಗೆಯ ತೀವ್ರ ರಕ್ತಗಾಯ ಆಗಿರುತ್ತದೆ. ನಂತರ ಮಣಿಗೂ ಸಹ ಎಡಗೈ ಅಡ್ಡ ಕೊಟ್ಟಿದ್ದರಿಂದ ಎಡಗೈನ ಹೆಬ್ಬೆರಳು ಮತ್ತು ತೋರು ಬೆರಳಿಗೆ ರಕ್ತಗಾಯವಾಗಿರುತ್ತದೆ. ಒಂದು ವೇಳೆ ನನ್ನ ಕಿರಿಯ ಮಗ ಸುರೇಶ ಮದ್ಯಪ್ರವೇಶಿಸದೆ ಇದಿದ್ದರೆ ಮಣಿಯೂ ಜೀವಂತವಾಗಿ ಬದುಕುತ್ತಿರಲಿಲ್ಲ. ಕೊಟ್ರಾಜು ಮಹದೇವಿ ಮತ್ತು ತಂಬಿ ತಂದಿದ್ದ ದೊಣ್ಣೆಗಳಿಂದ ದೇಹದ ಮೇಲೆಲ್ಲಾ ಇಬ್ಬರಿಗೂ ಹೊಡೆದು ಮಾರಾಣಂತಿಕ ಹಲ್ಲೆ ಮಾಡಿರುತ್ತಾರೆ. ನಾನು ಗಾಬರಿಯಿಂದ ಚೀರಾಟ ಮಾಡಿ ನನ್ನ ಮಕ್ಕಳನ್ನು ರಕ್ಷಿಸಿಕೊಳ್ಳಲು ದಾವಿಸಿದ ಸಂದರ್ಭದಲ್ಲಿ ಹೊಡೆಯದಂತೆ ಪದೇ ಪದೇ ಬೇಡಿಕೊಂಡರು , ಭಾಗ್ಯ, ನಿತ್ಯಾ , ಶಬರಿ ಮಹದೇವಿ, ತಂಬಿ ಪೆರುಮಾಳ್ ಚಾಮಕ್ಕ ರವರುಗಳು ನನ್ನ ಜುಟ್ಟನ್ನು ಎಳೆದಾಡಿ ಕೆಳಕ್ಕೆ ಕೆಡವಿ ನನ್ನ ಸೀರೆಯನ್ನು ಎಳೆದು ಹಾಕಿ ನನ್ನನು ಅರೆ ಬೆತ್ತಲೆ ಮಾಡಿರುತ್ತಾರೆ. ಮತ್ತು ನನ್ನನು ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಪಡಿಸಿರುತ್ತಾರೆ. ನಂತರ ಜಗಳ ಬಿಡಿಸಲು ಬಂದ ನನ್ನ ಮಗಳಾದ ಶಶಿಕಲಾಳನ್ನು ನಿತ್ಯಾ , ಮಹದೇವ ಜುಟ್ಟನ್ನು ಎಳೆದಾಡಿ ಹೊಡೆದಿರುತ್ತಾರೆ. ನಂತರ ಭಾಗ್ಯ ಮಾದೇಶನಿಗೆ ದೊಣ್ಣೆ ನೀಡಿ ಇವರ ಅಮ್ಮ ಮತ್ತು ಮಕ್ಕಳನ್ನು ಅರೆಜೀವ ಬಿಡಬೇಡ ಸಾಯಿಸು ಎಂದು ಪ್ರೇರೇಪಿಸಿರುತ್ತಾಳೆ. ನಂತರ ಮಹದೇವ ಮತ್ತು ಸೂರಿ ನಮ್ಮ ಮನೆಯ ಕಿಟಕಿ ಗಾಜುಗಳನ್ನು ಮನೆಯ ಬಾಗಿಲುಗಳನ್ನು ದೊಣ್ಣೆಯಿಂದ ಮತ್ತು ದಿಂಡುಕಲ್ಲಿನಿಂದ ಎತ್ತಿಹಾಕಿ ಹಾನಿ ಮಾಡಿರುತ್ತಾರೆ. ನಂತರ ನನ್ನ ಮಗ ಮಣಿಕಂಠನ ಜೇಬಿನಲ್ಲಿದ್ದ ಸುಮಾರು 7000/- ರೂಪಾಯಿಗಳನ್ನು ಸಹ ಕದ್ದಿರುತ್ತಾರೆ. ಆದ್ದರಿಂದ ಖಾವಂದರಾದ ತಾವುಗಳು ನನ್ನ ಮಕ್ಕಳಾದ ಮಣಿಕಂಠ ಮತ್ತು ಸುರೇಶನನ್ನು ಮಾರಣಾಂತಿಕ ಹಲ್ಲೆ ಮಾಡಿ ರಕ್ತಗಾಯಪಡಿಸಿ ನನ್ನನು ಸಾರ್ವಜನಿಕ ರಸ್ತೆಯಲ್ಲಿ ಅರೆಬೆತ್ತಲು ಮಾಡಿ ಜಗಳ ಬಿಡಿಸಲು ಬಂದ ನನ್ನ ಮಗಳಾದ ಶಶಿಕಲಾಳನ್ನು ಹೊಡೆದು ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಮನೆಗೆ ಹಾನಿ ಉಂಟುಮಾಡಿ ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನಿನ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಹಾಗೂ ನನ್ನ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ತಡವಾಗಿ ಬಂದು ದೂರು ನೀಡುತ್ತಿದ್ದಾನೆಂದು ನೀಡಿದ ದೂರಿನ ಮೇರೆಗೆ.

 

14

Kodihalli PS

 

Cr.No:0017/2022

(IPC 1860 U/s 448,323,504,114,34 )

 

02/02/2022

CRIMINAL TRESPASS - House

 

Under Investigation

 

 

ದಿನಾಂಕ: 02.02.2022 ರಂದು ಸಂಜೆ 16.00 ಗಂಟೆಗೆ ಪಿರ್ಯಾದಿ ಮಹದೇವಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈಗ್ಗೆ 3 ವರ್ಷದಿಂದ ಸರೋಜಮ್ಮ ರವರ ಮಗ ಮಣಿ ಎಂಬುವನು ಕುಡಿದ ಅಮಲಿನಲ್ಲಿ ನಮ್ಮ ಮನೆ ಹತ್ತಿರ ಬಂದು ನಿನ್ನ ಗಂಡನಿಗೆ 2-3 ಲಕ್ಷ ಹಣ ಕೊಟ್ಟಿದ್ದೇನೆ ಬಾರೆ ಎಂದು ಪ್ರತಿ ದಿನ ನನ್ನ ಕೈ ಹಿಡಿದು ಎಳೆದು ನನಗೆ ಕೆಟ್ಟ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡುತ್ತಿರುತ್ತಾನೆ. ಅವರ ತಾಯಿ ಸರೋಜಮ್ಮ ರವರು ಮನಗ ಪರ ಬಂದು ಗಲಾಟೆ ಮಾಡುತ್ತಾಳೆ. ಇದಕ್ಕೆಲ್ಲ ಮಣೀ ಮಾವನ ಮಗ ಕೀತರ್ಿ ಬಿನ್ ರಾಮಕೃಷ್ಣ ಎಂಬುವನು ಅವರಿಗೆ ಸಪೋಟರ್್ ಮಾಡಿಕೊಂಡು ಜಗಳ ಬೀಳಿಸುತ್ತಾನೆದಿನಾಂಕ: 01.02.2022 ರಂದು ರಾತ್ರಿ 10.00 ಗಂಟೆಯ ಸಮಯದಲ್ಲಿ ಮಣಿ ಎಂಬುವನು ಕುಡಿದ ಅಮಲಿನಲ್ಲಿ ಅವರ ತಾಯಿ ಸರೋಜಮ್ಮ ಮಾಔನ ಮಗ ಕೀತರ್ಿ ತಮ್ಮ ಸುರೇಶ ಎಲ್ಲರನ್ನು ನಮ್ಮ ಮನೆಯ ಹತ್ತಿರ ಕರೆಸಿಕೊಂಡು 2-3 ಲಕ್ಷ ಹಣಕೊಡಬೇಕು ನಿನ್ನ ಗಂಡ ಎಂದು ಹೇಳಿ ನನಗೆ ಬಾಯಿಗೆ ಬಂದಂತೆ ಕೆಟ್ಟ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಎಲ್ಲರೂ ನನ್ನ ಬಟ್ಟೆ ಹಿಡಿದು ಧರಧರನೇ ಮನೆಯಿಂದ ಆಚೆಗೆ ಎಳೆದು ಕೈಗಳಿಂದ ನನ್ನ ಬಟ್ಟೆ ಎಳೆದು ಅರಿಹದು ಮೈ ಮೇಲೆಲ್ಲ ಕೈಗಳಿಂದ ಹೊಡೆದು ನೋವುಪಡಿಸಿದರು. ಮಣಿ ನನ್ನ ಕೈ ಬೆರಳು ಕೈಗೆ ಬಾಯಿಂದ ಕಚ್ಚಿ ಗಾಯ ಮಾಡಿದ್ದಾನೆ.ಎಲ್ಲರೂ ಎದೆ ತಲೆ ಮುಖದ ಮೇಲೆ ಕೈ  ಮಷ್ಟಿಯಿಂದ ಹೊಡೆದು ನೋವುಪಡಿಸಿದ್ದಾರೆ ಆದ್ದರಿಂದ ತಾವು  ಮೇಲ್ಕಂಡವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ನನಗೆ ನ್ಯಾಯಕೊಡಿಸಬೇಕೆಂದು ನೀಡಿದ ದೂರಿನ ಮೇರೆಗೆ.

 

15

M.K. Doddi PS

 

Cr.No:0011/2022

(IPC 1860 U/s 143,504,506,114,341,149 )

 

02/02/2022

CRIMINAL INTIMIDATION - Criminal Intimidation

 

Under Investigation

 

 

ದಿನಾಂಕ: 02.02.2022 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ. ನಾನು ಸಾಮಾಜಿಕ ಹಾಗೂ ಆರ್.ಟಿ. ಕಾರ್ಯಕರ್ತನಾಗಿರುತ್ತೇನೆ, ಹಾಗೂ ವ್ಯವಸಾಯವನ್ನು ಸಹ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಗ್ರಾಮದ ಹೈಸ್ಕೂಲ್ ಕಾಂಪೌಂಡ್ ನಿರ್ಮಾಣದ ಕಾಮಗಾರಿಯನ್ನು ಎನ್.ಎಂ.ಆರ್ ರೀತಿಯಲ್ಲಿ ಕಾರ್ಮಿಕರಿಂದ ಮಾಡಿಸದೆ ಬೇರೆ ಕಾರ್ಮಿಕರನ್ನು ಕರೆದುಕೊಂಡು ಮಾಡಿಸುತ್ತಿದ್ದಾರೆಂದು ನನಗೆ ತಿಳಿದು ಬಂದಿದ್ದರಿಂದ ನಾನು ದಿನಾಂಕ: 18.12.2021 ರಂದು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಸ್ಥಳಕ್ಕೆ ಹೋಗಿ ವಿಡಿಯೋ ಮಾಡಲು ಹೋದಾಗ ನಮ್ಮ ಗ್ರಾಮದ ಹೆಚ್.ಕೆ.ಸ್ವಾಮಿ, ಸರಸ್ಪತಿ, ಶೀಲಮ್ಮ, ಕೆಂಚಮ್ಮ, ಮರಿಯಮ್ಮ, ಭಾಗ್ಯ, ಚಿಕ್ಕತಾಯಮ್ಮ, ಶಿವರಾಜು ಇವರುಗಳು ನನ್ನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೋಳಿ ಮಕ್ಕಳು ತಾವು ಮಾಡಿಸುವುದಿಲ್ಲ ನಮ್ಮನ್ನೂ ಸಹ ಮಾಡಲು ಬಿಡುವುದಿಲ್ಲ ಲೋಪರ್ ನನ್ನ ಮಕ್ಕಳು ಎಂದು ಅವಾಚ್ಯ ಶಬ್ದಗಳಿಂದ ಇವರಿಗೆ ಕಾಲೋನಿ ಕಾಂತರಾಜ, ದಾಸಿಬುಡ್ಡನ ಮಗ ರಾಜು, ಹೆಚ್.ಕೆ.ಕುಮಾರ ರವರುಗಳು ಕುಮ್ಮಕ್ಕು ನೀಡಿ ನನ್ನನ್ನು ಹೊಡೆಯಲು ಬರುತ್ತಾರೆ ಆಗ ನಾನು ಇವರಿಂದ ತಪ್ಪಿಸಿಕೊಂಡು ನಮ್ಮ ತೋಟಕ್ಕೆ ಹೋದಾಗ ಅಲ್ಲಿಗೂ ಸಹ ಹಿಂಬಾಲಿಸಿಕೊಂಡು ಗಾರೆ ಮೇಸ್ತ್ರಿ ಹಾಗೂ ಎಲ್ಲರೂ ಬಂದು ಬಾರೊಲೋ ಬೋಳಿ ಮಗನೆ ನಿನ್ನನ್ನು ಮುಗಿಸುತ್ತೇವೆ ವಿಡಿಯೋ ಮಾಡಿಕೊ ಎಂದು ರಸ್ತೆಯಲ್ಲೇ ಬೈದು ನಾನು ಮನೆಗೆ ಹೋಗದಂತೆ ಅಡ್ಡಗಟ್ಟಿ ಹೊಡೆಯಲು ಪ್ರಯತ್ನಿಸಿರುತ್ತಾರೆ. ಇವರಿಂದ ನಾನು ತಪ್ಪಿಸಿಕೊಳ್ಳಲು ಬೇಲಿಯ ಪೊದೆಯಲ್ಲಿ ಅವಿತುಕೊಂಡು ತಪ್ಪಿಸಿಕೊಂಡಿರುತ್ತೇನೆ. ಆಗ ಇವರೆಲ್ಲರೂ ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಸುಳ್ಳು ಕೇಸನ್ನು ದಾಖಲು ಮಾಡಿಸಿರುತ್ತಾರೆ, ಹಿಂದೆ ನಾನು ಇವರ ಮೇಲೆ ಕೇಸನ್ನು ದಾಖಲು ಮಾಡಿದ್ದು ಕೇಸು ನ್ಯಾಯಾಲಯದಲ್ಲಿ ನಡೆಯುತ್ತಿರುತ್ತದೆ, ಕೇಸುಗಳನ್ನು ಗೆಲ್ಲಲು ಸಾಧ್ಯವಾಗದೆ ನನ್ನ ಮೇಲೆ ರೀತಿ ಸುಳ್ಳು ಕೇಸನ್ನು ನೀಡಿರುತ್ತಾರೆ ಆದ್ದರಿಂದ ಮೇಲ್ಕಂಡ ವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ಜಾಮೀನು ಪಡೆದು ದಿನ ತಡವಾಗಿ ಬಂದು ದೂರು ನೀಡಿರುತ್ತೇನೆಂತ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ.

16

Magadi PS

 

Cr.No:0025/2022

(CHILD LABOUR (PROHIBITION & REGULATION) ACT,1986 U/s 3,14(a) )

 

02/02/2022

CHILDREN ACT - Child Labour (Prohibition & Regulation) Act 1986

Under Investigation

 

 

ದಿನಾಂಕ.02.02.2022 ರಂದು ಸಂಜೆ 04.15 ಗಂಟೆಗೆ ಪಿರ್ಯಾದುದಾರರಾದ ರಾಜಶೇಖರಯ್ಯ.ಬಿ.ಎಂ ಕಾರ್ಮಿಕ ನಿರೀಕ್ಷಕರು, ಮಾಗಡಿ ವೃತ್ತ, ಮಾಗಡಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ.02.02.2022 ರಂದು ಮಾಗಡಿ ಟೌನ್ ವಾಸವೀ ದೇವಸ್ಥಾನದ ರಸ್ತೆ ವಾಸವಾಂಬ ಜ್ಯೂಯಲರ್ಸ್ ಮುಂಭಾಗ ಇರುವ ಶ್ರೀ ನಾಗರಾಜ ಹಾರ್ಡ್ ವೇರ್ & ಎಲೆಕ್ಟ್ರಿಕಲ್ಸ್ ಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿದಾಗ 13 ವರ್ಷ 05 ತಿಂಗಳ ವಯಸ್ಸಿನ ಮಾಸ್ಟರ್ ನಿತೀಶ್ ಎಂಬ ಬಾಲಕಾರ್ಮಿಕನು ಹೆಲ್ಪರ್ ಆಗಿ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು ಸದರಿ ಬಾಲಕನನ್ನು ರಕ್ಷಣೆ ಮಾಡಿ ಮಕ್ಕಳ ರಕ್ಷಣಾ ಸಮಿತಿ ಚನ್ನಪಟ್ಟಣ ಗೆ ಹಸ್ತಾಂತರಿಸಿದ್ದು ಬಾಲಕನನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲಾಗಿ, ಸದರಿ ಬಾಲಕನ ವರದಿಯು ಕೊರೋನಾ ಪಾಸಿಟೀವ್ ಆಗಿದ್ದು. ಇದರನ್ವಯ ಸಿ.ಡಬ್ಲೂ.ಸಿ ಅಧ್ಯಕ್ಷರನ್ನು ಸಂಪರ್ಕಿಸಿ ಅವರ ನಿದೇರ್ಶನ ಮೇರೆಗೆ ಹಾಗೂ ಬಾಲಕನ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರು ಹೋಂ ಐಸೋಲೇಷನ್ ಗಾಗಿ ಸೂಚಿಸಿರುವುದರಿಂದ ಬಾಲಕಾರ್ಮಿಕನನ್ನು ಶ್ರೀ ನಾಗರಾಜ ಹಾರ್ಡ್ ವೇರ್ & ಎಲೆಕ್ಟ್ರಿಕಲ್ಸ್ ಮಾಲೀಕರಾದ ಶ್ರೀ ಪಣ್ಣಲಾಲ್ ಬಿನ್ ಕಾನರಾಮ್, ರವರ ವಶಕ್ಕೆ ಒಪ್ಪಿಸಿ. ಸ್ಥಳದಲ್ಲಿ ನಿರೀಕ್ಷಣಾ ಟಿಪ್ಪಣಿ ಜಾರಿ ಮಾಡಲಾಗಿರುತ್ತದೆ. ಸದರಿ ಸಂಸ್ಥೆಯ ಮಾಲೀಕರ ವಿರುದ್ದ ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ಕಲಂ.03 ಮತ್ತು 14() ರನ್ವಯ ದೂರು ದಾಖಲಿಸಿ ಇತ್ಯಾದಿ ದೂರಿನ ಮೇರೆಗೆ ಪ್ರ..ವರದಿ.

