Sl. No
|
Police Station Name
|
FIR No
|
FIR Date
|
Crime Group - Crime Head
|
Stage of case
|
1
|
Bidadi PS
|
Cr.No:0039/2022
(IPC 1860 U/s 379 )
|
02/02/2022
|
THEFT - Of Cultural - Others
|
Under Investigation
|
|
|
ದಿನಾಂಕ 02/02/2022 ರಂದು ರಾತ್ರಿ 8.45 ಗಂಟೆಗೆ ಪಿರ್ಯಾದಿ ಆದರ್ಶ್ ಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ ನಾನು ಈಗ್ಗೆ ಒಂದುವರೆ ವರ್ಷದಿಂದ ಡಿ.ಬಿ.ಎಲ್ ಕಂಪನಿಯಲ್ಲಿ ಲೈಜನಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ರಾಮನಹಳ್ಳಿ ಗ್ರಾಮದಲ್ಲಿ ಡಿಬಿಎಲ್ ಕಂಪನಿಯ ಕ್ರಷರ್ ಇದ್ದು ಕ್ರಷರ್ ನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ನಮ್ಮ ಕ್ರಷರ್ ಗೆ ಸಂಬಂದಪಟ್ಟ ಕಬ್ಬಿಣಗಳು ಕಳ್ಳತನವಾಗಿರುತ್ತವೆ. ದಿನಾಂಕ 31/01/2022 ರಂದು ರಾತ್ರಿ ಸುಮಾರು 12.30 ಗಂಟೆಗೆ ವೆಂಕಟೇಶ, ಶ್ರೀನಿವಾಸ ಮತ್ತು ಚೌಡಯ್ಯ ಎಂಬುವರು ಸುಮಾರು 2 ಟನ್ ಪ್ರಮಾಣದಷ್ಟು ಕಬ್ಬಿಣಗಳನ್ನು ಕಳ್ಳತನ ಮಾಡಿರುತ್ತಾರೆ ಇದರ ಬೆಲೆ ಸುಮಾರು 74 ಸಾವಿರ ಆಗಿರುತ್ತದೆ. ಎಂದು ನಮ್ಮ ಕಂಪನಿಯ ಸೆಕ್ಯೂರಿಟಿಗಳು ತಿಳಿಸಿರುತ್ತಾರೆ. ಆದ್ದರಿಂದ ಕಬ್ಬಿಣ ಕಳ್ಳತನ ಮಾಡಿರುವ ವೆಂಕಟೇಶ, ಶ್ರೀನಿವಾಸ, ಚೌಡಯ್ಯ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊನಂ 39/2022 ಕಲಂ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತದೆ.
|
2
|
Bidadi PS
|
Cr.No:0040/2022
(KARNATAKA EXCISE ACT, 1965 U/s 32,34
|
02/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ಘನ ನ್ಯಾಯಾಲಯದಲ್ಲಿ ರಾಮನಗರ ಜಿಲ್ಲೆ, ಬಿಡದಿ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ಸೋಮಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ: 02/02/2022 ರಂದು ಸಂಜೆ 6-00 ಗಂಟೆಯಲ್ಲಿ ನಾನು ಮತ್ತು ಠಾಣಾ ಪಿಸಿ-681 ಪ್ರದೀಪ ರವರು ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗಸ್ತಿನಲ್ಲಿರುವಾಗ ಬಾತ್ಮಿದಾರರಿಂದ ಬಿಡದಿ ಹೋಬಳಿ, ಶ್ಯಾನಮಂಗಲ ಗ್ರಾಮದ ಬಿಡದಿ ಕೈಗಾರಿಕಾ ಪ್ರದೇಶದ ಮಂದೆಬಯಲಿನ ಸರ್ಕಲ್ ಬಳಿಯಿರುವ ಚಿಲ್ಲರೆ ಅಂಗಡಿಯಲ್ಲಿ ರವಿಕುಮಾರ್ ಎಂಬುವವನು ಅಕ್ರಮವಾಗಿ ಮಧ್ಯದ ಪೌಚ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾರೆ ಬಂದ ಖಚಿತ ಮಾಹಿತಿ ಮೇರೆಗೆ ನಾನು ಪಂಚಾಯಿತಿದಾರರನ್ನು ಬರಮಾಡಿಕೊಂಡು ಸದರಿಯವರಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಸಮಯದಲ್ಲಿ ಪಂಚಾಯಿತಿದಾರರಾಗಿ ಇರುವಂತೆ ತಿಳಿಸಿ ನೋಟೀಸ್ ಜಾರಿ ಮಾಡಿದೆನು.
ಠಾಣಾ ಸಿಬ್ಬಂದಿಗಳಾದ ಪಿಸಿ-681 ಪ್ರದೀಪ ರವರೊಂದಿಗೆ ಪಂಚರನ್ನು ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ 6-30 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ನಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ನೋಡಲಾಗಿ ಅಂಗಡಿ ಒಳಗಿದ್ದ ವ್ಯಕ್ತಿಗೆ ಎರಡು ಮೂರು ಜನರು ಹಣವನ್ನು ನೀಡಿ ಮದ್ಯದ ಪೌಚ್ಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು.
ತಕ್ಷಣ ಪಂಚರ ಸಮಕ್ಷಮ ಮೇಲ್ಕಂಡ ಚಿಲ್ಲರೆ ಅಂಗಡಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ 10*10 ಅಡಿ ವಿಸ್ತೀರ್ಣದ ತಗಡಿನ ಶೀಟಿನ ಹೋಟೆಲ್ ಆಗಿದ್ದು, ಪೂರ್ವಕ್ಕೆ ಬಾಗಿಲಿರುತ್ತದೆ. ಅಂಗಡಿ ಒಳಗಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಿದಾಗ ರವಿಕುಮಾರ್ ಬಿನ ಲೇ|| ನಾರಾಯಣಪ್ಪ, 35 ವರ್ಷ, ಗಾಣಿಗಶೆಟ್ಟರು, ಆಟೋ ಡ್ರೈವರ್, ಶಾನಮಂಗಲ ಗ್ರಾಮ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಅಂಗಡಿ ಒಳಗೆ ಪರಿಶೀಲಿಸಲಾಗಿ ಟೇಬಲ್ ಹತ್ತಿರ ಒಂದು ರಟ್ಟಿನ ಬಾಕ್ಸ್ ಇದ್ದು ಇದರಲ್ಲಿ ಮದ್ಯದ ಪ್ಯಾಕೇಟ್ ದಾಸ್ತಾನು ಮಾಡಿರುತ್ತಾರೆ.
ರಟ್ಟಿನ ಬಾಕ್ಸ್ನಿಂದ ಮದ್ಯದ ಪಾಕೇಟ್ಗಳನ್ನು ಹೊರಗಡೆ ತೆಗೆಯಿಸಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ 1] MC Dowells 180 ML RUM ಎಂದು ಇರುವ 5 ಟೆಟ್ರಾ ಪ್ಯಾಕ್ಗಳು 2] MC Dowells 90 ML RUM ಎಂದು ಇರುವ 3 ಟೆಟ್ರಾ ಪ್ಯಾಕ್ಗಳು 3] Old Tavern 180 ML whisky ಎಂದು ಇರುವ 7 ಟೆಟ್ರಾ ಪ್ಯಾಕ್ಗಳು 4] Old Tavern whisky 90 ML ಎಂದು ಇರುವ 4 ಟೆಟ್ರಾ ಪ್ಯಾಕ್ಗಳು 5] Bagpiper 180 ML Whisky ಎಂದು ಇರುವ 3 ಟೆಟ್ರಾ ಪ್ಯಾಕ್ಗಳು 6] 8PM 180 ML Whisky ಎಂದು ಇರುವ 2 ಟೆಟ್ರಾ ಪ್ಯಾಕ್ಗಳು 7] Haywards Cheers whisky 90 ML ಎಂದು ಇರುವ 6 ಟೆಟ್ರಾ ಪ್ಯಾಕ್ಗಳು. ಇವುಗಳನ್ನು ಶೇಖರಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಪರವಾನಿಗೆ ಇದೆಯೇ ಎಂದು ಚಿಲ್ಲರೆ ಅಂಗಡಿಯಲ್ಲಿದ್ದ ರವಿಕುಮಾರ್ ಬಿನ್ ಲೇ|| ನಾರಾಯಣಪ್ಪ ರವರನ್ನು ವಿಚಾರ ಮಾಡಿದಾಗ ತನ್ನ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಹಾಗೂ ಮೇಲ್ಕಂಡ ಮದ್ಯದ ಟೆಟ್ರಾ ಪ್ಯಾಕ್ಗಳನ್ನು ಈ ದಿನ ಸಂಜೆ 6-45 ಗಂಟೆಯಿಂದ ರಾತ್ರಿ 8-15 ಗಂಟೆಯವರೆಗೆ ಅಂಗಡಿ ವಿದ್ಯುತ್ ದೀಪದ ಬೆಳಕಿನಲ್ಲಿ ಸ್ಥಳದಲ್ಲಿ ಲ್ಯಾಪ್ಟಾಪ್ ಮೂಲಕ ಮಹಜರ್ ಕ್ರಮ ಜರುಗಿಸಿ ಮುಂದಿನ ಕ್ರಮದ ಬಗ್ಗೆ ಅಮಾನತ್ತು ಪಡಿಸಿಕೊಂಡಿರುತ್ತೆ.
ಚಿಲ್ಲರೆ ಅಂಗಡಿಯಲ್ಲಿ ಮೇಲ್ಕಂಡ ಮದ್ಯದ ಟೆಟ್ರಾ ಪ್ಯಾಕ್ಗಳನ್ನು ಆಕ್ರಮವಾಗಿ ಶೇಖರಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ರವಿಕುಮಾರ್ ಹಾಗೂ ಮಾಲುಗಳೊಂದಿಗೆ ರಾತ್ರಿ 9-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಹೆಚ್.ಓ ರವರಿಗೆ ಸೂಚಿಸಿ ವರದಿ ನೀಡಿರುತ್ತೇನೆ.
