Sl. No
|
Police Station Name
|
FIR No
|
FIR Date
|
Crime Group - Crime Head
|
Stage of case
|
1
|
Akkur PS
|
Cr.No:0024/2022
(IPC 1860 U/s 323,324,504,506,34 )
|
04/02/2022
|
CASES OF HURT - Simple Hurt
|
Under Investigation
|
|
|
ದಿನಾಂಕ 04.02.2022 ರಂದು ಮದ್ಯಾಹ್ನ 2.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 03.02.2022 ರಂದು ರಾತ್ರಿ 9.45 ಗಂಟೆಯ ಸಮಯದಲ್ಲಿ ನಾನು ನಮ್ಮ ಮನಯ ಬಳಿ ಇರಬೇಕಾದರೆ ನಮ್ಮ ಪಕ್ಕದ ಬೀದಿಯಲ್ಲಿ ನಮ್ಮ ಗ್ರಾಮದ ವಾಸಿಯಾದ ಹಾಗೂ ನಮ್ಮ ಜನಾಂಗದವರಾದ ತಿಮ್ಮಯ್ಯ ರವರು ನಮ್ಮ ಗ್ರಾಮ ದೇವತೆ ಮಾರಮ್ಮ ದೇವರ ಹಬ್ಬಕ್ಕೆ ಖರ್ಚು ವೆಚ್ಚಕ್ಕಾಗಿ ಹಣ ಎತ್ತುವುದಕ್ಕೆ ತಮಟೆ ಮೂಖಾಂತರ ಸಾರುತ್ತಿದ್ದು ಆ ಸಮಯದಲ್ಲಿ ನಾನು ಯಾವುದಕ್ಕಾಗಿ ನೀನಿ ಸಾರುತ್ತಿದ್ದಿಯಾ ದೇವರ ಹಬ್ಬದ ವಿಚಾರ ನಮಗೆ ತಿಳಿದಿರುವುದಿಲ್ಲ ಅಂತ ಕೇಳುತ್ತಿದ್ದ ಸಂಧರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ವಾಸಿಯಾದ ಗಂಗಾಧರ, ಲೋಕೇಶ್, ನಟರಾಜ್ ರವರು ಸಹಾ ಅಲ್ಲಿಗೆ ಬಂದು ಕೇಳುತ್ತಿದ್ದಾಗ ನಮ್ಮ ಗ್ರಾಮದ ವಾಸಿಗಳಾದ ರವೀಂದ್ರ, ನಾಗೇಶ್, ಬೈರ ರವರುಗಳು ನಮ್ಮಗಳನ್ನು ಇದನ್ನು ಕೇಳಲು ನೀವು ಯಾರು ಬೋಳಿ ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆ ನನಗೆ ಹಾಗೂ ಎಲ್ಲರಿಗೂ ಖಾರದ ಪುಡಿಯನ್ನು ನಮ್ಮ ಮುಖಕ್ಕೆ ಎರಚಿ ರವೀಂದ್ರ ಹಾಗೂ ನಾಗೇಶ್ ರವರುಗಳು ಕಾಲಿನಿಂದ ಹೊಟ್ಟೆಯ ಕೆಳಗೆ ಒದ್ದು, ನೋವುಂಟು ಮಾಡಿ ಅಷ್ಟರಲ್ಲಿ ಗಂಗಾಧರ್, ಲೋಕೇಶ್, ನಟರಾಜು ರವರು ಹಾಗೂ ನಮ್ಮ ದೊಡ್ಡಮ್ಮ ಲಕ್ಷ್ಮಮ್ಮ ರವರು ಬಿಡಿಸಲು ಬಂದಾಗ ಗಂಗಾಧರ ರವರುಗಳಿಗೆ ಕಲ್ಲಿನಿಂದ ರವೀಂದ್ರ, ನಾಗೇಶ್ ಬೈರ ರವರುಗಳು ಕಲ್ಲುಗಳಿಂದ ಮೈ ಕೈಗಳಿಗೆ ಹೊಡೆದು ನೋವುಂಟು ಮಾಡಿ ನಮ್ಮ ದೊಡ್ಡಮ್ಮ ಲಕ್ಷ್ಮಮ್ಮ ರವರನ್ನ ಇವರುಗಳೆ ಚರಂಡಿಗೆ ತಳ್ಳಿದಾಗ ನಮ್ಮ ದೊಡ್ಡಮ್ಮ ರವರಿಗೆ ತಲೆಗೆ ಪೆಟ್ಟುಬಿದ್ದು ಈಕೆಯನ್ನು ನಾವುಗಳು ಹಾಗೂ ನಮ್ಮ ಗ್ರಾಮದ ವಾಸಿಯಾದ ಪುರುಷೋತ್ತಮ, ಲಿಂಗಣ್ಣರವರು ಉಪಚರಿಸಿ 108 ವಾಹನದ ಮೂಲಕ ಚನ್ನಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತೇನೆ ಆದ್ದರಿಂದ ನನಗೆ ಹಾಗೂ ಗಂಗಾಧರ್, ಲೋಕೇಶ್, ನಟರಾಜ್, ಲಕ್ಷ್ಮಮ್ಮ ರವರಿಗೆ ಕಾಲಿನಿಂದ ಒದ್ದು, ಕಲ್ಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುವ ರವೀಂದ್ರ, ನಾಗೇಶ್, ಬೈರ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂತ ಕೊಟ್ಟ ದೂರಿನ ಮೇರೆಗೆ ಈ ಪ್ರ ವ ವರದಿ.
|
2
|
Akkur PS
|
Cr.No:0025/2022
(IPC 1860 U/s 323,324,504,506,149 )
|
04/02/2022
|
CASES OF HURT - Simple Hurt
|
Under Investigation
|
|
|
ದಿನಾಂಕ 04.02.2022 ರಂದು ಮಧ್ಯಾಹ್ನ 3.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 03.02.2022 ರಂದು ರಾತ್ರಿ 9.45 ಗಂಟೆಯ ಸಮಯದಲ್ಲಿ ನಮ್ಮೂರಿನ ಗ್ರಾಮ ದೇವತೆ ಮಾರಮ್ಮ ದೇವಿಯ ಪ್ರತಿಷ್ಠಾಪನೆ ವಿಚಾರವಾಗಿ ಹಣದ ಬಗ್ಗೆ ವಿಚಾರ ತಿಳಿಸಲು ನಮ್ಮ ಗ್ರಾಮದ ವಾಸಿಯಾದ ತಿಮ್ಮಯ್ಯ ರವರ ಮುಖಾಂತರ ಗ್ರಾಮದಲ್ಲಿ ತಮಟೆ ಮೂಲಕ ತಿಳಿಸುತ್ತಿದ್ದಾಗ ನಮ್ಮ ಗ್ರಾಮದ ವಾಸಿಗಳಾದ ನವೀನ್ ಕುಮಾರ, ಪುರುಷೋತ್ತಮ, ನಟರಾಜ, ಪ್ರಸನ್ನ, ಲೋಕೇಶ ರವರುಗಳು ತಿಮ್ಮಯ್ಯನನ್ನು ನೀನು ನಮ್ಮಗಳನ್ನು ಕೇಳದೆ ಯಾಕೆ ಗ್ರಾಮದಲ್ಲಿ ಸಾರುತ್ತಿದ್ದಯಾ ಅಂತ ಕೇಳುತ್ತಿದ್ದಾಗ ಅಷ್ಟರಲ್ಲಿ ನಾನು, ರವೀಂದ್ರ, ಬೈರ ರವರುಗಳು ಸೇರಿ ತಿಮ್ಮಯ್ಯನಿಗೆ ಯಾಕೆ, ತೊಂದರೆ ನೀಡುತ್ತಿದ್ದಿರಿ ಎಂದು ಕೇಳಿದ್ದಕ್ಕೆ ಇವರುಗಳೆಲ್ಲರೂ ನಮಗೆ ಬಾಯಿಗೆ ಬಂದಂತೆ ಬೈಯ್ದು, ನವೀನ್ ಕುಮಾರ ಮತ್ತು ಪುರುಷೋತ್ತಮ, ನಟರಾಜ ರವರುಗಳು ಕಲ್ಲಿನಿಂದ ನನಗೆ ಹಾಗೂ ಬೈರರವರಿಗೆ ಹೊಡೆದಿದ್ದು ಇದರಿಂದ ದೇಹದ ಮೇಲೆ ರಕ್ತ ಬಂದು ನೋವುಂಟಾಗಿರುತ್ತದೆ ಅಷ್ಟರಲ್ಲಿ ಬಿಡಿಸಲು ಬಂದ ನಮ್ಮ ಅತ್ತಿಗೆ ರತ್ನಮ್ಮ ರವರಿಗೂ ಸಹಾ ಬಾಯಿಗೆ ಬಂದಂತೆ ಬೈಯ್ದು, ಆ ಗಲಾಟೆಯ ಸಮಯಕ್ಕೆ ಮಂಜ, ಗಂಗಾ, ವೆಂಕಟೇಶ, ವಿಷಕಂಠಯ್ಯ ಉರುಪ್ ಸಣ್ಣಪ್ಪ ರವರುಗಳು ರತ್ನಮ್ಮ ರವರನ್ನ ಕೈಗಳಿಂದ ಚರಂಡಿಗೆ ತಳ್ಳಿದಾಗ ಆಕೆಗೆ ಏಟಾಗಿರುತ್ತದೆ. ಈ ಗಲಾಟೆಯ ಸಮಯದಲ್ಲಿ ಇವರುಗಳು ನಿಮಗೆ ಇವತ್ತಲ್ಲ ನಾಳೆ ಒಂದು ಗತಿ ಕಾಣಿಸುತೇವೆಂದು ಬೆದರಿಕೆ ಹಾಕಿದರು ನಂತರ ಏಟಾಗಿದ್ದ ನನಗೆ, ರತ್ನಮ್ಮ ಹಾಗೂ ಬೈರ ರವರುಗಳನ್ನ ನಮ್ಮ ಗ್ರಾಮದ ವಾಸಿಗಳಾದ ಲೋಕೇಶ ಮತ್ತು ವೆಂಕಟಚಲ ರವರು ಜಗಳ ಬಿಡಿಸಿ ಉಪಚರಿಸಿ ನಂತರ ಕಾರಿನಲ್ಲಿ ಚನ್ನಪಟ್ಟಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ನಮ್ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಹೊಡೆದು, ಕೈಗಳಿಂದ ತಳ್ಳಿ, ಬೆದರಿಕೆ ಹಾಕಿರುವ ಮೇಲ್ಕಂಡ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ
|
3
|
Bidadi PS
|
Cr.No:0042/2022
(IPC 1860 U/s 454,380 )
|
04/02/2022
|
BURGLARY - DAY - At Residential Premises
|
Under Investigation
|
|
|
ದಿನಾಂಕ-04-02-2022 ರಂದು ಸಂಜೆ 6-30 ಗಂಟೆಗೆ ಪಿರ್ಯಾದುದಾರರಾದ ದೇವರಾಜಮ್ಮ ಕೋಂ ಲೇ|| ಶ್ರೀನಿವಾಸಗೌಡ, 52 ವರ್ಷ, ಗಾರ್ಮೆಂಟ್ಸ್ ನಲ್ಲಿ ಕೆಲಸ, ಇಂದಿರಾನಗರ, ರೈಲ್ವೆ ಸ್ಟೇಷನ್ ಹಿಂಭಾಗ, ಬಿಡದಿ ಟೌನ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಸುಮಾರು 8 ವರ್ಷಗಳಿಂದ ಗಾರೆ ಚೆನ್ನಪ್ಪ ಬಿನ್ ಲೇ|| ಬೋರಯ್ಯ ರವರ ಮನೆಯಲ್ಲಿ ಬಾಡಿಗೆಗೆ ನೆಲ ಮಹಡಿಯಲ್ಲಿ ವಾಸವಾಗಿರುತ್ತೇವೆ. ನಾನು ನನ್ನ ಮಗ ಸೂರಜ್ ಮತ್ತು ಮಗಳು ಗಗನಶ್ರೀ ಇದ್ದು ಮಗ ಚೆನ್ನೈನಲ್ಲಿ ಇದ್ದು, ನಾವಿಬ್ಬರೇ ಮನೆಯಲ್ಲಿ ವಾಸವಾಗಿರುತ್ತೇವೆ. ನಾನು ಮತ್ತು ಮಗಳು ಇಬ್ಬರು ಬೆಳಿಗ್ಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುತ್ತೇವೆ. ನಮ್ಮ ಮನೆಯ ಮೊದಲನೆ ಮಹಡಿಯಲ್ಲಿ ಅಭಿಷೇಕ್.ಆರ್.ಪಿ ಮತ್ತು ಆತನ ಹೆಂಡತಿ ಚೈತ್ರ ರವರು ಬಾಡಿಗೆ ವಾಸವಿರುತ್ತಾರೆ. ಅವರು ಇಬ್ಬರು ಸಹ ಪ್ರೈವೇಟ್ ಕೆಲಸಕ್ಕೆ ಹೋಗುತ್ತಾರೆ ನಮ್ಮ ಎರಡು ಮನೆಯವರು ಮನೆಗಳಿಗೆ ಬೀಗ ಹಾಕಿ ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ವಾಪಸ್ಸು ಮನೆಗೆ ಬರುತ್ತೇವೆ. ಈ ದಿನ ಮಾಮೂಲಿನಂತೆ ಬೆಳಗ್ಗೆ 8-00 ಗಂಟೆಗೆ ಕೆಲಸಕ್ಕೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದೆವು. ನನಗೆ ಮದ್ಯಾಹ್ನ 3-30 ಗಂಟೆಗೆ ನಮ್ಮ ಮನೆಯ ಮಾಲಿಕರು ಕರೆ ಮಾಡಿ ನಿಮ್ಮ ಮನೆ ಮತ್ತು ಅಭಿಷೇಕ್ ಮನೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ. ನೀವು ಬೇಗ ಬನ್ನಿ ಎಂದು ತಿಳಿಸಿರುತ್ತಾರೆ. ನಾನು ಗಾಬರಿಯಿಂದ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಮುಂದಿನ ಬಾಗಿಲನ್ನು ಮೀಟಿ ಯಾರೋ ಕಳ್ಳರು ಒಳ ಪ್ರವೇಶಿಸಿ ಬೆಡ್ ರೂಂ ನಲ್ಲಿದ್ದ ಎರಡು ಬೀರುಗಳನ್ನು ಮೀಟಿ ಬಾಗಿಲನ್ನು ಮುರಿದು ಬೀರುವಿನಲ್ಲಿ ಇಟ್ಟಿದ್ದ ನಮ್ಮ ಚಿನ್ನದ ಒಡವೆಗಳಾದ 1] ಲಾಂಗ್ ಚೈನ್ 35 ಗ್ರಾಂ 2] ಹ್ಯಾಂಗಿಂಗ್ಸ್ 7 ಗ್ರಾಂ 3] ಜುಮುಕಿ 3 ಗ್ರಾಂ 5] ಬಿಳಿ ಕಲ್ಲಿನ ಓಲೆ 4 ಗ್ರಾಂ 5] ಎರಡು ಉಂಗುರಗಳು 6 ಗ್ರಾಂ ಕಳ್ಳತನವಾಗಿರುತ್ತದೆ.