17

Magadi PS

 

Cr.No:0026/2022

(KARNATAKA EXCISE ACT, 1965 U/s 15(A),32(3) )

 

02/02/2022

KARNATAKA STATE LOCAL ACTS - Karnataka Excise Act 1965

 

Under Investigation

 

 

ಮಾಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ .ಎಸ್. ಕೃಷ್ಣಪ್ಪ ಬಿ.ವಿ ರವರು ನೀಡಿದ ವರದಿ ಏನೆಂದರೆ. ದಿನಾಂಕ:02/02/2022 ರಂದು ಸಂಜೆ 6.30 ಗಂಟೆಯ ಸಮಯದಲ್ಲಿ ನಾನು 02 ಗ್ರಾಮ ಗಸ್ತಿನ ಸಿಬ್ಬಂದಿಯಾದ ಪಿಸಿ 117 ಈರಣ್ಣ ರವರ ಜೊತೆಯಲ್ಲಿ ಬೆಳಗುಂಬ, ಹರ್ತಿ ಕದರಯ್ಯನಪಾಳ್ಯ ಗ್ರಾಮದ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ ಬಾತ್ಮೀದಾರರಿಂದ ಬಂದ ಮಾಹಿತಿ ಏನೆಂದರೆ. ಮಾಗಡಿ-ಗುಡೇಮಾರನಹಳ್ಳಿ ಮುಖ್ಯ ರಸ್ತೆ ಸಿಡಗನಹಳ್ಳಿ ಗ್ರಾಮ ಬಳಿ ಇರುವ ಚಿಲ್ಲರೆ ಅಂಗಡಿಯೊಂದರಲ್ಲಿ ಅದರ ಮಾಲೀಕರಾದ ಭರತ್ ಎಂಬುವವರು ಯಾವುದೇ ಪರವಾನಿಗೆ ಇಲ್ಲದೆ ಮದ್ಯವನ್ನು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುತ್ತಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚಾಯ್ತಿದಾರರನ್ನು ಹರ್ತಿ ಗೇಟ್ ಗೆ ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಅವರು ದಾಳಿ ಮಾಡಲು ಒಪ್ಪಿಕೊಂಡ ಮೇರೆಗೆ ನಂತರ ನಾನು ಮತ್ತು ಪಿಸಿ 117 ಈರಣ್ಣ ಹಾಗೂ ಪಂಚರೊಂದಿಗೆ ಸಂಜೆ 7.00 ಗಂಟೆಗೆ ಮಾಗಡಿ-ಗುಡೇಮಾರನಹಳ್ಳಿ ಮುಖ್ಯ ರಸ್ತೆ ಸಿಡಗನಹಳ್ಳಿ ಗ್ರಾಮದ ಭರತ್ ರವರ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿ ಬಳಿ ಕೆಲವು ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿದ್ದು ನಾವು ದಾಳಿ ಮಾಡಲು ಸನ್ನದರಾಗುವಷ್ಟ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳ ಬರುವಿಕೆಯನ್ನು ಗಮನಿಸಿದ ಸಾರ್ವಜನಿಕರು ನಮ್ಮನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು ನಂತರ ಅಂಗಡಿ ಬಳಿ ಇದ್ದ ಭರತ್ ಎಂಬಾತನನ್ನು ವಶಕ್ಕೆ ಪಡೆದು ಪಂಚಾಯ್ತಿದಾರರ ಸಮಕ್ಷಮ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಕುಡಿದು ಬಿಸಾಡಿದ್ದ 180 ಎಂ.ಎಲ್ 04 ಓಡ್ಡ್ ಟವರಿನ್ ಖಾಲಿ ಪೌಚ್ ,90 ಎಂ.ಎಲ್ 06 ಓಡ್ಡ್ ಟವರಿನ್ ಖಾಲಿ ಪೌಚ್, 90 ಎಂ.ಎಲ್ 06 ಓರಿಜನಲ್ ಚಾಯ್ಸ್ ಖಾಲಿ ಮದ್ಯದ ಪೌಚ್ ಗಳನ್ನು ಮತ್ತು ತುಂಬಿರುವ 180 ಎಂ.ಎಲ್ 03  ಓರಿಜನಲ್ ಚಾಯ್ಸ್ ಮದ್ಯದ ಪೌಚ್ ಗಳನ್ನು ಮತ್ತು 05 ಪ್ಲಾಸ್ಟಿಕ್ ಲೋಟಗಳನ್ನು ಪಂಚಾಯ್ತಿದಾರರ ಸಮಕ್ಷಮ ವಿದ್ಯುತ್ ದೀಪದ ಬೆಳಕಿನಲ್ಲಿ ಸಂಜೆ 7.15 ರಿಂದ ಸಂಜೆ 7.45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ನಂತರ ಭರತ್ ರವರು ಮಧ್ಯಪಾನ ಮಾರಾಟ ಮಾಡಲು ಹಾಗೂ ಮಧ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳವಕಾಶ ಮಾಡಿಕೊಡಲು ನಿನ್ನ ಬಳಿ ಪರವಾನಿಗೆ ಇದೆಯೇ ಎಂದು ಕೇಳಲಾಗಿ ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ನುಡಿದುದರ ಮೇರೆಗೆ ನಂತರ ಆತನ ಹೆಸರು ವಿಳಾಸ ಕೇಳಲಾಗಿ ಭರತ್ ಬಿನ್ ರಂಗಣ್ಣ, 20 ವರ್ಷ, ಕುರುಬರು, ಚಿಲ್ಲರೆ ಅಂಗಡಿ ವ್ಯಾಪಾರ, ಸಿಡಗನಹಳ್ಳಿ ಗ್ರಾಮ, ಮಾಗಡಿ ತಾಲ್ಲೂಕು ಎಂಬುದಾಗಿ ತಿಳಿಸಿರುತ್ತಾನೆ.

       ನಂತರ ಅಂಗಡಿ ಮಾಲೀಕ ಭರತ್ ಎಂಬಾತನನ್ನು ಮತ್ತು ಅಮಾನತ್ತುಪಡಿಸಿಕೊಂಡ ಮಾಲುಗಳನ್ನು ವಶಕ್ಕೆ ತಗೆದುಕೊಂಡು ರಾತ್ರಿ 8.05 ಗಂಟೆಗೆ ಠಾಣೆಗೆ ಒಂದು ಮುಂದಿನ ಕ್ರಮಕ್ಕಾಗಿ ಠಾಣಾ ಎಸ್.ಹೆಚ್. ರವರಿಗೆ ರಾತ್ರಿ 8.30 ಗಂಟೆಗೆ ವರದಿಯನ್ನು ನೀಡಿದ ಮೇರೆಗೆ ಪ್ರ ವರದಿ.

 

18

Ramanagara CEN Crime PS

 

Cr.No:0005/2022

(INFORMATION TECHNOLOGY ACT 2008 U/s 66(C),66(D) ; IPC 1860 U/s 420 )

 

02/02/2022

CYBER CRIME - Information Technology Act 2000, 2009

 

Under Investigation

 

 

ದಿನಾಂಕ: 02.02.2022 ರಂದು ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಡಿ.ಕೆ.ಎಸ್ ಹಿಪ್ರೋಕ್ಯಾಂಪಸ್ ಶಾಲೆ, ಕೋಡಿಹಳ್ಳಿಯಲ್ಲಿ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದು ಮೈಸೂರು ಶಕ್ತಿನಗರದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು ಖಾತೆ ಸಂಖ್ಯೆ 2981101014067 ಹಾಗೂ .ಟಿ.ಎಂ. ಕಾರ್ಡ್ ಸಂಖ್ಯೆ 5089252981021421 ಆಗಿರುತ್ತದೆ. ದಿನಾಂಕ: 08.12.2021 ರಿಂದ ದಿನಾಂಕ: 30.01.2022 ರವರೆಗೆ ಒಟ್ಟು 3,94,000/- ರೂ ಹಣ ಕಡಿತವಾಗಿದ್ದು ತನ್ನ ಮೊಬೈಲ್ ಗೆ ಯಾವುದೇ ಮೆಸೇಜ್ ಗಳು ಬಂದಿರುವುದಿಲ್ಲಎಟಿಎಂ ಕಾರ್ಡ್ ನನ್ನ ಬಳಿಯೇ ಇದ್ದರೂ ಮೋಸದಿಂದ ನನ್ನ ಖಾತೆಯಿಂದ ಹಣ ಡ್ರಾ ಆಗಿದ್ದು ಡ್ರಾ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ

19

Ramanagara Town PS

Cr.No:0006/2022

(IPC 1860 U/s 00MP )

 

02/02/2022

MISSING PERSON - Man

 

Under Investigation

 

 

 

ದಿನಾಂಕ 02-02-2022 ರಂದು ಮದ್ಯಾಹ್ನ 03.00 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ನವ್ಯಶ್ರೀ ಕೋಂ ಸಿದ್ದರಾಜು ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ್ಗೆ 09 ವರ್ಷಗಳ ಹಿಂದೆ ರಾಮನಗರ ಟೌನ್ ಮಾದಾಪುರ ಗ್ರಾಮದ ರಾಮಕೃಷ್ಣಯ್ಯ ರವರ ಮಗನಾದ ಸಿದ್ಧರಾಜುರವರನ್ನು ಮದುವೆಯಾಗಿದ್ದು ನಮಗೆ 08 ವರ್ಷದ ಹೆಣ್ಣು ಮಗುವಿರುತ್ತೆ. ನನ್ನ ಗಂಡ ಸಿದ್ದರಾಜು ನಾಯಿ ಸಾಕಾಣಿಕೆ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡ ದಿನಾಂಕ 01-02-2022 ರಂದು ಮಧ್ಯಾಹ್ನ 03.30 ಗಂಟೆ ಸಮಯಕ್ಕೆ ಕೆಲಸದ ಮೇಲೆ ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೊಂಡಾ ಆಕ್ಟೀವಾ ಗಾಡಿಯನ್ನು ತೆಗೆದುಕೊಂಡು ಹೋದರು, ಮತ್ತೆ ಸಂಜೆ 07.00 ಗಂಟೆಗೆ  ಅವರ ಮೊಬೈಲ್ ನಿಂದ ನನ್ನ ಮೊಬೈಲ್ ಗೆ ಪೋನ್ ಮಾಡಿ ಸ್ವಲ್ಪ ಹೊತ್ತಿನ ನಂತರ ಮನೆಗೆ ಬರುತ್ತೇನೆಂದು ಹೇಳಿದರು ರಾತ್ರಿ ಸುಮಾರು 11.30 ಗಂಟೆಗೆ ಆದರೂ ಮನೆಗೆ ಬಂದಿರಲಿಲ್ಲ ಎಲ್ಲೋ ಕೆಲಸ ಮುಗಿಸಿಕೊಂಡು ಬರಬಹುದೆಂದು ನಾನು ಮಲಗಿಕೊಂಡಿದ್ದೆನು. ಮತ್ತೆ ದಿನ ದಿನಾಂಕ: 02-02-2022 ರಂದು ಬೆಳಿಗ್ಗೆ 06.30 ಗಂಟೆ ಸಮಯದಲ್ಲಿ ಮನೆಯಿಂದ ಹೊರಗಡೆ ಬಂದು ನೋಡಲಾಗಿ ನನ್ನ ಗಂಡ ತೆಗೆದುಕೊಂಡು ಹೋಗಿದ್ದ ಹೊಂಡಾ ಆಕ್ಟೀವಾ ಗಾಡಿಯು ನಮ್ಮ ಮನೆಯ ಪಕ್ಕದಲ್ಲಿರುವ ಮಾವಿನ ತೋಟದಲ್ಲಿ ನಿಂತಿದ್ದು ಅಲ್ಲಿ ನನ್ನ ಗಂಡ ಕಾಣಿಸಲಿಲ್ಲ  ಗಾಡಿಯಲ್ಲಿ ಕೀ ಬಿಟ್ಟಿದ್ದು ಕೀ ಯಿಂದ ಡಿಕ್ಕಿಯನ್ನು ತೆಗೆದಾಗ ಡಿಕ್ಕಿ ಒಳಗೆ ನನ್ನ ಗಂಡನ ಮೊಬೈಲ್ ಇದ್ದು ನಾನು ಗಾಬರಿಯಾಗಿ ಅಕ್ಕ-ಪಕ್ಕದವರನ್ನು ವಿಚಾರಿಸಿದಾಗ ಎಲ್ಲಿಯೂ ನನ್ನ ಗಂಡ ಕಾಣಿಸಲಿಲ್ಲ, ನಾನು ನಮ್ಮ ಸಂಬಂಧಿಕರ ಬಳಿ ವಿಚಾರಿಸಲಾಗಿ ಅಲ್ಲಿಗೂ ಸಹ ಅವರು ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ನನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ.

20

Ramanagara Traffic PS

 

Cr.No:0013/2022

(IPC 1860 U/s 279,337 )

 

02/02/2022

MOTOR VEHICLE ACCIDENTS NON-FATAL - Other Roads

 

Under Investigation

 

 

ದಿನಾಂಕ:-02.02.2022 ರಂದು  ಗಾಯಾಳು ಪ್ರಸನ್ನ ಎಸ್ ಕೆ ರವರು ನಾರಾಯಣ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಾನು ದಿನ ದಿನಾಂಕ:-02.02.2022 ರಂದು ಬೆಳಿಗ್ಗೆ ನನ್ನ ಬಾಬ್ತು ಕೆಎ-42 .ಬಿ-7297 ಹೊಂಡಾ ದ್ವಿ ಚಕ್ರ ವಾಹನದಲ್ಲಿ ರಾಮನಗರಕ್ಕೆ ಹೋಗಲು ಶ್ಯಾನುಭೋಗನಹಳ್ಳಿ ಇಂದ ಹೊರಟು  ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ಚನ್ನೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಬಳಿ ರಸ್ತೆಯ ಎಡಭಾಗದಲ್ಲಿ ರಾಮನಗರದ ಕಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-06 ಬಿ-5304 ಟಾಟಾ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ದ್ವಿ ಚಕ್ರ ವಾಹನದಿಂದ ಮೇಲಕ್ಕೆ ಎಗರಿ ಕೆಳಗೆ ಬಿದ್ದು ನನ್ನ ಬಲಗೈ, ಬಲಗಾಲಿಗೆ ತೀವ್ರ ಗಾಯಗಳಾಗಿರುತ್ತವೆ. ಸ್ಥಳದಲ್ಲಿದ್ದ ಸಾರ್ವಜನಿಕರು ನನ್ನನ್ನು ಉಪಚರಿಸಿ ಚಿಕಿತ್ಸೆಗಾಗಿ  ನಾರಾಯಣ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಅಪಘಾತಕ್ಕೀಡಾದ ಎರಡೂ ವಾಹನಗಳು ಅಪಘಾತದ ಸ್ಥಳದಲ್ಲಿದ್ದು, ಅಪಘಾತಕ್ಕೆ ಕೆಎ-06 ಬಿ-5304 ಟಾಟಾ ಗೂಡ್ಸ್ ವಾಹನ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಕಾರಣವಾಗಿದ್ದು  ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂಬುದು ಕೋರಿ ನೀಡಿದ ಹೇಳಿಕೆ ಮೇರೆಗೆ

 

21

Sathanoor PS

 