|
3
|
Channapatna Rural PS
|
Cr.No:0019/2022
(IPC 1860 U/s 00MP )
|
02/02/2022
|
MISSING PERSON - Women
|
Under Investigation
|
|
|
ದಿನಾಂಕ. 02-02-2022 ರಂದು ಮಧ್ಯಾಹ್ನ 12-30 ಗಂಟೆಗೆ ಈ ಕೇಸಿನ ಪಿರ್ಯಾದಿ ಶ್ರೀ ಪ್ರಭುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ. 31-01-2022 ರಂದು ರಾತ್ರಿ ಮಲಗಿರುವಾಗ ನನ್ನ ಮಗಳು ಅಳುತ್ತಿದ್ದು ನೋಡಿದಾಗ ಮಗಳು ರೀಸಸ್ ಮಾಡಿಕೊಂಡು ಬಟ್ಟೆ ತೇವ ಆಗಿರುತ್ತೆ ನನ್ನ ಹೆಂಡತಿ ಪ್ರಿಯಾಂಕಗೆ ಮಗುವಿನ ಬಟ್ಟೆ ಬದಲಿಸು ಎಂದಾಗ ನನಗೂ ನನ್ನ ಹೆಂಡತಿ ಪ್ರಿಯಾಂಕ ಆದ ನಮಗೆ ಜಗಳ ಆಗಿತ್ತು. ಎಂದಿನಂತೆ ದಿನಾಂಕ. 01-02-2022 ರಂದು ಬೆಳಿಗ್ಗೆ 07-30 ಗಂಟೆಗೆ ಮನೆಯಿಂದ ಕೆಲಸಕ್ಕೆ ಬೇಕರಿಗೆ ಹೋಗಿ ಕೆಲಸ ಮಾಡುತ್ತಿರುವಾಗ, ಮಧ್ಯಾಹ್ನ 12-30 ಗಂಟೆಯಲ್ಲಿ ಪ್ರಿಯಾಂಕ ತನ್ನ ಮೊಬೈಲ್ ನಂಬರ್. 7795254682 ನಿಂದ ಪೋನ್ ಮಾಡಿ ಅಮವಾಸೆ ಇದೇ ದೇವಸ್ಥಾನಕ್ಕೆ ಹೊಗೋಣ ಬಾ ಎಂದರು ನಂತರ ನಾನು ಮಧ್ಯಾಹ್ನ 03-50 ಗಂಟೆಗೆ ಮನೆಗೆ ಬಂದಾಗ ನನ್ನ ಮಗಳು ದೀಪ್ತಿ ಮೆಟ್ಟಿಲ ಬಳಿ ನಿಂತುಕೊಂಡು ಅಳುತ್ತಿದ್ದು ಮಗುವನ್ನು ಎತ್ತಿಕೊಂಡು ಓಳಗೆ ಹೋದಾಗ ಅಲ್ಲಿ ನನ್ನ ಹೆಂಡತಿ ಇರಲಿಲ್ಲ ಎಲ್ಲಾ ಕಡೆ ನೋಡಿದಾಗ ಸಿಗಲಿಲ್ಲ ನಂತರ ನನ್ನ ಹೆಂಡತಿ ಮೊಬೈಲ್ ನಂಬರ್. 7795254682 ಗೆ ಪೋನ್ ಮಾಡಿದಾಗ ಸ್ವಿಚ್ ಆಫ್ ಅಂತ ಬಂತು ನಂತರ ನಮ್ಮ ಸಂಬಂಧಿಕರಿಗೆ ಪೋನ್ ಮಾಡಿ ವಿಚಾರಿಸಿದಾಗ ಅವರು ಸಹ ಬಂದಿಲ್ಲ ಎಂದರು ನಾನು ಎಲ್ಲಾ ಕಡೆ ಹುಡುಕಾಡಿ ಹಾಗೂ ನನ್ನ ಸ್ವಂತ ಊರಾದ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಸಿದ್ದಾಪುರಕ್ಕೆ ಪೋನ್ ಮಾಡಿ ವಿಚಾರ ಹೇಳಿ ಬಂದಿದ್ದಾರ ಎಂದು ವಿಚಾರಿಸಿದಾಗ ಅವರು ಸಹ ಬಂದಿಲ್ಲ ಎಂದರು ಎಲ್ಲಾ ಕಡೆ ಹುಡುಕಾಡಿದರೂ ಸಿಗದ ಕಾರಣ ಈಗ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಹೆಂಡತಿ ಪ್ರಿಯಾಂಕ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ಚಹರೆಯೊಂದಿಗೆ ನೀಡಿದ ದೂರಿನ ಮೆರೆಗೆ ಪ್ರ.ವ.ವರದಿ
|
4
|
Channapatna Rural PS
|
Cr.No:0020/2022
(IPC 1860 U/s 279,337 ; INDIAN MOTOR VEHICLES ACT, 1988 U/s 187 )
|
02/02/2022
|
MOTOR VEHICLE ACCIDENTS NON-FATAL - Other Roads
|
Under Investigation
|
|
|
ದಿನಾಂಕ. 02-02-2022 ರಂದು ಸಂಜೆ 04-00 ಗಂಟೆಗೆ ಈ ಕೇಸಿನ ಪಿರ್ಯಾದಿ ಶ್ರೀಮತಿ ಎಂ. ಚೈತ್ರರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ. 01-02-2022 ರಂದು ಬೆಳಿಗ್ಗೆ 07-10 ಗಂಟೆಯಲ್ಲಿ ನಾನು ಮನೆಯಲ್ಲಿರುವಾಗ ನಮ್ಮ ಗ್ರಾಮದ ಸಿದ್ದರಾಮುರವರು ನನಗೆ ಪೋನ್ ಮಾಡಿ ನಿಮ್ಮ ಯಜಮಾನರು ಶಿವಲಿಂಗರಾಜುರವರಿಗೆ ಕೂಡ್ಲೂರು-ಚಿಕ್ಕಮಳೂರು ರಸ್ತೆ, ವಾಲೆ ತೋಪು ಬಳಿ ಕೂಡ್ಲೂರು ಕೆರೆಯ ಎರಿಯ ರಸ್ತೆಯಲ್ಲಿ ಅಪಘಾತವಾಗಿದೆ ತಕ್ಷಣ ಬನ್ನಿ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಅತ್ತೆ ಕೆಂಪಮ್ಮರವರು ಸದರಿ ಅಪಘಾತದ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ಅಪಘಾತಕ್ಕೆ ಸಂಬಂದಿಸಿದಂತೆ ಸಿದ್ದರಾಮುರವರನ್ನು ವಿಚಾರಿಸಲಾಗಿ ನಿಮ್ಮ ಯಜಮಾನರು ಈ ದಿನ ಬೆಳಿಗ್ಗೆ ಸುಮಾರು 07-00 ಗಂಟೆಯಲ್ಲಿ ಚನ್ನಪಟ್ಟಣ ಕಡೆಯಿಂದ ಕೂಡ್ಲೂರು ಕಡೆಗೆ ಹೋಗಲು ಕೆಎ-42-ಡಬ್ಲೂ-4715 ಹೋಂಡಾ ಆಕ್ಟೀವಾ ಮೋಟಾರ್ ಸೈಕಲ್ ನ್ನು ಕೂಡ್ಲೂರು ಕೆರೆಯ ಎರಿಯ ಮೇಲೆ ಚಾಲನೆ ಮಾಡಿಕೊಂಡು ಬರುತ್ತಿರುವಾಗ, ಅದೇ ಸಮಯಕ್ಕೆ ಗರಕಹಳ್ಳಿ ಕಡೆಯಿಂದ ಚನ್ನಪಟ್ಟಣ ಕಡೆಗೆ ಹೋಗಲು ಕೆಎ-16-ಎ-5354 ಖಾಸಗಿ ಬಸ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ಯಜಮಾನರು ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದರ ಪರಿಣಾಮ, ವಾಹನ ಸಮೇತ ಕೆಳಗೆ ಬಿದ್ದು ಬಲಗಾಲಿನ ಬೆರಳಿಗೆ, ಬಲಗೈಗೆ ತೀವ್ರತರದ ಪೆಟ್ಟು ಬಿದ್ದು ದೇಹದ ಇತರೆಡೆ ರಕ್ತ ಗಾಯಗಳು ಉಂಟಾದವು ಎಂದು ತಿಳಿಸಿದ್ದು, ನಾನು ಮತ್ತು ಸಿದ್ದರಾಮು ಗಾಯಗೊಂಡ ನಮ್ಮ ಜಯಮಾನರನ್ನು ಸಾರ್ವಜನಿಕ ಸಹಾಯದಿಂದ ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಚನ್ನಪಟ್ಟಣ ಬಿ.ಜೆ. ಲಿಂಗೇಗೌಡ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು, ನನ್ನ ಯಜಮಾನರನ್ನು ನೋಡಿಕೊಳ್ಳುವರು ಯಾರೂ ಇಲ್ಲದ ಕಾರಣ ನಾನೇ ನೋಡಿಕೊಳ್ಳುತ್ತಿದ್ದು ಈಗ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ಹಾಗೂ ಅಪಘಾತಪಡಿಸಿದ ಖಾಸಗಿ ಬಸ್ ನ್ನು ಚಾಲಕ ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ಅಪಘಾತಕ್ಕೆ ಒಳಗಾದ ನಮ್ಮ ಯಜಮಾನರ ದ್ವಿಚಕ್ರ ವಾಹನ ಅಪಘಾತ ಸ್ಥಳದಲ್ಲಿ ನಿಂತಿರುತ್ತೆ. ಈ ಅಪಘಾತಕ್ಕೆ ಕಾರಣವಾದ ಕೆಎ-16-ಎ-5354 ಖಾಸಗಿ ಬಸ್ ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.
|
5
|
Cr.No:0021/2022
(KARNATAKA POLICE ACT, 1963 U/s 87 )
|
Cr.No:0021/2022
(KARNATAKA POLICE ACT, 1963 U/s 87 )
|
02/02/2022
|
KARNATAKA POLICE ACT 1963 - Street Gambling (87)
|
Under Investigation
|
|
|
ದಿನಾಂಕ. 02-02-2022 ರಂದು ಸಂಜೆ 05-00 ಗಂಟೆಗೆ ಪಿಎಸ್.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ. 02-02-2022 ರಂದು ಮಧ್ಯಾಹ್ನ 02-30 ಗಂಟೆಯಲ್ಲಿ ನಾನು ಠಾಣೆಯಲ್ಲಿರುವಾಗ್ಗೆ ನನಗೆ ಬಾತ್ಮಿದಾರರಿಂದ ತಿಳಿದು ಬಂದ ಮಾಹಿತಿ ಎನೆಂದರೆ, ಠಾಣಾ ಸರಹದ್ದು ಮೈಲನಾಯ್ಕನಹಳ್ಳಿ ಗ್ರಾಮದ ಹೊರ ವಲಯದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಅಕ್ರಮ ಚಟುವಟಿಕೆ ನಡೆಯುತ್ತಿದೆಯೆಂದು ಬಾತ್ಮಿದಾರರ ಬಾತ್ಮಿ ಮೇರೆಗೆ, ದಾಳಿ ಮಾಡಲು ನಾನು ಠಾಣಾ ಸಿಬ್ಬಂದಿಯವರಾದ ಸಿ.ಹೆಚ್.ಸಿ. 366 ಶ್ರೀ ದುರ್ಗಪ್ಪ ಸಿ.ಪಿ.ಸಿ. 98 ಶ್ರೀ ಸಿದ್ದಗಂಗಪ್ಪ, ಸಿ.ಪಿ.ಸಿ. 121 ಹನುಮಂತಶೆಟ್ಟಿ, ಸಿ.ಪಿ.ಸಿ. 701 ಶ್ರೀ ನಾಗಪ್ಪ ಪರಮನಹಟ್ಟಿ, ಸಿ.ಪಿ.ಸಿ. 660 ಶ್ರೀ ವೀರೇಶ್ ಗುಡ್ಲಮನಿ, ಸಿ.ಪಿ.ಸಿ. 717 ಶ್ರೀ ಖಾದೀರ್ ಪಟೇಲ್ ರವರುಗಳಿಗೆ ವಿಚಾರ ತಿಳಿಸಿ ದಾಳಿ ಮಾಡಲು ಸದರಿವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಕೆಎ-42-ಜಿ-73 ಪೊಲೀಸ್ ಜೀಪ್ ನಲ್ಲಿ ಚಾಲಕ ಎ.ಪಿ.ಸಿ. 204 ಶ್ರೀ ಮಹೇಶ್ ರವರ ಜೊತೆ ಮಧ್ಯಾಹ್ನ 03-00 ಗಂಟೆಗೆ ಠಾಣೆಗೆ ಹೊರಟು ಮೈಲನಾಯ್ಕನಹಳ್ಳಿ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ವಿಷಯವನ್ನು ತಿಳಿಸಿ ನೋಟೀಸನ್ನು ಜಾರಿ ಮಾಡಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಮಧ್ಯಾಹ್ನ 03-30 ಗಂಟೆಗೆ ಮೈಲನಾಯ್ಕನಹಳ್ಳಿ ಗ್ರಾಮದಿಂದ ಮುಂದೆ ತೊರೆಹೊಸೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಾರಾಯಣರವರ ಜಮೀನಿನ ಬಳಿ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ, ಸದರಿ ತೋರೆಹೊಸೂರು ಕಡೆಗೆ ಹೋಗುವ ರಸ್ತೆಯಲ್ಲಿ 08 ಜನರು ವೃತ್ತಾಕಾರವಾಗಿ ಕುಳಿತುಕೊಂಡು, ನ್ಯೂಸ್ ಪೇಪರ್ ಗಳನ್ನು ಹಾಕಿ ಅದರಲ್ಲಿ ಹಣವನ್ನು ಪಣವಾಗಿ ಕಟ್ಟುತ್ತಾ ಹಣ ಸಂಪಾದನೆಗಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟವಾಡುತ್ತಿರುವುದು ಕಂಡು ಬಂದಿದ್ದು, ಅಲ್ಲಿಗೆ ದಾಳಿ ಮಾಡಿ ಸುತ್ತುವರಿದು ಅವರುಗಳನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ನಾಗಣ್ಣ ಬಿನ್ ಮರಿಗೌಡ, 53 ವರ್ಷ, ಒಕ್ಕಲಿಗರು, ವ್ಯವಸಾಯ, ತೊರೆಹೊಸೂರು ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 2) ಎಂ.ಬಿ. ಮನು ಬಿನ್ ಬಸವರಾಜು, 22 ವರ್ಷ, ಒಕ್ಕಲಿಗರು, ಖಾಸಗಿಯಲ್ಲಿ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 3) ಶೇಖರ್ ಬಿನ್ ವೆಂಕಟಣ್ಣ, 45 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 4) ಸತೀಶ ಬಿನ್ ಬಸವರಾಜು, 33 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 5) ಮಹದೇವ ಬಿನ್ ಜವರಪ್ಪ, 48 ವರ್ಷ, ಒಕ್ಕಲಿಗರು, ವ್ಯವಸಾಯ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 6) ಪ್ರವೀಣ್ ಬಿನ್ ಅಪ್ಪಾಜಿಗೌಡ, 38 ವರ್ಷ, ಒಕ್ಕಲಿಗರು, ಪೈಂಟಿಂಗ್ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 7) ಹೇಮಂತ ಬಿನ್ ಗಂಗಯ್ಯ, 22 ವರ್ಷ, ಒಕ್ಕಲಿಗರು, ಅಡುಗೆ ಕೆಲಸ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು, 8) ಅಪ್ಪಾಜಿ ಬಿನ್ ಬನಿಗೇಗೌಡ, 56 ವರ್ಷ, ಒಕ್ಕಲಿಗರು, ವ್ಯವಸಾಯ, ಮೈಲನಾಯ್ಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು ಅಂತ ತಿಳಿಸಿದರು. ಸದರಿಯವರು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಮೂರು ಹಳೆಯ ನ್ಯೂಸ್ ಪೇಪರ್ ಇದ್ದು ಅದರ ಮೇಲೆ 52 ಇಸ್ಫೀಟ್ ಎಲೆಗಳು ಬಿದ್ದಿದ್ದವು, ಸದರಿ ಎಂಟು ಜನರ ಅಂಗಶೋದನೆ ಮಾಡಲಾಗಿ ಅವರು ಪಣವಾಗಿಟ್ಟಿದ್ದ 6630/- ಇದ್ದು, ಅವುಗಳನ್ನ ಮಧ್ಯಾಹ್ನ 03-40 ಗಂಟೆಯಿಂದ ಸಂಜೆ 04-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಅಮಾನುತ್ತುಪಡಿಸಿಕೊಂಡ ವಸ್ತುಗಳು ಮತ್ತು ಆರೋಪಿಗಳೊಂದಿಗೆ ಸಂಜೆ 05-00 ಗಂಟೆಗೆ ಬಂದು ವರದಿ ನೀಡಿದ ಮೇರೆಗೆ ಠಾಣಾ ಮೊ. ನಂ. 21/2022 ಕಲಂ. 87 ಕೆ.ಪಿ. ಆಕ್ಟ್ ರೀತ್ಯಾ ಪ್ರ.ವ.ವರದಿ.