ನಮ್ಮ ಮನೆಯ ಮೇಲೆ ಮೊದಲನೆ ಮಹಡಿಯಲ್ಲಿ ವಾಸವಾಗಿರುವ ಅಭಿಷೇಕ್.ಆರ್.ಪಿ ರವರ ಮನೆಯ ಮುಂದಿನ ಬಾಗಿಲನ್ನು ಮೀಟಿ ಯಾರೋ ಕಳ್ಳರು ಒಳ ಪ್ರವೇಶಿಸಿ ಬೆಡ್ ರೂಮಿನಲ್ಲಿದ್ದ ಕಬೋರ್ಡ್ ನಲ್ಲಿ ಇಟ್ಟಿದ್ದ 1] ಚಿನ್ನದ ಗೆಜ್ಜೆ ಮಾಟಿ 10 ಗ್ರಾಂ, 2] ಚಿನ್ನದ ಉಂಗುರ 4 1/2 ಗ್ರಾಂ 3] ಬೆಳ್ಳಿಯ ಕಾಲು ಚೈನು 200 ಗ್ರಾಂ ಇವುಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ಒಡವೆಗಳ ಮೌಲ್ಯ ಸುಮಾರು 2,25,000/- (ಎರಡು ಲಕ್ಷ ಇಪ್ಪತ್ತೈದು ಸಾವಿರ) ರೂಗಳಾಗಿರುತ್ತದೆ. ಈ ಘಟನೆಗೆ ಕಾರಣರಾದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಒಡವೆಗಳನ್ನು ಕೊಡಿಸಿ ಕೊಡಬೇಕೆಂದು ಕೋರುತ್ತೇನೆಂದು ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಸಿದೆ.
|
4
|
Bidadi PS
|
Cr.No:0043/2022
(IPC 1860 U/s 454,380 )
|
04/02/2022
|
BURGLARY - DAY - At Residential Premises
|
Under Investigation
|
|
|
ದಿನಾಂಕ-04-02-2022 ರಂದು ಸಂಜೆ 7-15 ಗಂಟೆಗೆ ಪಿರ್ಯಾದುದಾರರಾದ ಸಿದ್ದಲಿಂಗಯ್ಯ ಬಿನ್ ಲೇ|| ಚಿಕ್ಕಸಿದ್ದಯ್ಯ, 36 ವರ್ಷ, ಪ.ಜಾ, ಹೂವಿನ ವ್ಯಾಪಾರ, ವಾಸ-ಮಲ್ಲೇಶಯ್ಯ ರವರ ಬಾಡಿಗೆ ಮನೆಯಲ್ಲಿ ವಾಸ, ಚರ್ಚ್ ರಸ್ತೆ, ಸಂಜೀವಿನಿ ಲೇಔಟ್, ಬಿಡದಿ ಟೌನ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ-04-02-2022 ರಂದು ನಾವು ಎಂದಿನಂತೆ ಹೂ ಅಂಗಡಿ ವ್ಯಾಪಾರಕ್ಕೆ ನಾನು ನನ್ನ ಹೆಂಡತಿ ಮನೆಗೆ ಬೀಗ ಹಾಕಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಹೋಗಿದ್ದೆವು ನಂತರ ಸಂಜೆ 06ಗಂಟೆಗೆಯಲ್ಲಿ ಮನೆಗೆಬಂದು ನೋಡಿದಾಗ ಮನೆಯ ಬಾಗಿಲನ್ನು ಯಾರೋ ಯಾವುದೋ ಆಯುಧದಿಂದ ದೊಡೆದು ಮನೆಯ ಬೀರುವಿನಲ್ಲಿದ್ದ 50000ರೂ ನಗದು ಹಣ ಮತ್ತು ಚಿನ್ನದ ನೆಕ್ ಲೇಸ್ 2 ಜೊತೆ ಓಲೆ ಮತ್ತು ಹ್ಯಾಂಗಿಗ್ಸ್ ಅನ್ನು ಬೀರುವಿನ ಬಾಗಿಲನ್ನು ಹೊಡೆದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,ಈ ಓಡೆವೆಗಳ ಅಂದಾಜು ಬೆಲೆ ಸುಮಾರು 1,90,000ರೂ ಗಳಾಗುತ್ತೆ ಆದ್ದರಿಂದ ನಮ್ಮ ಮನೆಯ ಬೀರುವಿನ ಬಾಗಿಲನ್ನು ಹೊಡೆದು ಹಣ ಮತ್ತು ಓಡವೆಗಳನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ನಮ್ಮ ಹಣ ಮತ್ತು ಒಡವೆಗಳನ್ನು ಕೊಡಿಸಿ ಕೊಡಬೇಕೆಂದು ಹಾಗೂ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತದೆ.
|
5
|
Channapatna Rural PS
|
Cr.No:0024/2022
(IPC 1860 U/s 370 ; BONDED LABOUR SYSTEM (ABOLITION) ACT, 1976 U/s 16,17,18 )
|
04/02/2022
|
BONDED LABOUR SYSTEM - BONDED LABOUR SYSTEM
|
Under Investigation
|
|
|
ದಿನಾಂಕ. 04-02-2022 ರಂದು ಸಂಜೆ 06-30 ಗಂಟೆಗೆ ಚನ್ನಪಟ್ಟಣ ತಾಲ್ಲೂಕು ದಂಢಾಧಿಕಾರಿಗಳ ಕಛೇರಿಯಿಂದ ಬಂದ ಟಪಾಲು ದೂರನ್ನು ಸ್ವೀಕರಿಸಿದ್ದು ಸದರಿ ದೂರಿನ ಸಾರಾಶಂವೇನೆಂದರೆ, ದಿನಾಂಕ. 15-07-2017 ರಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಅಕ್ರಮ ಜೀತದಾಳುಗಳ ಕೈಯಲ್ಲಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ತಾಲ್ಲೂಕು ದಂಢಾಧಿಕಾರಿಯವರಾದ ಶ್ರೀ ಕೆ. ರಮೇಶ್, ಕಾಮರ್ಿಕ ನಿರೀಕ್ಷಕರಾದ ಶ್ರೀ ಮಂಜುನಾಥ್, ರಾಜಸ್ವನಿರೀಕ್ಷಕರಾದ ಶ್ರೀ ಕಾಂತರಾಜು, ಗ್ರಾಮ ಲೆಕ್ಕಾಧಿಕಾರಿಗಳಾದ ಮೋಹನ್ ಕುಮಾರ್ ರವರುಗಳ ತಂಡ ನೀಲಸಂದ್ರ ಗ್ರಾಮದ ಸ. ನಂ. 171 ರಲ್ಲಿರುವ ಕೋಳಿ ಪಾರಂಗೆ ಮಧ್ಯಾಹ್ನ ಸುಮಾರು 03-30 ಗಂಟೆಗೆ ದಾಳಿ ಮಾಡಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದ ಇವರುಗಳನ್ನು ಜೀತದಿಂದ ವಿಮುಕ್ತಗೊಳಿಸಲಾಗಿರುತ್ತದೆ.
ಸದರಿ ಸಮಯದಲ್ಲಿ ಕೋಳಿ ಪಾರಂ ಮಾಲೀಕರು ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಯಾವುದೇ ಪ್ರಕರಣ ದಾಖಲಿಸಿರುವದಿಲ್ಲ ನಂತರ ಈಗ ಕನರ್ಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಕೈಗೊಂಡಿರುವ ಕ್ರಮದ ಬಗ್ಗೆ ಹಾಗು ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ಕೇಳಿದ್ದು, ತಾವುಗಳು ಮೇಲ್ಕಂಡ ಆರೋಪಿತ ಕೃಷ್ಣ ಬಿನ್ ನಿಂಗೇಗೌಡರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.
|
6
|
Kaggalipura PS
|
Cr.No:0035/2022
(IPC 1860 U/s 279,337 )
|
04/02/2022
|
MOTOR VEHICLE ACCIDENTS NON-FATAL - National Highways
|
Under Investigation
|
|
|
ದಿನಾಂಕ 04.02.2022 ರಂದು ಮದ್ಯಾಹ್ನ 1:00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 03.02.2022 ರಂದು ತನ್ನ ಮಗ ಆತನ ತಾತ ಅನ್ವರ್ ಪಾಷಾ ನ ಜೊತೆ ಬೆಂಗಳೂರು ದಕ್ಷಿಣ ತಾಲ್ಲೂಕು ರಾವುಗೋಡ್ಲು ಗೇಟ್ ಬಳಿ ಇರುವ ವೆಂಕಟಾದ್ರಿ ಕಲ್ಯಾಣ ಮಂಟಕ್ಕೆ ಮದುವೆಗೆ ಹೋಗಿದ್ದು ಅದೇ ದಿನ ಮದ್ಯಾಹ್ 3:45 ಗಂಟೆ ಸಮಯದಲ್ಲಿ ನನ್ನ ಮಗ ಅಬ್ದುಲ್ ಸಾಧಿಖ್ ಕಲ್ಯಾಣ ಮಂಟಪದ ಎದುರು ಇರುವ ರಸ್ತೆಯನ್ನು ದಾಟಲು ರಸ್ತೆ ಮಧ್ಯ ಇರುವ ಡಿವೈಡರ್ ಬಳಿ ನಿಂತಿದ್ದವನಿಗೆ ಬೆಂಗಳೂರು ಕಡೆಯಿಂದ ಕನಕಪುರ ಕಡೆಗೆ ಬರುತಿದ್ದ ಕೆಎ 01 ಎಎಫ್ 8640 ರ ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ರಸ್ತೆಯ ಬಲಭಾಗಕ್ಕೆ ಹೋಗಿ ಅಬ್ದುಲ್ ಸಾಧಿಖ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಲಕಾಲಿಗೆ ಏಟಾಗಿದ್ದು ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು, ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ
|
7
|
Kaggalipura PS
|
Cr.No:0036/2022
(IPC 1860 U/s 447,427 )
|
04/02/2022
|
CRIMINAL TRESPASS - Land
|
Under Investigation
|
|
|
ದಿನಾಂಕ 04/02/2022 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಕಗ್ಗಲೀಪುರ ಗ್ರಾಮ ಪಂಚಾಯ್ತಿ ಕಛೇರಿಯ ಪಿ.ಡಿ.ಓ. ಶ್ರೀ ಜೆ. ವಿಶ್ವನಾಥ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಉತ್ತರಿ ಗ್ರಾಮದ ಸರ್ವೆ ನಂ. 111 ರಲ್ಲಿ 2 ಎಕರೆ ಜಮೀನನ್ನು ಮಾನ್ಯ ತಹಶೀಲ್ದಾರ್ ರವರು ಸಂಖ್ಯೆ ಎಲ್.ಎನ್.ಡಿ.(ಎಸ್)ಸಿಆರ್/217/2020-21 ದಿ:- 28/07/2021 ರಲ್ಲಿ ಸ್ವಚ್ಚ್ ಭಾರತ್ ಮಿಷನ್ ಗ್ರಾಮೀಣ ಯೋಜನೆಗೆ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಕಾಯ್ದಿರಿಸಿ ಆದೇಶವಾಗಿದ್ದು ಹದ್ದುಬಸ್ತು ಗುರ್ತಿಸಿ ಸುಬರ್ದಿಗೆ ನೀಡಲಾಗಿರುತ್ತದೆ. ಸದರಿ ಜಮೀನಿನಲ್ಲಿ ಕಾಂಪೌಂಡ್ ಕಾಮಗಾರಿ ಮಾಡಲು ಗುತ್ತಿಗೆದಾರರಾದ ಕಾರ್ತಿಕ್ ರವರಿಗೆ ನೀಡಿದ್ದು, ಅವರು ಕಾಮಗಾರಿಗೆ ಕಟ್ಟಡ ಸಾಮಗ್ರಿಗಳನ್ನು ತಂದು ಹಾಕಿದ್ದು, ದಿನಾಂಕ 30/01/2022 ರಂದು ಕಗ್ಗಲೀಪುರದ ನಾರಾಯಣಪ್ಪ ಬಿನ್ ನಾಗಪ್ಪ ಎಂಬುವರು ಮೇಲ್ಕಂಡ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕಲ್ಲುಕುಚಗಳನ್ನು ಹಾಕಿಕೊಂಡು ತಂತಿ ಬೇಲಿ ಅಳವಡಿಸಿರುತ್ತಾರೆ. ಅಲ್ಲದೇ ಕಟ್ಟಡದ ಸಾಮಗ್ರಿಗಳನ್ನು ಬಳಸಿಕೊಂಡಿರುತ್ತಾರೆ. ಈ ಬಗ್ಗೆ ದೂರು ನೀಡಲು ಕಾರ್ಯ ನಿರ್ವಾಹಕ ಅಧಿಕಾರಿಯವರು ಅನುಮತಿ ನೀಡಿದ್ದು, ನಾರಾಯಣಪ್ಪ ರವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