Cr.No:0026/2022

(INDIAN MOTOR VEHICLES ACT, 1988 U/s 192(A),177 ; PREVENTION OF CRUELTY TO ANIMALS ACT, 1960 U/s 11(1) (A) ; Transportation of Animal Act 1978 U/s 97 ; THE KARNATAKA PREVENTION OF SLAUGHTER AND PRESERVATION OF CATTLE ACT-2020 U/s 4,5,12 )

 

02/02/2022

KARNATAKA STATE LOCAL ACTS - Karnataka Prevention of Slaughter and Preservation of Cattle Act 2020

 

Under Investigation

 

 

ಪಿರ್ಯಾದಿ ಸಂಜಯ್ ಕುಲಕರ್ಣಿ ರವರು ದಿನಾಂಕ: 02.02.2022 ರಂದು ಬೆಳಿಗ್ಗೆ 04:30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ ಪಿರ್ಯಾದಿರವರು ಗೌಗ್ಯಾನ್ ಫೌಂಡೇಷನ್ ಎನ್ಜಿಓ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 02.02.2022 ರಂದು ಬೆಳಗಿನ ಜಾವ 04:20 ಗಂಟೆ ಸಮಯದಲ್ಲಿ ಈಚರ್ ಕ್ಯಾಂಟರ್ ವಾಹನ ನಂ KA-01 AD-5183 ವಾಹನದಲ್ಲಿ ಸುಮಾರು 26 ಜಾನುವಾರುಗಳನ್ನು ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಸಾಗಾಣೆ ಮಾಡುತ್ತಿದ್ದು ವಿಚಾರವನ್ನು ಪೊಲೀಸ್ ಕಂಟ್ರೋಲ್ ರೂಂ ಗೆ ತಿಳಿಸಿದ್ದು ಸಾತನೂರು ಪೊಲೀಸ್ ರವರು ಸಾತನೂರು ಸರ್ಕಲ್ ಬಳಿ ತಡೆದು ತಮ್ಮ ವಶಕ್ಕೆ ಪಡೆದಿರುತ್ತಾರೆ, ಅಕ್ರಮವಾಗಿ ಜಾನುವಾರುಗಳನ್ನು ಈಚರ್ ವಾಹನದಲ್ಲಿ ತುಂಬಿಕೊಂಡು  ಹೋಗುತ್ತಿದ್ದ  KA-01 AD-5183  ಹೀಚರ್ ಕ್ಯಾಂಟರ್ ವಾಹನದ ಮಾಲೀಕ ಹಾಗೂ ಚಾಲಕನ ಮೇಲೆ ಕಾನೂನು ರೀತಿ ಕ್ರಮಜರುಗಿಸಬೇಕೆಂದು ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

 

 

 

 

 

ದಿನಾಂಕ:01-02-2022 ರಂದು ರಾಮನಗರ ಜಿಲ್ಲೆಯಲ್ಲಿ ವರದಿಯಾದ ಅಪರಾಧ ಪ್ರಕರಣಗಳು

 

Sl. No

Police Station Name

FIR No

FIR Date

Crime Group - Crime Head

Stage of case

1

Channapatna East PS

 

Cr.No:0006/2022

(THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 U/s 4,5,8,12 ; Transportation of Animal Act 1978 U/s 97 )

01/02/2022

 

ANIMAL - The Karnataka Prevention of  Slaughter and Preservation of Cattle Ordinance 2020

 

Under Investigation

 

 

Brief Facts :

ದಿನಾಂಕ:01.02.2022 ರಂದು ಬೆಳಗಿನ ಜಾವ 4.00 ಗಂಟೆಯ ಸಮಯದಲ್ಲಿ ಠಾಣಾ ಎಎಸ್ಐ ಶ್ರೀ ಕಾವೇರಪ್ಪ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:31.01.2022 ರಂದು ನನಗೂ ಮತ್ತು ನನ್ನೊಂದಿಗೆ ಠಾಣಾ ಸಿಬ್ಬಂದಿ ಶ್ರೀ ಕರಿಯಪ್ಪ ಸಿಪಿಸಿ 319 ರವರನ್ನು ಠಾಣಾ ಸರಹದ್ದಿನ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು ಮತ್ತು ಕರಿಯಪ್ಪ ಸಿಪಿಸಿ 319 ರವರು ರಾತ್ರಿ 9.00 ಗಂಟೆಗೆ ಠಾಣಾ ಸರಹದ್ದಿನ ತಟ್ಟೆಕೆರೆ, ಕೆರೆಮೇಗಳದೊಡ್ಡಿ, ಬಡಾಮಕಾನ್, ಘನಿಮಿಯಾ ಮೊಹಲ್ಲಾ, ಎಂಜಿ ರಸ್ತೆ, ಎಂ.ಎಂ ಮೊಹಲ್ಲಾ, ಸಾತನೂರು ರಸ್ತೆ, ಶೇರು ಸರ್ಕಲ್ ಕಡೆಗಳಲ್ಲಿ ಗಸ್ತು ಮಾಡಿಕೊಂಡು ದಿನಾಂಕ:01.02.2022 ರಂದು ಬೆಳಗಿನ ಜಾವ ಸುಮಾರು 3.30 ಗಂಟೆಯ ಸಮಯದಲ್ಲಿ ಮೈಸೂರು ಬೆಂಗಳೂರು ರಸ್ತೆಯಲ್ಲಿ ಗಸ್ತು ಮಾಡಿಕೊಂಡು ಬಂದೆವು ಸಮಯದಲ್ಲಿ ಒಂದು ಅಶೋಕಾ ಲೇಲ್ಯಾಂಡ್ ವಾಹನ ಸಂಖ್ಯೆ ಕೆಎ-54-8611 ಬಡಾ ದೋಸ್ತ್ ವಾಹನವು ಮೈಸೂರು ಬೆಂಗಳೂರು ಮುಖ್ಯರಸ್ತೆಯಲ್ಲಿ ಹಿಂಭಾಗದ ಟಾರ್ಪಲ್ ಮುಚ್ಚಿಕೊಂಡು ಹೋಗುತ್ತಿದ್ದು ನಾವುಗಳು ಅನುಮಾನಗೊಂಡು ಸದರಿ ವಾಹನವನ್ನು ಹಿಂಭಾಲಿಸಿ ಮೈಸೂರು ಬೆಂಗಳೂರು ರಸ್ತೆಯ ಯಾರಬ್ನಗರ ಕ್ರಾಸ್ ಬಳಿ ನಿಲ್ಲಿಸಿ ವಾಹನದಲ್ಲಿ ಇಬ್ಬರನ್ನು ವಿಚಾರ ಮಾಡಲಾಗಿ ಚಾಲಕ ಹೆಸರು ಸಂದೀಪ್ ಬಿನ್ ವೆಂಕಟೇಶ್, 30 ವರ್ಷ, ವಕ್ಕಲಿಗರು, ವಾಸ:ಮಾಗೇನಹಳ್ಳಿ, ಕಿಕ್ಕೇರಿ ಹೋಬಳಿ, ಕೆಆರ್ ಪೇಟೆ ತಾಲ್ಲೂಕು, ಮಂಡ್ಯ ಮತ್ತು ಮತ್ತೊಬ್ಬ ಆಸಾಮಿ ಪ್ರಶಾಂತ್ ಬಿನ್ ನಾರಾಯಣಶೆಟ್ಟಿ, 24 ವರ್ಷ, ಶೆಟ್ಟರ ಜನಾಂಗ, ವಾಸ: ಸಕರ್ಾರಿ ಆಸ್ಪತ್ರೆಯ ಹಿಂಭಾಗ, ಕಿಕ್ಕೇರಿ ಟೌನ್, ಕೆಆರ್ಪೇಟೆ ತಾಲ್ಲೂಕು, ಮಂಡ್ಯ ಅಂತ ತಿಳಿಸಿದ್ದು ವಾಹನದಲ್ಲಿ ಏನು ಇದೆ ಎಂದು ಕೇಳಲಾಗಿ ಸರಿಯಾಗಿ ಉತ್ತರಿಸದೇ ಇದ್ದು, ನಂತರ ಠಾಣಾ ಸರಹದ್ದಿನಲ್ಲಿ ಬೀಟ್ ಕರ್ತವ್ಯದಲ್ಲಿ ಶ್ರೀ ರಂಜನ್ ಸಿಪಿಸಿ 581 ಮತ್ತು ಶ್ರೀ ದಯಾನಂದ ಸಿಪಿಸಿ 715 ರವರನ್ನು ಸ್ಥಳಕ್ಕೆ ಬರಮಾಡಿಕೊಂಡೆನು. ನಾನು ವಾಹನದ ಹಿಂಭಾಗದ ಟಾರ್ಪಲ್ ತೆರೆದು ನೊಡಲಾಗಿ ಸುಮಾರು 1 ವರ್ಷ ವಯಸ್ಸಿನ 15 ಕರುಗಳು ಕಂಡು ಬಂದಿದ್ದು, ಅದರಲ್ಲಿ 14 ಸೀಮೆ ಕರುಗಳು ಹಾಗೂ 1 ನಾಟಿ ಕರು ಇದ್ದು ಸದರಿ ವಾಹನದಲ್ಲಿ ಕ್ರೂರವಾಗಿ ಕಾಲುಗಳನ್ನು ಕಟ್ಟಿ ಒಂದರ ಮೇಲೊಂದು ಹಾಕಿ ಒತ್ತೊತ್ತಾಗಿ ತುಂಬಿ ಅವುಗಳಿಗೆ ಸರಿಯಾದ ಆಹಾರ ಮತ್ತು ಗಾಳಿ ವ್ಯವಸ್ಥೆಯಿಲ್ಲದೇ ಮೇಲ್ಕಂಡ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಮೇಲ್ಕಂಡವರನ್ನು ಎಲ್ಲಿಂದ ತಂದರೆಂಬ ಮಾಹಿತಿ ತಿಳಿಯಲಾಗಿ ಮಾಲೀಕರು ಬಿಡದಿಗೆ ತೆಗೆದುಕೊಂಡು ಹೋಗುವಂತೆ ತಿಳಿಸಿರುವುದಾಗಿ ಮಾಹಿತಿ ನೀಡಿರುತ್ತಾರೆ. ಸದರಿ ಆರೋಪಿಗಳೊಂದಿಗೆ ಮೇಲ್ಕಂಡ ಕೆಎ-54-8611 ವಾಹನದಲ್ಲಿರುವ ಕರುಗಳ ಸಮೇತ ಬೆಳಗಿನ ಜಾವ 4.00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿ ಹಾಜರುಪಡಿಸಿದ್ದು ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂದು ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಿದೆ.

 

2

Channapatna Rural PS

 

Cr.No:0018/2022

(IPC 1860 U/s 279,337 ; INDIAN MOTOR VEHICLES ACT, 1988 U/s 187 )

 

01/02/2022

 

MOTOR VEHICLE ACCIDENTS NON-FATAL - Other Roads

 

Under Investigation

 

 

Brief Facts :

ದಿನಾಂಕ:-01-02-2022 ರಂದು ಮದ್ಯಾಹ್ನ 02-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ. 31-01-2022 ರಂದು ಮಧ್ಯಾಹ್ನ ಸುಮಾರು 01-00 ಗಂಟೆಯಲ್ಲಿ ನಾನು ಮನೆಯಲ್ಲಿರುವಾಗ, ನಮ್ಮ ಊರಿನ ಸಂಜಯ್ ಕುಮಾರ್ ನನಗೆ ಪೋನ್ ಮಾಡಿ ನಿಮ್ಮ ತಂದೆ ರಾಮಜೋಗಯ್ಯರವರಿಗೆ ನಮ್ಮೂರಿನಿಂದ ದೊಡ್ಡಮಳೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕುಪೇಂದ್ರಪ್ಪರವರ ತೋಟದ ಬಳಿ ಅಪಘಾತವಾಗಿ ಗಾಯವಾಗಿರುತ್ತೆ ಬೇಗ ಬಾ ಎಂದರು. ತಕ್ಷಣ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ನಮ್ಮ ಅಪ್ಪ ಗಾಯಗೊಂಡು ರಸ್ತೆ ಅಂಚಿನಲ್ಲಿ ಕುಳಿತಿದ್ದು ನಾನು ಉಪಚರಿಸಿ ಅಲ್ಲಿದ್ದ ಸಂಜಯ್ ಕುಮಾರ್ಗೆ ಅಪಘಾತ ಹೇಗಾಯಿತು ಎಂದು ಕೇಳಿದಾಗ ಅವರು ಹೇಳಿದ್ದೇನೆಂದರೆ, ದಿನ ದಿನಾಂಕ. 31-01-2022 ರಂದು ಮಧ್ಯಾಹ್ನ ಸುಮಾರು 01-00 ಗಂಟೆಯಲ್ಲಿ ನಾನು ಟ್ರಾಕ್ಟರ್ ಚಾಲನೆ ಮಾಡಿಕೊಂಡು ದೊಡ್ಡಮಳೂರು ಕಡೆಗೆ ಹೋಗುತ್ತಿರುವಾಗ ದೊಡ್ಡಮಳೂರು ಕಡೆಂದ ರಸ್ತೆ ಎಡಭಾಗದಲ್ಲಿ ನಿಮ್ಮ ತಂದೆ ರಾಮಜೋಗಯ್ಯ ಊರಿಗೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದು, ಅವರಿಗೆ ದೊಡ್ಡಮಳೂರು ಕಡೆಯಿಂದ ಕೆಎ-51-ಇಆರ್-3325 ಮೋಟಾರ್ ಸೈಕಲ್ನ್ನು ಆದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಮ್ಮ ತಂದೆ ರಾಮಜೋಗಯ್ಯರವರ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದರ ಪರಿಣಾಮ ರಾಮಜೋಗಯ್ಯರವರು ರಸ್ತೆಯಲ್ಲಿ ಬಿದ್ದು ಗಾಯಗೊಂಡರು ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದನು ತಕ್ಣಣ ನಾನು ನನ್ನ ಟ್ರಾಕ್ಟರ್ ನಿಲ್ಲಿಸಿ ಹತ್ತಿರ ಹೋಗಿ ರಾಮಜೋಗಯ್ಯರವರನ್ನು ಉಪಚರಿಸಿ ನೋಡಿದಾಗ, ಅವರಿಗೆ ಮುಖಕ್ಕೆ, ತಲೆ, ಸೊಂಟಕ್ಕೆ, ಬಲ ತೋಡೆ ಹಾಗು ಇತರೆ ಕಡೆಗಳಲ್ಲಿ ಎಟಾಗಿ ಗಾಯಗಳಾಗಿದ್ದವು ನಾನು ರಾಮಜೋಗಯ್ಯರವರನ್ನು ಉಪಚರಿಸುತ್ತಿರುವಾಗ ಕೆಎ-51-ಇಆರ್-3325 ಮೋಟಾರ್ ಸೈಕಲ್ನ್ನು ಅದರ ಚಾಲಕ ಸ್ಟಾಟರ್್ ಮಾಡಿಕೊಂಡು ತಿಟ್ಟಮಾರನಹಳ್ಳಿ ಕಡೆಗೆ ಹೋರಟು ಹೋದನು ಎಂದರು. ನಾನು ಸಂಜಯ್ ಕುಮಾರ್ ಗಾಯಗೊಂಡಿದ್ದ ನನ್ನ ತಂದೆ ರಾಮಜೋಗಯ್ಯರವರನ್ನು ಯಾವುದೋ ವಾಹನದಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿರುತ್ತಿರುತ್ತೇನೆ. ನಮ್ಮ ತಂದೆಯನ್ನು ನೋಡಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ನಾನೇ ನೋಡಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದರಿಂದ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನಮ್ಮ ತಂದೆ ರಾಮಜೋಗಯ್ಯರವರಿಗೆ ಅಪಘಾತ ಮಾಡಿ ಹೊರಟು ಹೋದ ಕೆಎ-51-ಇಆರ್-3325 ಮೋಟಾರ್ ಸೈಕಲ್ ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರ..ವರದಿ.