|
6
|
Channapatna Town PS
|
Cr.No:0007/2022
(IPC 1860 U/s 00MP )
|
02/02/2022
|
MISSING PERSON - Women
|
Under Investigation
|
|
|
ದಿನಾಂಕ:02.02.2022 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ನನ್ನ ಗಂಡ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು ಜೀವನ ಸಾಗಿಸುತ್ತಿರುತ್ತೇನೆ. ನನ್ನ ಮಗಳು ಸಿಂದು @ ಮಧುಶ್ರೀ ಬಿನ್ ಮುದ್ದೇಗೌಡ, 22 ವರ್ಷ ಇವಳು ರಾಮನಗರ ಡಿಪ್ಲೋಮಾ ಕಾಲೇಜಿನಲ್ಲಿ ಅಂತಿಮ ಸೆಮಿಸ್ಟರ್ ವ್ಯಾಸಾಂಗ ಮಾಡುತ್ತಿದ್ದು. ಆದರೆ ದಿನಾಂಕ:31.01.2022 ರಂದು ಮದ್ಯಾಹ್ನ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ನನ್ನ ಎರಡನೇ ಮಗಳು ಹೋಗಿದ್ದು ವಾಪಸ್ಸು ಮನೆಗೆ ಬಂದಿರುವುದಿಲ್ಲ. ನಾವು ಎಲ್ಲಾ ಕಡೆಗಳಲ್ಲಿ ಹುಡುಕಿ ನಮ್ಮ ಸಂಬಂಧಿಕರ ಮನೆಯಲ್ಲಿ ಹುಡುಕಿ ಸಿಗದೆ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇವೆ. ಹಾಗೂ ನನ್ನ ಮಗಳ ಸ್ನೇಹಿತೆಯನ್ನು ವಿಚಾರ ಮಾಡಲಾಗಿ ಮಾಗಡಿ ಹತ್ತಿರ ಇರುವ ಬ್ಯಾಲಕೆರೆ ಮಂಜು ಜೊತೆ ಹೋಗಿರುವುದಾಗಿ ಅನುಮಾನ ಇರುತ್ತೆ. ನನ್ನ ಮಗಳು 5.2 ಅಡಿ ಎತ್ತರ ಇದ್ದು. ಕೋಲು ಮುಖ, ಕೆಂಪು ಕಂದು ಬಣ್ಣ, ಕಪ್ಪು ಕೂದಲು, ಹಾಗೂ ಹೊರಗಡೆ ಹೋಗುವಾಗ ಕಪ್ಪು ಪ್ಯಾಂಟ್ ಹಾಗೂ ಕಪ್ಪು ಟಾಪ್ ಹಾಕಿರುತ್ತಾಳೆ ಆದ್ದರಿಮದ ಸದರಿ ನನ್ನ ಮಗಳಾದ ಸಿಂದು @ ಮಧುಶ್ರೀ ರವರನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾಧಿಯಾಗಿ ನೀಡಿದ ದೂರಿನ ಮೇರೆಗೆ.
|
7
|
Channapatna Town PS
|
Cr.No:0008/2022
(KARNATAKA POLICE ACT, 1963 U/s 87 )
|
02/02/2022
|
KARNATAKA POLICE ACT 1963 - Street Gambling (87)
|
Under Investigation
|
|
|
ದಿನಾಂಕ:02.02.2022 ರಂದು ರಾತ್ರಿ-11.45 ಗಂಟೆಗೆ ಠಾಣಾ ಪಿಎಸ್ಐ ರವರು ಹಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂರೆ ದಿನಾಂಕ:02.02.2022 ರಂದು ರಾತ್ರಿ 9.30 ಗಂಟೆಯಲ್ಲಿ ನಾನು ಠಾಣೆಯಲ್ಲಿ ಈರುವಾಗ್ಗೆ ನನಗೆ ಬಾತ್ಮೀದಾರರಿಂದ ತಿಳಿದು ಬಂದ ಮಾಹಿತಿ ಏನೆಂದರೆ ಠಾಣಾ ಸರಹದ್ದು ಮಂಜುನಾಥನಗರ ಬಡಾವಣೆಯಲ್ಲಿ ಯಾವುದೋ ಅಕ್ರಮ ಚಟುವಟಿಕೆ ನಡೆಯುತ್ತಿದೆಯೆಂದು ಬಾತ್ಮೀದಾರರ ಬಾತ್ಮೀ ಮೇರೆಗೆ ನಾನು ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಸಿದ್ದರಾಜು, ಸಿಪಿಸಿ-133 ಶಿವು ಎನ್.ಪಿ, ಸಿಪಿಸಿ-544 ಸುನೀಲ್, ಸಿಪಿಸಿ-662 ಪವನ್ ಕುಮಾರ್ ರವರುಗಳಿಗೆ ವಿಚಾರ ತಿಳಿಸಿ ದಾಳಿ ಮಾಡಲು ಸದರಿಯವರನ್ನು ಜೊತೆಯಲ್ಲಿ ಕರೆದುಕೊಂಡು ಕೆಎ-42-ಜಿ-197 ಪೊಲೀಸ್ ಜೀಪ್ ನಲ್ಲಿ ಚಾಲಕ ಎ.ಹೆಚ್.ಸಿ-80 ಶ್ರೀ ರಮೇಶ್ ರವರ ಜೊತೆ ರಾತ್ರಿ 10.00 ಗಂಟೆಗೆ ಮಂಜುನಾಥನಗರ ಬಡಾವಣೆಗೆ ಹೋಗಿ ಪಂಚಯ್ತಿದಾರರಿಗೆ ವಿಷಯ ತಿಳಿಸಿ ಪಂಚರಾಗಿ ಬರುವಂತೆ ನೋಟಿಸ್ ಅನ್ನು ಜಾರಿ ಮಾಡಿ ಪಂಚರು ಹಾಗೂ ಸಿಬ್ಬಂದಿಯವರು ಪೊಲೀಸ್ ಜೀಪ್ ಅನ್ನು ಚಾನಲ್ ರಸ್ತೆಯಲ್ಲಿ ಮರೆಯಲ್ಲಿ ನಿಲ್ಲಿಸಿ ನೋಡಲಾಗಿ ಸದರಿ ಮಂಜುನಾಥನಗರ 02ನೇ ಕ್ರಾಸ್ ರಸ್ತೆಯಲ್ಲಿ ನಾಲ್ಕು ಜನರು ವೃತ್ತಾಕಾರವಾಗಿ ಕುಳಿತುಕೊಂಡು ನ್ಯೂಸ್ ಪೇಪರ್ಗಳನ್ನು ಹಾಕಿ ಅದರಲ್ಲಿ ಹಣವನ್ನು ಪಣವಾಗಿ ಕಟ್ಟುತ್ತಾ ಹಣ ಸಂಪಾದನೆಗಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಂದರ್ ಬಾಹರ್ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟ ಆಟವಾಡುತ್ತಿರುವುದು ಕಂಡು ಬಂದಿರುತ್ತೇ. ಜೂಜು ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಸುತ್ತುವರೆದು ಅವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 01) ಮಹಾಂತೇಶ್ ಬಿನ್ ಯಂಕಪ್ಪ, 26 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ವಾಸ:ಜನಮಟ್ಟಿ ಗ್ರಾಮ, ಬೆಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಹಾಲಿ ವಾಸ: 02ನೇ ಕ್ರಾಸ್ ಮಂಜುನಾಥನಗರ, ಚನ್ನಪಟ್ಟಣ ಟೌನ್. 02) ವೆಂಕಟೇಶ್ ಬಿನ್ ಲೇಟ್ ವೆಂಕಟಪ್ಪ, 67 ವರ್ಷ, ಒಕ್ಕಲಿಗರು, ಕೂಲಿಕೆಲಸ, ವಾಸ: ಕೋಡಿಪುರ ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ. 03) ನಾಗರಾಜು.ಕೆ ಬಿನ್ ಭದ್ರಪ್ಪ, 29 ವರ್ಷ, ಭಾರಿಕ್ ಜನಾಂಗ, ಕೂಲಿ ಕೆಲಸ, ವಾಸ:ಇಟಗಿ ಗ್ರಾಮ, ಹೂವಿನ ಹಡಗಲಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಹಾಲಿ ವಾಸ: 02ನೇ ಕ್ರಾಸ್, ಮಂಜುನಾಥನಗರ, ಚನ್ನಪಟ್ಟಣ ಟೌನ್. 04) ಕುಶಾಲ.ಡಿ ಬಿನ್ ದೊಡ್ಡಯ್ಯ, 19 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ, ವಾಸ: ದೇವರಹಳ್ಳಿ ಗ್ರಾಮ, ಚನ್ನಪಟ್ಟಣ ತಾಲ್ಲೂಕು ಅಂತ ತಿಳಿಸಿದರು, ಸದರಿಯವರು ಜೂಜಾಟವಾಡುತ್ತಿದ್ದ ಸ್ಥಳದಲ್ಲಿ 02 ನ್ಯೂಸ್ ಪೇಪರ್ ಇದ್ದು ಅದರ ಮೇಲೆ 52 ಇಸ್ಪೀಟ್ ಎಲೆಗಳು ಬಿದ್ದಿದ್ದು. ಸದರಿ ನಾಲ್ಕು ಜನರ ಅಂಗ ಶೋದನೆ ಮಾಡಲಾಗಿ ಅವರುಗಳು ಪಣವಾಗಿ ಇಟ್ಟಿದ್ದ ಒಟ್ಟು 2230/- ಇದ್ದು ಅವುಗಳನ್ನು ರಾತ್ರಿ 10.45 ಗಂಟೆಯಿಂದ ರಾತ್ರಿ 11.30 ಗಂಟೆವರೆಗೆ ಪಂಚರ ಸಮಕ್ಷಮ ರಸ್ತೆಯ ಪಕ್ಕದ ವಿದ್ಯುತ್ ದೀಪದ ಬೆಳಿಕಿನ ಸಹಾಯದಿಂದ ಮಹಜರ್ ಕ್ರಮ ಜರುಗಿಸಿ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ಅಮಾನತ್ತು ಪಂಚನಾಮೆ ಜರುಗಿಸಿ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ವಸ್ತುಗಳನ್ನು ಹಾಗೂ ಆರೋಪಿಗಳನ್ನು ರಾತ್ರಿ 11.45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿದ ಮೇರೆಗೆ
|
8
|
Ijoor PS
|
Cr.No:0010/2022
(IPC 1860 U/s 379 )
|
02/02/2022
|
THEFT - Other Items Not Included Above
|
Under Investigation
|
|
|
ಈ ದಿನ ದಿ.02.02.2022 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದುದಾರರು ಠಾಣಾ ದಿನಚರಿ ಪ್ರಭಾರದಲ್ಲಿ ಇದ್ದಾಗ ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಚನ್ನಪಟ್ಟಣದ ಕುವೆಂಪುನಗರದ 4ನೇ ಕ್ರಾಸ್ ನ ವಾಸಿಯಾಗಿದ್ದು, ಬರೆಸಿ ನೀಡುತ್ತಿರುವ ದೂರು ಏನೆಂದರೆ, ನಾನು ಸಪ್ತಗಿರಿ ಚಿಕನ್ ಸೆಂಟರ್ ನಲ್ಲಿ ಕೋಳಿಗಳನ್ನು ಫಾರಂಗಳಿಂದ ಅಂಗಡಿಗಳಿಗೆ ವಿತರಿಸುವ ಕೆಲಸವನ್ನು ಹಾಗೂ ಡ್ರೈವರ್ ಕೆಲಸವನ್ನು ಸುಮಾರು 7 ವರ್ಷಗಳಿಂದ ಮಾಡಿಕೊಂಡಿರುತ್ತೇನೆ. ಸುಮಾರು 3 ದಿನಗಳ ಹಿಂದೆ ಅಂದರೆ, ದಿ.30.01.2022 ರಂದು ಸಪ್ತಗಿರಿ ಚಿಕನ್ ಸೆಂಟರ್ ಕಡೆಯಿಂದ ದ್ರುವಕುಮಾರ್ ಮತ್ತು ಇನ್ನಿಬ್ಬರು ಕೂಲಿ ಆಳುಗಳು ಸೇರಿಕೊಂಡು ಬೆಳಗಿನ ಜಾವ ಕಾಡನಕುಪ್ಪೆ ಬಳಿಯ ಕೋಳಿ ಫಾರಂನಿಂದ ಅಂಗಡಿಗಳಿಗೆ ವಿತರಿಸಲು ಕೋಳಿಗಳನ್ನು 407 ವಾಹನ ಸಂಖ್ಯೆ: KA42-2906 ರಲ್ಲಿ ತುಂಬಿಕೊಂಡು ಎಂದಿನಂತೆ ನಮ್ಮ ಚಿಕನ್ ಸೆಂಟರ್ ನಿಂದ ಕೋಳಿಗಳನ್ನು ಪಡೆಯುವ ರಾಮನಗರ ಟೌನ್ ನ ಮಹಿಳಾಪಾಲಿಟೆಕ್ನಿಕ್ ಕಾಲೇಜು ಎದುರಿಗಿರುವ ಸೂರಿ ಚಿಕನ್ ಸೆಂಟರ್ ಅಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಆ ದಿನ ಬೆಳಗಿನ ಜಾವ 04.00 ಗಂಟೆ ಸುಮಾರಿನಲ್ಲಿ 06 ಬಾಕ್ಸ್ ಕೋಳಿಗಳನ್ನು ಇಳಿಸಿರುತ್ತಾರೆ. ಮೇಲ್ಕಂಡ 06 ಬಾಕ್ಸ್ ಕೋಳಿಗಳಲ್ಲಿ 