|
8
|
Kaggalipura PS
|
Cr.No:0037/2022
(CODE OF CRIMINAL PROCEDURE, 1973 U/s 41(D),102 ; IPC 1860 U/s 379 )
|
04/02/2022
|
CrPC - Preventive Arrest (Sec 41 Class D,102)
|
Under Investigation
|
|
|
ದಿನಾಂಕ 04/02/2022 ರಂದು ರಾತ್ರಿ 9-45 ಗಂಟೆಗೆ ಶ್ರೀ ಬರ್ಲಿಂಗಪ್ಪ ಪಿಸಿ 813 ರವರು ನೀಡಿದ ವರದಿ ಏನೆಂದರೆ ದಿನಾಂಕ 04/02/2022 ರಂದು ನನಗೆ ಮತ್ತು ಪಿಸಿ 161 ಶಿವರಾಜು ತೇಲಿ ರವರಿಗೆ ನಮ್ಮ ಠಾಣೆಯಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಠಾಣಾ ಭ್ರೀಪಿಂಗ್ ನಲ್ಲಿ ಪಿ.ಐ ಸಾಹೇಬರವರು ನಮಗೆ ಸೂಚಿಸಿ ನೇಮಕ ಮಾಡಿದ್ದರು. ಅದರಂತೆ ನಾನು ಪತ್ತೆ ಕಾರ್ಯಕ್ಕಾಗಿ ಹೊರಟು ತಲಘಟ್ಟಪುರ, ತಾತಗುಣಿ, ದೇವಗೆರೆ, ಹೆಚ್. ಗೊಲ್ಲಹಳ್ಳಿ, ಕಾರುಬೆಲೆ, ಮುಂತಾದ ಕಡೆಗಳಲ್ಲಿ ಭೇಟಿ ನೀಡಿ ಬಾತ್ಮಿ ಸಂಗ್ರಹಿಸುತ್ತಿದ್ದಾಗ ರಾತ್ರಿ 9-15 ಗಂಟೆ ಸಮಯದಲ್ಲಿ ಅಗರ ಕ್ರಾಸ್ ಬಳಿ ಒಬ್ಬ ಅಪರಿಚಿತ ವ್ಯಕ್ತಿ ಒಂದು ಡಿಯೋ ಗಾಡಿಯನ್ನು ನಿಲ್ಲಿಸಿಕೊಂಡು ನಿಂತಿದ್ದು, ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದನು. ನಂತರ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮೋಟಾರು ಸೈಕಲ್ ನ್ನು ಸ್ಪಾರ್ಟ್ ಮಾಡಿಕೊಂಡು ಹೋಗಲು ಪ್ರಾರಂಭಿಸಿದನು. ಕೂಡಲೇ ಅವನನ್ನು ನಾವು ಹೋಗಿ ಸುತ್ತುವರೆದು ಹಿಡಿದುಕೊಂಡು ವಿಚಾರ ಮಾಡಿದಾಗ ತಡವರಿಸುತ್ತಾ ತಾನು ಬೆಂಗಳೂರು ವಾಸಿ ಎಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಸೋಮಶೇಖರ್ ಸಿ ಬಿನ್ ಲೇಟ್ ಚಿನ್ನಪ್ಪ, ರಾಜೀವ್ ಗಾಂಧಿ ರಸ್ತೆ, ರಾಜಮ್ಮ ಗಾರ್ಡನ್, ಜೆ.ಪಿನಗರ 6ನೇ ಹಂತ, ಜರಗನಹಳ್ಳಿ, ಎಂದು ಹಾಲಿ ಕೃಷ್ಣಪ್ಪ ರವರ ಮನೆಯಲ್ಲಿ ಬಾಡಿಗೆಗೆ ವಾಸ, ಶನಿಮಹಾತ್ಮ ದೇವಸ್ಥಾನದ ಹತ್ತಿರ, ಕನಕನಗರ, ಯಲಚೇನಹಳ್ಳಿಯಲ್ಲಿ ವಾಸವಾಗಿರುವುದಾಗಿ ತಿಳಿಸಿರುತ್ತಾನೆ. ಈತನ ಬಳಿ ಒಂದು ಡಿಯೋ ಗಾಡಿ ಇದ್ದು, ಯಲಚೇನಹಳ್ಳಿಯಲ್ಲಿ ಕಳ್ಳತನ ಮಾಡಿದ್ದೆಂದು ತಿಳಿಸಿದನು. ಸದರಿ ಗಾಡಿಯನ್ನು ಪರಿಶೀಲಿಸಲಾಗಿ ಕಪ್ಪು ಬಣ್ಣದ ಡಿಯೋ ಗಾಡಿ ಆಗಿದ್ದು, ಹಿಂದೆ ಮುಂದೆ ನಂಬರ್ ಪ್ಲೇಟ್ ಇರುವುದಿಲ್ಲ. ಸದರಿ ಡಿಯೋ ಗಾಡಿಯನ್ನು ಅರೋಪಿಯು ಕಳ್ಳತನ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆರೋಪಿ ಮತ್ತು ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಪ್ರ.ವ.ವರದಿಯನ್ನು ದಾಖಲು ಮಾಡಿರುತ್ತದೆ.
|
9
|
Kanakapura Town PS
|
Cr.No:0010/2022
(IPC 1860 U/s 380,457 )
|
04/02/2022
|
BURGLARY - NIGHT - At Residential
|
Under Investigation
|
|
|
ದಿನಾಂಕ-04/02/2022 ರಂದು ಮಧ್ಯಾಹ್ನ 2.00 ಗಂಟೆಗೆ ಫಿರ್ಯಾದಿ ಬಸವರಾಜುರವರು ಪೊಲೀಸ್ ಠಾಣೆಗೆ ಹಾಜರಾಗಿ, ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಕನಕಪುರ ಟೌನ್ ಕುಂಭಾರ ಬೀದಿಯ ಚಲುವಯ್ಯರವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದು, ದಿನಾಂಕ-02/02/2022 ರಂದು ನನ್ನ ಹೆಂಡತಿ ಮಂಜುಳ ಅವರ ತವರು ಮನೆಗೆ ಹೋಗಿದ್ದು, ನಾನು ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ-03/02/2022 ರಂದು ನಾನು ಸಂಜೆ 5.00 ಗಂಟೆಗೆ ರಾತ್ರಿ ಲಾರಿ ಕೆಲಸಕ್ಕೆ ಹೊಗಿ ವಾಪಸ್ಸ್ ದಿನಾಂಕ-04/02/2022 ರಂದು ಬೆಳಿಗ್ಗೆ 8.30 ಗಂಟೆಗೆ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗವನ್ನು ತೆಗೆದು ಮನೆಯೊಳಗೆ ಹೊಗಿ ರೂಮಿನಲ್ಲಿಟ್ಟಿದ್ದ ಬೀರುವನ್ನು ಹೊಡೆದು ಅದರಲ್ಲಿಟ್ಟಿದ್ದ ಒಂದು ಜೊತೆ ಹ್ಯಾಂಗಿಗ್ಸ್, ಒಂದು ಜೊತೆ ಓಲೆ, ಮಾಟಿ ಮತ್ತು ಒಂದು ಉಂಗುರವನ್ನು ಒಟ್ಟು ಸುಮಾರು 20 ಗ್ರಾಂ ತೂಕದ ಚಿನ್ನದ ವಡೆವೆಗಳು ಮತ್ತು ಸುಮಾರು 25 ಸಾವಿರ ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಚಿನ್ನದ ವಡೆವೆಗಳು ನನ್ನ ಮದುವೆ ಕಾಲದಲ್ಲಿ ತೆಗೆದುಕೊಂಡಿದ್ದು, ಸುಮಾರು ಐವತ್ತು ಸಾವಿರ ರೂಪಾಯಿಗಳಾಗ ಬಹುದು, ಕಳ್ಳತನ ಮಾಡಿಕೊಂಡು ಹೋಗಿರುವ ಚಿನ್ನದ ವಡೆವೆಗಳು ಮತ್ತು ಹಣವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ
|
10
|
Kodihalli PS
|
Cr.No:0019/2022
(IPC 1860 U/s 279,337 )
|
04/02/2022
|
MOTOR VEHICLE ACCIDENTS NON-FATAL - Other Roads
|
Under Investigation
|
|
|
ದಿನಾಂಕ: 04.02.2022 ರಂದು ಮಧ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಶೋಭ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಗರಳಾಪುರ ಗ್ರಾಮದ ನನ್ನ ತಂದೆ 68 ವಯಸ್ಸುಳ್ಳ ಸೊಂಭುಲಿಂಗೇಗೌಡ ಬಿನ್ ಲೇಟ್ ಕುಳ್ಳೇಗೌಡ ಎಂಬುವರು ಮತ್ತು ನಾನು ಇಬ್ಬರು ದಿನಾಂಕ: 02.02.2022 ರಂದು ಮಧ್ಯಾಹ್ನ 1.30 ಗಂಟೆಯಲ್ಲಿ ನಮ್ಮ ಮನೆಯಿಂದ ಬರೋಡ ಬ್ಯಾಂಕ್ ಕಡೆಎಗ ನಡೆದುಕೊಂಡು ಹೋಗುತ್ತಿದ್ದೋ ನನ್ನ ತಂದೆ ಸೊಂಭುಲಿಂಗೇಗೌಡ ಮುಂದೆ ಹೋಗುತ್ತಿದ್ದರು ನಾನು ಹಿಂದೆ ಹೋಗುತ್ತಿದ್ದೆ ನನು ನನ್ನ ತಂದೆ ಎಡ ರಸ್ತೆ ಪಕ್ಕದ ಗೌಡ್ರು ಮಿಲ್ಟ್ರಿ ಹೋಟೆಲ್ ಹತ್ತಿರ ನಡೆದು ಹೋಗುತ್ತಿದಾಗ ಹುಣಸನಹಳ್ಳಿ ಬಸ್ ಸ್ಯಾಂಡ್ ಕಡೆಯಿಂದ ಬಂದ ಕೆಎ-42-ಇಎ-2874 ಹಿರೋಹೊಂಡಾ ಸ್ಪ್ಲೆಂಡರ್ ಬೈಕ್ ಚಾಲಕ ಅತಿ ವೇಘ ಮತ್ತು ಅಜಾಗರೂಕತೆಯಿಂದ ಬೈಕ್ ಚಲಿಸಿ ನಮ್ಮ ತಂದೆ ಹಿಂಭಾಗಕ್ಕೆ ಡಿಕ್ಕಿಹೊಡೆಸಿದ್ದಾನೆ.ನಮ್ಮ ತಮದೆ ಎಡಕಾಲು ಮೂಳೆ ಮುರಿದಿರುತ್ತದೆ. ತಕ್ಷಣ ಆಂಬುಲೆನ್ಸ್ ಕರೆಯಿಸಿಕೊಂಉ ನಮ್ಮ ತಂದೆ ಸೊಂಭುಲಿಂಗೇಗೌಡನನ್ನು ಕರೆದುಕೊಂಡು ಕನಕಪುರದ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯಾಧಿಕಾರಿಗೆ ತೋರಿಸಿದೆ. ಅಲ್ಲಿನ ವೈದ್ಯಾಧಿಕಾರಿಯೂ ಮೂಳೆ ಮುರಿದಿದೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ತಿಳಿಸಿದರು ಆನಂತರ ಅದೇ ಆಂಬುಲೆನ್ಸ್ ನಿಂದ ನನ್ನ ತಂದೆ ರವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಪಡಿಸಿರುತ್ತೇನೆ. ಅಲ್ಲಿನ ವೈದ್ಯಾಧಿಕಾರಿಯೂ ಮೂಲೆ ಮುರಿದಿರುವುದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ ಆದ್ದರಿಂದ ಅಪಘಾತವನ್ನುಂಟು ಮಾಡಿರುವ ಕೆಎ-42-ಇಎ-2874 ಹಿರೋ ಹೊಂಡಾ ಅಪಘಾತವುಂಟು ಮಾಡಿರುವ ಕೆಎ-42-ಇಎ-2874 ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ಚಾಲಕನ ಮೇಲೆ ಕಾನೂನು ರೀತಿ ಕ್ರಮವನ್ನು ಜರುಗಿಸಲು ಕೋರುತ್ತೇನೆ. ನಾನು ನಮ್ಮ ತಂದೆಯವರನ್ನು ಆಸ್ಪತ್ರೆಗೆ ದಾಖಲು ಮಾಡಿ ತಡವಾಗಿ ಬಂದು ದೂರು ಕೊಟ್ಟಿರುತ್ತೇನೆಂದು ನೀಡಿದ ದೂರಿನ ಮೇರೆಗೆ.