 

3

Bidadi PS

Cr.No:0037/2022

(KARNATAKA EXCISE ACT, 1965 U/s 32,34 )

 

01/02/2022

 

KARNATAKA STATE LOCAL ACTS - Karnataka Excise Act 1965

 

Under Investigation

 

 

Brief Facts :

ದಿನಾಂಕ 01.02.2022 ರಂದು ಸಂಜೆ 6-45 ಗಂಟೆಗೆ  ಬಿಡದಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟ್ರ್ ಆರ್.ಪ್ರಕಾಶ್ ರವರು ನೀಡಿದ  ವರದಿಯ ಸಾರಾಂಶವೆನೆಂದರೆ  ದಿನಾಂಕ: 01/02/2022 ರಂದು ಸಂಜೆ 4-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಬಾತ್ಮಿದಾರರಿಂದ ಬಿಡದಿ ಹೋಬಳಿ, ಬಿಡದಿ ಕೈಗಾರಿಕಾ ಪ್ರದೇಶದ ಟೊಯೋಟ ಮೇನ್ ಗೇಟ್ ಬಳಿ ಪುಟ್ಟಪ್ಪ ಎಂಬುವವನು ತನ್ನ ಶ್ರೀ ಚಾಮುಂಡೇಶ್ವರಿ ಹೋಟೆಲ್ನಲ್ಲಿ ಅಕ್ರಮವಾಗಿ ಮಧ್ಯದ ಪೌಚ್ ಗಳನ್ನು  ಇಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾರೆ ಬಂದ ಖಚಿತ ಮಾಹಿತಿ ಮೇರೆಗೆ ನಾನು ಪಂಚಾಯಿತಿದಾರರಾಗಿ ಬಾನಂದೂರು ಗ್ರಾಮದ ಸಿದ್ದರಾಜು.ಬಿ.ಎಸ್ ಬಿನ್ ಸಿದ್ದರಾಮಯ್ಯ ಮತ್ತು ಸಿದ್ದರಾಜು.ಬಿ.ಸಿ ಬಿನ್ ಚಿಣ್ಣಯ್ಯ  ರವರನ್ನು ಬರಮಾಡಿಕೊಂಡು ಸದರಿಯವರಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಸಮಯದಲ್ಲಿ ಪಂಚಾಯಿತಿದಾರರಾಗಿ ಇರುವಂತೆ ತಿಳಿಸಿ ನೋಟೀಸ್ ಜಾರಿ ಮಾಡಿದೆನುಠಾಣಾ ಸಿಬ್ಬಂದಿಗಳಾದ ಪಿಸಿ-681 ಪ್ರದೀಪ ಮತ್ತು ಪಿಸಿ-821 ಹುಸೇನ್ ಸಾಬ್ ರವರನ್ನು ಜೊತೆಯಲ್ಲಿ ಕರೆದು ವಿಚಾರ ತಿಳಿಸಿ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಸಕರ್ಾರಿ ಜೀಪ್ ಕೆಎ-42-ಜಿ-1017 ಮಹಿಂದ್ರ ಬೊಲೆರೋ ಜೀಪ್ನಲ್ಲಿ ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ  ಸಂಜೆ 4-45 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಹೋಟೆಲ್ ಒಳಗಿದ್ದ ವ್ಯಕ್ತಿಗೆ ಎರಡು ಮೂರು ಜನರು ಹಣವನ್ನು ನೀಡಿ ಮದ್ಯದ ಪೌಚ್ಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು.ತಕ್ಷಣ ಪಂಚರ ಸಮಕ್ಷಮ ಮೇಲ್ಕಂಡ ಹೋಟೆಲ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಚಾಮುಂಡೇಶ್ವರಿ ಹೋಟೆಲ್ ಎಂಬ ಹೆಸರಿದ್ದು, ಸುಮಾರು 40*30 ಅಡಿ ವಿಸ್ತೀರ್ಣದ ತಗಡಿನ ಶೀಟಿನ ಹೋಟೆಲ್ ಆಗಿದ್ದು, ದಕ್ಷಿಣಕ್ಕೆ ಬಾಗಿಲಿರುತ್ತದೆ. ಹೋಟೆಲ್ ಒಳಗಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಿದಾಗ  ಪುಟ್ಟಪ್ಪ ಬಿನ್ ಲೇ|| ನಿಂಗೇಗೌಡ, 55 ವರ್ಷ, ಒಕ್ಕಲಿಗರು, ಹೋಟೆಲ್ ವ್ಯಾಪಾರ, ತೊರೆದೊಡ್ಡಿ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಎಂದು ತಿಳಿಸಿರುತ್ತಾರೆ. ಹೋಟೆಲ್ ಒಳಗೆ ಪರಿಶೀಲಿಸಲಾಗಿ ಟೇಬಲ್ ಹತ್ತಿರ ಎರಡು ರಟ್ಟಿನ ಬಾಕ್ಸ್ಗಳಲ್ಲಿ ಮದ್ಯದ ಪ್ಯಾಕೇಟ್ ದಾಸ್ತಾನು ಮಾಡಿರುತ್ತಾರೆ. ರಟ್ಟಿನ ಬಾಕ್ಸ್ನಿಂದ ಮದ್ಯದ ಪಾಕೇಟ್ಗಳನ್ನು ಹೊರಗಡೆ ತೆಗೆಯಿಸಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ 1] Old Tavern Whisky 180 ml ಎಂದು ಇರುವ 22 ಟೆಟ್ರಾ ಪ್ಯಾಕ್ಗಳು 2] Haywards Cheers Whisky 90 ml  ಎಂದು ಇರುವ 50 ಟೆಟ್ರಾ ಪ್ಯಾಕ್ಗಳು. ಇವುಗಳನ್ನು ಶೇಖರಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಪರವಾನಿಗೆ ಇದೆಯೇ ಎಂದು ಹೋಟೆಲ್ನಲ್ಲಿದ್ದ ಪುಟ್ಟಪ್ಪ ಬಿನ್ ಲೇ|| ನಿಂಗೇಗೌಡ ರವರನ್ನು ವಿಚಾರ ಮಾಡಿದಾಗ ತನ್ನ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಹಾಗೂ ಮೇಲ್ಕಂಡ ಮದ್ಯದ ಟೆಟ್ರಾ ಪ್ಯಾಕ್ಗಳನ್ನು ದಿನ ಸಂಜೆ 5-15 ಗಂಟೆಯಿಂದ ಸಂಜೆ 6-15 ಗಂಟೆಯವರೆಗೆ ಸ್ಥಳದಲ್ಲಿ ಲ್ಯಾಪ್ಟಾಪ್ ಮೂಲಕ ಮಹಜರ್ ಕ್ರಮ ಜರುಗಿಸಿ ಮುಂದಿನ ಕ್ರಮದ ಬಗ್ಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಹೋಟೆಲ್ನಲ್ಲಿ ಮೇಲ್ಕಂಡ ಮದ್ಯದ ಟೆಟ್ರಾ ಪ್ಯಾಕ್ಗಳನ್ನು ಆಕ್ರಮವಾಗಿ ಶೇಖರಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ಪುಟ್ಟಪ್ಪ ಹಾಗೂ  ಮಾಲುಗಳೊಂದಿಗೆ ನೀಡಿದ ವರದಿ ಪಡೆದುಕೊಂಡು  ಪ್ರಕರಣ ದಾಖಲಿಸಿರುತ್ತದೆ.

 

4

Channapatna East PS

 

Cr.No:0007/2022

(KARNATAKA POLICE ACT, 1963 U/s 87 )

 

01/02/2022

 

KARNATAKA POLICE ACT 1963 - Street Gambling (87)

 

Under Investigation

 

 

Brief Facts :

ದಿನಾಂಕ:01.02.2022 ರಂದು ಸಂಜೆ 4.10 ಗಂಟೆಯ ಸಮಯದಲ್ಲಿ ಚನ್ನಪಟ್ಟಣ ಪುರ ವೃತ್ತದ ಪೊಲೀಸ್ ವೃತ್ತನಿರೀಕ್ಷಕರವರಾದ ಶ್ರೀ.ದಿವಾಕರ್ ರವರು ಕೊಟ್ಟ ವರದಿಯ ಸಾರಾಂಶವೇನೆಂದರೆ, ದಿನ ದಿನಾಂಕ:-01.02.2022 ರಂದು ಮಧ್ಯಾಹ್ನ 2.00 ಗಂಟೆ ಸಮಯದಲ್ಲಿ ನಾನು ಕಛೇರಿಯಲ್ಲಿರುವಾಗ್ಗೆ ಚನ್ನಪಟ್ಟಣ ಟೌನ್, ಟಿಪ್ಪುನಗರದ ರೈಲ್ವೇ ಟ್ರಾಕ್ ಬಳಿ ಕುಂಭಾರಗುಂಡಿಗೆ ಸೇರಿದ ಖಾಲಿ ಜಾಗದಲ್ಲಿ ಯಾರೋ 4-5 ಜನರು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಬಾತ್ಮಿದಾರರು ಮಾಹಿತಿ ನೀಡಿದ್ದರ ಬಗ್ಗೆ ಮಾಹಿತಿ ತಿಳಿಸಿದ್ದು, ನಾನು ಕೂಡಲೇ ನನ್ನ ಕಛೇರಿಗೆ ಇಬ್ಬರು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿರುವವರ ಮೇಲೆ ದಾಳಿ ಕ್ರಮ ಜರುಗಿಸಿ ಕ್ರಮ ಕೈಗೊಳ್ಳಬೇಕಾಗಿರುತ್ತದೆ ಸಮಯದಲ್ಲಿ ಪಂಚರಾಗಿರಬೇಕೆಂದು ಕೋರಿ ನೋಟೀಸ್ ಅನ್ನು ಜಾರಿ ಮಾಡಿ ನಂತರ ಠಾಣಾ ಸಿಬ್ಬಂದಿಗಳಾದ ತವನಪ್ಪ ಪಿಸಿ-573, ಪಿಸಿ 325 ಕಾಶೀನಾಥ್, ಪಿಸಿ 715-ದಯಾನಂದ, ಗೌಡೇಶ ಸಿಪಿಸಿ 326 ಮತ್ತು ಜೀಪ್ ಚಾಲಕ ನಾಗರಾಜು ಎಹೆಚ್ಸಿ ರವರುಗಳನ್ನು ಕರೆಯಿಸಿ ಮೇಲ್ಕಂಡ ವಿಚಾರ ತಿಳಿಸಿದ್ದು, ನಂತರ ಸರ್ಕಾರಿ ಜೀಫ್ ಕೆಎ-42-ಜಿ-76 ಜೀಪಿನಲ್ಲಿ ಸಿಬ್ಬಂದಿ ಮತ್ತು ಪಂಚಾಯ್ತಿದಾರನ್ನು ಕರೆದುಕೊಂಡು ಮಧ್ಯಾಹ್ನ 2.30 ಗಂಟೆಯ ಸಮಯದಲ್ಲಿ ಟಿಪ್ಪುನಗರದ ರೈಲ್ವೇ ಟ್ರಾಕ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕುಂಭಾರಗುಂಡಿಗೆ ಸೇರಿಗೆ ಮಾವಿನ ತೋಪಿನಲ್ಲಿ ಸುಮಾರು 4-5 ಜನರು ಗುಂಪಾಗಿ ಕುಳಿತು ಹಣವನ್ನು ಪಣವಾಗಿ ಇಟ್ಟುಕೊಂಡು ಒಬ್ಬ ವ್ಯಕ್ತಿ 100/- ಅಂದರ್ ಮತ್ತೊಬ್ಬ ವ್ಯಕ್ತಿ 200/- ಬಾಹರ್ ಅಂತಾ ಅಂದರ್ ಬಾಹರ್ ಜೂಜಾಟ  ಆಡುತ್ತಿರುವುದು ಕಂಡು ಬಂದಿದ್ದು, ಅವರುಗಳನ್ನು ಪಂಚರ ಸಮಕ್ಷಮ ಸಿಬ್ಬಂದಿಗಳು ಹಾಗೂ ನಾನು ಸುತ್ತುವರೆದಿದ್ದು 5 ಜನರಲ್ಲಿ ಮೂರು ಜನರು ಓಡಿ ಹೋಗಿದ್ದು, ಹಿಡಿದುಕೊಂಡಿದ್ದ ಇಬ್ಬರ ಹೆಸರು ಮತ್ತು ವಿಳಾಸ ಕೇಳಲಾಗಿ 1) ರಾಜೇಂಧ್ರ ಬಿನ್ ಲೇಟ್ ನಿಂಗೇಗೌಡ, 46 ವರ್ಷ, ವಕ್ಕಲಿಗರು, ವಾಸ: ಎಲೇಕೇರಿ, ಚನ್ನಪಟ್ಟಣ ಟೌನ್ 2) ವಸೀಂಖಾನ್ ಬಿನ್ ಲೇಟ್ ಅನ್ವರ್ ಖಾನ್, 28 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ: ಟಿಪ್ಪುನಗರ ಚನ್ನಪಟ್ಟಣ ಟೌನ್ ಎಂದು ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ತಿಳಿಯಲಾಗಿ 1 ಮುಭಾರಕ್ ಷರೀಪ್ ಬಿನ್ ಫಯಾಜ್ ಷರೀಫ್, 20 ವರ್ಷ, ಮುಸ್ಲಿಂ ಜನಾಂಗ, ಬಡಮಕಾನ್, ಚನ್ನಪಟ್ಟಣ ಟೌನ್ 2) ಅನ್ನು ಬಿನ್ ರಿಯಾಜ್, 20 ವರ್ಷ, ಬೀಡಿ ಕಟ್ಟುವ ಕೆಲಸ, ಟಿಪ್ಪುನಗರ, ಚನ್ನಪಟ್ಟಣ ಟೌನ್ 3) ಅಪ್ಪಡ ಬಿನ್ ರಿಯಾಜ್, 24 ವರ್ಷ, ಬೀಡಿ ಕಟ್ಟುವ ಕೆಲಸ, ಟಿಪ್ಪುನಗರ, ಚನ್ನಪಟ್ಟಣ ಟೌನ್ ಅಂತ ತಿಳಿಯಿತು. ಸದರಿಯವರುಗಳು ಪಂಚರ ಸಮಕ್ಷಮ ಅಂಗಶೋಧನೆ ಮಾಡಲಾಗಿ ರಾಜೇಶ್ ಈತನ ಕೈಯಲ್ಲಿ 1500/- ರೂಗಳು ಹಾಗೂ ವಸೀಂ ಖಾನ್ ರವರ ಬಳಿ 1100/-ರೂಗಳಿದ್ದು ಅಂದರ್ ಬಾಹರ್ ಜೂಜಾಟ ಆಡಲು ಪಣವಾಗಿ ಇಟ್ಟಿದ್ದ 2340/-ರೂಗಳಿದ್ದು ಒಟ್ಟು 4940/-ರೂಗಳಿದ್ದು ಕೃತ್ಯಕ್ಕೆ ಉಪಯೋಗಿಸಿದ 52 ಇಸ್ವೀಟ್ ಎಲೆಗಳು ಹಾಗೂ ಎರಡು ನ್ಯೂಸ್ ಪೇಪರ್ ಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿಯೇ ಮಧ್ಯಾಹ್ನ 2.45 ಗಂಟೆಯಿಂದ ಮಧ್ಯಾಹ್ನ 3.45 ವರೆಗೆ ಲ್ಯಾಪ್ ಟಾಫ್ ನಲ್ಲಿ ಪಂಚನಾಮೆ ಜರುಗಿಸಿರುತ್ತದೆ. ಆರೋಪಿಗಳಿಗೆ ಸ್ಥಳದಲ್ಲೇ ನೋಟೀಸ್ ಜಾರಿ ಮಾಡಿ ಕಳುಹಿಸಿಕೊಟ್ಟಿರುತ್ತದೆ. ನಂತರ ಅಮಾನತ್ತುಪಡಿಸಿಕೊಂಡಿರುವ ಮಾಲು ಸಮೇತ ಸಂಜೆ 4.10 ಗಂಟೆಗೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿ ಕೊಟ್ಟ ವರದಿಯ ಮೇರೆಗೆ ಪ್ರಕರಣ ದಾಖಲಿಸಿದೆ.