03 ಬಾಕ್ಸ್ ಮಾಂಸದ ಕೋಳಿಗಳಿದ್ದು, ಇನ್ನೂಳಿದ ಮೂರು ಬಾಕ್ಸ್ ಗಳಲ್ಲಿ ಮೊಟ್ಟೆಕೋಳಿಗಳಿದ್ದವು. ಇವುಗಳ ಮೌಲ್ಯ ಸುಮಾರು ರೂ.30,000/-ರೂಪಾಯಿಗಳಾಗಿರುತ್ತವೆ. ಈ ಬಗ್ಗೆ ಇನ್ ವಾಯ್ಸ್ ನ್ನು ಸೂರಿ ಚಿಕನ್ ಸೆಂಟರ್ ಅಂಗಡಿಯ ಬಾಗಿಲಿಗೆ ಸಿಲುಕಿಸಿ ಮುಂದಿನ ಅಂಗಡಿಗಳಿಗೆ ಕೋಳಿಯನ್ನು ವಿತರಿಸಲು ಹೋಗಿರುತ್ತಾರೆ. ನಂತರ ಆ ದಿನ ಬೆಳಿಗ್ಗೆ 06.00 ಗಂಟೆ ಸುಮಾರಿಗೆ ಸೂರಿ ಚಿಕನ್ ಸೆಂಟರ್ ಮಾಲೀಕರಾದ ಸೂರಿರವರು ಸಪ್ತಗಿರಿ ಚಿಕನ್ ಸೆಂಟರ್ ಗೆ ಕರೆ ಮಾಡಿ ನೀವು ಇಳಿಸಿರುವ ಕೋಳಿಗಳ ಬಾಕ್ಸ್ ಸ್ಥಳದಲ್ಲಿ ಇಲ್ಲವೆಂದು ತಿಳಿಸಿರುತ್ತಾರೆ. ನಾವು ತಕ್ಷಣ ಸೂರಿ ಚಿಕನ್ ಸೆಂಟರ್ ನ ಬಳಿಗೆ ಬಂದು ಅಕ್ಕ-ಪಕ್ಕ ಹುಡುಕಾಡಿದರೂ 06 ಬಾಕ್ಸ್ನ ಕೋಳಿಗಳು ಕಂಡು ಬಂದಿರುವುದಿಲ್ಲ. ನಮ್ಮ ಚಿಕನ್ ಸೆಂಟರ್ ಮತ್ತು ಕೋಳಿ ಅಂಗಡಿಯ ಮಾಲೀಕರ ಒಡಂಬಡಿಕೆಯಂತೆ ನಾವು ಅವರ ಅನುಪಸ್ಥಿತಿಯಲ್ಲಿ ಬೆಳಗಿನ ಜಾವ ಕೋಳಿ ಬಾಕ್ಸ್ ಗಳನ್ನು ಇಳಿಸಿ ಹೋಗುವುದು ಇರುತ್ತದೆ. ಆದ್ದರಿಂದ ದಿ.30.01.2022 ರಂದು ಬೆಳಗಿನ ಜಾವ ಸುಮಾರು 04.00 ಗಂಟೆ ಸಮಯದಲ್ಲಿ ಸೂರಿ ಚಿಕನ್ ಸೆಂಟರ್ ಅಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಇಳಿಸಿದ್ದ 06 ಕೋಳಿಗಳಿರುವ ಬಾಕ್ಸ್ ನ್ನು ಬೆಳಿಗ್ಗೆ 06.00 ಗಂಟೆಯೊಳಗಿನ ಸಮಯದಲ್ಲಿ ಯಾವಾಗಲೋ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ನಮ್ಮ ಮಾಲೀಕರೊಂದಿಗೆ ಚರ್ಚಿಸಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುತ್ತೇನೆ. ಕಳ್ಳತನವಾಗಿರುವ 06 ಕೋಳಿಗಳಿರುವ ಬಾಕ್ಸ್ ಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರುತ್ತೇನೆ. ಇದರೊಂದಿಗೆ ಸೂರಿ ಚಿಕನ್ ಸೆಂಟರ್ ಗೆ ನೀಡಿದ ಇನ್ ವಾಯ್ಸ್ ಪ್ರತಿಯನ್ನು ಲಗತ್ತಿಸಿರುತ್ತೇನೆ. ಬೆಳಗಿನ ಜಾವ ಆದ್ದರಿಂದ ಯಾರೋ ಕಳ್ಳರು ಆರು ಬಾಕ್ಸ್ ಕೋಳಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿದ್ದ ಮೇರೆಗೆ ಠಾಣಾ ಮೊ.ನಂ.10/2022 ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುತ್ತೆ.
|
9
|
Ijoor PS
|
Cr.No:0011/2022
(KARNATAKA EXCISE ACT, 1965 U/s 15(A),32(3) )
|
02/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ಈ ದಿನ ದಿ:-02.02.2022 ರಂದು ಮದ್ಯಾಹ್ನ 1.15 ಗಂಟೆಯಲ್ಲಿ ಐಜೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಮಂಜುನಾಥ.ಬಿ ರವರು ನೀಡಿದ ವರದಿ ಏನೆಂದರೆ ಈ ದಿನ ದಿನಾಂಕ: 02.02.2022 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ, ಕನಕಪುರ ಸರ್ಕಲ್, ಕನಕಪುರ ರಸ್ತೆಯಲ್ಲಿರುವ ಪ್ರಕಾಶ್ ಎಂಬುವವರ ಚಿಲ್ಲರೆ ಪೆಟ್ಟಿ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಡುತ್ತಿರುತ್ತಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಠಾಣೆಗೆ ಪಂಚಾಯ್ತಿದಾರರನ್ನು ಕರೆಸಿ ಸದರಿ ವಿಚಾರವನ್ನು ತಿಳಿಸಿ, ಸಿಬ್ಬಂದಿಗಳಾದ ಶ್ರೀ.ರವಿಚಂದ್ರ ಸಿಪಿಸಿ-677, ಶ್ರೀ.ಸಂಜೀವ್, ಪಿಸಿ-633 ಮತ್ತು ಜೀಪ್ ಚಾಲಕ ನರಸಿಂಹಯ್ಯ ಎ.ಹೆಚ್.ಸಿ.59 ರವರನ್ನು ಜೊತೆಯಲ್ಲಿ ಕರೆದುಕೊಂಡು ಸರ್ಕಾರಿ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 12-00 ಗಂಟೆಗೆ ಕನಕಪುರ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ಪ್ರಕಾಶ್ ರವರ ಚಿಲ್ಲರೆ ಅಂಗಡಿಯಲ್ಲಿ ಮದ್ಯವನ್ನು ಎರಡು ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ಮದ್ಯಪಾನ ಮಾಡಲು ಇಬ್ಬರು ಆಸಾಮಿಗಳಿಗೆ ಮಾರಾಟ ಮಾಡಿ ಸ್ಥಳದಲ್ಲಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದುದು ಕಂಡು ಬಂದಿರುತ್ತದೆ. ಕೂಡಲೇ ನಾವುಗಳು ಪಂಚರ ಸಮಕ್ಷಮ ದಾಳಿ ಮಾಡಿದಾಗ ಮದ್ಯವನ್ನು ತೆಗೆದುಕೊಂಡು ಕುಡಿಯುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಮದ್ಯ ಮಾರಾಟ ಮಾಡಲು ಪರವಾನಗಿ ಇದೆಯೆ? ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ಸದರಿ ಆಸಾಮಿಯ ಬಗ್ಗೆ ವಿಚಾರ ಮಾಡಿ ಹೆಸರು ವಿಳಾಸ ಕೇಳಲಾಗಿ ಪ್ರಕಾಶ್ ಬಿನ್ ಲೇ.ರಂಗಸ್ವಾಮಿ, 55 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹೂವಾಡಿಗರ ಬೀದಿ, ರಾಮನಗರ ಟೌನ್ ಮೊ.ನಂ-9741291942 ಎಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಪರಿಶೀಲಿಸಲಾಗಿ ಅಂಗಡಿಯಲ್ಲಿದ್ದ HYWARDS CHEERS WHISKHY 90 ML ನ 35.13 ರೂ ಬೆಲೆಯ 18 ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಮೂಲೆಯಲ್ಲಿ ಓಪನ್ ಮಾಡಿ ಕುಡಿದು ಬಿಸಾಡಿದ್ದ 90 MLನ HYWARDS CHEERS WHISKHY ಯ ಒಟ್ಟು 02 ಖಾಲಿ ಪಾಕೇಟ್ ಹಾಗೂ 02 ಖಾಲಿ ಪ್ಲಾಸ್ಟಿಕ್ ಲೋಟಗಳು ದೊರೆತಿದ್ದು, ಪಂಚರ ಸಮಕ್ಷಮ ಬೆಳಿಗ್ಗೆ ಮಧ್ಯಾಹ್ನ 12-10 ರಿಂದ 1-00 ಗಂಟೆಯರವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ನಂತರ ಠಾಣೆಗೆ ಬಂದು ವರದಿಯನ್ನು ತಯಾರು ಮಾಡಿ ಮಧ್ಯಾಹ್ನ 1-15 ಗಂಟೆಗೆ ಪ್ರಕರಣ ದಾಖಲಿಸುವಂತೆ ನೀಡಿದ ವರದಿ ಯನ್ನು ಪಡೆದು ಠಾಣಾ ಮೊ.ನಂ-11/2022 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
|
10
|
Ijoor PS
|
Cr.No:0012/2022
(KARNATAKA EXCISE ACT, 1965
|
02/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ಈ ದಿನ ದಿ:-02.02.2022 ರಂದು ಮದ್ಯಾಹ್ನ 03.45 ಗಂಟೆಯಲ್ಲಿ ಐಜೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಮಂಜುನಾಥ.ಬಿ ರವರು ನೀಡಿದ ವರದಿ ಏನೆಂದರೆ, ಈ ದಿನ ದಿನಾಂಕ:02.02.2022 ರಂದು ಮಧ್ಯಾಹ್ನ 2-15 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗೆ, ಕನಕಪುರ ಸರ್ಕಲ್, ಕನಕಪುರ ರಸ್ತೆಯಲ್ಲಿರುವ ಶ್ರೀಮತಿ ಮಹದೇವಮ್ಮ ಎಂಬುವವರ ಚಿಲ್ಲರೆ ಪೆಟ್ಟಿ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಡುತ್ತಿರುತ್ತಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಠಾಣೆಗೆ ಪಂಚಾಯ್ತಿದಾರರನ್ನು ಕರೆಸಿ ಸದರಿ ವಿಚಾರವನ್ನು ತಿಳಿಸಿ, ಸಿಬ್ಬಂದಿಗಳಾದ ಶ್ರೀ.ಸಂಜೀವ್, ಪಿಸಿ-633, ಶ್ರೀಮತಿ ಸುಧಾ, ಮಪಿಸಿ-645 ಮತ್ತು ಜೀಪ್ ಚಾಲಕ ನರಸಿಂಹಯ್ಯ ಎ.ಹೆಚ್.ಸಿ.59 ರವರನ್ನು ಜೊತೆಯಲ್ಲಿ ಕರೆದುಕೊಂಡು ಸರ್ಕಾರಿ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ ಮಧ್ಯಾಹ್ನ 2-30 ಗಂಟೆಗೆ ಕನಕಪುರ ಸರ್ಕಲ್ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ, ಮಹದೇವಮ್ಮ ರವರ ಚಿಲ್ಲರೆ ಅಂಗಡಿಯಲ್ಲಿ ಮದ್ಯವನ್ನು ಎರಡು ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ಮದ್ಯಪಾನ ಮಾಡಲು ಇಬ್ಬರು ಆಸಾಮಿಗಳಿಗೆ ಮಾರಾಟ ಮಾಡಿ ಸ್ಥಳದಲ್ಲಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದುದು ಕಂಡು ಬಂದಿರುತ್ತದೆ. ಕೂಡಲೇ ನಾವುಗಳು ಪಂಚರ ಸಮಕ್ಷಮ ದಾಳಿ ಮಾಡಿದಾಗ ಮದ್ಯವನ್ನು ತೆಗೆದುಕೊಂಡು ಕುಡಿಯುತ್ತಿದ್ದವರು ಓಡಿ ಹೋಗಿರುತ್ತಾರೆ. ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಮಹಿಳೆಯನ್ನು ವಶಕ್ಕೆ ಪಡೆದು ಮದ್ಯ ಮಾರಾಟ ಮಾಡಲು ಪರವಾನಗಿ ಇದೆಯೆ? ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಮಹಿಳೆಯನ್ನು ವಿಚಾರ ಮಾಡಿ ಹೆಸರು ವಿಳಾಸ ಕೇಳಲಾಗಿ ಮಹದೇವಮ್ಮ ಕೋಂ ಲೇ.ಗೋಪಾಲ್, 50ವರ್ಷ, ತಿಗಳರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಚನ್ನಮಾನಹಳ್ಳಿ, ಕೈಲಂಚಾ ಹೋಬಳಿ, ರಾಮನಗರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಪರಿಶೀಲಿಸಲಾಗಿ ಅಂಗಡಿಯಲ್ಲಿದ್ದ SILVER CUP Indian Brandy 90ML ನ 27.98 ರೂ ಮುಖಬೆಲೆಯ 10 ಪೌಚ್ ಗಳು, HYWARDS CHEERS WHISKHY 90 ML ನ 35.13 ರೂ ಬೆಲೆಯ 6 ಟೆಟ್ರಾ ಪ್ಯಾಕೇಟ್ ಹಾಗೂ ಒಂದು ಮೂಲೆಯಲ್ಲಿ ಓಪನ್ ಮಾಡಿ ಕುಡಿದು ಬಿಸಾಡಿದ್ದ 90 MLನ HYWARDS CHEERS WHISKHY ಯ ಒಟ್ಟು 02 ಖಾಲಿ ಪಾಕೇಟ್ ಹಾಗೂ 02 ಖಾಲಿ ಪ್ಲಾಸ್ಟಿಕ್ ಲೋಟಗಳು ದೊರೆತಿದ್ದು, ಪಂಚರ ಸಮಕ್ಷಮ ಮಧ್ಯಾಹ್ನ 2-40 ರಿಂದ ಮಧ್ಯಾಹ್ನ 3-30 ಗಂಟೆಯರವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ನಂತರ ಠಾಣೆಗೆ ಬಂದು ವರದಿಯನ್ನು ತಯಾರು ಮಾಡಿ ಮಧ್ಯಾಹ್ನ 3-45 ಗಂಟೆಗೆ ಪ್ರಕರಣ ದಾಖಲಿಸುವಂತೆ ನೀಡಿದ ವರದಿ ಯನ್ನು ಪಡೆದು ಠಾಣಾ ಮೊ.ನಂ-12/2022 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
|
11
|
Kaggalipura PS
|
Cr.No:0034/2022
(IPC 1860 U/s 354,504,506 )
|
02/02/2022
|
MOLESTATION - Public Place
|
Under Investigation
|
|
|
ದಿನಾಂಕ 02.02.2022 ರಂದು ಮಧ್ಯಾಹ್ನ 12-15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 01/02/2022 ರಂದು ನಮ್ಮ ಗ್ರಾಮದ ಲಕ್ಷ್ಮಣ ಎಂಬುವನು ಅವನ ಹೆಂಡತಿ ಜೊತೆ ಜಗಳ ಮಾಡುತ್ತಿದ್ದು, ಅವರ ಮಗ ಮತ್ತು ಅಜ್ಜಿ ಶಿವಮ್ಮ ರವರು ನಮ್ಮ ಮನೆ ಬಳಿ ಬಂದಿದ್ದು, ಕತ್ತಲೆಯಾಗಿದ್ದರಿಂದ ಲಕ್ಷ್ಮಣ ರವರ ಮಗನನ್ನು ಅವರ ಮನೆ ಬಳಿ ಬಿಡಲು ಹೋದಾಗ ರಾತ್ರಿ ಸುಮಾರು 11-15 ಗಂಟೆ ಸಮಯದಲ್ಲಿ ಲಕ್ಷ್ಮಣ ಜಗಳ ತೆಗೆದು ನನಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಸೀರೆಯನ್ನು ಹಿಡಿದು ಎಳೆದಾಳಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಲಕ್ಷ್ಮಣನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ
|
12
|
Kanakapura Rural PS
|
Cr.No:0020/2022
(KARNATAKA POLICE (AMENDMENT) ACT, 2021 U/s 87 )
|
02/02/2022
|
KARNATAKA POLICE ACT 1963 - Street Gambling (87)
|
Under Investigation
|
|
|
ನಾನು ಈಗ್ಗೆ 06 ತಿಂಗಳಿನಿಂದ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಈ ದಿವಸ ದಿನಾಂಕ-02.02.2022 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಯಾರೋ ಬಾತ್ಮಿದಾರರು ನನಗೆ ಫೋನ್ ಮಾಡಿ, ದೊಡ್ಡಕಲ್ಬಾಳು ಗ್ರಾಮದಲ್ಲಿರುವ ಕಾಂತರಾಜು ರವರ ತೆಂಗಿನ ತೋಟದಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು, ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂದು ತಿಳಿಸಿದ್ದು, ನಂತರ ಪಂಚಾಯ್ತಿದಾರರು ಹಾಗೂ ಸಿಬ್ಬಂದಿಗಳೊಂದಿಗೆ KA-42 G-923 ಠಾಣಾ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ ಕರೆದುಕೊಂಡು ಹೋಗಿ, ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ, ಮರೆಯಲ್ಲಿ ನಿಂತು ನೋಡಲಾಗಿ 9-10 ಜನರು ಅಕ್ರಮವಾಗಿ ಗುಂಪುಕಟ್ಟಿಕೊಂಡು, ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು, ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬನು 100/- ರೂ ಅಂದರ್ ಎಂತಲೂ ಮತ್ತೊಬ್ಬನು 100/- ರೂ ಬಾಹರ್ ಎಂತಲೂ ಕೂಗುತ್ತಿದ್ದನು. ಪಂಚರ ಸಮಕ್ಷಮ ನಾವುಗಳು ಸದರಿ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿ, 06 ಜನ ಆಸಾಮಿಗಳನ್ನು ಹಿಡಿದುಕೊಂಡಿದ್ದು, 04 ಜನರು ಓಡಿ ಹೋಗಿರುತ್ತಾರೆ. ನಂತರ 100/-ರೂ ಅಂದರ್ ಎಂದು ಕೂಗುತ್ತಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ, 1.ರಘು ಬಿನ್ ಸಿದ್ದರಾಮಯ್ಯ. 32 ವರ್ಷ, ಉಪ್ಪಾರ ಜನಾಂಗ, ವ್ಯಾಪಾರ, ಹಾರೋಹಳ್ಳಿ ಗ್ರಾಮ, ಕಸಬಾ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 2550/- ರೂ ರೂ ಹಣ ಮತ್ತು 21 ಇಸ್ಪೀಟ್ ಎಲೆಗಳು ದೊರೆತ್ತಿರುತ್ತದೆ, ಬಾಹರ್ ಎಂದು ಕೂಗುತ್ತಿದ್ದವನ ಹೆಸರು ವಿಳಾಸದ ಬಗ್ಗೆ ಕೇಳಲಾಗಿ, 2.ಪ್ರಸನ್ನ ಬಿನ್ ಲಿಂಗರಾಜಯ್ಯ, 27 ವರ್ಷ, ವಕ್ಕಲಿಗರು, ವ್ಯವಸಾಯ, ಅತ್ತಿಕುಪ್ಪೆ ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 2300/- ರೂ ಹಣ ದೊರೆತ್ತಿರುತ್ತದೆ. 3.ರಘು.ಜಿ.ಎನ್ ಬಿನ್ ಲೇಟ್ ನಾಗರಾಜು, 28 ವರ್ಷ, ವಕ್ಕಲಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ಗಾಣಾಳುದೊಡ್ಡಿ ಗ್ರಾಮ, ಹಾರೋಹಳ್ಳಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 2100/- ರೂ ದೊರೆತ್ತಿರುತ್ತದೆ. 4.ಗಿರೀಶ್ ಬಿನ್ ನಟರಾಜು, 29 ವರ್ಷ, ವಕ್ಕಲಿಗರು, ಡ್ರೈವರ್, ನರಿಪುರ ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 1600/- ರೂ ದೊರೆತ್ತಿರುತ್ತದೆ. 5.ಶ್ರೀಕಾಂತ್ ಬಿನ್ ಲೇಟ್ ಪುಟ್ಟಸ್ವಾಮಿ. 37 ವರ್ಷ, ವಕ್ಕಲಿಗರು, ಡ್ರೈವರ್, ನಂ-13, 11ನೇ ಮುಖ್ಯ ರಸ್ತೆ, ಚಂದ್ರನಗರ, ಕುಮಾರಸ್ವಾಮಿ ಲೇಔಟ್, ಬೆಂಗಳೂರ ಎಂದು ತಿಳಿಸಿದ್ದು, ಈತನ ಬಳಿ 2200/- ರೂ ದೊರೆತ್ತಿರುತ್ತದೆ. 6.ಶಿವಕುಮಾರ್ ಬಿನ್ ಲೇಟ್ ಪಂಚಲಿಂಗಯ್ಯ, 33 ವರ್ಷ, ವಕ್ಕಲಿಗರು, ಕೇಬಲ್ ಆಪರೇಟರ್, ಚೀಲೂರು ಗ್ರಾಮ, ಮರಳವಾಡಿ ಹೋಬಳಿ, ಕನಕಪುರ ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ 1900/- ರೂ ದೊರೆತ್ತಿರುತ್ತದೆ. ಇಸ್ಪೀಟ್ ಅಡ್ಡೆಯಲ್ಲಿ 31 ಇಸ್ಪೀಟ್ ಎಲೆಗಳು ಮತ್ತು 1500/- ರೂ ಹಣ ದೊರೆತ್ತಿರುತ್ತದೆ. ನಂತರ ಓಡಿ ಹೋದವರ ಬಗ್ಗೆ ಸಿಕ್ಕಿ ಬಿದ್ದವರನ್ನು ಕೇಳಲಾಗಿ, 7.ಶ್ರೀಕಾಂತ್, ಬಸವನಬನ್ನಿಕುಪ್ಪೆ ಗ್ರಾಮ, 8.ಯಶವಂತ್, ಕಾಂಚಿಕಾಳನಹಳ್ಳಿ ಗ್ರಾಮ, ರಾಮನಗರ, 9.ಕೃಷ್ಣ, ದೊಡ್ಡಕಲ್ಬಾಳು ಗ್ರಾಮ, 10.ಸಂಜಯ್ @ ಪವರ್, ಗಬ್ಬಾಡಿ ಎಂದು ತಿಳಿಸಿದರು. ನಂತರ ಸ್ಥಳದಲ್ಲಿ 1)KA-05 KW-9087 Suzuki Acceses, 2)KA-42 K-6926 Passion Pro, 3)KA-11 EF-2541 Honda Activa ಮೋಟಾರ್ ಬೈಕ್ ಗಳು ನಿಂತಿದ್ದು, ನಂತರ ಈ ಕೇಸಿನ ಮುಂದಿನ ತನಿಖೆಯ ಬಗ್ಗೆ ಒಟ್ಟು 14,150/- ರೂಪಾಯಿ ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲ ಮತ್ತು ಮೇಲ್ಕಂಡ 03 ಮೋಟಾರ್ ಬೈಕ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು, ನಂತರ ವಶಕ್ಕೆ ಪಡೆದುಕೊಂಡಿದ್ದ 06 ಜನ ಆಸಾಮಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ಸದರಿ ಅಸಾಮಿಗಳ ಮೇಲೆ ಸ್ವ ವರದಿಯನ್ನು ತಯಾರಿಸಿ, ಸಂಜೆ 5.15 ಗಂಟೆಗೆ ಠಾಣಾ ಮೊ.ನಂ-20/2022, ಕಲಂ- 87 KP Act ರೀತ್ಯಾ ಕೇಸು ದಾಖಲು ಮಾಡಿರುತ್ತೆ.