|
11
|
Kodihalli PS
|
Cr.No:0020/2022
(IPC 1860 U/s 279,337 )
|
04/02/2022
|
MOTOR VEHICLE ACCIDENTS NON-FATAL - Other Roads
|
Under Investigation
|
|
|
ದಿನಾಂಕ: 04.02.2022 ರಂದು ಮಧ್ಯಾಹ್ನ 1.30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 02.02.2022 ರಂದು ನನ್ನ ಯಜಮಾಣರಾದ ಬಾಬ್ತು ದ್ವಿಚಕ್ರ ವಾಃನ ಅದರ ಸಮಖ್ಯೆ ಕೆಎ-42-ಇಬಿ-6477 ರ ವಾಹನವನ್ನು ನನ್ನ ಯಜಮಾನರಾದ ನೀಲಕಂಠರೆಡ್ಡಿ ರವರು ಚಲಾಯಿಸಿಕೊಂಡು ಹಿಂಬದಿಯಲ್ಲಿ ಶಿವಕುಮಾರ್ ಕೆ.ಎನ್ ಬಿನ್ ಕೆ.ಎನ್.ನಂಜುಂಡಸ್ವಾಮಿ ಕಲ್ಲಂಬಾಳು ಗ್ರಾಮ, ತರಗೂರು ತಾಲ್ಲೂಕು, ಮೈಸೂರು ಜಿಲ್ಲೆಯವರು ಹಾಲಿ ವಾಸ ಕನಕಪುರ ಟೌನ್ ನಲ್ಲಿ ವಾಸಿಸುತ್ತಿದ್ದು ನನ್ನ ಯಜಮಾನರಾದ ನೀಲಕಂಠರೆಡ್ಡಿ ರವರು ಕನಕಪುರ ಟೌನಿನಲ್ಲಿರುವ ಫೈನಾನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು ಮತ್ತು ನನ್ನ ಯಯಜಮಾನರ ದ್ವಿಚಕ್ರ ವಾಹನದಲ್ಲಿ ಹಿಂಬದಿಯ ಸವಾರನಗಿ ಸವಾರಿ ಮಾಡುತ್ತಿದ್ದ ಶಿವಕುಮಾರ್ ಕೆ.ಎನ್ ರವರು ಅದೇ ಪೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಂಪನಿಯ ಕೆಲಸದ ನಿಮಿತ್ತ ಅರಕೆರೆಗೆ ಹೋಗಿದ್ದು ಕೆಲಸ ಮುಗಿಸಿಕೊಂಡು ಗರಳಾಪುರ ಗ್ರಾಮದ ಶಿವರಾಮು ರವರ ಮನೆಯ ಹತ್ತಿರ ವಾಹನ ಚಲಿಸಿಕೊಂಡು ಸುಮಾರು ಸಂಜೆ 5.30 ರ ಸಮಯದಲ್ಲಿ ವಾಪಸ್ ಕನಕಪುರಕ್ಕೆ ಬರುತ್ತಿದ್ದಾಗ ಒಂದು ಕಾರು ಅದರ ಸಂಖ್ಯೆ ಕೆಎ-01-ಎಹೆಚ್-0655 ಮಹೇಂದ್ರ ಕಾರಿನ ಚಾಲಕ ತನ್ನ ವಾಃನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಯಜಮಾಣರು ಸವಾರಿ ಮಾಡುತ್ತಿದ್ದ ಮೇಲೆಕಂಸ ದ್ವಿಚಕ್ರ ವಾಹನಕ್ಕೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಯಜಮಾಣರು ಹಾಗೂ ಹಿಂಬದಿಯ ಸವಾರರಾದ ಶಿವಕುಮಾರ್ ಕೆ.ಎನ್ ರವರು ಗಾಡಿ ಸಮೇತ ಕೆಳಕ್ಕೆ ಬಿದ್ದಾಗ ನನ್ನ ಯಜಮಾನರಿಗೆ ಬಲ ತೊಡೆ ಮತ್ತು ಎರಡೂ ಕಾಲುಗಳ ಮಂಡಿಗಳಿಗೆ ಹಾಗೂ ಇತರ ದೇಹದ ಭಾಗಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಅಲ್ಲಿಯೇ ಇದ್ದ ಯಾರೋ ದಾರಿ ಹೋಕರು ಇಬ್ಬರನ್ನು ಪ್ರಧಮ ಚಿಕಿತ್ಸೆಗಾಗಿ ಕನಕಪುರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನನಗೆ ಅಪಘಾತ ನಡೆದ ವಿಚಾರವನ್ನು ಫೋನ್ ಮುಖಾಂತರ ತಿಳಿಸಲಾಗಿ ನನು ತಕ್ಷಣ ಕನಕಪುರ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಅಪಘಾತವಾದ ವಿಚಾರ ಸತ್ಯವಾಗಿದ್ದು ನನ್ನ ಯಜಮಾಣರಿಗೆ ಹಾಗೂ ಶಿವಕುಮಾರ್ ಕೆ.ಎನ್. ರವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನನ್ನ ಯಜಮಾನರನ್ನು ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಕೋಣನಕುಮಟೆಯಲ್ಲಿರುವ ಆಸ್ಟ್ರಾ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿ ನನ್ನ ಯಮಾನರಿಗೆ ಬಲ ತೊಡೆಯ ಮೂಳೆ ಮುರಿದ್ದಿದ್ದರಿಂದ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲೆ ಕಾರಣ ಮತ್ತು ಮತ್ತೊಂದು ಆಂಬುಲೆನ್ಸ್ ನಲ್ಲಿ ಶಿವಕುಮಾರ್.ಕೆ.ಎನ್ ರವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿ ಅವರಿಗೂ ಕೂಡ ಅವರ ಕಡೆಯವರು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿದ್ದು ವಿಚಾರ ತಿಳಿದುಕೊಂಡು ನಾನು ಈ ದಿನ ತಡವಾಗಿ ಬಂದು ದೂರು ಸಲ್ಲಿಸುತ್ತಿದ್ದೇನೆ. ಆದುದ್ದರಿಂದ ಮೇಲ್ಕಂಡ ಮಹೇಂದ್ರ ಕಾರ್ ಅದರ ಸಂಖ್ಯೆ ಕೆಎ-01-ಎಹೆಚ್-0655 ಚಾಲಕನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಪ್ರಾಥರ್ಿಸಿಕೊಳ್ಳುತ್ತೇನೆ. ಎಂದು ದೂರು
|
12
|
Kudur PS
|
Cr.No:0051/2022
(IPC 1860 U/s 279,337 )
|
04/02/2022
|
MOTOR VEHICLE ACCIDENTS NON-FATAL - National Highways
|
Under Investigation
|
|
|
ಪಿರ್ಯಾದಿ ದಿನಾಂಕ 04/02/2022 ರಂದು ಮಧ್ಯಾಹ್ನ 12-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಮಗ ಕೃಷ್ಣನಿಗೆ ಸುಮಾರು 45 ವರ್ಷ ವಯಸ್ಸಾಗಿದ್ದು ಬೆಂಗಳೂರಿನ ಕೆಂಪೇಗೌಡನಗರ, ಬ್ಯಾಡರಹಳ್ಳಿಯಲ್ಲಿ ಸಂಸಾರ ಸಮೇತವಾಗಿ ವಾಸವಾಗಿದ್ದು, ಕುಣಿಗಲ್ ಬಳಿ ಇರುವ ಹಾಲಪ್ಪನ ಗುಡ್ಡೆ ಬಳಿ ಮೆಡಿಕಲ್ ಶಾಫ್ ಇಟ್ಟುಕೊಂಡಿದ್ದು, ಆಗಾಗ್ಗೆ ಬೆಂಗಳೂರಿನಲ್ಲಿರುವ ಮನೆಗೆ ಹೋಗಿ ಬರುತ್ತಿದ್ದನು. ದಿನಾಂಕ 28/12/2021 ರಂದು ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಮನೆಯಲ್ಲಿರುವಾಗ್ಗೆ ಕೃಷ್ಣನ ಮೋಬೈಲ್ನಿಂದ ಯಾರೋ ಸಾರ್ವಜನಿಕರು ನನಗೆ ಪೋನ್ ಮಾಡಿ ನಿಮ್ಮ ಮಗ ಕೃಷ್ಣ ದಿನಾಂಕ 28/12/2021 ರಂದು ಮಧ್ಯಾಹ್ನ ಸುಮಾರು 2-00 ಗಂಟೆ ಸಮಯಕ್ಕೆ ಕೆ.ಎ 02 ಇ.ಎನ್ 8804 ರ ಟಿ.ವಿ.ಎಸ್ ವಿಕ್ಟರ್ ಬೈಕಿನಲ್ಲಿ ಎನ್.ಹೆಚ್. 75 ಕುಣಿಗಲ್ ನೆಲಮಂಗಲ ರಸ್ತೆ, ಗುಡೇಮಾರನಹಳ್ಳಿ ಬಳಿ ಇರುವ ಸನ್ ಪ್ಯೂರ್ ಆಯಿಲ್ ಪ್ಯಾಕ್ಟರಿ ನೇರದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಬೈಕನ್ನು ಓಡಿಸುತ್ತಿದ್ದ ನನ್ನ ಮಗ ಕೃಷ್ಣ ನಿರ್ಲಕ್ಷತೆಯಿಂದ ಬೈಕನ್ನು ಚಾಲನೆ ಮಾಡಿ ಮುಂದೆ ಹೋಗುತ್ತಿದ್ದ ಯಾವುದೋ ವಾಹನದ ಹಿಂಭಾಗಕಕ್ಕೆ ಡಿಕ್ಕಿ ಹೊಡೆಸಿಕೊಂಡು ಬಿದ್ದು ಹೋಗಿದ್ದು, ಈ ಪರಿಣಾಮವಾಗಿ ತಲೆ ಹಾಗೂ ಇತರೆ ಕಡೆಗಳಿಗೆ ಏಟುಗಳಾಗಿದ್ದು ಗಾಯಾಳುವನ್ನು ಉಪಚರಿಸಿ ನೆಲಮಂಗಲ ಕೇರ್ ಏಶೀಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆಂದು ತಿಳಿಸಿದ ಮೇರೆಗೆ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಆಕ್ಸಿಡೆಂಟ್ ನಿಂದಾಗಿ ನನ್ನ ಮಗನಿಗೆ ಏಟುಗಳಾಗಿದ್ದವು, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅದೆ ದಿನ ರಾತ್ರಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲುಮಾಡಿ ಚಿಕಿತ್ಸೆಯನ್ನು ಕೊಡಿಸಿ, ನನ್ನ ಮಗನ ಜೊತೆಯಲ್ಲಿದ್ದು ಆತನಿಗೆ ಚಿಕಿತ್ಸೆಯನ್ನು ಕೊಡಿಸಿ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಇತ್ಯಾದಿಯಾಗಿ.
|
13
|
Kudur PS
|
Cr.No:0052/2022
(IPC 1860 U/s 279 )
|
04/02/2022
|
MOTOR VEHICLE ACCIDENTS NON-FATAL - National Highways
|
Under Investigation
|
|
|
ದಿನಾಂಕ-04/02/2022 ರಂದು ಮದ್ಯಾಹ್ನ 3.00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲೆ ತಿಳಿಸಿದ ವಿಳಾಸದಲ್ಲಿ ವಾಸವಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಂಕ 31/01/2022 ರಂದು ಕೆಲಸದ ನಿಮಿತ್ತವಾಗಿ ಪುತ್ತೂರಿನಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ಕೆ.ಎ 09 ಜೆಡ್ 3407 ರ ಕಾರಿನಲ್ಲಿ ಹೊರಟೆನು, ಕಾರನ್ನು ನಾನೆ ಓಡಿಸುತ್ತಿದ್ದು, ಬೆಳಗ್ಗೆ ಸುಮಾರು 8-20 ರ ಸುಮಾರಿಗೆ ಎನ್.ಹೆಚ್ 75, ಕುಣಿಗಲ್ ನೆಲಮಂಗಲ ರಸ್ತೆ, ಭದ್ರಾಪುರ ಗೇಟ್ ಬಳಿ ಬೆಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಅದೆ ಸಮಯಕ್ಕೆ ಪಕ್ಕದ ರಸ್ತೆಯಾದ ನೆಲಮಂಗಲ ಕಡೆಯಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯ ಮೂಲಕ ಬಂದ ಕೆ.ಎ 51 ಎ.ಎಫ್ 1649 ರ ಖಾಸಗಿ ಬಸ್ಸಿನ ಚಾಲಕ ಬಸ್ಸನ್ನು ಅತಿವೇ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೆ ಏಕಾಏಕಿ ಯೂ ತಿರುವಿನ ಬಳಿ ತಿರುವು ಪಡೆದು ಬೆಂಗಳೂರು ಕಡೆಗೆ ಹೋಗುವ ರಸ್ತೆಗೆ ಬಂದಿದ್ದು, ಈ ಪರಿಣಾಮವಾಗಿ ನಾನು ಚಾಲನೆ ಮಾಡುತ್ತಿದ್ದು ಕಾರು ಬಸ್ಸಿನ ಎಡಭಾಗದ ಮಧ್ಯ ಭಾಗಕ್ಕೆ ಡಿಕ್ಕಿಯಾಯಿತು, ಈ ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಃಗೊಂಡಿರುತ್ತೆ. ಆಕ್ಸಿಡೆಂಟ್ನಿಂದಾಗಿ ಯಾರಿಗೂ ಯಾವುದೇ ಏಟುಗಳಾಗಿರುವುದಿಲ್ಲ. ಅಪಘಾತಕ್ಕೆ ಕಾರಣನಾದ ಬಸ್ಸಿನ ಚಾಲಕ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿ ರಾಜಿಗೆ ಬಾರದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಸದರಿ ಅಪಘಾತಕ್ಕೆ ಕಾರಣನಾದ ಕೆ.ಎ 51 ಎ.ಎಫ್ 1649 ರ ಖಾಸಗಿ ಬಸ್ಸಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದೆ.