 

5

Channapatna Traffic PS

 

Cr.No:0006/2022

(IPC 1860 U/s 279 )

 

01/02/2022

 

MOTOR VEHICLE ACCIDENTS NON-FATAL - National Highways

 

Under Investigation

 

 

Brief Facts :

ದಿನಾಂಕ 01.02.2022 ರಂದು ಕೆಲಸದ ನಿಮಿತ್ತ ಕೆಎ-09-ಜೆಡ್-8370 ಟೊಯೋಟಾ ಆಲ್ಟಿಸ್ ನಲ್ಲಿ ನಾನು ಮತ್ತು ವಿಶಾಲ್ ಆರ್ ನೊರೊನ್ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿರುವಾಗ ಚನ್ನಪಟ್ಟಣ ಗ್ರಾಮಾಂತರ ಸರಹದ್ದು ಮೈಸೂರು ಬೆಂಗಳೂರು ರಸ್ತೆಯ ಮತ್ತಿಕೆರೆ ಶೆಟ್ಟಿಹಳ್ಳಿ ಗ್ರಾಮದ ಹಂಪ್ಸ್ ನಿಂದ 30 ಅಡಿ ಅಂತರದಲ್ಲಿ ಸುಮಾರು ಸಂಜೆ 04.15 ಗಂಟೆಯಲ್ಲಿ ಶಾಲಾ ಮಕ್ಕಳು ರಸ್ತೆ ದಾಟುತ್ತಿದ್ದು ನನ್ನ ಕಾರನ್ನು ನಿಧಾನ ಮಾಡಿದಾಗ ಅದೇ ರಸ್ತೆಯಲ್ಲಿ ನನ್ನ ಹಿಂಬದಿ ಬಂದ ಕೆಎ-02-ಎಂಕೆ-0129 ನಂಬರಿನ ಸುಜುಕಿ ಸ್ವಿಪ್ಟ್ ಕಾರಿನ ಚಾಲಕ ಅತೀ ವೇಗ ಮತ್ತು ಅಜಾಗರುಕತೆಯಿಂದ ಬಂದು ನನ್ನ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಕಾರಿನ ಎಡಭಾಗದ ಬಂಪರ್ ಮತ್ತು ಕ್ಯಾಮರ ಜಖಂಗೊಡಿರುತ್ತದೆ ಆದರಿಂದ ನನ್ನ ಕಾರಿಗೆ ಅಪಘಾತ ಮಾಡಿದ ಕೆಎ-02-ಎಂಕೆ-0129 ಕಾರಿನ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ  ಕೇಳಿಕೊಳ್ಳುತ್ತೇನೆ

 

6

Kaggalipura PS

 

Cr.No:0032/2022

(IPC 1860 U/s 379 )

 

01/02/2022

 

THEFT - Of Automobiles - Of Three Wheelers

 

Under Investigation

 

 

Brief Facts :

ದಿನಾಂಕ 01/02/2022 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಸುಮಾರು 4 ತಿಂಗಳ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಸೆಕೆಂಡ್ ಷೋ ರೂಂ ನಲ್ಲಿ ಕೆಎ-41-1630 ಜಜಾಜ್ ಪ್ಯಾಸೇಜರ್ ರಾತ್ರಿ 10-00 ಗಂಟೆ ಪ್ರತಿ ದಿನದಂತೆ ನನ್ನ ಬಾಬ್ತು ಆಟೋವನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು ಬೆಳಗಿನಜಾವ 5-00 ಗಂಟೆಗೆ ಎದ್ದು ನೋಡಲಾಗಿ ಸ್ಥಳದಲ್ಲಿ ಆಟೋ ಇರಲಿಲ್ಲನಂತರ ನಾನು ನಮ್ಮ ಮನೆಯ ಸುತ್ತಮುತ್ತ ಹುಡುಕಾಡಿದರು ಪತ್ತೆಯಾಗಿರುವುದಿಲ್ಲನನ್ನ ಆಟೋವಿನ ಮೌಲ್ಯ 30.000 ಸಾವಿರ ರೂಪಾಯಿಗಳಾಗಿರುತ್ತದೆ. ಆದ್ದರಿಂದ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ದಿನ ತಡವಾಗಿ ಬಂದು ನೀಡಿರುತ್ತೇನೆ. ಆಟೋವನ್ನು ಕಳವು ಮಾಡಿಕೊಂಡು ಹೋಗಿರುವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ.

 

7

Kaggalipura PS

 

Cr.No:0033/2022

(IPC 1860 U/s 279,337 ; INDIAN MOTOR VEHICLES ACT, 1988 U/s 187 )

 

01/02/2022

 

MOTOR VEHICLE ACCIDENTS NON-FATAL - National Highways

 

Under Investigation

 

 

Brief Facts :

ದಿನಾಂಕ 01/02/2022 ರಂದು ಮಧ್ಯಾಹ್ನ 3-00 ಗಂಟೆಗೆ ಹೆಚ್.ಸಿ 327 ಶಿವಕುಮಾರ್ ರವರು ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಲಿಪ್ ಗೋವಿನಾಥನ್ ನಾಯರ್ ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದನ್ನು ಪರಿಶೀಲಿಸಲಾಗಿ ದಿನಾಂಕ 30/01/2022 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಪಿರ್ಯಾದಿ ದಿಲೀಪ್ ಗೋವಿನಾಥನ್ ನಾಯರ್ ಬೆಂಗಳೂರು-ಕನಕಪುರ ಮುಖ್ಯರಸ್ತೆ, ಕಗ್ಗಲೀಪುರ ಸಕರ್ಾರಿ ಆಸ್ಪತ್ರೆಯ ತೀರುವಿನ ಬಳಿ ವಾಕ್ ಮಾಡಿಕೊಂಡು ಹೋಗುತ್ತಿದ್ದಾಗ ಹಿಂಭಾಗದಿಂದ ಬರುತ್ತಿದ್ದ ನಾಲ್ಕು ಚಕ್ರದ ಯಾವುದೋ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಢಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿಗೆ ಬಲಗೈ ಮೂಳೆ  ಮತ್ತು ಎಡಕಾಲಿನ ಮೂಳೆ ಮುರಿದು ಮತ್ತು ಮುಖಕ್ಕೆ ಏಟುಬಿದ್ದು ರಕ್ತಗಾಯವಾಗಿದ್ದು, ಅಪಘಾತ ಮಾಡಿದ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿದ್ದು, ಗಾಯಗೊಂಡಿದ್ದ ಪಿರ್ಯಾದಿಯು ಶಂಕರ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅಪಘಾತ ಮಾಡಿ ಹೊರಟು ಹೋಗಿರುವ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ಮೇರೆಗೆ ಇತ್ಯಾದಿ.

 

8

Kanakapura Rural PS

 

Cr.No:0019/2022

(IPC 1860 U/s 379 )

 

01/02/2022

 

THEFT - Of Cultural - Others

 

Under Investigation

 

 

Brief Facts :

ದಿನಾಂಕ: 01.02.2022 ರಂದು ಪಿರ್ಯಾಧಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಟಿ. ಬೇಕುಪ್ಪೆ ಗ್ರಾಮದಲ್ಲಿ ವಾಸವಾಗಿದ್ದು, ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೆನೆ. ನಮ್ಮ ತಂದೆಗೆ ಸೇರಿದ ಜಮೀನು ಸರ್ವೆ ನಂ 121 ರಲ್ಲಿ 1 ಎಕರೆ 15 ಕುಂಟೆ ಜಮೀನು ಇದ್ದು, ಜಮೀನಿಗೆ ನಾವು ವ್ಯವಸಾಯ ಮಾಡಲು 5HP ವಿದ್ಯುತ್ ಮೋಟಾರನ್ನು ನಮ್ಮ ಜಮೀನಿನಲ್ಲಿ ಅಳವಡಿಸಿದ್ದು, ದಿನಾಂಕ: 30.01.2022 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ನನ್ನ ಮೋಟಾರನ್ನ ಪತ್ತೆ ಹಚ್ಚಿ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೆನೆ. ಇತ್ಯಾದಿಯಾಗಿ

 

9

Kanakapura Town PS

 

Cr.No:0009/2022

(IPC 1860 U/s 427,506,504,143,149,448,114 )

 

01/02/2022

 

 

Under Investigation

 

 

Brief Facts :

ದಿನಾಂಕ 01/02/2022 ರಂದು ಸಂಜೆ 7.00 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಕನಕಪುರ ಟೌನ್, ರಂಗರಾಜು ಬೀದಿ ವಾರ್ಡ್ ನಂಬರ್ 26 ರಲ್ಲಿ ಮನೆ ಸ್ವತ್ತು ಸಂಖ್ಯೆ 11/504/181 ಖಾತೆ ನಂಬರ್ 105/92 ಸ್ವತ್ತು ನನಗೆ ಹಾಗೂ ನನ್ನ ತಂಗಿಯಾದ ರೂಪರವರಿಗೆ ದಾನದ ಮುಖಾಂತರ ಬಂದಿರುತ್ತೆ, ಸ್ವತ್ತಿನ ಬಗ್ಗೆ ನಮ್ಮ ಹಾಗೂ ನನ್ನ ತಮ್ಮ ರವಿ ರವರ ಹೆಂಡತಿ ಲಿಂಗಮ್ಮ @ ಲೀಲಾ ರವರ ನಡುವೆ ನ್ಯಾಯಾಲದಲ್ಲಿ ದಾವೆ ಇದ್ದು, ನಾವು ಇಲ್ಲದೆ ಇರುವಾಗ ಲಿಂಗಮ್ಮ @ ಲೀಲಾ, ವೈಷ್ಣವಿ, ಕಾವ್ಯಶ್ರೀ, ಆಕೆಯ ತಂಗಿ ಇಂದ್ರ, ತಿಮ್ಮೇಶ ಹಾಗೂ ಕೆಲವು ಸ್ಥಳಿಯ ರೌಡಿಗಳ ಜೊತೆ  ನಮ್ಮ ಮನೆಯ ಗೇಟಿನ ಮತ್ತು ಮನೆಯ ಬೀಗವನ್ನು ಹೊಡೆದು ಒಳಗಡೆ ಅತಿಕ್ರಮ ಪ್ರವೇಶಮಾಡಿರುತ್ತಾರೆ ಮತ್ತು ಮನೆಯಲ್ಲಿದ್ದ ಮೂರು ಲಕ್ಷ ಹಣವನ್ನು ತೆಗೆದುಕೊಂಡಿರುತ್ತಾರೆ ವಿಚಾರ ತಿಳಿದು ದಿನಾಂಕ 31/01/2022 ರಂದು ಸಂಜೆ 5.30 ಸಮಯದಲ್ಲಿ ನಾವು ಸ್ಥಳಕ್ಕೆ ಹೋಗಿ  ಕೇಳಿದಾಗ ನಮ್ಮಗಳನ್ನು ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುತ್ತಾರೆ, ಇದಕ್ಕೆ ನಮ್ಮ ತಂಗಿ ರುಕ್ಷ್ಮಿಣಿ, ಆಕೆಯ ಗಂಡ ಶಿವರಾಜಶೆಟ್ಟಿ, ಸುನಿಲ್ ಕುಮಾರ್ ರವರು ಕುಮ್ಮಕ್ಕು ನೀಡಿರುತ್ತಾರೆ, ಆದ್ದರಿಂದ ಸದರಿಯವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ

 

10

Kodihalli PS

 

Cr.No:0014/2022

(IPC 1860 U/s 448,506,323,324,427,149 )

 

01/02/2022

 

RIOTS - Others

 

Under Investigation

 

 

Brief Facts :

ದಿನಾಂಕ: 01.02.2022 ರಂದು ಮಧ್ಯಾಹ್ನ 1.00 ಗಂಟೆಯಲ್ಲಿ ಪಿರ್ಯಾದಿ ಸರಿತಾ ಟಿ.ಪಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ: 31.01.2022 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ಜಯಮ್ಮ ಮತ್ತು ಅವರ ಗಂಡ ನಂಜುಂಡರಾದ ಹಾಗೂ ಅವರ ಮಕ್ಕಳದ ಅನು, ಸೋನು, ಕೋಮಲ, ದೀಪಿಕಾ ಎಂಬ ಆರು ಜನರು ನಾನು ಮನೆಯಲ್ಲಿ ಸುಮ್ಮನೆ ಮಗುಗೆ ಊಟ ಮಾಡಿಸುತ್ತಿದ್ದೆ ಆವಾಗ ಬಂದು ನಿನ್ನ ಗಂಡನನ್ನು ತೋರಿಸು ಎಲ್ಲಿ ಬಚ್ಚಿಟ್ಟು ಇದ್ದೀರಾ ಎಂದು ಬಯ್ಯುತ್ತಿದ್ದರು, ನಾನು ಮನೆಯಿಂದ ಆಚೆ ಬಂದಾಗ ನನ್ನ ಮಗಳನ್ನು ಸಾಯ್ಸುದ್ರಿ ನಿನ್ನು ನಿನ್ನ ಗಂಡ ಮಗನನ್ನು ಸಾಯುಸುತ್ತೀವಿ ಎಂಧು ನನ್ನನ್ನು ಎಳೆದುಕೊಂಡು ತಲೆಗೆ ಕ್ರಿಕೆಟ್ ವಿಕೆಟ್ ನ್ನು ತೆಗೆದುಕೊಂಡು ಜಯಮ್ಮ ನನ್ನ ತಲೆಗೆ ಒಡೆದರು. ಮತ್ತು ಅವರ ಗಂಡ ಮಕ್ಕಳು ನನ್ನ  ಮಗುಗೆ ಕಾಲಿನಿಂದ ಒದ್ದು ತಿಳಿದು ಮನೆಯಲ್ಲಿ ಇದ್ದ ವಸ್ತುಗಳನ್ನೆಲ್ಲಾ ಒಡೆದು ಹಾಕಿ ಹೋದರು. ಮೇಲಿನ ವಿಷಯವನ್ನು ಪರಿಸಗಣಿಸಿ ಕಾನೂನಿನ ರೀತಿ ಕ್ರಮಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆಂದು ನೀಡಿದ ದೂರಿನ ಮೇರೆಗೆ.

 

11

Kodihalli PS

 

Cr.No:0015/2022

(IPC 1860 U/s 114,323,354,504,506,34 )

 

01/02/2022

 

MOLESTATION - Private Place

 

Under Investigation

 

 

Brief Facts :