|
13
|
Kodihalli PS
|
Cr.No:0016/2022
(IPC 1860 U/s 341,143,147,148,504,323,326,354,114,427,506,379,149 )
|
02/02/2022
|
RIOTS - Others
|
Under Investigation
|
|
|
ದಿನಾಂಕ:02.02.2022 ರಂದು ಪಿರ್ಯಾದಿ ಸರೋಜಮ್ಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಅನಾರೋಗ್ಯದ ನಿಮಿತ್ತ ನನ್ನ ಮಗನಾದ ಮಣಿಕಂಠ ನನನ್ನು ನೋಡಲು ಬೆಂಗಳೂರಿನಿಂದ ಊರಿಗೆ ಬಂದ ಸಂದರ್ಭದಲ್ಲಿ ದಿನಾಂಕ:01.02.2022 ರ ಮಂಗಳವಾರ ರಾತ್ರಿ ಸುಮಾರು 10.30 ರ ಸಮಯದಲ್ಲಿ ನನ್ನ ಮಗನ ಮೇಲಿನ ಹಳೆಯ ದ್ವೇಷದಿಂದ ನಮ್ಮ ಮನೆಯ ಮುಂಭಾಗದಲ್ಲಿ ಏಕಾಏಕಿ ಅಡ್ಡಗಟ್ಟಿ ಇದೇ ಗ್ರಾಮದ ವಾಸಿಗಳಾದ ಮಹದೇವ ಬಿನ್ ಪೆರುಮಾಳ್ , ಸೂರಿ ಬಿನ್ ಪೆರುಮಾಳ್ ನು, ಕೊಟ್ರಾಜು , ಮಹದೇವಿ ಕೋಂ ಕೊಟ್ರಾಜು, ತಂಬಿ ಬಿನ್ ಲೇಟ್ ಕರಿಯಪ್ಪ, ಪೆರುಮಾಳು ಬಿನ್ ಕರಿಯಪ್ಪ, ಭಾಗ್ಯ ಕೋಂ ಬೈರಪ್ಪ, ಜೀನ ಬಿನ್ ತಂಬಿ, ಮಾದೇಶ ಬಿನ್ ತಂಬಿ, ಚಾಮಕ್ಕ , ನಿತ್ಯ, ಶಬರಿ ಮತ್ತು ಇತರರು ನನ್ನ ಮಗನನ್ನು ಮರ್ಡರ್ ಮಾಡುವ ಉದ್ದೇಶದಿಂದ ಮಹದೇವ ಮತ್ತು ಸೂರಿ ಮೊದಲೇ ತಂದಿದ್ದ ಮಚ್ಚು ಮತ್ತು ಕುಡ್ಲು ನಿಂದ ಮಣಿಯ ಕತ್ತನ್ನು ಕತ್ತರಿಸುವ ಉದ್ದೇಶದಿಂದ ಬೀಸಿದಾಗ ಗಲಾಟೆ ಶಬ್ದಕ್ಕೆ ಬಂದಿದ್ದ ಅವರ ತಮ್ಮನಾದ ಸುರೇಶನು ಮಣಿಗೆ ಅಡ್ಡ ಬಂದ ಕಾರಣ ಸುರೇಶನ ತಲೆಯ ಎಡ ಬಲಭಾಗವೆಲ್ಲಾ ರಕ್ತಾಯವಾಗಿದ್ದು, ತಲೆಯ ಎಡಭಾಗಕ್ಕೆ 4 ಹೊಲಿಗೆಯ ತೀವ್ರ ರಕ್ತಗಾಯ ಆಗಿರುತ್ತದೆ. ನಂತರ ಮಣಿಗೂ ಸಹ ಎಡಗೈ ಅಡ್ಡ ಕೊಟ್ಟಿದ್ದರಿಂದ ಎಡಗೈನ ಹೆಬ್ಬೆರಳು ಮತ್ತು ತೋರು ಬೆರಳಿಗೆ ರಕ್ತಗಾಯವಾಗಿರುತ್ತದೆ. ಒಂದು ವೇಳೆ ನನ್ನ ಕಿರಿಯ ಮಗ ಸುರೇಶ ಮದ್ಯಪ್ರವೇಶಿಸದೆ ಇದಿದ್ದರೆ ಮಣಿಯೂ ಜೀವಂತವಾಗಿ ಬದುಕುತ್ತಿರಲಿಲ್ಲ. ಕೊಟ್ರಾಜು ಮಹದೇವಿ ಮತ್ತು ತಂಬಿ ತಂದಿದ್ದ ದೊಣ್ಣೆಗಳಿಂದ ದೇಹದ ಮೇಲೆಲ್ಲಾ ಇಬ್ಬರಿಗೂ ಹೊಡೆದು ಮಾರಾಣಂತಿಕ ಹಲ್ಲೆ ಮಾಡಿರುತ್ತಾರೆ. ನಾನು ಗಾಬರಿಯಿಂದ ಚೀರಾಟ ಮಾಡಿ ನನ್ನ ಮಕ್ಕಳನ್ನು ರಕ್ಷಿಸಿಕೊಳ್ಳಲು ದಾವಿಸಿದ ಸಂದರ್ಭದಲ್ಲಿ ಹೊಡೆಯದಂತೆ ಪದೇ ಪದೇ ಬೇಡಿಕೊಂಡರು , ಭಾಗ್ಯ, ನಿತ್ಯಾ , ಶಬರಿ ಮಹದೇವಿ, ತಂಬಿ ಪೆರುಮಾಳ್ ಚಾಮಕ್ಕ ರವರುಗಳು ನನ್ನ ಜುಟ್ಟನ್ನು ಎಳೆದಾಡಿ ಕೆಳಕ್ಕೆ ಕೆಡವಿ ನನ್ನ ಸೀರೆಯನ್ನು ಎಳೆದು ಹಾಕಿ ನನ್ನನು ಅರೆ ಬೆತ್ತಲೆ ಮಾಡಿರುತ್ತಾರೆ. ಮತ್ತು ನನ್ನನು ಅವಾಚ್ಯ ಶಬ್ದಗಳಿಂದ ಬೈದು ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಪಡಿಸಿರುತ್ತಾರೆ. ನಂತರ ಜಗಳ ಬಿಡಿಸಲು ಬಂದ ನನ್ನ ಮಗಳಾದ ಶಶಿಕಲಾಳನ್ನು ನಿತ್ಯಾ , ಮಹದೇವ ಜುಟ್ಟನ್ನು ಎಳೆದಾಡಿ ಹೊಡೆದಿರುತ್ತಾರೆ. ನಂತರ ಭಾಗ್ಯ ಮಾದೇಶನಿಗೆ ದೊಣ್ಣೆ ನೀಡಿ ಇವರ ಅಮ್ಮ ಮತ್ತು ಮಕ್ಕಳನ್ನು ಅರೆಜೀವ ಬಿಡಬೇಡ ಸಾಯಿಸು ಎಂದು ಪ್ರೇರೇಪಿಸಿರುತ್ತಾಳೆ. ನಂತರ ಮಹದೇವ ಮತ್ತು ಸೂರಿ ನಮ್ಮ ಮನೆಯ ಕಿಟಕಿ ಗಾಜುಗಳನ್ನು ಮನೆಯ ಬಾಗಿಲುಗಳನ್ನು ದೊಣ್ಣೆಯಿಂದ ಮತ್ತು ದಿಂಡುಕಲ್ಲಿನಿಂದ ಎತ್ತಿಹಾಕಿ ಹಾನಿ ಮಾಡಿರುತ್ತಾರೆ. ನಂತರ ನನ್ನ ಮಗ ಮಣಿಕಂಠನ ಜೇಬಿನಲ್ಲಿದ್ದ ಸುಮಾರು 7000/- ರೂಪಾಯಿಗಳನ್ನು ಸಹ ಕದ್ದಿರುತ್ತಾರೆ. ಆದ್ದರಿಂದ ಖಾವಂದರಾದ ತಾವುಗಳು ನನ್ನ ಮಕ್ಕಳಾದ ಮಣಿಕಂಠ ಮತ್ತು ಸುರೇಶನನ್ನು ಮಾರಣಾಂತಿಕ ಹಲ್ಲೆ ಮಾಡಿ ರಕ್ತಗಾಯಪಡಿಸಿ ನನ್ನನು ಸಾರ್ವಜನಿಕ ರಸ್ತೆಯಲ್ಲಿ ಅರೆಬೆತ್ತಲು ಮಾಡಿ ಜಗಳ ಬಿಡಿಸಲು ಬಂದ ನನ್ನ ಮಗಳಾದ ಶಶಿಕಲಾಳನ್ನು ಹೊಡೆದು ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಮನೆಗೆ ಹಾನಿ ಉಂಟುಮಾಡಿ ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನಿನ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಹಾಗೂ ನನ್ನ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ತಡವಾಗಿ ಬಂದು ದೂರು ನೀಡುತ್ತಿದ್ದಾನೆಂದು ನೀಡಿದ ದೂರಿನ ಮೇರೆಗೆ.