|
14
|
Kudur PS
|
Cr.No:0053/2022
(IPC 1860 U/s 00MP )
|
04/02/2022
|
MISSING PERSON - Women
|
Under Investigation
|
|
|
ದಿನಾಂಕ 04/02/2022 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ್ಗೆ ಸುಮಾರು 4 ವರ್ಷಗಳ ಹಿಂದೆ ದೇವಮ್ಮ ರವರನ್ನು ಮಧುವೆಯಾಗಿದ್ದು ನಮಗೆ 2. 1/2 ವರ್ಷದ ದುರುಣ ಎಂಬ ಹೆಣ್ಣು ಮಗಳಿರುತ್ತಾಳೆ. ಈ ದಿನ ದಿನಾಂಕ: 04/02/2022 ರಂದು 8.30 ಗಂಟೆಯಲ್ಲಿ ನಾನು ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ನನ್ನ ಹೆಂಡತಿಗೆ ಹೇಳಿ ಹೋಗಿದ್ದೆನು. ಬೆಳಿಗ್ಗೆ ಸುಮಾರು 11.00 ಗಂಟೆಯಲ್ಲಿ ನನ್ನ ಹೆಂಡತಿ ದೇವಮ್ಮ ನನ್ನ ಮಗಳನ್ನು ಕರೆದುಕೊಂಡು ಮನೆಯ ಮಾಲಿಕರಾದ ಜಯಲಕ್ಷ್ಮಿ ರವರಿಗೆ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ಬೆಳಿಗ್ಗೆ ಸುಮಾರು 11.30 ಗಂಟೆಗೆ ನನ್ನ ಹೆಂಡತಿಯ ಮೊಬೈಲ್ ನಂಬರ್. 8904845573 ಗೆ ಫೋನ್ ಮಾಡಲಾಗಿ ಫೋನ್ ಸ್ವೀಚ್ ಆಫ್ ಆಗಿರುತ್ತೆ. ನಾನು ತಕ್ಷಣ ಮನೆಗೆ ಬಂದು ನೋಡಲಾಗಿ ನನ್ನ ಹೆಂಡತಿ & ಮಗಳು ಮನೆಯಲ್ಲಿ ಇರಲಿಲ್ಲ. ಆಸ್ಪತ್ರೆಯಿಂದ ಎಲ್ಲಿಗೆ ಹೋದರು ಎಂದು ತಿಳಿದಿಲ್ಲ. ಆದ್ದರಿಂದ ನಾನು ಭಯದಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ಹೆಂಡತಿ & ನನ್ನ ಮಗಳನ್ನು ಪತ್ತೆ ಮಾಡಿ ಕೊಡಬೇಕೆಂದು ಕೋರುತ್ತೇನೆ ಇತ್ಯಾದಿಯಾಗಿ
|
15
|
Kudur PS
|
Cr.No:0054/2022
(KARNATAKA EXCISE ACT, 1965 U/s 15(A),32(3) )
|
04/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ದಿನಾಂಕ 04/02/2022 ರಂದು ಸಂಜೆ 5-45 ಗಂಟೆಗೆ ಠಾಣಾ ಎಎಸ್ಐ-ರಾಮಕೃಷ್ಣಯ್ಯ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 04.02.2022 ರಂದು ಸಂಜೆ ಎಎಸ್ ಐ ರಾಮಕೃಷ್ಣಪ್ಪ ಆದ ನಾನು ಮತ್ತು ಪಿಸಿ 630 ಸುಭಾಸ ಪಿಸಿ 812 ಚೇತನ ರವರ ಜೊತೆಯಲ್ಲಿ ಖಾಸಗಿ ವಾಹನದಲ್ಲಿ ಗಸ್ತಿನಲ್ಲಿದ್ದಾಗ, ಮರೂರು ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 3.30 ಗಂಟೆ ಹೊತ್ತಿಗೆ ತಿಪ್ಪಸಂದ್ರ ಗ್ರಾಮಕ್ಕೆ ಹೋದಾಗ, ತಿಪ್ಪಸಂದ್ರ ಗ್ರಾಮದ ರಸ್ತೆ ಪಕ್ಕದಲ್ಲಿರುವ ಒಂದು ಮನೆಯ ಪಕ್ಕದ ಶೆಡ್ಡಿನ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು 4-5 ಜನ ಮಧ್ಯ ಸೇವನೆ ಮಾಡುತ್ತಿದ್ದು, ಮಧ್ಯ ಸೇವಿಸುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿ ಹೋಗಿರುತ್ತಾರೆ, ಸ್ಥಳದಲ್ಲಿ ಮಧ್ಯದ ಪೌಚ್ ಗಳು ಹಾಗೂ ಪ್ಲಾಸ್ಟಿಕ್ ಲೋಟಗಳು ಇದ್ದು, ನಾವು ಅನುಮಾನಗೊಂಡು, ಸ್ಥಳದಲ್ಲಿದ್ದ ಆಸಾಮಿಯನ್ನು ವಿಚಾರ ಮಾಡಿದ್ದು, ತನ್ನ ಹೆಸರು ಹರೀಶ ಬಿನ್ ಗಂಗಪ್ಪ 46 ವರ್ಷ, ಈಡಿಗ ಜನಾಂಗ, ವವ್ಯಸಾಯ ಕೆಲಸ ವಾಸ: ತಿಪ್ಪಸಂದ್ರ ಗ್ರಾಮ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾ, ರಾಮನಗರ ಜಿಲ್ಲೆ ಎಂದು ತಿಳಿಸಿದ್ದು, ಸದರಿ ಆಸಾಮಿಯ ಬಳಿ ತನ್ನ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರ ಬಗ್ಗೆ ಪರವಾನಿಗೆಯನ್ನು ಹಾಜರ್ ಪಡಿಸುವಂತೆ ಸೂಚಿಸಿದಾಗ, ಸದರಿ ಆಸಾಮಿ ಯಾವುದೇ ಪರವಾನಿಗೆಯನ್ನು ಹಾಜರ್ ಪಡಿಸಿರುವುದಿಲ್ಲ. ಆಗ ಸ್ಥಳದಲ್ಲಿ ಪಂಚನಾಮೆಯನ್ನು ಕೈಗೊಳ್ಳಲು, ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಸ್ಥಳದಲ್ಲಿದ್ದ 90 ಎಂ.ಎಲ್ ನ ಒರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು ಹಾಗೂ ಕುಮಾರ್ ಬಳಿ ಇದ್ದ 3 ಮಧ್ಯ ತುಂಬಿದ ಓರಿಜನಲ್ ಚಾಯ್ಸ್ ಮಧ್ಯದ ಪೌಚ್ ಗಳು, ಹಾಗೂ 2 ಪ್ಲಾಸ್ಟಿಕ್ ಲೋಟಗಳನ್ನು ಸಂಜೆ 4.00 ಗಂಟೆಯಿಂದ ಸಂಜೆ 5.00 ಗಂಟೆ ವರೆಗೆ ಮಹಜರ್ ಮುಖೇನ ಅಮಾನತ್ತು ಪಡಿಸಿಕೊಂಡು, ಮಾಲು ಮತ್ತು ಆರೋಪಿ ಸಮೇತ ಠಾಣೆಗೆ ಕರೆದುಕೊಂಡು ಬಂದು ಸಂಜೆ 5.30 ಗಂಟೆಗೆ ವರದಿಯನ್ನು ತಯಾರಿಸಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿರುತ್ತೇನೆ ಇತ್ಯಾದಿಯಾಗಿ.
|
16
|
Kudur PS
|
Cr.No:0055/2022
(KARNATAKA EXCISE ACT, 1965 U/s 15(A),32(3) )
|
04/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ದಿನಾಂಕ 04.02.2022 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ ಸೋಲೂರು ಹೋಬಳಿ ಲಕ್ಕೇನಹಳ್ಳಿ ಹ್ಯಾಂಡ್ ಪೋಸ್ಟ್, ಲಕ್ಕೇನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.45 ಗಂಟೆ ಸಮಯದಲ್ಲಿ ಠಾಣಾ ಸರಹದ್ದು ಎಣ್ಣೆಗೆರೆ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಬೈರೇಗೌಢ ಎಂಬುವವರಿಗೆ ಸೇರಿದ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ 2-3 ಜನರನ್ನು ಕೂಡಿಸಿಕೊಂಡು ಅವರಿಗೆ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದನ್ನು ಕಂಡು ಸ್ಥಳಕ್ಕೆ ಹೋದಾಗ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದವರು ಸ್ಥಳದಿಂದ ಓಡಿಹೋಗಿರುತ್ತಾರೆ. ಬೈರೇಗೌಢ ಬಿನ್ ಲೇಟ್ ಹುಚ್ಚಪ್ಪ, 52 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಪೆಟ್ಟಿ ಅಂಗಡಿ ಎಣ್ಣೆಗೆರೆ ಗ್ರಾಮ ಸೋಲೂರು ಹೋಬಳಿ, ಈ ಅಂಗಡಿಯ ಬಳಿ ಹೋದಾಗ ಪಕ್ಕದ ಅಂಗಡಿ ಒಂದು ಚಿಲ್ಲರೆ ಅಂಗಡಿಯ ಮುಂದೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಆಗ ಆ ಅಂಗಡಿಯ ಬಳಿಯಲ್ಲಿಗೆ ಹೆಚ್.ಸಿ 308 ರವರು ಭೇಟಿ ನೀಡಿರುತ್ತಾರೆ. ಬೈರೇಗೌಡ ಬಿನ್ ಲೇಟ್ ಹುಚ್ಚಪ್ಪ ರವರು ತನ್ನ ಅಂಗಡಿಯ ಮುಂದಿನ ಸ್ಥಳದಲ್ಲಿ ಮದ್ಯಪಾನ ಮಾಡಿಕೊಟ್ಟಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಸಂಬಂದಪಟ್ಟ ಇಲಾಖೆಯಿಂದ ಪಡೆದಿರುವ ಪರವಾನಗಿಯನ್ನು ಹಾಜರುಪಡಿಸುವಂತೆ ಸೂಚಿಸಿದಾಗ ಆತನು ಯಾವುದೇ ಪರವಾನಗಿಯನ್ನು ಹಾಜರುಪಡಿಸಿರುವುದಿಲ್ಲ. ಆಗ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರುಗಳನ್ನು ಪರಿಚಯಿಸಿಕೊಂಡು ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ ಮಧ್ಯಪಾನ ಮಾಡಿ ಬಿಸಾಡಿದ್ದ ಒರಿಜಿನಲ್ ಚಾಯ್ಸ್ ಕಂಪನಿಯ 90 ಎಂ.ಎಲ್ ಪ್ರಮಾಣದ 02 ಖಾಲಿ ಪೌಚ್ ಗಳು ಮತ್ತು 02 ಪ್ಲಾಸ್ಟಿಕ್ ಲೋಟಗಳು ಬಿದ್ದಿರುತ್ತವೆ. ಅಂಗಡಿಯಲ್ಲಿ ಪರಿಶೀಲಿಸಲಾಗಿ ಅಂಗಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ 90 ಎಂ.ಎಲ್ ಪ್ರಮಾಣದ ಒರಿಜಿನಲ್ ಚಾಯ್ಸ್ ಕಂಪನಿಯ ಮಧ್ಯವಿರುವ 02 ಪೌಚ್ ಗಳು, ವೋಲ್ಡ್ ಟ್ರಾವೆನ್ ವಿಸ್ಕಿ ಕಂಪನಿಯ 90 ಎಂ.ಎಲ್ ಪ್ರಮಾಣದ 01 ಪೌಚ್ ದೊರೆತಿರುತ್ತವೆ. ಇವುಗಳನ್ನು ಸಂಜೆ 6.00 ಗಂಟೆಯಿಂದ 6.30 ಗಂಟೆಯ ವರೆಗೆ ಕೈಗೊಂಡ ಪಂಚನಾಮೆ ಮೂಲಕ ವಶಕ್ಕೆ ಪಡೆದು, ಅಂಗಡಿಯ ಮಾಲೀಕರಾದ ಬೈರೇಗೌಢನನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 7.00ಗಂಟೆಯ ಸಮಯದಲ್ಲಿ ಠಾಣೆಗೆ ಹಾಜರುಪಡಿಸಿರುತ್ತೇನೆ. ತನ್ನ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದ ಬೈರೇಗೌಡ ಬಿನ್ ಲೇಟ್ ಹುಚ್ಚಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.