ದಿನಾಂಕ:01.02.2022 ರಂದು ರಾತ್ರಿ 07.30 ಗಂಟೆಗೆ ಪಿರ್ಯಾದುದಾರರಾದ ಕೋಡಿಹಳ್ಳಿ ಟೌನ ವಾಸಿ ಜಯಮ್ಮ ರವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶ ಏನೆಂದರೆ, ನಾನು ಮೇಲಿನ ವಿಳಾಸದಲ್ಲಿ ವಾಸವಿದ್ದು ಕೋಡಿಹಳ್ಳಿ ಬಸ್ ನಿಲ್ದಾಣದ ಪಕ್ಕದಲ್ಲಿ ರಸ್ತೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನಗೆ ಒಟ್ಟು 5 ಜನ ಹೆಣ್ಣು ಮಕ್ಕಳಿರುತ್ತಾರೆ. 1ನೇ ರಮ್ಯ, 2ನೇ ಅನು, 3ನೇ ಸೋನು, 4ನೇ ಮನು, 5ನೇ ಕೋಮಲ ಆಗಿರುತ್ತಾರೆ. ನನ್ನ ಮೊದಲನೇ ಮಗಳು ರಮ್ಯ ಬಿಇಡಿ ವ್ಯಾಸಂಗ ಮಾಡುತ್ತಿದ್ದಳು. ನನ್ನ ಉಳಿದ ಹೆಣ್ಣು ಮಕ್ಕಳು ಸಹ ಶಾಲೆಗೆ ಹೋಗುತ್ತಿರುತ್ತಾರೆ. ನಮ್ಮ ಗ್ರಾಮದ ಚೆನ್ನೇಗೌಡರವರ ಮಗ ಮುತ್ತರಾಜು ಎಂಬುವನು ನಮ್ಮ ಹೆಣ್ಣು ಮಕ್ಕಳು ದಾರಿಯಲ್ಲಿ ಹೋಗಬೇಕಾದರೆ ಆಗಾಗ್ಗೆ ಚುಡಾಯಿಸುತ್ತಿರುತ್ತಾನೆಂದು ನಮ್ಮ ಮಕ್ಕಳು ನನಗೆ ಹೇಳುತ್ತಿದ್ದರು. ನಾನು ಅವನಿಗೆ ಮದುವೆಯಾಗಿ ಮಕ್ಕಳಿವೆ ರೀತಿ ಮಾಡುವುದಿಲ್ಲವೆಂದು ಹೇಳುತ್ತಿದ್ದೆ, ಈತನು ನನ್ನ ಮೊದಲನೇ ಹೆಣ್ಣು ಮಗಳು ರಮ್ಯಳ ಫೊನ್ ನಂಬರ್ ತೆಗೆದುಕೊಂಡು ಪೋನ್ ಮಾಡಿ ಕೆಟ್ಟ ರೀತಿಯಲ್ಲಿ ಮಾತನಾಡಿದ್ದು ಇದನ್ನು ನನ್ನ ಮಗಳು ನನ್ನ ಬಳಿ ಹೇಳಿದ್ದು ನಾನು ಬಗ್ಗೆ  ಮುತ್ತರಾಜುವಿನ ತಂದೆ ಚನ್ನೇಗೌಡ ತಾಯಿ ರಮಾದೇವಿ, ಈತನ ಹೆಂಡತಿ ಸರಿತಾ ಮತ್ತು ಇವರ ಸಂಬಂಧಿ ತಿಗಳರಹೊಸಹಳ್ಳಿ ಗ್ರಾಮದ ಶಾಂತರಾಜು ರವರಿಗೆ ಮುತ್ತರಾಜು ನಮ್ಮ ಮಕ್ಕಳಿಗೆ ದಾರಿಯಲ್ಲಿ ಹೋಗುವಾಗ, ಮತ್ತು ಫೋನ್ ನಲ್ಲಿ ನನ್ನ ಮಗಳು ರಮ್ಯಳಿಗೆ ಕೆಟ್ಟದ್ದಾಗಿ ಮಾತನಾಡುತ್ತಿರುತ್ತಾನೆ ಈತನಿಗೆ ಬುದ್ದಿ ಹೇಳಿ ಎಂದು ಹೇಳಿದ್ದೆನು. ಇದೇ ವಿಚಾರವನ್ನು ಮುತ್ತರಾಜು ಇಟ್ಟುಕೊಂಡು ನಾನು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ನಮ್ಮ ಮಕ್ಕಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಿರುಕುಳ ಕೊಡುತ್ತಿದ್ದನು. ವಿಚಾರವನ್ನು ನಮ್ಮ ಗ್ರಾಮದ ಮುಖಂಡರಿಗೆ ಹೇಳಿ ಅರಿಂದಲೂ ಅವನಿಗೆ ಬುದ್ದಿವಾದ ಹೇಳಿಸಿದೆ ಅವನು ನನ್ನ ಭಾವ ಕೆಇಬಿ ಯಲ್ಲಿರುವ ಶಾಂತರಾಜು ನಾನು ಏನೇ ಮಾಡಿದರೂ ಸಪೋರ್ಟ ಮಾಡುತ್ತಾನೆ ನೀನು ಏನು ಮಾಡುವುದಕ್ಕೆ ಆಗುವುದಿಲ್ಲವೆಂದು ಪದೇ ಪದೇ ನಮ್ಮ ಹೆಣ್ಣು ಮಕ್ಕಳಿಗೆ ತೊಂದರೆ ನೀಡುತ್ತಿದ್ದನು. ನಾನು ಇವರ ಮನೆಯವರಿಗೆ ಎಷ್ಟೇ ಹೇಳಿದರು ಅವನು ಗಂಡಸು ಏನು ಬೇಕಾದರು ಮಾಡುತ್ತಾನೆ ನೀನು ಏನು ಕೇಳಬೇಡ ಸುಮ್ಮನಿರು ನಿನಗೆ ಗಂಡು ಮಕ್ಕಳಿಲ್ಲ ಎಲ್ಲರೂ ಹೆಣ್ಣು ಮಕ್ಕಳು ಎಂದು ಹಂಗಿಸುತ್ತಿದ್ದರು. ನಾನು ನಮ್ಮ ಮನೆಯಲ್ಲಿ ಎಲ್ಲರೂ ಹೆಣ್ಣು ಮಕ್ಕಳು ಇರುವುದು ಎಂದು ಮಾನ ಮರ್ಯಾದೆಗೆ ಅಂಜಿಕೊಂಡು ಸುಮ್ಮನಾಗಿದ್ದೆ. ಮುತ್ತರಾಜು ಪದೇ ಪದೆ ನನ್ನ ಮಗಳು ರಮ್ಯಳನ್ನು ಹೋದ ಬಂದಲ್ಲಿ ನನ್ನನ್ನು ಮದುವೆಯಾಗು ಇಲ್ಲದಿದ್ದರೆ ನಿಮ್ಮ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ನೀನು ಯಾರನ್ನು ಮದುವೆಯಾಗುತ್ತೀಯಾ ನೋಡಿಕೊಳ್ಳುತ್ತೇನೆ, ಎಂದು ಕೂಗಾಡಿ ಇದಕ್ಕೆ ನಮ್ಮ ಮನೆಯವರ ಸಪೋರ್ಟ ಅಲ್ಲದೆ ಏನೇ ಆದರು ನನ್ನ ಬೆಂಬಲಕ್ಕೆ ನ್ನನ ಭಾವ ಶಾಂತರಾಜು ಇದ್ದಾನೆ ಎಂದು ಹೇಳಿಕೊಳ್ಳುತ್ತಿದ್ದನು. ಈಗ್ಗೆ ಸುಮಾರು ಒಂದುವರೆ ತಿಂಗಳಲ್ಲಿ ನಾವು ಮನೆಯಿಲ್ಲಿ ಇಲ್ಲದಿದ್ದಾಗ ನನ್ನ ಮೊದಲನೇ ಮಗಳು ರಮ್ಯ, ಮುತ್ತರಾಜು ಮತ್ತು ಈತನ ಮನೆಯವರು ನಮಗೆ ಕೊಡುತ್ತಿದ್ದ ಕಿರುಕುಳ ತಾಳಲಾರದೆ ಮನನೊಂದು ನೇಣು ಹಾಕಿಕೊಂಡು ಮೃತಪಟ್ಟಳು. ನಾವು ಹೆಣ್ಣು ಮಕ್ಕಳೊಂದಿರುವ ಸಂಸಾರ ನಮ್ಮದು ಮಾನ ಮರ್ಯಾದೆಗೆ ಅಂಜಿ ನಾವು ಯಾರಿಗೂ ಹೇಳಲಿಲ್ಲ ಉಳಿದ ಹೆಣ್ಣು ಮಕ್ಕಳ ಮದುವೆಗೆ ಅಡ್ಡಿಯಾಗಬಹುದೆಂದು ಸುಮ್ಮನಾಗಿದ್ದೆವು. ದಿನಾಂಕ: 31.01.2021 ರಂದು ಸಂಜೆ ಸುಮಾರು 5.30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಗಂಡ ನಂಜುಂಡ ಮತ್ತು ಮಕ್ಕಳು ಮನೆಯಲ್ಲಿ ಇರುವಾಗ್ಗೆ ಮುತ್ತರಾಜು ಈತನ ಹೆಂಡತಿ ಸರಿತಾ, ತಂದೆ ಚನ್ನೇಗೌಡ ಹಾಗೂ ತಾಯಿ ರಮಾದೇವಿ ರವರುಗಳು ಮನೆಯ ಹತ್ತಿರ ಬಂದು ಏಕಾ ಏಕಿ ಏನೇ ನಿನ್ನ ಮಗಳ ಸಾವಿಗೆ ನಾವೇ ಕಾರಣ ಏನು ಮಾಡಿಕೊಳ್ಳುತ್ತೀಯಾ ನೀನು ನಮ್ಮ ಹತ್ತಿರ ಏನು ಕಿತ್ತುಕೊಳ್ಳುವುದಕ್ಕೆ ಆಗುತ್ತೆ ಎಂದು ನನಗೆ ಮತ್ತು ನನ್ನ ಮಕ್ಕಳಿಗೆ ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ಬೈದು ಮುತ್ತರಾಜು ನನ್ನ ಕೈ, ತಲೆ ಜುಟ್ಟು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ನೋವು ಪಡಿಸಿದ ಬಿಡಿಸಲು ಬಂದ ನನ್ನ ಮಕ್ಕಳಿಗೆ ಸರಿತಾ ಮತ್ತು ರಮಾದೇವಿ ಕೈಗಳಿಂದ ಹೊಡೆದರು ನನ್ನ ಗಂಡ ನಂಜುಂಡನನ್ನು ಚನ್ನೇಗೌಡ ತಬ್ಬಿ ಹಿಡಿದು ಉರುಳಾಡಿಸಿಕೊಂಡು ಹೊಡೆಯುತ್ತಿದ್ದರು. ಅಷ್ಟರಲ್ಲಿ ಇದನ್ನು ನೋಡಿದ ನಮ್ಮದ ಗ್ರಾಮ ಮುತ್ತರಾಜು, ದೇವರಾಜು ಹಾಗೂ ಇತರರು ಜಗಳ ಬಿಡಿಸಿದರು ಮುತ್ತರಾಜು, ನೀನು ಎಲ್ಲೇ ಕಂಪ್ಲೇಂಟ್ ಕೊಟ್ಟರು ನಿಮ್ಮ ವಂಶವನ್ನು ಬಿಡುವುದಿಲ್ಲಿ ಈಗ ಒಬ್ಬ ಮಗಳು ಹೋಗಿದ್ದಾಳೆ ನೋಡು ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದನು. ಏನೇ ಆದರು ನನ್ನ ಭಾವ ಶಾಂತರಾಜು ನಮ್ಮ ಸಪೋರ್ಟಗೆ ಇದ್ದಾನೆ ಎಂದು ಹೇಳಿ ನಿಮ್ಮನ್ನು ಈಗೆ ಬಿಡುವುದಿಲ್ಲ ನರಕ ತೋರಿಸುತ್ತೇವೆಂದು ಹೇಳಿ ಹೋದರು. ಆದ್ದರಿಂದ ತಾವುಗಳು ತಿಗಳರಹೊಸಳ್ಳಿ ಗ್ರಾಮದ ಶಾಂತರಾಜುವಿನ ಕುಮ್ಮಕ್ಕಿನಿಂದ ಮುತ್ತರಾಜು, ಸರಿತಾ, ಚನ್ನೇಗೌಡ ಮತ್ತು ರಮಾದೇವಿ ರವರುಗಳು ನಮ್ಮ ಮೇಲೆ ಗಲಾಟೆ ಮಾಡಿ ತೊಂದರೆ ನೀಡಿರುತ್ತಾರೆ, ಆದ್ದರಿಂದ ತಾವುಗಳು ಮೇಲ್ಕಂಡವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇನೆ.

 

12

Kudur PS

 

Cr.No:0045/2022

(IPC 1860 U/s 379 )

 

01/02/2022

 

THEFT - Of Cattle

 

Under Investigation

 

 

Brief Facts :

ಪಿರ್ಯಾದಿ ದಿನಾಂಕ 01/02/2022 ರಂದು ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 25.01.2022 ರಂದು ಗದ್ದಿಗೆ ಮಠ ಕ್ರಾಸ್, ಜೇಟ್ಸ್ ಎದುರು ಇರುವ ನಮ್ಮ ತೋಟದಲ್ಲಿ ಸುಮಾರು 3 ಹಸುಗಳನ್ನು ಸಂಜೆ 6-00 ಗಂಟೆಗೆ ಕಟ್ಟಿದ್ದು ದಿನಾಂಕ 26/01/2022 ರಂದು ಬೆಳಗ್ಗೆ 6-00 ಗಂಟೆಗೆ ಎದ್ದು ನೋಡಲಾಗಿ 6 ಸೀಮೆ ಹಸುಗಳಲ್ಲಿ 2 ಸೀಮೆ ಹಸು ಮತ್ತು ಒಂದು ಕರು ಕಾಣಿಯಾಗಿದ್ದು, 15 ವರ್ಷದಿಂದ ನಾವು ಹಸುವನ್ನು ಸಾಕುತ್ತಿದ್ದವು ಯಾವಾಗಲೂ ರೀತಿ ಆಗಿರಲಿಲ್ಲಾ ನಾನು ಮತ್ತು ನಮ್ಮ ಮನೆಯವರು  ಹಾಗೂ ತೋಟ ನೋಡಿಕೊಳ್ಳುತ್ತಿದ್ದವರು ಸೇರಿ ನಮ್ಮ ತೋಟದಲ್ಲೇ ಎಲ್ಲೋ ಹೋಗಿರಬುದೆಂದು ಅಲ್ಲೇ ಹುಡಕಾಡಿದವು ಆದರೇ ಹಸುವು ಸಿಗದ ಕಾರಣ ದಿನದಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಸದರಿ 06 ಸೀಮೆ ಹಸುಗಳಿದ್ದು ಅವುಗಳಲ್ಲಿ 2 ಹಸುಗಳು ಮತ್ತು ಒಂದು 2.1/2 ವರ್ಷದ ಹೆಣ್ಣು ಕರುವನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಹಸು ಮತ್ತು ಕರುವಿನ ಅಂದಾಜು ಮೌಲ್ಯ 115000 ರೂ ಆಗಿದ್ದು, ಸದರಿ ಹಸುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಪತ್ತೆ ಮಾಡಿ ನಮ್ಮ ಹಸುವನ್ನು ನಮಗೆ ಕೊಡಿಸಿ, ಕಳ್ಳತನ ಮಾಡಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಇತ್ಯಾದಿಯಾಗಿ.

 

13

Kudur PS

 

Cr.No:0046/2022

(KARNATAKA EXCISE ACT, 1965 U/s 15(A),32(3) )

 

01/02/2022

 

KARNATAKA STATE LOCAL ACTS - Karnataka Excise Act 1965

 

Under Investigation

 

 

Brief Facts :

ಪಿರ್ಯಾದಿ ದಿನಾಂಕ 01/02/2022 ರಂದು ಮಧ್ಯಾಹ್ನ 2-50 ಗಂಟೆಗೆ ಹೆಚ್ ಸಿ-430 ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನ ದಿನಾಂಕ: 01.02.2022 ರಂದು ಬೆಳಗ್ಗೆ ನನಗೆ ಕುದೂರು ಹೋಬಳಿ ಕಡೆ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾನು ಮತ್ತು ಪಿ.ಸಿ 556 ಚೇತನ್ ರವರು ಗಸ್ತು ಕರ್ತವ್ಯದಲ್ಲಿದ್ದು, ಮಧ್ಯಾಹ್ನ 12.20 ಗಂಟೆಗೆ ಗಸ್ತು ನಿರ್ವಹಿಸಿಕೊಂಡು ವಾಜರಹಳ್ಳಿ ಗ್ರಾಮಕ್ಕೆ ಹೋದಾಗ, ಅಲ್ಲಿ ಒಂದು ಮನೆ ಮುಂಭಾಗ ಇದ್ದ ಸುಮಾರು 3-4 ಜನರು ಸಮವಸ್ತ್ರದಲ್ಲಿದ್ದ ನಮ್ಮನ್ನು  ನೋಡಿ, ಅಲ್ಲಿಂದ ಓಡಿ ಹೋಗಿರುತ್ತಾರೆ, ನಾವು ಅನುಮಾನಗೊಂಡು ಮನೆಯ ಹತ್ತಿರಕ್ಕೆ ಹೋಗಿ ನೋಡಲಾಗಿ, ಮನೆ ಮುಂಭಾಗದ ಸಾರ್ವಜನಿಕ ಸ್ತಳದಲ್ಲಿ ಮಧ್ಯದ ಪೌಚ್ ಗಳು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳು ಇದ್ದು, ಸ್ಥಳದಲ್ಲಿಯೇ ಇದ್ದ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ವಿಚಾರ ಮಾಡಲಾಗಿ, ಆತ ಇಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿರುತ್ತಾನೆ, ಸ್ಥಳದಲ್ಲಿದ್ದ ಮಧ್ಯವನ್ನು ಅಮಾನತ್ತು ಪಡಿಸಿ ಕೊಳ್ಳಬೇಕಾಗಿರುವುದರಿಂದ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ಕೇಸಿನ ವಿಚಾರವನ್ನು ತಿಳಿಸಿ, ಸ್ತಳದಲ್ಲಿದ್ದ ಆಸಾಮಿಯ ಹೆಸರು ವಿಳಾಸವನ್ನು ಪಂಚರ ಸಮಕ್ಷಮ ವಿಚಾರ ಮಾಡಲಾಗಿ, ದಿವಾಕರ ಬಿನ್ ಶ್ರೀನಿವಾಸ್, 21 ವರ್ಷ, ಕುಂಬಾರ ಶೆಟ್ಟರು, ವಾಸ: ಕಲ್ಯಾ ಗೇಟ್ ಹತ್ತಿರ, ಮಾಗಡಿ ಟೌನ್, ರಾಮನಗರ ಜಿಲ್ಲೆ ಸ್ವಂತ: ಕಂಬದಳ್ಳಿ ಗ್ರಾಮ, ಬಸರಾಳು ಹೋಬಳಿ, ಮಂಡ್ಯಾ ತಾ ಮತ್ತು ಜಿಲ್ಲೆ ಎಂದು ತಿಳಿಸಿದ್ದು, ಆಸಾಮಿಗೆ ಸದರಿ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪರವಾನಿಗೆಯನ್ನು ಹಾಜರ್ ಪಡಿಸುವಂತೆ ತಿಳಿಸಿದ್ದು, ಸದರಿ ಆಸಾಮಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿರುತ್ತಾನೆ. ಸದರಿ ಸ್ತಳವು ವಾಜರಹಳ್ಳಿ ವಾಸಿ ರಂಗನಾಥ ಎಂಬುವವರ ಮನೆ ಮುಂದಿನ ಸಾರ್ವಜನಿಕ ಸ್ತಳವಾಗಿರುತ್ತೆ. ನಂತರ ಸ್ಥಳದಲ್ಲಿದ್ದ 3 ಖಾಲಿ 90 ಎಂ.ಎಲ್ ಒರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು, 90 ಎಂ.ಎಲ್ 4 ಒರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು ಹಾಗೂ 3 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಪಂಚರ ಸಮಕ್ಷಮ ಮಧ್ಯಾಹ್ನ 12.30 ಗಂಟೆಯಿಂದ ಮಧ್ಯಾಹ್ನ 1.10 ಗಂಟೆ ವರೆಗೆ ಕೈಗೊಂಡು, ಆರೋಪಿ ಮತ್ತು ಮಾಲು ಸಮೇತ ಠಾಣೆಗೆ ಬಂದು 2.00 ಗಂಟೆಗೆ ವರದಿಯನ್ನು ನೀಡಿರುತ್ತೇನೆ ಇತ್ಯಾದಿಯಾಗಿ.