|
14
|
Kodihalli PS
|
Cr.No:0017/2022
(IPC 1860 U/s 448,323,504,114,34 )
|
02/02/2022
|
CRIMINAL TRESPASS - House
|
Under Investigation
|
|
|
ದಿನಾಂಕ: 02.02.2022 ರಂದು ಸಂಜೆ 16.00 ಗಂಟೆಗೆ ಪಿರ್ಯಾದಿ ಮಹದೇವಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈಗ್ಗೆ 3 ವರ್ಷದಿಂದ ಸರೋಜಮ್ಮ ರವರ ಮಗ ಮಣಿ ಎಂಬುವನು ಕುಡಿದ ಅಮಲಿನಲ್ಲಿ ನಮ್ಮ ಮನೆ ಹತ್ತಿರ ಬಂದು ನಿನ್ನ ಗಂಡನಿಗೆ 2-3 ಲಕ್ಷ ಹಣ ಕೊಟ್ಟಿದ್ದೇನೆ ಬಾರೆ ಎಂದು ಪ್ರತಿ ದಿನ ನನ್ನ ಕೈ ಹಿಡಿದು ಎಳೆದು ನನಗೆ ಕೆಟ್ಟ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡುತ್ತಿರುತ್ತಾನೆ. ಅವರ ತಾಯಿ ಸರೋಜಮ್ಮ ರವರು ಮನಗ ಪರ ಬಂದು ಗಲಾಟೆ ಮಾಡುತ್ತಾಳೆ. ಇದಕ್ಕೆಲ್ಲ ಮಣೀ ಮಾವನ ಮಗ ಕೀತರ್ಿ ಬಿನ್ ರಾಮಕೃಷ್ಣ ಎಂಬುವನು ಅವರಿಗೆ ಸಪೋಟರ್್ ಮಾಡಿಕೊಂಡು ಜಗಳ ಬೀಳಿಸುತ್ತಾನೆ. ದಿನಾಂಕ: 01.02.2022 ರಂದು ರಾತ್ರಿ 10.00 ಗಂಟೆಯ ಸಮಯದಲ್ಲಿ ಮಣಿ ಎಂಬುವನು ಕುಡಿದ ಅಮಲಿನಲ್ಲಿ ಅವರ ತಾಯಿ ಸರೋಜಮ್ಮ ಮಾಔನ ಮಗ ಕೀತರ್ಿ ತಮ್ಮ ಸುರೇಶ ಎಲ್ಲರನ್ನು ನಮ್ಮ ಮನೆಯ ಹತ್ತಿರ ಕರೆಸಿಕೊಂಡು 2-3 ಲಕ್ಷ ಹಣಕೊಡಬೇಕು ನಿನ್ನ ಗಂಡ ಎಂದು ಹೇಳಿ ನನಗೆ ಬಾಯಿಗೆ ಬಂದಂತೆ ಕೆಟ್ಟ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಎಲ್ಲರೂ ನನ್ನ ಬಟ್ಟೆ ಹಿಡಿದು ಧರಧರನೇ ಮನೆಯಿಂದ ಆಚೆಗೆ ಎಳೆದು ಕೈಗಳಿಂದ ನನ್ನ ಬಟ್ಟೆ ಎಳೆದು ಅರಿಹದು ಮೈ ಮೇಲೆಲ್ಲ ಕೈಗಳಿಂದ ಹೊಡೆದು ನೋವುಪಡಿಸಿದರು. ಮಣಿ ನನ್ನ ಕೈ ಬೆರಳು ಕೈಗೆ ಬಾಯಿಂದ ಕಚ್ಚಿ ಗಾಯ ಮಾಡಿದ್ದಾನೆ.ಎಲ್ಲರೂ ಎದೆ ತಲೆ ಮುಖದ ಮೇಲೆ ಕೈ ಮಷ್ಟಿಯಿಂದ ಹೊಡೆದು ನೋವುಪಡಿಸಿದ್ದಾರೆ ಆದ್ದರಿಂದ ತಾವು ಮೇಲ್ಕಂಡವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ನನಗೆ ನ್ಯಾಯಕೊಡಿಸಬೇಕೆಂದು ನೀಡಿದ ದೂರಿನ ಮೇರೆಗೆ.
|
15
|
M.K. Doddi PS
|
Cr.No:0011/2022
(IPC 1860 U/s 143,504,506,114,341,149 )
|
02/02/2022
|
CRIMINAL INTIMIDATION - Criminal Intimidation
|
Under Investigation
|
|
|
ದಿನಾಂಕ: 02.02.2022 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ. ನಾನು ಸಾಮಾಜಿಕ ಹಾಗೂ ಆರ್.ಟಿ.ಐ ಕಾರ್ಯಕರ್ತನಾಗಿರುತ್ತೇನೆ, ಹಾಗೂ ವ್ಯವಸಾಯವನ್ನು ಸಹ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಗ್ರಾಮದ ಹೈಸ್ಕೂಲ್ ಕಾಂಪೌಂಡ್ ನಿರ್ಮಾಣದ ಕಾಮಗಾರಿಯನ್ನು ಎನ್.ಎಂ.ಆರ್ ರೀತಿಯಲ್ಲಿ ಕಾರ್ಮಿಕರಿಂದ ಮಾಡಿಸದೆ ಬೇರೆ ಕಾರ್ಮಿಕರನ್ನು ಕರೆದುಕೊಂಡು ಮಾಡಿಸುತ್ತಿದ್ದಾರೆಂದು ನನಗೆ ತಿಳಿದು ಬಂದಿದ್ದರಿಂದ ನಾನು ದಿನಾಂಕ: 18.12.2021 ರಂದು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಸ್ಥಳಕ್ಕೆ ಹೋಗಿ ವಿಡಿಯೋ ಮಾಡಲು ಹೋದಾಗ ನಮ್ಮ ಗ್ರಾಮದ ಹೆಚ್.ಕೆ.ಸ್ವಾಮಿ, ಸರಸ್ಪತಿ, ಶೀಲಮ್ಮ, ಕೆಂಚಮ್ಮ, ಮರಿಯಮ್ಮ, ಭಾಗ್ಯ, ಚಿಕ್ಕತಾಯಮ್ಮ, ಶಿವರಾಜು ಇವರುಗಳು ನನ್ನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೋಳಿ ಮಕ್ಕಳು ತಾವು ಮಾಡಿಸುವುದಿಲ್ಲ ನಮ್ಮನ್ನೂ ಸಹ ಮಾಡಲು ಬಿಡುವುದಿಲ್ಲ ಲೋಪರ್ ನನ್ನ ಮಕ್ಕಳು ಎಂದು ಅವಾಚ್ಯ ಶಬ್ದಗಳಿಂದ ಇವರಿಗೆ ಕಾಲೋನಿ ಕಾಂತರಾಜ, ದಾಸಿಬುಡ್ಡನ ಮಗ ರಾಜು, ಹೆಚ್.ಕೆ.ಕುಮಾರ ರವರುಗಳು ಕುಮ್ಮಕ್ಕು ನೀಡಿ ನನ್ನನ್ನು ಹೊಡೆಯಲು ಬರುತ್ತಾರೆ ಆಗ ನಾನು ಇವರಿಂದ ತಪ್ಪಿಸಿಕೊಂಡು ನಮ್ಮ ತೋಟಕ್ಕೆ ಹೋದಾಗ ಅಲ್ಲಿಗೂ ಸಹ ಹಿಂಬಾಲಿಸಿಕೊಂಡು ಗಾರೆ ಮೇಸ್ತ್ರಿ ಹಾಗೂ ಎಲ್ಲರೂ ಬಂದು ಬಾರೊಲೋ ಬೋಳಿ ಮಗನೆ ನಿನ್ನನ್ನು ಮುಗಿಸುತ್ತೇವೆ ವಿಡಿಯೋ ಮಾಡಿಕೊ ಎಂದು ರಸ್ತೆಯಲ್ಲೇ ಬೈದು ನಾನು ಮನೆಗೆ ಹೋಗದಂತೆ ಅಡ್ಡಗಟ್ಟಿ ಹೊಡೆಯಲು ಪ್ರಯತ್ನಿಸಿರುತ್ತಾರೆ. ಇವರಿಂದ ನಾನು ತಪ್ಪಿಸಿಕೊಳ್ಳಲು ಬೇಲಿಯ ಪೊದೆಯಲ್ಲಿ ಅವಿತುಕೊಂಡು ತಪ್ಪಿಸಿಕೊಂಡಿರುತ್ತೇನೆ. ಆಗ ಇವರೆಲ್ಲರೂ ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಸುಳ್ಳು ಕೇಸನ್ನು ದಾಖಲು ಮಾಡಿಸಿರುತ್ತಾರೆ, ಈ ಹಿಂದೆ ನಾನು ಇವರ ಮೇಲೆ ಕೇಸನ್ನು ದಾಖಲು ಮಾಡಿದ್ದು ಆ ಕೇಸು ನ್ಯಾಯಾಲಯದಲ್ಲಿ ನಡೆಯುತ್ತಿರುತ್ತದೆ, ಈ ಕೇಸುಗಳನ್ನು ಗೆಲ್ಲಲು ಸಾಧ್ಯವಾಗದೆ ನನ್ನ ಮೇಲೆ ಈ ರೀತಿ ಸುಳ್ಳು ಕೇಸನ್ನು ನೀಡಿರುತ್ತಾರೆ ಆದ್ದರಿಂದ ಮೇಲ್ಕಂಡ ವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ಜಾಮೀನು ಪಡೆದು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆಂತ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ.
|
16
|
Magadi PS
|
Cr.No:0025/2022
(CHILD LABOUR (PROHIBITION & REGULATION) ACT,1986 U/s 3,14(a) )
|
02/02/2022
|
CHILDREN ACT - Child Labour (Prohibition & Regulation) Act 1986
|
Under Investigation
|
|
|
ದಿನಾಂಕ.02.02.2022 ರಂದು ಸಂಜೆ 04.15 ಗಂಟೆಗೆ ಪಿರ್ಯಾದುದಾರರಾದ ರಾಜಶೇಖರಯ್ಯ.ಬಿ.ಎಂ ಕಾರ್ಮಿಕ ನಿರೀಕ್ಷಕರು, ಮಾಗಡಿ ವೃತ್ತ, ಮಾಗಡಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ.02.02.2022 ರಂದು ಮಾಗಡಿ ಟೌನ್ ವಾಸವೀ ದೇವಸ್ಥಾನದ ರಸ್ತೆ ವಾಸವಾಂಬ ಜ್ಯೂಯಲರ್ಸ್ ಮುಂಭಾಗ ಇರುವ ಶ್ರೀ ನಾಗರಾಜ ಹಾರ್ಡ್ ವೇರ್ & ಎಲೆಕ್ಟ್ರಿಕಲ್ಸ್ ಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿದಾಗ 13 ವರ್ಷ 05 ತಿಂಗಳ ವಯಸ್ಸಿನ ಮಾಸ್ಟರ್ ನಿತೀಶ್ ಎಂಬ ಬಾಲಕಾರ್ಮಿಕನು ಹೆಲ್ಪರ್ ಆಗಿ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು ಸದರಿ ಬಾಲಕನನ್ನು ರಕ್ಷಣೆ ಮಾಡಿ ಮಕ್ಕಳ ರಕ್ಷಣಾ ಸಮಿತಿ ಚನ್ನಪಟ್ಟಣ ಗೆ ಹಸ್ತಾಂತರಿಸಿದ್ದು ಬಾಲಕನನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲಾಗಿ, ಸದರಿ ಬಾಲಕನ ವರದಿಯು ಕೊರೋನಾ ಪಾಸಿಟೀವ್ ಆಗಿದ್ದು. ಇದರನ್ವಯ ಸಿ.ಡಬ್ಲೂ.ಸಿ ಅಧ್ಯಕ್ಷರನ್ನು ಸಂಪರ್ಕಿಸಿ ಅವರ ನಿದೇರ್ಶನ ಮೇರೆಗೆ ಹಾಗೂ ಬಾಲಕನ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರು ಹೋಂ ಐಸೋಲೇಷನ್ ಗಾಗಿ ಸೂಚಿಸಿರುವುದರಿಂದ ಬಾಲಕಾರ್ಮಿಕನನ್ನು ಶ್ರೀ ನಾಗರಾಜ ಹಾರ್ಡ್ ವೇರ್ & ಎಲೆಕ್ಟ್ರಿಕಲ್ಸ್ ನ ಮಾಲೀಕರಾದ ಶ್ರೀ ಪಣ್ಣಲಾಲ್ ಬಿನ್ ಕಾನರಾಮ್, ರವರ ವಶಕ್ಕೆ ಒಪ್ಪಿಸಿ. ಸ್ಥಳದಲ್ಲಿ ನಿರೀಕ್ಷಣಾ ಟಿಪ್ಪಣಿ ಜಾರಿ ಮಾಡಲಾಗಿರುತ್ತದೆ. ಸದರಿ ಸಂಸ್ಥೆಯ ಮಾಲೀಕರ ವಿರುದ್ದ ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ಕಲಂ.03 ಮತ್ತು 14(ಎ) ರನ್ವಯ ದೂರು ದಾಖಲಿಸಿ ಇತ್ಯಾದಿ ದೂರಿನ ಮೇರೆಗೆ ಪ್ರ.ವ.ವರದಿ.