|
17
|
Kudur PS
|
Cr.No:0056/2022
(KARNATAKA EXCISE ACT, 1965 U/s 15(A),32(3) )
|
04/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ದಿನಾಂಕ 04.02.2022 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ ಸೋಲೂರು ಹೋಬಳಿ ಲಕ್ಕೇನಹಳ್ಳಿ ಹ್ಯಾಂಡ್ ಪೋಸ್ಟ್, ಲಕ್ಕೇನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.45 ಗಂಟೆ ಸಮಯದಲ್ಲಿ ಠಾಣಾ ಸರಹದ್ದು ಎಣ್ಣೆಗೆರೆ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಬೈರೇಗೌಢ ಎಂಬುವವರಿಗೆ ಸೇರಿದ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ 2-3 ಜನರನ್ನು ಕೂಡಿಸಿಕೊಂಡು ಅವರಿಗೆ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದನ್ನು ಕಂಡು ಸ್ಥಳಕ್ಕೆ ಹೋದಾಗ ನಮ್ಮಗಳನ್ನು ನೋಡಿ ಮಧ್ಯಪಾನ ಮಾಡುತ್ತಿದ್ದವರು ಸ್ಥಳದಿಂದ ಓಡಿಹೋಗಿರುತ್ತಾರೆ. ಬೈರೇಗೌಢ ಈ ಅಂಗಡಿಯ ಬಳಿ ಹೋದಾಗ ಪಕ್ಕದ ಅಂಗಡಿ ಒಂದು ಚಿಲ್ಲರೆ ಅಂಗಡಿಯ ಮುಂದೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಆಗ ಆ ಅಂಗಡಿಯ ಬಳಿಯಲ್ಲಿಗೆ ನಾನು ಸಂಜೆ 6.00 ಗಂಟೆಗೆ ಭೇಟಿ ನೀಡಿದಾಗ ಮಧ್ಯಪಾನ ಮಾಡುತ್ತಿದ್ದವರು ಓಡಿ ಹೋಗಿರುತ್ತಾರೆ. ಅಂಗಡಿಯ ಮಾಲೀಕರನ್ನು ವಿಚಾರಿಸಿ ಅವರ ಹೆಸರು ಮತ್ತು ವಿಳಾಸ ಕೇಳಲಾಗಿ ಕೆಂಪೇಗೌಡ ಬಿನ್ ಮುನಿಯಪ್ಪ, 45 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಎಣ್ಣೆಗೆರೆ ಗ್ರಾಮ ಎಂದು ತಿಳಿಸಿರುತ್ತಾರೆ. ಕೆಂಪೇಗೌಡ ಬಿನ್ ಮುನಿಯಪ್ಪ ರವರಿಗೆ ತನ್ನ ಅಂಗಡಿಯ ಮುಂದಿನ ಸ್ಥಳದಲ್ಲಿ ಮದ್ಯಪಾನ ಮಾಡಿಕೊಟ್ಟಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಸಂಬಂದಪಟ್ಟ ಇಲಾಖೆಯಿಂದ ಪಡೆದಿರುವ ಪರವಾನಗಿಯನ್ನು ಹಾಜರುಪಡಿಸುವಂತೆ ಸೂಚಿಸಿದಾಗ ಆತನು ಯಾವುದೇ ಪರವಾನಗಿಯನ್ನು ಹಾಜರುಪಡಿಸಿರುವುದಿಲ್ಲ. ಆಗ ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರುಗಳನ್ನು ಪರಿಚಯಿಸಿಕೊಂಡು ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ ಮಧ್ಯಪಾನ ಮಾಡಿ ಬಿಸಾಡಿದ್ದ ಒರಿಜಿನಲ್ ಚಾಯ್ಸ್ ಕಂಪನಿಯ 180 ಎಂ.ಎಲ್ ಪ್ರಮಾಣದ 02 ಖಾಲಿ ಪೌಚ್ ಗಳು ಮತ್ತು 02 ಪ್ಲಾಸ್ಟಿಕ್ ಲೋಟಗಳು ಬಿದ್ದಿರುತ್ತವೆ. ಅಂಗಡಿಯಲ್ಲಿ ಪರಿಶೀಲಿಸಲಾಗಿ ಅಂಗಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ 180 ಎಂ.ಎಲ್ ಪ್ರಮಾಣದ ಮ್ಯಾಕ್ ಡೊವೇಲ್ಸ್ ಕಂಪನಿಯ ಮಧ್ಯವಿರುವ 03 ಪೌಚ್ ಗಳು, ದೊರೆತಿರುತ್ತವೆ. ಇವುಗಳನ್ನು ಸಂಜೆ 6.15 ಗಂಟೆಯಿಂದ 6.45 ಗಂಟೆಯ ವರೆಗೆ ಕೈಗೊಂಡ ಪಂಚನಾಮೆ ಮೂಲಕ ವಶಕ್ಕೆ ಪಡೆದು, ಅಂಗಡಿಯ ಮಾಲೀಕರಾದ ಕೆಂಪೇಗೌಡ ಬಿನ್ ಮುನಿಯಪ್ಪ ನನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 7.30 ಗಂಟೆಯ ಸಮಯದಲ್ಲಿ ಠಾಣೆಗೆ ಹಾಜರುಪಡಿಸಿರುತ್ತೇನೆ. ತನ್ನ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದ ಬೈರೇಗೌಡ ಬಿನ್ ಲೇಟ್ ಹುಚ್ಚಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.
|
18
|
Kumbalagudu PS
|
Cr.No:0016/2022
(IPC 1860 U/s 454,457,380
|
04/02/2022
|
BURGLARY - NIGHT - At Residential Premises
|
Under Investigation
|
|
|
ದಿನಾಂಕ:-04/02/2022 ರಂದು 12=00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಹೆಂಡತಿ ಮತ್ತು ಮಗಳೊಂದಿಗೆ ವಾಸವಾಗಿರುತ್ತೇನೆ, ನಮ್ಮ ಸ್ವಂತ ಊರಾದ ಕಾಳೇನಹಳ್ಳಿ ಗ್ರಾಮ ಹೊಣಕೇರೆ ಹೋಬಳಿ ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆ ಇಲ್ಲಿ ನಮ್ಮ ತಂದೆ-ತಾಯಿ ವಾಸವಾಗಿರುತ್ತಾರೆ, ದಿನಾಂಕ: 01-02-2022 ರಂದು ನಮ್ಮ ತಂದೆ ಕೃಷ್ಣಪ್ಪ ಕೆ.ಕೆ ರವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲು ನಾನು ಊರಿಗೆ ಹೋಗಿದ್ದು, ನಮ್ಮ ತಂದೆಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 03-02-2022 ರಂದು ಬೆಳಗಿನ ಜಾವ ಮರಣ ಹೊಂದಿರುತ್ತಾರೆ. ನಮ್ಮ ಊರಿಗೆ ಬರಲು ನನ್ನ ಹೆಂಡತಿ ಶ್ರೀಮತಿ.ರಶ್ಮೀ.ಎನ್.ವಿ ಹಾಗೂ ಮಗಳು ಪರಿಣಿಕಾ ರವರು ನನ್ನ ಬಾಬ್ತು ಕೊಮ್ಮಘಟ್ಟದ ಮನೆಗೆ ಬೀಗ ಹಾಕಿಕೊಂಡು ದಿನಾಂಕ: 03-02-2022 ರಂದು ಬೆಳಿಗ್ಗೆ 06-00 ಗಂಟೆಗೆ ಮನೆಯನ್ನು ಬಿಟ್ಟು ನಮ್ಮ ಊರಿಗೆ ಬಂದಿದ್ದರು. ನಮ್ಮ ತಂದೆಯ ಅಂತ್ಯ ಸಂಸ್ಕಾರವನ್ನು ಮುಗಿಸಿಕೊಂಡು ನನ್ನ ಹೆಂಡತಿ ಮಗಳನ್ನು ಊರಿನಲ್ಲಿ ಬಿಟ್ಟು ನಾನು ಬೆಂಗಳೂರಿಗೆ ಬಂದು ನನ್ನ ಅಕ್ಕ ಲತಾ ರವರ ಮನೆಯಲ್ಲಿ ಇದ್ದೆನು. ಈ ದಿನ ದಿನಾಂಕ: 04-02-2022 ರಂದು ಬೆಳಿಗ್ಗೆ 06-00 ಗಂಟೆಗೆ ನಮ್ಮ ಅಕ್ಕನ ಮನೆಯನ್ನು ಬಿಟ್ಟು ಕೊಮ್ಮಘಟ್ಟದ ಮನೆಗೆ ಬೆಳಿಗ್ಗೆ 07-00 ಗಂಟೆಗೆ ಹೋದಾಗ, ಯಾರೋ ಕಳ್ಳರು ನಮ್ಮ ಮನೆಯ 1ನೇ ಮಹಡಿಯ ಮುಂದಿನ ಬಾಗಿಲ ಬೀಗವನ್ನು ಹೊಡೆದು, ಬಾಗಿಲನ್ನು ಮೀಟಿ ಮನೆಯ ಒಳ ಹೋಗಿ, 2ನೇ ಮಹಡಿಯಲ್ಲಿದ್ದ ನನ್ನ ರೂಮಿನ ಬಾಗಿಲ ಬೀಗವನ್ನು ಹೊಡೆದು ಹಾಕಿ ರೂಮಿನಲ್ಲಿದ್ದ ವಾರ್ಡರೂಬ್ ನಲ್ಲಿಟ್ಟಿದ್ದ ನನ್ನ ಚಿನ್ನದ ಒಡವೆಗಳಾದ 1) 25 ಗ್ರಾಂ ತೂಕದ ಚಿನ್ನದ ಸರ, 2)06 ಗ್ರಾಂ ತೂಕದ ಒಂದು ಉಂಗುರ, 3) 05 ಗ್ರಾಂ ತೂಕದ ಚಿನ್ನದ ಉಂಗುರ, ನನ್ನ ಹೆಂಡತಿಯ ಬಾಬ್ತು 1) 04 ಗ್ರಾಂ ತೂಕದ ಚಿನ್ನದ ಉಂಗುರ, 2) 02 ಗ್ರಾಂ ತೂಕದ ಚಿನ್ನದ ಉಂಗುರ, 03) 07 ಗ್ರಾಂ ತೂಕದ ಕಿವಿಯ ಓಲೆ ಮತ್ತು 22,000/-ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಚಿನ್ನದ ಒಡವೆಗಳ ಒಟ್ಟು ಬೆಲೆ ಸುಮಾರು 1,13,000/- ರೂ ಆಗಿರುತ್ತದೆ. ಆದ್ದರಿಂದ ದಿನಾಂಕ: 03-02-2022 ರ ಬೆಳಿಗ್ಗೆ 06-00 ಗಂಟೆಯಿಂದ ದಿನಾಂಕ: 04-02-2022 ರಂದು ಬೆಳಿಗ್ಗೆ 06-00 ಗಂಟೆಯ ಒಳಗೆ ನಮ್ಮ ಮನೆಯ ಬೀಗವನ್ನು ಹೊಡೆದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಚಿನ್ನದ ಒಡವೆಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.
|
19
|
Ramanagara CEN Crime PS
|
Cr.No:0007/2022
(INFORMATION TECHNOLOGY ACT 2008 U/s 66(C),66(D) ; IPC 1860 U/s 420 )
|
04/02/2022
|
CYBER CRIME - Information Technology Act 2000, 2009
|
Under Investigation
|
|
|
ದಿನಾಂಕ 04.02.2022 ರಂದು ಮದ್ಯಾಹ್ನ 12.00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಆರ್ ಬಿ ಎಲ್ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್ ಪಡೆದುಕೊಡಿದ್ದು, ಇದರ ಸಂಖ್ಯೆ 5369077371091218 ಆಗಿದ್ದು, ದಿನಾಂಕ 03.02.2022 ರಂದು ನನ್ನ ಕ್ರೆಡಿಟ್ ಕಾರ್ಡ್ ಗೆ ಹಣ ಕಳಿಸಿದ್ದಕ್ಕೆ ಸಂದೇಶ ಬಾರದ ಕಾರಣ ಸಂಜೆ ಸುಮಾರು 4.00 ಗಂಟೆಯಲ್ಲಿ 18002082368 ನಂಬರ್ ಗೆ ಕರೆ ಮಾಡಿದ್ದು, 5-10 ನಿಮಿಷಗಳ ನಂತರ 8695335283 ನಂಬರಿನಿಂದ ನನಗೆ ಕರೆ ಮಾಡಿ ನಾವು ಕಸ್ಟಮರ್ ಕೇರ್ ನಿಂದ ಮಾತನಾಡುತ್ತಿದ್ದೇವೆ ಏನು ಸಮಸ್ಯೆ ಹೇಳಿ ಎಂದು ಕೇಳಿದಾಗ ನಾನು ನನಗಾದ ತೊಂದರೆಯನ್ನು ಹೇಳಿ ಆಪರೇಟ್ ಮಾಡಿ ಹೇಳುತ್ತಿದ್ದಂತೆ ಮೊದಲ ಬಾರಿ 50299 ರೂಗಳು, ಎರಡನೇ ಬಾರಿ 38372 ರೂಗಳು, ಮೂರನೇ ಬಾರಿ 5185 ರೂಗಳು, ನಾಲ್ಕನೇ ಬಾರಿ 3629 ರೂಗಳು ಹೀಗೆ ಒಟ್ಟು ನಾಲ್ಕು ಬಾರಿ 97487.42 ರೂಗಳನ್ನು ಮೋಸ ಮಾಡಿ ನನ್ನ ಕ್ರಡೆಟ್ ಕಾರ್ಡ್ ನಿಂದ ವರ್ಗಾಯಿಸಿಕೊಂಡಿರುತ್ತಾರೆ. ಇವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ
|
20
|
Ramanagara Rural PS
|
Cr.No:0036/2022
(IPC 1860 U/s 506,341,34,504,323,324 )
|
04/02/2022
|
CASES OF HURT - Simple Hurt
|
Under Investigation
|
|
|
ದಿನಾಂಕ-04-02-2022 ರಂದು ಪಿರ್ಯಾದಿಯಾದ ಸಿದ್ದರಾಜು ರವರು ಠಾಣೆಗ ಹಾಜರಾಗಿ ದಿನಾಂಕ-03-02-2022 ರಂದು ರಾತ್ರಿ 10-30 ರ ಸಮಯದಲ್ಲಿ ರಾಮನಗರದಿಂದ ನೆಲಮಲೆಗೆ ಬರಲು ರೇವಣಸಿದ್ದೇಶ್ವರ ಬೆಟ್ಟದ ಬಳಿ ಬಂದಾಗ ಅವ್ವೇರಹಳ್ಳಿ ಕಡೆಯಿಂದ ಕಾರಿನಲ್ಲಿ ಬಂದಂತಹ ನಮ್ಮ ಗ್ರಾಮದ ವೇಣುಗೋಪಾಲ ಎಂಬುುವನು ಕಾರನ್ನು ನಿಲ್ಲಿಸಿ ನನಗೆ ಹಿಂದೆ ಅದ ಗಲಾಟೆಯಾದ ವಿಚಾರದಲ್ಲಿ ನೀನು ಯಾಕೇ ಕಾತರ್ಿಕ್ನ ಕಡೆ ಇದ್ದೀಯಾ ಎಂದು ಬೈದನು, ಆಗ ನನಗೂ ಹಾಗೂ ವೇಣುಗೋಪಾಲನಿಗೂ ಸಣ್ಣ ಪುಟ್ಟ ಗಲಾಟೆಯಾಗಿದ್ದು, ನಂತರ ನಾನು ಊರಿಗೆ ಬರುತ್ತಿದ್ದಾಗ ವೇಣುಗೋಪಾಲ ಅರುಣ್ನನ್ನು ರಾತ್ರಿ 10-30 ರ ಸಮಯದಲ್ಲಿ ಕರೆಸಿಕೊಂಡು ಪೂಜಾರಿದೊಡ್ಡಿ ಸ್ಕೂಲ್ ಹತ್ತಿರ ನನ್ನನ್ನು ಆಡ್ಡಗಟ್ಟಿ ನನಗೆ ಬೈದು ಕೈಗಳಿಂದ ಹೊಡೆದು ಗಲಾಟೆ ಮಾಡಿದ್ದು, ಆಗ ನಾನು ಕಾತರ್ಿಕ್ನಿಗೆ ಪೋನ್ ಮಾಡಿ ಗಲಾಟೆಯಾದ ವಿಚಾರವನ್ನು ತಿಳಿಸಿ ಸ್ಥಳಕ್ಕೆ ಕರೆಸಿದೆ ನಂತರ ಅರುಣ್ ಮತ್ತು ವೇಣುಗೋಪಾಲ ನನಗೆ ಹಾಗೂ ಕಾತರ್ಿಕ್ನಿಗೆ ಬಟ್ಟೆಯನ್ನು ಹರಿದು ಹಾಕಿ ಮುಖದ ಮೇಲೆ ಹೊಡೆದನು ಹಾಗೂ ದೊಣ್ಣೆಯಿಂದ ಅರುಣ್ ಮತ್ತು ವೇಣುಗೋಪಾಲ ರವರು ಹೊಡೆದರು. ನೀನು ಕಾತರ್ಿಕ್ನಿಗೆ ಸಪೋಟ್ ಮಾಡಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಸಹ ಹಾಕಿರುತ್ತಾರೆಂತ ತಾವುಗಳು ಮುಂದಿನ ರೀತಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ
|
21
|
Ramanagara Rural PS
|
Cr.No:0037/2022
(KARNATAKA POLICE (AMENDMENT) ACT, 2021 U/s 87 )
|
04/02/2022
|
KARNATAKA POLICE ACT 1963 - Street Gambling (87)
|
Under Investigation
|
|
|
ರಾಮನಗರ ಜಿಲ್ಲೆ, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಶ್ರೀ ನರಸಿಂಹಮೂರ್ತಿ ಆದ ನಾನು ಟೈಪ್ ಮಾಡಿಸಿ ನೀಡಿದ ವರದಿ ಏನೆಂದರೆ,
ಈ ದಿನ ದಿನಾಂಕ: 04.02.2022 ರಂದು ಸಾಯಂಕಾಲ 4.00 ಗಂಟೆ ಸಮಯದಲ್ಲಿ ಗಸ್ತಿನಲ್ಲಿರುವಾಗ್ಗೆ ಠಾಣಾ ಗುಪ್ತ ಮಾಹಿತಿ ಸಂಗಹ್ರಹ ಸಿಬ್ಬಂದಿಯಾದ ಪಿಸಿ 712 ಸುಮಂತ್ ರವರು ರಾಮನಗರ ತಾಲ್ಲೂಕ್, ಕೂಟಗಲ್ ಹೋಬಳಿ, ಚಿಕ್ಕಗಂಗವಾಡಿ ಗ್ರಾಮ, ಚಿಕ್ಕಗಂಗವಾಡಿ ವೀರುಪಸಂದ್ರ ರಸ್ತೆ, ಸಾವಂದಯ್ಯ ರವರ ಮಾವಿನ ತೋಟದ ಜಮೀನಿನಲ್ಲಿ ಸುಮಾರು 6-7 ಜನರು ಗುಂಪಾಗಿ ಕುಳಿತು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟವನ್ನು ಆಡುತ್ತಿದ್ದಾರೆಂತ ಖಚಿತ ಮಾಹಿತಿ ಬಂದ ಮೇರೆಗೆ ನಾನು ಠಾಣಾ ಸಿಬ್ಬಂದಿಗಳಾದ ಸಿಪಿಸಿ 131 ನಂದೀಶ್, ಪಿಸಿ 712 ಸುಮಂತ್, ಪಿಸಿ 115 ಗಿರೀಶ್, ಪಿಸಿ 695 ಗಿರೀಶ್, ಪಿಸಿ 661 ಸುನೀಲ್ ಗೌಡ, ಪಿಸಿ 879 ಪವನಕುಮಾರ್ ರವರುಗಳನ್ನು ಕರೆದು ಅವರಿಗೆ ವಿಚಾರ ತಿಳಿಸಿ ನಂತರ ಇಬ್ಬರು ಸಾರ್ವಜನಿಕರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಸಾರ್ವಜನಿಕರಿಬ್ಬರಿಗೆ ಸದರಿ ಸ್ಥಳದಲ್ಲಿ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ನೀವುಗಳು ನಮ್ಮೊಂದಿಗೆ ಪಂಚರಾಗಿ ಬರಬೇಕೆಂದು ಕೋರಿದೆನು. ಅವರುಗಳು ಪಂಚರಾಗಲು ಒಪ್ಪಿಕೊಂಡರು, ಆಗ ನಾನು, ಪಂಚರು ಮತ್ತು ಸಿಬ್ಬಂದಿಗಳನ್ನು ಖಾಸಗಿ ವಾಹನದಲ್ಲಿ ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ ಸಾಯಂಕಾಲ 4.45 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ 6-7 ನರು ಗುಂಪಾಗಿ ವೃತ್ತಾಕಾರದಲ್ಲಿ ಕುಳಿತು ಹಣವನ್ನು ಪಣವಾಗಿ ಕಟ್ಟುತ್ತಾ ಅಂದರ್ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದರು. ನಾನು ಸಿಬ್ಬಂದಿಯವರಿಗೆ ಇಸ್ಪೀಟ್ ಆಟ ಆಡುತ್ತಿರುವವರನ್ನು ಸುತ್ತುವರೆಯುವಂತೆ ಸೂಚಿಸಿ ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಜೂಜಾಡುತ್ತಿದ್ದವರ ಸುತ್ತುವರೆದು ದಾಳಿಮಾಡಿ ಜೂಜಾಡುತ್ತಿದ್ದ 7 ಜನರನ್ನು ವಶಕ್ಕೆ ಪಡೆದುಕೊಂಡಿದ್ದು ಹೆಸರು ವಿಳಾಸ ಕೇಳಲಾಗಿ 1) ರಮೇಶ್ ಬಿನ್ ಚಿಕ್ಕಯ್ಯ, 30 ವರ್ಷ, ಡ್ರೈವರ್ ಕೆಲಸ, ಹೊಂಬೇಗೌಡನದೊಡ್ಡಿ ಗ್ರಾಮ, ಕೂಟಗಲ್ ಹೋಬಳಿ, ರಾನಮನಗರ ತಾ|| 2) ಚಿಕ್ಕಬೈರಪ್ಪ ಬಿನ್ ಲೇಟ್ ಅಂದಾನಯ್ಯ, 62 ವರ್ಷ, ವ್ಯವಸಾಯ, ಒಕ್ಕಲಿಗರು, ವಾಸ: ಜಾಲಮಂಗಲ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 3) ಹೇಮಂತ್ ಕುಮಾರ್ ಬಿನ್ ಲೇಟ್ ಗೌರಿಶಂಕರ್, 35 ವರ್ಷ, ಲಿಂಗಾಯತರು, ವ್ಯವಸಾಯ, ದೊಡ್ಡಗಂಗವಾಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 4) ಮಹೇಶ್ ಬಿನ್ ಲೇಟ್ ವೀರಯ್ಯ 35 ವರ್ಷ, ಲಿಂಗಾಯತರು, ವ್ಯವಸಾಯ, ದೊಡ್ಡಗಂಗವಾಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 5) ಚಂದ್ರಶೇಖರ್ ಬಿನ್ ಲೇಟ್ ಬೋರಯ್ಯ, 50 ವರ್ಷ, ಪಜಾ, ವ್ಯವಸಾಯ, ಚಿಕ್ಕ್ಡಗಂಗವಾಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 6) ಸಿದ್ದಲಿಂಗಯ್ಯ ಬಿನ್ ಲೇಟ್ ಚನ್ನಯ್ಯ, 60 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ: ಹೊಂಬೇಗೌಡನದೊಡ್ಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| 7) ಲೊಕೇಶ್ @ ರಂಗಸ್ವಾಮಿ ಬಿನ್ ಪಾಪಣ್ಣ ಬಿನ್ 40 ವರ್ಷ, ಒಕ್ಕಲಿಗರು, ವ್ಯವಸಾಯ, ಹೊಂಬೇಗೌಡನದೊಡ್ಡಿ ಗ್ರಾಮ, ಕೂಟಗಲ್ ಹೋಬಳಿ, ರಾಮನಗರ ತಾ|| ಎಂದು ತಿಳಿದಿರುತ್ತದೆ. ನಂತರ ಪಂಚಾಯ್ತಿದಾರರ ಸಮಕ್ಷಮ ಸ್ಥಳ ಪರಿಶೀಲನೆ ಮಾಡಲಾಗಿ ಇವರೆಲ್ಲಾ 4 ನ್ಯೂಸ್ ಪೆಪರ್ ಗಳನ್ನು ಹಾಸಿಕೊಂಡು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ವೀಟ್ ಜೂಜಾಟವಾಡುತ್ತಿದ್ದು, ಮೇಲ್ಕಂಡವರು ಅಂದರ್ ಬಾಹರ್ ಇಸ್ಪೀಟ್ ಆಟವಾಡುತ್ತಿದ್ದರಿಂದ ಇವರು ಆಟಕ್ಕೆ ಉಪಯೋಗಿಸುತ್ತಿದ್ದ 3460/-ರೂ ಹಣವನ್ನು, 4 ನ್ಯೂಸ್ ಪೇಪರ್ ಗಳನ್ನು, 52 ಇಸ್ಪೀಟ್ ಎಲೆಗಳನ್ನು ಸಾಯಂಕಾಲ 5.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಸ್ಥಳದಲ್ಲಿ ಲ್ಯಾಪಟಾಪ್ನಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮುಂದಿನ ತನಿಖೆ ಬಗ್ಗೆ ಇವುಗಳನ್ನು ಅಮಾನತ್ತು ಪಡಿಸಿಕೊಂಡು ನಾವು ವಶಕ್ಕೆ ಪಡೆದುಕೊಂಡಿದ್ದ ಮೇಲ್ಕಂಡ 7 ಜನ ಆಸಾಮಿಗಳನ್ನು ಹಾಗೂ ಅಮಾನತ್ತು ಪಡಿಸಿಕೊಂಡ 3460/- ರೂ ಹಣ, 4 ನ್ಯೂಸ್ ಪೇಪರ್ ಗಳನ್ನು, 52 ಇಸ್ಪೀಟ್ ಎಲೆಗಳನ್ನು ಸಂಜೆ 6.45 ಗಂಟೆಗೆ ಠಾಣೆಗೆ ವಾಪಸ್ ಬಂದು ಮೇಲ್ಕಂಡ ಒಟ್ಟು 7 ಜನ ಆಸಾಮಿಗಳ ವಿರುದ್ಧ ಮುಂದಿನ ಕ್ರಮಕ್ಕಾಗಿ ಎಸ್.ಹೆಚ್.ಓ ರವರಿಗೆ ಸೂಚಿಸಿ ವರದಿ ನೀಡಿರುತ್ತೇನೆ. ಎಂದು ನೀಡಿದ ವರದಿ ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿರುತ್ತೆ.
|
22
|
Ramanagara Town PS
|
Cr.No:0007/2022
(KARNATAKA EXCISE ACT, 1965 U/s 32(3) )
|
04/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ರಾಮನಗರ ಪುರ ವೃತ್ತ ಕಛೇರಿಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ. ಮೋಹನ್ ರೆಡ್ಡಿ ಆದ ನಾನು ಟೈಪ್ ಮಾಡಿಸಿಕೊಟ್ಟ ವರದಿ.