 

14

M.K. Doddi PS

 

Cr.No:0010/2022

(IPC 1860 U/s 379 )

 

01/02/2022

 

THEFT - Of Cultural - Others

 

Under Investigation

 

 

Brief Facts :

ದಿನಾಂಕ 01.02.2022 ರಂದು ಫಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ ಫಿರ್ಯಾದಿದಾರರು ಹುಲುವಾಡಿ ಗ್ರಾಮದ ಕಮಲಮ್ಮ ಬಿನ್ ಗಂಗಾದರಪ್ಪ ರವರಿಗೆ ಸೇರಿದ ಜಮೀನನ್ನು ನೋಡಿಕೊಳ್ಳುತ್ತಿದ್ದು ನೀರಿನ ಅನುಕೂಲಕ್ಕಾಗಿ ಬೋರ್ವೆಲ್ ಹಾಕಿಸಿದ್ದು ದಿನಾಂಕ 28.01.2022 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಬೋರ್ವೆಲ್ನ ಪ್ಯಾನೆಲ್ ಬೋರ್ಡ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾವು ಅಕ್ಕಪಕ್ಕದಲ್ಲಿ ಹುಡುಕಾಡಿ ಎಲ್ಲೂ ಪತ್ತೆಯಾಗದ ಕಾರಣ ದಿನ ಬಂದು ತಡವಾಗಿ ದೂರನ್ನು ನೀಡುತ್ತಿರುತ್ತೇನೆ. ಇದರ ಅಂದಾಜು ಮೌಲ್ಯ 30,000/- ರೂ. ಗಳಾಗಿರುತ್ತದೆ. ಆದ್ದರಿಂದ ತಾವುಗಳು ಪ್ಯಾನೆಲ್ ಬೋಡರ್್ನ್ನು ಪತ್ತೆ ಮಾಡಿಕೊಬೇಕೆಂದು ನೀಡಿದ ದೂರು.

 

15

Ramanagara Women PS

 

Cr.No:0016/2022

(IPC 1860 U/s 363 )

 

01/02/2022

 

KIDNAPPING AND ABDUCTION - Missing-Girl

 

Under Investigation

 

 

Brief Facts :

ದಿನಾಂಕ:01/02/2022 ರಂದು ರಾತ್ರಿ 7-30 ಗಂಟೆಗೆ  ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ನನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನ್ನ ಮೊದಲನೇ ಮಗ 18 ವರ್ಷ ಜಯರಾಮ್  ಲೈಟಿಂಗ್ ಕೆಲಸ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋಗುತ್ತಿರುತ್ತಾನೆ. ನನ್ನ ಎರಡನೇ ಮಗಳಿಗೆ 17ವರ್ಷ  28 ದಿನಗಳಾಗಿದ್ದು  8 ನೇ  ತರಗತಿ ವಿದ್ಯಾಭ್ಯಾಸ ಮಾಡಿ ನಂತರ  ಶಾಲೆಗೆ  ಹೋಗದೆ 5 ವರ್ಷಗಳಿಂದ ಮನೆಯಲ್ಲಿಯೇ ಇರುತ್ತಾಳೆ. ಆದರೆ ದಿನಾಂಕ;-18/01/2022 ರಂದು  ಸಂಜೆ 5-00 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರಿಗೂ ತಿಳಿಸದೆ ಮನೆಯಿಂದ ನನ್ನ ಮಗಳು ಹೋಗಿರುತ್ತಾಳೆ. ನಂತರ ಕೇರಳದ ವಾಸಿಯಾದ ರಂಜಿತ್ ಎಂಬ ಹುಡುಗ  ನಮ್ಮ ಮನೆಯ ಎದುರುಗಡೆ ಮನೆಯಲ್ಲಿ ಕೆಲಸಕ್ಕಾಗಿ ಬಂದು ವಾಸವಾಗಿದ್ದು, ಆತನೇ  ನನ್ನ ಮಗಳನ್ನು ಕರೆದುಕೊಂಡು ಹೋಗಿರಬಹುದೆಂದು ನಮಗೆ ಅನುಮಾನವಿರುತ್ತದೆ. ಇದುವರೆವಿಗೂ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗದ ಕಾರಣ ಹಾಗೂ ನನ್ನ ಮಗಳು ವಾಪಸ್ ಬಾರದ ಕಾರಣ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು  ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಪಡೆದು  ಠಾಣಾ ಮೊ ನಂ :-16/2022 ಕಲಂ:-363 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

 

16

Sathanoor PS

 

Cr.No:0025/2022

(KARNATAKA POLICE (AMENDMENT) ACT, 2021 U/s 87 )

 

01/02/2022

 

KARNATAKA POLICE ACT 1963 - Street Gambling (87)

Under Investigation

 

 

Brief Facts :

ಸಾತನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ್.ಸಿ, ಪಿಎಸ್ಐ ಆದ ನಾನು ಕೊಟ್ಟ ರಿಪೋರ್ಟ್ ಏನೆಂದರೆ.

 

ದಿನಾಂಕ: 01/02/2022 ರಂದು ಸಂಜೆ 7-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ, ಕನಕಪುರ ತಾಲ್ಲೂಕು, ಸಾತನೂರು ಹೋಬಳಿ, ಬೋರೇಗೌಡನದೊಡ್ಡಿ ಗ್ರಾಮದ ಬಳಿ ಇರುವ ದಾಸ ಏಸ್ಟೇಟ್ ಬಳಿ ಹಾದು ಹೋಗಿರುವ ಸಾರ್ವಜನಿಕ ರಸ್ತೆ ಬಳಿ ಕೆಲವರು ಅಕ್ರಮವಾಗಿ ಇಸ್ಪೀಟ್ ಆಟವಾಡುತ್ತಿರುತ್ತಾರೆಂದು ಮಾಹಿತಿ ಬಂದಿರುತ್ತದೆ. ಸದರಿ ಅಡ್ಡೆ ಮೇಲೆ ದಾಳಿ ಮಾಡಲು, ಠಾಣೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು, ಮೇಲ್ಕಂಡ ಇಸ್ಪೀಟ್ ಆಟದ ಬಗ್ಗೆ ವಿವರವಾಗಿ ಹೇಳಿ, ನಾವು ದಾಳಿ ಮಾಡಬೇಕು ದಾಳಿ ಮಾಡಲು ನೀವುಗಳು ಪಂಚರಾಗಿ ಬನ್ನಿ ಎಂದು ಬರಮಾಡಿಕೊಂಡು ಜೊತೆಗೆ ಠಾಣಾ ಸಿಬ್ಬಂದಿಗಳಾದ CHC 270 ಸುಭಾಷ್, CHC 310 ಕೈಲಾಸ್, CHC 393 ಶೇಖರ್, CHC 406 ಸಿದ್ದಲಿಂಗ.ಡಿ.ಟಿ, CPC 154 ಮಹೇಶ್, CPC 618 ಶ್ರೀಶೈಲ್ ಹೊಸೂರ್, CPC 705 ಕೃಷ್ಣಕಾಂತ್ ಬನ್ನೂರ್, CPC 912 ಬಲಕುಂದಪ್ಪ, CPC 108 ಗುರುರಾಜ್ ಹಾಗೂ APC 180 ಕುಮಾರ್ ರವರಿಗೆ ಮೇಲ್ಕಂಡ ಇಸ್ಪೀಟ್ ಆಟದ ಬಗ್ಗೆ ತಿಳಿಸಿ, ದಾಳಿ ಮಾಡಲು ಖಾಸಗಿ ವಾಹನದಲ್ಲಿ ಠಾಣೆಯಿಂದ ಹೊರಟು, ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲಿ ನಿಂತು ನೋಡಲಾಗಿ ಸಾರ್ವಜನಿಕರ ರಸ್ತೆ ಬಳಿ ಸುಮಾರು 10 ಜನರು ವೃತ್ತಕಾರಲ್ಲಿ ಕುಳಿತು 200 ರೂಪಾಯಿ ಅಂದರ್ 200 ರೂಪಾಯಿ ಬಾಹರ್ ಅಂತ ಜೋರಾಗಿ ಕೂಗಿಕೊಂಡು ಇಸ್ಪೀಟ್ ಆಟವಾಡುತ್ತಿದ್ದರು. ಆಗ ನಾವುಗಳು ಪಂಚಾಯ್ತಿದಾರರ ಸಮಕ್ಷಮ ದಾಳಿ ಮಾಡಿದಾಗ ಇಸ್ಪೀಟ್ ಆಡುತ್ತಿದ್ದ 10 ಜನರು ದಾಳಿಯಲ್ಲಿ ಸಿಕ್ಕಿರುತ್ತಾರೆ. ನಂತರ ಅವರುಗಳ ಹೆಸರು ವಿಳಾಸ ವಿಚಾರಿಸಲಾಗಿ 1] ಸಿದ್ದರಾಜು.ಎಸ್ ಬಿನ್ ಲೇಟ್ ಸಿದ್ದಾಚಾರ್, 48 ವರ್ಷ, ವಿಶ್ವಕರ್ಮ, ಅಂಗಡಿಯಲ್ಲಿ ಕೆಲಸ, ಸಾತನೂರು ಟೌನ್, ಕನಕಪುರ ತಾಲ್ಲೂಕು 2] ಅಶೋಕ.ಎನ್.ಪಿ ಬಿನ್ ಅಶೋಕ, 39 ವರ್ಷ, ಒಕ್ಕಲಿಗರು, ವ್ಯವಸಾಯ, ನಾಗರಸನಕೋಟೆ ಗ್ರಾಮ, ಸಾತನೂರು ಹೋಬಳಿ, ಕನಕಪುರ ತಾಲ್ಲೂಕು 3] ಶೇಖರ್ ಬಿನ್ ಲೇಟ್ ಪುಟ್ಟಸ್ವಾಮಯ್ಯ, 39 ವರ್ಷ, ಲಿಂಗಾಯಿತರು, ವ್ಯವಸಾಯ, ನಾಗರಸನಕೋಟೆ ಗ್ರಾಮ, ಸಾತನೂರು ಹೋಬಳಿ, ಕನಕಪುರ ತಾಲ್ಲೂಕು 4] ಚಂದ್ರು ಬಿನ್ ಕರಿಯಪ್ಪ, 39 ವರ್ಷ, ಒಕ್ಕಲಿಗರು, ವ್ಯವಸಾಯ, ನಾಗರಸನಕೋಟೆ ಗ್ರಾಮ 5] ಕಾಂತರಾಜು ಬಿನ್ ಚಂಕ್ರಾಚಾರಿ, 35 ವರ್ಷ, ವಿಶ್ವಕರ್ಮ, ಕಬ್ಬಿಣ ಕೆಲಸ, ನಾಗರಸನಕೋಟೆ ಗ್ರಾಮ 6] ಮಹೇಶ್ ಬಿನ್ ಮಹಾದೇವಪ್ಪ, 48 ವರ್ಷ, ಲಿಂಗಾಯಿತರು, ಹಣ್ಣಿನ ವ್ಯಾಪಾರಿ, ಹಲಗೂರು ಟೌನ್ 7] ಸಿದ್ದರಾಜು ಬಿನ್ ಪುಟ್ಟಸ್ವಾಮಿ, 36 ವರ್ಷ, ಒಕ್ಕಲಿಗರು, ಪರ್ನಿಚರ್ ಕೆಲಸ, ನಾಗರಸನಕೋಟೆ ಗ್ರಾಮ 8] ಸಿದ್ದೇಶ್ ಬಿನ್ ಸಿದ್ದೇಗೌಡ, 35 ವರ್ಷ, ಒಕ್ಕಲಿಗರು, ವ್ಯವಸಾಯ, ನಾಗರಸನಕೋಟೆ ಗ್ರಾಮ 9] ನಿಂಗರಾಜು ಬಿನ್ ಲೇಟ್ ಗಣೇಶಯ್ಯ, 41 ವರ್ಷ, ಪರಿಶಿಷ್ಟ ಜಾತಿ, ತಮಟೆ ಕೆಲಸ, ನಾಗರಸನಕೋಟೆ ಗ್ರಾಮ 10] ರಾಕೇಶ್.ಎಸ್.ಆರ್ ಬಿನ್ ರಾಮಲಿಂಗೇಗೌಡ, 35 ವರ್ಷ, ಒಕ್ಕಲಿಗರು, ಚಾಲಕ, ಸಾತನೂರು ಟೌನ್ ಎಂದು ತಿಳಿಸಿರುತ್ತಾರೆ. ಸದರಿ ಆಟಗಾರರು ಆಟಕ್ಕೆ ಪಣವಾಗಿಟ್ಟಿದ್ದ (ಸ್ಥಳದಲ್ಲಿ) 52 ಇಸ್ಪೀಟ್ ಎಲೆಗಳು, ಒಂದು ಹಳೆ ನ್ಯೂಸ್ ಪೇಪರ್, ಆಟಗಾರರಾದ 1] ಸಿದ್ದರಾಜು.ಎಸ್ ರವರ ಮುಂದೆ 6450 ರೂಪಾಯಿ ಹಣ ಹಾಗೂ iPhone 12 mini Mobile 2] ಅಶೋಕ.ಎನ್.ಪಿ ರವರ ಮುಂದೆ 5800 ರೂಪಾಯಿ ಹಣ ಹಾಗೂ iPhone 8 plus Mobile 3] ಶೇಖರ್ ರವರ ಮುಂದೆ 3850 ರೂಪಾಯಿ ಹಣ ಹಾಗೂ Oppo A37f Mobile 4] ಚಂದ್ರು ರವರ ಮುಂದೆ 5500 ರೂಪಾಯಿ ಹಣ ಹಾಗೂ Redmi Note 9 Pro Mobile 5] ಕಾಂತರಾಜು ರವರ ಮುಂದೆ 4200 ರೂಪಾಯಿ ಹಣ ಹಾಗೂ Oppo A15 Mobile Mobile 6] ಮಹೇಶ್ ರವರ ಮುಂದೆ 5150 ರೂಪಾಯಿ ಹಣ ಹಾಗೂ Redmi Note 9 Pro Max Mobile 7] ಸಿದ್ದರಾಜು ರವರ ಮುಂದೆ 3750 ರೂಪಾಯಿ ಹಣ ಹಾಗೂ Samsung SM-M215F/DS Mobile 8] ಸಿದ್ದೇಶ್ ರವರ ಮುಂದೆ 3800 ರೂಪಾಯಿ ಹಣ ಹಾಗೂ Redmi Note 7 Pro Mobile 9] ನಿಂಗರಾಜು ರವರ ಮುಂದೆ 4950 ರೂಪಾಯಿ ಹಣ ಹಾಗೂ Lava Keypad Mobile 10] ರಾಕೇಶ್.ಎಸ್.ಆರ್ ರವರ ಮುಂದೆ 5110 ರೂಪಾಯಿ ಹಣ ಹಾಗೂ Samsung Galaxy A70s Mobile ಹಾಗೂ ಸದರಿ ಆಟಗಾರರು ಕೃತ್ಯಕ್ಕೆ ಬಳಸಿದ್ದ 1] KA-42 M-8335 Maruti Swift Car 2] KA-42 R-3330 Hero Passion Pro M/C 3] KA-42 S-7812 Hero Passion Pro M/C 4] KA-42 EC-4812 Honda Activa Scooter 5] KA-42 K-2960 Hero Honda Splendor Plus M/C 6] KA-41 EL-1492 Royal Enfield M/C 7] KA-11 W-5500 Honda CB Unicorn M/C ವಾಹನಗಳನ್ನು ಪಂಚಾಯ್ತಿದಾರರ ಸಮಕ್ಷಮ ಮುಂದಿನ ತನಿಖೆಗಾಗಿ ರಾತ್ರಿ 7-30 ಗಂಟೆಯಿಂದ 9-00 ಗಂಟೆಯವರೆಗೆ ದಾಳಿ ಮಾಡಿ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡು, ಠಾಣೆಗೆ ರಾತ್ರಿ 9-30 ಗಂಟೆಗೆ ವಾಪಸ್ ಬಂದು ರಿಪೋರ್ಟ್ ತಯಾರು ಮಾಡಿ, ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಮಾಲುಗಳನ್ನು ರಾತ್ರಿ 10-15 ಗಂಟೆಗೆ ಠಾಣಾಧಿಕಾರಿಯವರಿಗೆ ಕೊಟ್ಟು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ಠಾಣಾ ಮೊ ಸಂ 25/2022 ಕಲಂ 87 Karnataka Police Amnedmnet Act 2021 ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

17

Tavarekere PS

 

Cr.No:0039/2022

(KARNATAKA EXCISE ACT, 1965 U/s 15(A),32(3) )

 

01/02/2022

 

KARNATAKA STATE LOCAL ACTS - Karnataka Excise Act 1965

 

Under Investigation

 

 

Brief Facts :

ನಮ್ಮ ಠಾಣೆಯ ಎಸ್ ಕೃಷ್ಣಮೂರ್ತಿರವರು  ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ: 01.01.2022 ರಂದು ಬೆಳಗ್ಗೆ 10.30 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಇರುವಾಗ್ಗೆ ಗಸ್ತಿನಲ್ಲಿದ್ದ ಮಪಿಸಿ 680 ಶ್ವೇತಾ ರವರು ನನಗೆ ಕರೆ ಮಾಡಿ ಹೊಸಪಾಳ್ಯ ಗ್ರಾಮದ   ಕುಮಾರ್ ಪ್ರಾವಿಜನ್ ಸ್ಟೋರ್  ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಕುಮಾರ ಎಂಬುವವರು ಸ್ಥಳಾವಕಾಶ ನೀಡಿರುತ್ತಾರೆಂದು ಭಾತ್ಮಿದಾರರು ಮಾಹಿತಿ ನೀಡಿರುತ್ತಾರೆಂದು ಮಾಹಿತಿ ನೀಡಿದ ಮೇರಗೆ  ನಾನು  ಹೊಸಪಾಳ್ಯ ಗ್ರಾಮಕ್ಕೆ ಬೆಳಗ್ಗೆ 11.00 ಗಂಟೆಗೆ ಹೋಗಿ ನಂತರ ಪಂಚಾಯತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಪಂಚಾಯತಿದಾರರಾಗಿ ಹಾಜರಿದ್ದು ಸಹಕರಿಸಬೇಕೆಂದು ಕೋರಿದ ಮೇರೆಗೆ ಸದರಿಯವರು ಒಪ್ಪಿದ ನಂತರ ನಾನು ಮಪಿಸಿ 680 ಶ್ವೇತಾ ರವರನ್ನು ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಹೊಸಪಾಳ್ಯ ಗ್ರಾಮದ ಕುಮಾರ್ ಪ್ರಾವಿಜನ್ ಸ್ಟೋರ್  ಅಂಗಡಿಯ ಸ್ವಲ್ಪ ಹಿಂದೆ ಮರೆಯಲ್ಲಿ ನಿಂತು ನೋಡಲಾಗಿ ಕುಮಾರ್ ಪ್ರಾವಿಜನ್ ಸ್ಟೋರ್  ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರು ಮಧ್ಯಪಾನ ಮಾಡುತ್ತಿರುವುದು ಕಂಡು ಬಂತು. ನಂತರ ನಾವು ಹಾಗೂ ಪಂಚರುಗಳು ಸ್ಥಳಕ್ಕೆ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮಧ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋದರು.ಅಂಗಡಿ ಮುಂಭಾಗ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಕೊಟ್ಟಿದ್ದ ವ್ಯಕ್ತಿಯ ಬಗ್ಗೆ ವಿಚಾರಿಸಲಾಗಿ ಕುಮಾರ ಬಿನ್ ಸೂರ್ಯನಾರಾಯಣ,32 ವರ್ಷ,ಅಂಗಡಿ ವ್ಯಾಪಾರ,ಹೊಸಪಾಳ್ಯ ವಾಸಿ ಎಂದು ತಿಳಿದು ಬಂದಿದ್ದು ಸದರಿ ವ್ಯಕ್ತಿ ಕುಮಾರ ರವರು  ಅಂಗಡಿಯಲ್ಲಿದ್ದು ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ನಾನು ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಹಾಗು ನನ್ನ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ.ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂಎಲ್ -ವರ್ಡ್ಸ್ ಪಂಚ್,  04 ಪೌಚ್,  90 ಎಂಎಲ್ -ವರ್ಡ್ಸ್ ಪಂಚ್  03 ಖಾಲಿ ಪೌಚ್ಹಾಗೂ  03 ಪ್ಲಾಸ್ಟಿಕ್ ಲೋಟಗಳು ಇದ್ದು, ಸದರಿ ಮಾಲುಗಳನ್ನು ಬೆಳಗ್ಗೆ 11.15 ಗಂಟೆಯಿಂದ 11.45 ಗಂಟೆವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದು ಕೊಂಡು ಬಂದಿರುತ್ತೆ. ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಮೇಲ್ಕಂಡ ಆರೋಪಿ ಕುಮಾರ ಎಂಬುವವನ ವಿರುದ್ದ ಕಲಂ: 15(), 32(3) ಕೆಇ ಆಕ್ಟ್ ರೀತ್ಯಾ ರೀತ್ಯಾ ಪ್ರಕರಣ ದಾಖಲಿಸಲು ಸೂಚಿಸಿದ ದೂರನ್ನು ಪಡೆದು ದಾಖಲಿಸಿದ ಪ್ರ ವರದಿ.

 

18

Tavarekere PS

 

Cr.No:0040/2022

(KARNATAKA EXCISE ACT, 1965 U/s 15(A),32(3)

01/02/2022

 

KARNATAKA STATE LOCAL ACTS - Karnataka Excise Act 1965

 

Under Investigation

 

 

Brief Facts :

ಎಸ್ ರಾಜೇಗೌಡರವರು ನೀಡಿದ ವರದಿಯ ಸಾರಾಂಶವೆನೆಂದರೆ ನಾನು ತಾವರೆಕೆರೆ ಪೊಲಿಸ್ ಠಾಣೆಯಲ್ಲಿ ಎಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿವಸ ದಿನಾಂಕ: 01.02.2022 ರಂದು ಠಾಣಾಧಿಕಾರಿಯವರು ನನಗೆ ಮತ್ತು ಸಿ.ಪಿ.ಸಿ 116 ದರ್ಶನ್ ರವರಿಗೆ ಮಂಚನಬೆಲೆ,ಅವೇರಹಳ್ಳಿ ಮತ್ತು ದಬ್ಬಗುಳಿ ಕಡೆ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾವು ಮಂಚನಬೆಲೆ ಮತ್ತು ದಬ್ಬಗುಳಿ ಗ್ರಾಮದ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ದಬ್ಬಗುಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ ಭಾತ್ಮಿದಾರರು ದಬ್ಬಗುಳಿ ಗ್ರಾಮದ ವಾಸಿ ಬೈರೇಗೌಡ ಎಂಬುವರು ತನ್ನ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಮಾಹಿತಿ ನೀಡಿದರು ನಂತರ ನಾವು ಪಂಚಾಯತಿದಾರರುಗಳಾದ 1)ಲೋಕೇಶ್ ಬಿ ಬಿನ್ ಲೇಟ್ ಬೊಮ್ಮಯ್ಯ 55 ವರ್ಷ, ವಕ್ಕಲಿಗ ಜನಾಂಗ ವ್ಯವಸಾಯ ಅಣೆಕೆಂಪಯ್ಯನ ದೊಡ್ಡಿ ಗ್ರಾಮ, ಮಾಡಬಾಳ್ ಹೋಬಳಿ ಮಾಗಡಿ ತಾಲ್ಲೋಕ್.2) ಕೃಷ್ಣಪ್ಪ ಬಿನ್ ಲೇಟ್ ಈರಯ್ಯ 50 ವರ್ಷ ವಕ್ಕಲಿಗ ಜನಾಂಗ ವ್ಯವಸಾಯ ಮಾಡಬಾಳ್ ಹೋಬಳಿ ಮಾಗಡಿ ತಾಲ್ಲೋಕ್.ರವರುಗಳನ್ನು ಕರೆಸಿಕೊಂಡು ಅವರಿಗೆ ವಿಚಾರ ತಿಳಿಸಿ ಪಂಚರುಗಳನ್ನು ನಮ್ಮ ಜೊತೆ ಕರೆದುಕೊಂಡು ಮದ್ಯಾಹ್ನ ಸುಮಾರು 12.15 ಗಂಟೆ ಸಮಯದಲ್ಲಿ ದಬ್ಬಗುಳಿ ಗ್ರಾಮದಲ್ಲಿರುವ ಚಿಲ್ಲರೆ ಅಂಗಡಿಯ ಸ್ವಲ್ಪ ಹಿಂದೆ ಮರೆಯಲ್ಲಿ ನಿಂತು ನೋಡಲಾಗಿ  ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರು ಕುಳಿತುಕೊಂಡು ಮದ್ಯಪಾನ ಮಾಡುತ್ತಿರುವುದು ಕಂಡು ಬಂತು ನಂತರ ನಾವು ಹಾಗೂ ಪಂಚಾಯತಿದಾರರು ಸ್ಥಳಕ್ಕೆ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಂಗಡಿ ಮುಂಭಾಗ ಕುಳಿತುಕೊಂಡು ಮಧ್ಯಪಾನ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋದರು ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್ haywards punch 06 ತುಂಬಿದ ಪೌಚ್ಗಳು ಹಾಗೂ 90 ಎಂ.ಎಲ್ haywards punch  2 ಖಾಲಿ ಪೌಚ್ಗಳು ಹಾಲಿ 3 ಖಾಲಿ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿದ್ದವು ಸದರಿ ಚಿಲ್ಲರೆ ಅಂಗಡಿಯ ಮುಂಭಾಗ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಅಂಗಡಿಯ ಮಾಲೀಕನ ಹೆಸರು ಕೇಳಲಾಗಿ ಬೈರೇಗೌಡ ಬಿ ಬಿನ್ ಮಾರಣ್ಣ 43 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಮಾಡಬಾಳ್ ಹೋಬಳಿ ಮಾಗಡಿ ತಾಲ್ಲೋಕ್.ಎಂದು ತಿಳಿಯಿತು ನಂತರ ಸ್ಥಳದಲ್ಲಿ ಮೇಲ್ಕಂಡ ಪೌಚ್ಗಳನ್ನು ಮತ್ತು ಖಾಲಿ ಲೋಟಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 01.20 ರಿಂದ 01.40 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಬೈರೇಗೌಡ ರವರು ಸಹ ಅಂಗಡಿ ಬಳಿ ಇದ್ದು ಅವರನ್ನು ಹಾಗೂ ಮೇಲ್ಕಂಡ ವಶಪಡಿಸಿಕೊಂಡಿದ್ದ ಮಧ್ಯದ ಪೌಚ್ ಮತ್ತು ಖಾಲಿ ಲೋಟಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಸಾರ್ವಜನಿಕ ಸ್ಥಳದಲ್ಲಿ ದಬ್ಬಗುಳಿ ಗ್ರಾಮದ ವಾಸಿ ಬೈರೇಗೌಡ ರವರು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ ಆದ್ದರಿಂದ ಇವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಕೋರುತ್ತೇನೆಂದು ಇತ್ಯಾದಿ ಮೇರೆಗೆ

 

19

Tavarekere PS

 

Cr.No:0041/2022

(KARNATAKA POLICE ACT, 1963 U/s 87 )

 

01/02/2022

 

KARNATAKA POLICE ACT 1963 - Street Gambling (87

Under Investigation

 

 

Brief Facts :

ದಿನಾಂಕ:01.02.2022 ರಂದು ನ್ಯಾಯಾಲಯದ ಪಿಸಿ-94 ರವರು ಠಾಣಾ ಜಿ.ಎಸ್.ಸಿ ನಂ. PO0277220600108 ರಲ್ಲಿ ನ್ಯಾಯಾಲಯದ ಅನುಮತಿ ಪಡೆದು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:31.01.2022 ರಂದು ಪಿ.ಎಸ್. ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 31-01-2022 ರಂದು ನಾನು ಮತ್ತು ಸಿಬ್ಬಂದಿಗಳಾದ ಹೆಚ್ಸಿ 410 ಲಕ್ಷ್ಮಿಕಾಂತ ಪಿಸಿ-116 ದರ್ಶನ್ ರವರೊಂದಿಗೆ  ಚನ್ನೆನಹಳ್ಳಿ, ಜಟ್ಟಿಪಾಳ್ಯ ಕಡೆ ಗಸ್ತು ಮಾಡುತಿದ್ದಾಗ ಸಂಜೆ 2-15 ಗಂಟೆಯಲ್ಲಿ ಚನ್ನದಾಸಿಪಾಳ್ಯ ಎನ್ ಎಸ್ ಪ್ಯಾಲೇಸ್ ಹಿಂಬಾಗ ಇರುವ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುತ್ತಾರೆಂದು ಮಾಹಿತಿ ಬಂದ ಮೇರೆಗೆ, ನಾನು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಪಿಸಿ-103 ಪರಶುರಾಮ್ರವರನ್ನು ಕರೆಸಿಕೊಂಡು ಪಂಚಾಯ್ತಿದಾರರಿಗೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು, ಸಹಕರಿಸಬೇಕೆಂದು ಕೋರಿ ಅವರುಗಳಿಗೆ ಪೊಲೀಸ್ ನೋಟೀಸ್ ನೀಡಿದ್ದು, ಅವರುಗಳು ಒಪ್ಪಿಕೊಂಡಿರುತ್ತಾರೆ. ನಂತರ ಪಂಚಾಯತಿದಾರರು ಹಾಗೂ ಸಿಬ್ಬಂದಿಗಳೊಂದಿಗೆ ಖಾಸಗಿ ವಾಹನದಲ್ಲಿ ಚನ್ನದಾಸಿಪಾಳ್ಯ ಎನ್ ಎಸ್ ಪ್ಯಾಲೇಸ್ ಹಿಂಬಾಗ ಇರುವ ಸಂಜೆ 2-45 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ 4-5 ಜನರು ವೃತ್ತಾಕಾರದಲ್ಲಿ ಕುಳಿತುಕೊಂಡು ದಿನಪತ್ರಿಕೆ ಹಾಸಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದನ್ನು ಖಾತ್ರಿಪಡಿಸಿಕೊಂಡು ಪಂಚಾಯಿತಿದಾರರ ಸಮಕ್ಷಮ ನಾನು ಮತ್ತು ಸಿಬ್ಬಂದಿಗಳು ಅವರನ್ನು ಸುತ್ತುವರೆದು ದಾಳಿ ಮಾಡಿ ಹಿಡಿದುಕೊಂಡವರ ಹೆಸರು ವಿಳಾಸ ಕೇಳಲಾಗಿ (1)ಪರಮಶಿವಯ್ಯ ಬಿನ್ ನಾಗೇಶಯ್ಯ 30 ವರ್ಷ ಕಾರ್ ಡ್ರೈವರ್ ಕೆಲಸ, ಲಿಂಗಾಯತರು ನೀಲಸಂದ್ರ ಹುಲಿಯೂರುದುರ್ಗ ಹೋಬಳಿ (2) ಸಂದೀಪ್ ಬಿನ್ ವೆಂಕಟೇಶ್ 34 ವರ್ಷ ಮಡಿವಾಳರು ಹೊಟೆಲ್ ಕೆಲಸ ಚನ್ನೇನಹಳ್ಳಿ ಸ್ವಂತ ಯಲಚಗೆರೆ ಕಸಬಾ ಹೋಬಳಿ ನೆಲಮಂಗಲ ತಾಲೂಕು.(3)ತಿಪ್ಪೇಶ್ ಬಿನ್ ನಾಗಪ್ಪ 42 ವರ್ಷ ಕೊರಚ ಜನಾಂಗ ಹಕ್ಕಿ ಪಿಕ್ಕಿ ಕಾಲೋನಿ ಯಲಚಗುಪ್ಪೆ, ತಾವರೆಕರೆ ಹೋಬಳಿ(4) ಮರಿಸ್ವಾಮಿ ಬಿನ್ ಲೇ ಶಿವಲಿಂಗಯ್ಯ 43  ವರ್ಷ ಒಕ್ಕಲಿಗರು ಹೊಟೆಲ್ ಕೆಲಸ  ಸಾಯಿ ಬಡಾವಣೆಚನ್ನದಾಸಿಪಾಳ್ಯ ತಾವರೆಕೆರೆ ಹೋಬಳಿ,(5) ನಾಗರಾಜು ಬಿನ್ ಚನ್ನಪ್ಪ 65 ವರ್ಷ ಒಕ್ಕಲಿಗರು ಜಟ್ಟಿಪಾಳ್ಯ  ಚನ್ನೇನಹಳ್ಳಿ, ತಾವರೆಕೆರೆ ಹೋಬಳಿ ಬೆಂಗಳೂರು ದಕ್ಷಿಣ ತಾ. ಎಂದು ತಿಳಿಸಿರುತ್ತಾರೆ

     ಪಂಚಾಯ್ತಿದಾರರ ಸಮಕ್ಷಮ ಸ್ಥಳವನ್ನು ಪರಿಶೀಲನೆ ಮಾಡಲಾಗಿ, ಸ್ಥಳದಲ್ಲಿ ಪಣವಾಗಿಟ್ಟಿದ್ದ (1)ಒಟ್ಟು 7,440/-ರೂ ನಗದು ಹಣ  ಹಣ, (2) 52 ಇಸ್ಪೀಟ್ ಎಲೆಗಳು, (3) ಒಂದು ದಿನಪತ್ರಿಕೆ ಪೇಪರ್ ಇವುಗಳನ್ನು ಪಂಚಾಯತಿದಾರರ ಸಮಕ್ಷಮ ಸಂಜೆ 2-45 ರಿಂದ ಸಂಜೆ 3-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಆಸಾಮಿಗಳಿಗೆ ಸ್ಥಳದಲ್ಲಿಯೇ ಪೊಲೀಸ್ ನೋಟೀಸ್ನ್ನು ಜಾರಿ ಮಾಡಿ ಕಳುಹಿಸಿಕೊಟ್ಟಿರುತ್ತೆ. ನಂತರ ಮಾಲು ಸಮೇತ ಠಾಣೆಗೆ ಬಂದು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದವರ ವಿರುದ್ದ ಕ್ರಮಕ್ಕಾಗಿ ನೀಡಿದ ವರದಿ ಮೇರೆಗೆ ಇತ್ಯಾದಿಯಾಗಿ.

 

 

 

 

 

 

 

Last Updated: 05-02-2022 05:43 PM Updated By: superadmin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : RAMANAGARA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080