ಈ ದಿನ ದಿನಾಂಕ: 04-02-2021 ರಂದು ಮಧ್ಯಾಹ್ನ 03.00 ಗಂಟೆಯಲ್ಲಿ ನಾನು ಕಛೇರಿಯಲ್ಲಿರುವಾಗ್ಗೆ ನನಗೆ ರಾಮನಗರ ಟೌನ್ ಟಿಪ್ಪುನಗರ 3ನೇ ಕ್ರಾಸ್ ದಿನಸಿ ಅಂಗಡಿ ಬಳಿ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸಾರ್ವಜನಿಕರಿಗೆ ಸ್ಧಳದಲ್ಲಿ ಕುಡಿಯಲು ಕೊಡುತ್ತಿದ್ದಾನೆಂದು ಬಾತ್ಮೀದಾರರಿಂದ ಮಾಹಿತಿ ಬಂದಿದ್ದು ನಂತರ ನಾನು ಠಾಣೆಗೆ ಪಂಚಾಯ್ತರನ್ನು ಬರಮಾಡಿಕೊಂಡು ಠಾಣಾ ಸಿಬ್ಬಂದಿಗಳಾದ ಎಎಸ್ಐ ದೇವುಕುಮಾರ್, ಹೆಚ್.ಸಿ-246 ಶರತ್ ಕುಮಾರ್, ಹೆಚ್.ಸಿ-209 ನಾಗರಾಜಯ್ಯರವರುಗಳು ಮತ್ತು ಪಂಚಾಯ್ತರನ್ನು ಸರ್ಕಾರಿ ಜೀಪ್ ಕೆ.ಎ-42-ಜಿ-444ರಲ್ಲಿ ಚಾಲಕರಾಗಿ ಶಿವಕುಮಾರ್ ಎಹೆಚ್.ಸಿ- 107 ರವರಿದ್ದು ಮಧ್ಯಾಹ್ನ 03.05 ಗಂಟೆಗೆ ಠಾಣೆಯಿಂದ ಹೊರಟು ಸ್ಧಳಕ್ಕೆ ಮಧ್ಯಾಹ್ನ 03.15 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ನೋಡಲಾಗಿ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸುಮಾರು 12-15 ಜನರಿಗೆ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದು ಸದರಿ ವ್ಯಕ್ತಿಯ ಮೇಲೆ ಸಿಬ್ಬಂದಿ ಸಮೇತ ದಾಳಿ ಮಾಡಿದಾಗ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು ನಂತರ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಅಸ್ಲಂಪಾಷ ಬಿನ್ ಲೇ|| ಅಬ್ದುಲ್ ಅಜೀಸ್, 50 ವರ್ಷ, ಮುಸ್ಲಿಂ, ಫಿಲ್ಲೇಚರಿ ಫ್ಯಾಕ್ಟರಿ ಮಾಲೀಕರು, ವಾಸ: 3ನೇ ಕ್ರಾಸ್ ಮುನೀರ್ ರವರ ಮನೆ ಹತ್ತಿರ, 23 ನೇ ವಾರ್ಡ್, ಟಿಪ್ಪುನಗರ ರಾಮನಗರ ಟೌನ್ ಎಂದು ತಿಳಿಸಿರುತ್ತಾನೆ. ನಂತರ ನೆಲದ ಮೇಲೆ ಒಂದು ಪ್ಲಾಸ್ಟಿಕ್ ಕವರ್ ನಲ್ಲಿದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ 90 ML ನ Haywards Cheers Whisky ಮದ್ಯ ತುಂಬಿರುವ 22 ಪ್ಯಾಕೆಟ್ ಗಳು ಮತ್ತು ಸ್ಧಳದಲ್ಲಿ ಬಿದ್ದಿದ್ದ 90 ML ನ Haywards Cheers Whisky 03 ಖಾಲಿ ಪ್ಯಾಕೆಟ್ ಗಳು, 90 ML ನ Sliver Cup Brandy ಮದ್ಯ ತುಂಬಿರುವ 02 ಪ್ಯಾಕೆಟ್ ಗಳು ಹಾಗೂ 10 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 03.20 ಗಂಟೆಯಿಂದ ಸಂಜೆ 04.20 ಗಂಟೆಯವರೆಗೆ ಪಂಚನಾಮೆ ಜರುಗಿಸಿ ಮಾಲಿನ ಸಮೇತ ಆರೋಪಿಯನ್ನು ಸಂಜೆ 04.35 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಮದ್ಯ ಸೇವನೆಗೆ ನಿಯಮಾನುಸಾರ ಸ್ಧಳದ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಧಳದಲ್ಲಿ ನಿಯಮ ಬಾಹಿರವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಆರೋಪಿಯ ವಿರುದ್ಧ ವರದಿ ತಯಾರು ಮಾಡಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ.
|
23
|
Ramanagara Town PS
|
Cr.No:0008/2022
(KARNATAKA EXCISE ACT, 1965 U/s 32(3) )
|
04/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ರಾಮನಗರ ಪುರ ವೃತ್ತ ಕಛೇರಿಯಲ್ಲಿ ಸಿ.ಪಿ.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಎಂ ಮೋಹನ್ ರೆಡ್ಡಿ ಆದ ನಾನು ಟೈಪ್ ಮಾಡಿಸಿಕೊಟ್ಟ ವರದಿ.
ಈ ದಿನ ದಿ: 04-02-2022 ರಂದು ಸಂಜೆ 05.40 ಗಂಟೆಯಲ್ಲಿ ನಾನು ರಾಮನಗರ ಪುರ ವೃತ್ತ ಕಛೇರಿಯಲ್ಲಿರುವಾಗ್ಗೆ ನನಗೆ ರಾಮನಗರ ಟೌನ್ ಬಾಲಗೇರಿಯ ಬಿಸಿಲು ಮಾರಮ್ಮ ದೇವಸ್ಥಾನದ ರಸ್ತೆ, ಚಿಲ್ಲರೆ ಅಂಗಡಿ ಮುಂಭಾಗ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ಗಳಿಗೆ ಹಾಕಿ ಸಾರ್ವಜನಿಕರಿಗೆ ಸ್ಧಳದಲ್ಲಿ ಕುಡಿಯಲು ಕೊಡುತ್ತಿದ್ದಾನೆಂದು ಬಾಲಗೇರಿ ಬೀಟ್ ಸಿಬ್ಬಂದಿ ಪಿ.ಸಿ-684 ಶ್ರೀ ಸುದರ್ಶನ್ ರವರು ಮಾಹಿತಿ ನೀಡಿದ್ದು, ನಾನು ಕಛೇರಿಗೆ ಪಂಚಾಯ್ತರನ್ನು ಬರಮಾಡಿಕೊಂಡು ಠಾಣಾ ಸಿಬ್ಬಂದಿಗಳಾದ ಹೆಚ್.ಸಿ-246 ಶ್ರೀ ಶರತ್, ಪಿಸಿ-851 ಶ್ರೀ ಮುನಿರಾಜ ನಾಯ್ಕ ರವರುಗಳು ಮತ್ತು ಪಂಚಾಯ್ತರನ್ನು ಸರ್ಕಾರಿ ಜೀಪ್ ಕೆ.ಎ-42-ಜಿ-444 ರಲ್ಲಿ ಚಾಲಕರಾಗಿ ಎಹೆಚ್.ಸಿ-107 ಶಿವಕುಮಾರ್ ರವರಿದ್ದು ಸಂಜೆ 06.00 ಗಂಟೆಗೆ ಠಾಣೆಯಿಂದ ಹೊರಟು ಸ್ಧಳಕ್ಕೆ ಸಂಜೆ 06.10 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ನೋಡಲಾಗಿ ಒಬ್ಬ ವ್ಯಕ್ತಿ ಮದ್ಯದ ಪ್ಯಾಕೆಟ್ ಗಳಿಂದ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ 15-20 ಜನ ಸಾರ್ವಜನಿಕರಿಗೆ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದು, ಸದರಿ ವ್ಯಕ್ತಿಯ ಮೇಲೆ ಸಿಬ್ಬಂದಿ ಸಮೇತ ದಾಳಿ ಮಾಡಿದಾಗ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು ನಂತರ ಮದ್ಯವನ್ನು ಗ್ಲಾಸ್ ಗಳಿಗೆ ಹಾಕಿ ಸ್ಧಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಪಿ. ಗಿರೀಶ್ ಬಿನ್ ವೆಂಕಟೇಶ್, 42 ವರ್ಷ, ಬೆಸ್ತರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಬಿಸಿಲು ಮಾರಮ್ಮ ದೇವಸ್ಥಾನದ ಹತ್ತಿರ, ವಾರ್ಡ್ ನಂ.17, ರಾಮನಗರ ಟೌನ್ ಎಂದು ತಿಳಿಸಿರುತ್ತಾನೆ. ನಂತರ ನೆಲದ ಮೇಲೆ ಕಪ್ಪು ಬಣ್ಣದ ಒಂದು ಪ್ಲಾಸ್ಟಿಕ್ ಕವರ್ ನಲ್ಲಿದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ 90 ML ನ ಮದ್ಯ ತುಂಬಿರುವ Haywards Cheers Whisky 6 ಪ್ಯಾಕೆಟ್ಗಳು ಮತ್ತು 90 ML ನ ಮದ್ಯ ತುಂಬಿರುವ Original Choice Deluxe Whisky 2 ಪ್ಯಾಕೆಟ್ ಗಳು, 90 ML ನ ಮದ್ಯ ತುಂಬಿರುವ DK DOUBLE KIKE FINE WHISKY 7 ಪ್ಯಾಕೆಟ್ ಗಳು ಹಾಗೂ 90 ML ನ ಮದ್ಯ ತುಂಬಿರುವ AMRUTH’S SILVER-CUP Rare INDIAN BRANDY 6 ಪ್ಯಾಕೆಟ್ ಗಳು ಹಾಗೂ ಸ್ಥಳದಲ್ಲಿ ಬಿದ್ದಿದ್ದ 90 ML ನ Haywards Cheers Whisky 3 ಖಾಲಿ ಪ್ಯಾಕೆಟ್ ಹಾಗೂ 08 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಮಾನತ್ತುಪಡಿಸಿಕೊಂಡು ಸಂಜೆ 06.20 ಗಂಟೆಯಿಂದ ಸಂಜೆ 07.20 ಗಂಟೆಯವರೆಗೆ ಪಂಚನಾಮೆ ಜರುಗಿಸಿ ಮಾಲಿನ ಸಮೇತ ಆರೋಪಿಯನ್ನು ಸಂಜೆ 07.30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಮದ್ಯ ಸೇವನೆಗೆ ನಿಯಮಾನುಸಾರ ಸ್ಧಳದ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಧಳದಲ್ಲಿ ನಿಯಮ ಬಾಹಿರವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಆರೋಪಿಯ ವಿರುದ್ಧ ವರದಿ ತಯಾರು ಮಾಡಿ ಎಸ್.ಹೆಚ್.ಒ.ರವರಿಗೆ ನೀಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ ಮೇರೆಗೆ.
|
24
|
Tavarekere PS
|
Cr.No:0043/2022
(KARNATAKA EXCISE ACT, 1965 U/s 15(A),32(3) )
|
04/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ದಿನಾಂಕ:04.02.2022 ರಂದು ಸಂಜೆ 5.00 ಗಂಟೆಗೆ ಠಾಣಾ ಹೆಚ್.ಸಿ-331 ರವರು ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ: 04.02.2022 ರಂದು ಬೆಳಿಗ್ಗೆ ನನಗೆ ಹಾಗೂ ಲಕ್ಷ್ಮಿಕಾಂತ ಹೆಚ್ಸಿ-410 ರವರಿಗೆ ಠಾಣಾ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾವು ದೊಡ್ಡಾಲದಮರ, ಚಂದ್ರಪ್ಪ ಸರ್ಕಲ್, ಹುಣ್ಣಿಗೆರೆ ಕಡೆಗಳಲ್ಲಿ ಗಸ್ತು ಮಾಡುತ್ತಿರುವಾಗ್ಗೆ, ಮಧ್ಯಾಹ್ನ 3.00 ಗಂಟೆಗೆ ಮಾದಾಪಟ್ಟಣ ಗ್ರಾಮದ ಬಂಡೆ ಕ್ರಾಸ್ನಲ್ಲಿರುವ ಪೆಟ್ಟಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಪೆಟ್ಟಿ ಅಂಗಡಿಯ ಮಾಲೀಕ ರವಿ ಎಂಬುವನು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸ್ಥಳದಲ್ಲಿ ಸುಮಾರು 5-6 ಜನರು ಮಧ್ಯಪಾನ ಮಾಡುತ್ತಿರುತ್ತಾರೆಂದು ಮಾಹಿತಿ ಭಾತ್ಮಿ ಬಂದಿದ್ದು, ಕೂಡಲೇ ಹುಣ್ಣಿಗೆರೆ ಗ್ರಾಮದ ಬಳಿಗೆ ಪಂಚಾಯತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಪಂಚಾಯತಿದಾರರಾಗಿ ಹಾಜರಿದ್ದು ಸಹಕರಿಸಬೇಕೆಂದು ಕೋರಿದ ಮೇರೆಗೆ ಅವರು ಒಪ್ಪಿಕೊಂಡಿರುತ್ತಾರೆ.
ನಂತರ ನಾವು ಪಂಚಾಯತಿದಾರರೊಂದಿಗೆ ಮಾದಾಪಟ್ಟಣದ ಬಂಡೆ ಕ್ರಾಸ್ನಲ್ಲಿರುವ ಪೆಟ್ಟಿ ಅಂಗಡಿಯ ಬಳಿಗೆ ಹೋಗಿ ದೂರದಲ್ಲಿ ನಿಂತು ನೋಡಲಾಗಿ ಸುಮಾರು 5-6 ಜನರು ಮಧ್ಯಪಾನ ಮಾಡುತ್ತಿರುವುದು ಕಂಡು ಬಂದ ಮೇರೆಗೆ ನಾವು ಅಲ್ಲಿಗೆ ಹೋಗುಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿದ್ದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ರವಿ ಬಿನ್ ತಿಮ್ಮೇಗೌಡ, 39 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಎಸ್.ಪಿ.ಜಿ ಬಡಾವಣೆ, ತಾವರೆಕೆರೆ ಟೌನ್, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಸ್ಥಳದಲ್ಲಿ ಸಾರ್ವಜನಿಕರು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ ಮೇರೆಗೆ ಆತನಿಗೆ ಪರವಾನಗಿಯನ್ನು ಹಾಜರುಪಡಿಸುವಂತೆ ಹೇಳಿದಾಗ, ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚಾಯತಿದಾರರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 90 ML HAYWARDS PUNCH 7 Pouch, 90 ML Hayards punch 04 Empty Pouch, 02 ಪ್ಲಾಸ್ಟಿಕ್ ಲೋಟ ದೊರೆತಿರುತ್ತವೆ. ಸ್ಥಳದಲ್ಲಿ 3.30 ಗಂಟೆಯಿಂದ ಸಂಜೆ 4.15 ಗಂಟೆವರೆಗೆ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡಿರುತ್ತೆ. ಮಾಲಿನ ಸಮೇತ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ರವಿ ಎಂಬುವನನ್ನು ಠಾಣೆಗೆ ಕರೆತಂದಿರುತ್ತದೆ.
ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಮೇಲ್ಕಂಡ ಆರೋಪಿ ರವಿ ಎಂಬುವವನ ವಿರುದ್ದ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆಂದು ಇತ್ಯಾದಿಯಾಗಿ.
|