|
17
|
Magadi PS
|
Cr.No:0026/2022
(KARNATAKA EXCISE ACT, 1965 U/s 15(A),32(3) )
|
02/02/2022
|
KARNATAKA STATE LOCAL ACTS - Karnataka Excise Act 1965
|
Under Investigation
|
|
|
ಮಾಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ ಕೃಷ್ಣಪ್ಪ ಬಿ.ವಿ ರವರು ನೀಡಿದ ವರದಿ ಏನೆಂದರೆ. ದಿನಾಂಕ:02/02/2022 ರಂದು ಸಂಜೆ 6.30 ಗಂಟೆಯ ಸಮಯದಲ್ಲಿ ನಾನು 02 ಗ್ರಾಮ ಗಸ್ತಿನ ಸಿಬ್ಬಂದಿಯಾದ ಪಿಸಿ 117 ಈರಣ್ಣ ರವರ ಜೊತೆಯಲ್ಲಿ ಬೆಳಗುಂಬ, ಹರ್ತಿ ಕದರಯ್ಯನಪಾಳ್ಯ ಗ್ರಾಮದ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ ಬಾತ್ಮೀದಾರರಿಂದ ಬಂದ ಮಾಹಿತಿ ಏನೆಂದರೆ. ಮಾಗಡಿ-ಗುಡೇಮಾರನಹಳ್ಳಿ ಮುಖ್ಯ ರಸ್ತೆ ಸಿಡಗನಹಳ್ಳಿ ಗ್ರಾಮ ಬಳಿ ಇರುವ ಚಿಲ್ಲರೆ ಅಂಗಡಿಯೊಂದರಲ್ಲಿ ಅದರ ಮಾಲೀಕರಾದ ಭರತ್ ಎಂಬುವವರು ಯಾವುದೇ ಪರವಾನಿಗೆ ಇಲ್ಲದೆ ಮದ್ಯವನ್ನು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುತ್ತಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚಾಯ್ತಿದಾರರನ್ನು ಹರ್ತಿ ಗೇಟ್ ಗೆ ಬರಮಾಡಿಕೊಂಡು ವಿಚಾರವನ್ನು ತಿಳಿಸಿ ಅವರು ದಾಳಿ ಮಾಡಲು ಒಪ್ಪಿಕೊಂಡ ಮೇರೆಗೆ ನಂತರ ನಾನು ಮತ್ತು ಪಿಸಿ 117 ಈರಣ್ಣ ಹಾಗೂ ಪಂಚರೊಂದಿಗೆ ಸಂಜೆ 7.00 ಗಂಟೆಗೆ ಮಾಗಡಿ-ಗುಡೇಮಾರನಹಳ್ಳಿ ಮುಖ್ಯ ರಸ್ತೆ ಸಿಡಗನಹಳ್ಳಿ ಗ್ರಾಮದ ಭರತ್ ರವರ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿ ಬಳಿ ಕೆಲವು ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿದ್ದು ನಾವು ದಾಳಿ ಮಾಡಲು ಸನ್ನದರಾಗುವಷ್ಟ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳ ಬರುವಿಕೆಯನ್ನು ಗಮನಿಸಿದ ಸಾರ್ವಜನಿಕರು ನಮ್ಮನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು ನಂತರ ಅಂಗಡಿ ಬಳಿ ಇದ್ದ ಭರತ್ ಎಂಬಾತನನ್ನು ವಶಕ್ಕೆ ಪಡೆದು ಪಂಚಾಯ್ತಿದಾರರ ಸಮಕ್ಷಮ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಕುಡಿದು ಬಿಸಾಡಿದ್ದ 180 ಎಂ.ಎಲ್ 04 ಓಡ್ಡ್ ಟವರಿನ್ ಖಾಲಿ ಪೌಚ್ ,90 ಎಂ.ಎಲ್ 06 ಓಡ್ಡ್ ಟವರಿನ್ ಖಾಲಿ ಪೌಚ್, 90 ಎಂ.ಎಲ್ 06 ಓರಿಜನಲ್ ಚಾಯ್ಸ್ ಖಾಲಿ ಮದ್ಯದ ಪೌಚ್ ಗಳನ್ನು ಮತ್ತು ತುಂಬಿರುವ 180 ಎಂ.ಎಲ್ ನ 03 ಓರಿಜನಲ್ ಚಾಯ್ಸ್ ಮದ್ಯದ ಪೌಚ್ ಗಳನ್ನು ಮತ್ತು 05 ಪ್ಲಾಸ್ಟಿಕ್ ಲೋಟಗಳನ್ನು ಪಂಚಾಯ್ತಿದಾರರ ಸಮಕ್ಷಮ ವಿದ್ಯುತ್ ದೀಪದ ಬೆಳಕಿನಲ್ಲಿ ಸಂಜೆ 7.15 ರಿಂದ ಸಂಜೆ 7.45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ನಂತರ ಭರತ್ ರವರು ಮಧ್ಯಪಾನ ಮಾರಾಟ ಮಾಡಲು ಹಾಗೂ ಮಧ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳವಕಾಶ ಮಾಡಿಕೊಡಲು ನಿನ್ನ ಬಳಿ ಪರವಾನಿಗೆ ಇದೆಯೇ ಎಂದು ಕೇಳಲಾಗಿ ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ನುಡಿದುದರ ಮೇರೆಗೆ ನಂತರ ಆತನ ಹೆಸರು ವಿಳಾಸ ಕೇಳಲಾಗಿ ಭರತ್ ಬಿನ್ ರಂಗಣ್ಣ, 20 ವರ್ಷ, ಕುರುಬರು, ಚಿಲ್ಲರೆ ಅಂಗಡಿ ವ್ಯಾಪಾರ, ಸಿಡಗನಹಳ್ಳಿ ಗ್ರಾಮ, ಮಾಗಡಿ ತಾಲ್ಲೂಕು ಎಂಬುದಾಗಿ ತಿಳಿಸಿರುತ್ತಾನೆ.
ನಂತರ ಅಂಗಡಿ ಮಾಲೀಕ ಭರತ್ ಎಂಬಾತನನ್ನು ಮತ್ತು ಅಮಾನತ್ತುಪಡಿಸಿಕೊಂಡ ಮಾಲುಗಳನ್ನು ವಶಕ್ಕೆ ತಗೆದುಕೊಂಡು ರಾತ್ರಿ 8.05 ಗಂಟೆಗೆ ಠಾಣೆಗೆ ಒಂದು ಮುಂದಿನ ಕ್ರಮಕ್ಕಾಗಿ ಠಾಣಾ ಎಸ್.ಹೆಚ್.ಓ ರವರಿಗೆ ರಾತ್ರಿ 8.30 ಗಂಟೆಗೆ ವರದಿಯನ್ನು ನೀಡಿದ ಮೇರೆಗೆ ಪ್ರ ವ ವರದಿ.
|
18
|
Ramanagara CEN Crime PS
|
Cr.No:0005/2022
(INFORMATION TECHNOLOGY ACT 2008 U/s 66(C),66(D) ; IPC 1860 U/s 420 )
|
02/02/2022
|
CYBER CRIME - Information Technology Act 2000, 2009
|
Under Investigation
|
|
|
ದಿನಾಂಕ: 02.02.2022 ರಂದು ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಡಿ.ಕೆ.ಎಸ್ ಹಿಪ್ರೋಕ್ಯಾಂಪಸ್ ಶಾಲೆ, ಕೋಡಿಹಳ್ಳಿಯಲ್ಲಿ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದು ಮೈಸೂರು ಶಕ್ತಿನಗರದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು ಖಾತೆ ಸಂಖ್ಯೆ 2981101014067 ಹಾಗೂ ಎ.ಟಿ.ಎಂ. ಕಾರ್ಡ್ ಸಂಖ್ಯೆ 5089252981021421 ಆಗಿರುತ್ತದೆ. ದಿನಾಂಕ: 08.12.2021 ರಿಂದ ದಿನಾಂಕ: 30.01.2022 ರವರೆಗೆ ಒಟ್ಟು 3,94,000/- ರೂ ಹಣ ಕಡಿತವಾಗಿದ್ದು ತನ್ನ ಮೊಬೈಲ್ ಗೆ ಯಾವುದೇ ಮೆಸೇಜ್ ಗಳು ಬಂದಿರುವುದಿಲ್ಲ, ಎಟಿಎಂ ಕಾರ್ಡ್ ನನ್ನ ಬಳಿಯೇ ಇದ್ದರೂ ಮೋಸದಿಂದ ನನ್ನ ಖಾತೆಯಿಂದ ಹಣ ಡ್ರಾ ಆಗಿದ್ದು ಡ್ರಾ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ
|
19
|
Ramanagara Town PS
|
Cr.No:0006/2022
(IPC 1860 U/s 00MP )
|
02/02/2022
|
MISSING PERSON - Man
|
Under Investigation
|
|
|
ದಿನಾಂಕ 02-02-2022 ರಂದು ಮದ್ಯಾಹ್ನ 03.00 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ನವ್ಯಶ್ರೀ ಕೋಂ ಸಿದ್ದರಾಜು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ್ಗೆ 09 ವರ್ಷಗಳ ಹಿಂದೆ ರಾಮನಗರ ಟೌನ್ ಮಾದಾಪುರ ಗ್ರಾಮದ ರಾಮಕೃಷ್ಣಯ್ಯ ರವರ ಮಗನಾದ ಸಿದ್ಧರಾಜುರವರನ್ನು ಮದುವೆಯಾಗಿದ್ದು ನಮಗೆ 08 ವರ್ಷದ ಹೆಣ್ಣು ಮಗುವಿರುತ್ತೆ. ನನ್ನ ಗಂಡ ಸಿದ್ದರಾಜು ನಾಯಿ ಸಾಕಾಣಿಕೆ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡ ದಿನಾಂಕ 01-02-2022 ರಂದು ಮಧ್ಯಾಹ್ನ 03.30 ಗಂಟೆ ಸಮಯಕ್ಕೆ ಕೆಲಸದ ಮೇಲೆ ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೊಂಡಾ ಆಕ್ಟೀವಾ ಗಾಡಿಯನ್ನು ತೆಗೆದುಕೊಂಡು ಹೋದರು, ಮತ್ತೆ ಸಂಜೆ 07.00 ಗಂಟೆಗೆ ಅವರ ಮೊಬೈಲ್ ನಿಂದ ನನ್ನ ಮೊಬೈಲ್ ಗೆ ಪೋನ್ ಮಾಡಿ ಸ್ವಲ್ಪ ಹೊತ್ತಿನ ನಂತರ ಮನೆಗೆ ಬರುತ್ತೇನೆಂದು ಹೇಳಿದರು ರಾತ್ರಿ ಸುಮಾರು 11.30 ಗಂಟೆಗೆ ಆದರೂ ಮನೆಗೆ ಬಂದಿರಲಿಲ್ಲ ಎಲ್ಲೋ ಕೆಲಸ ಮುಗಿಸಿಕೊಂಡು ಬರಬಹುದೆಂದು ನಾನು ಮಲಗಿಕೊಂಡಿದ್ದೆನು. ಮತ್ತೆ ಈ ದಿನ ದಿನಾಂಕ: 02-02-2022 ರಂದು ಬೆಳಿಗ್ಗೆ 06.30 ಗಂಟೆ ಸಮಯದಲ್ಲಿ ಮನೆಯಿಂದ ಹೊರಗಡೆ ಬಂದು ನೋಡಲಾಗಿ ನನ್ನ ಗಂಡ ತೆಗೆದುಕೊಂಡು ಹೋಗಿದ್ದ ಹೊಂಡಾ ಆಕ್ಟೀವಾ ಗಾಡಿಯು ನಮ್ಮ ಮನೆಯ ಪಕ್ಕದಲ್ಲಿರುವ ಮಾವಿನ ತೋಟದಲ್ಲಿ ನಿಂತಿದ್ದು ಅಲ್ಲಿ ನನ್ನ ಗಂಡ ಕಾಣಿಸಲಿಲ್ಲ ಗಾಡಿಯಲ್ಲಿ ಕೀ ಬಿಟ್ಟಿದ್ದು ಕೀ ಯಿಂದ ಡಿಕ್ಕಿಯನ್ನು ತೆಗೆದಾಗ ಡಿಕ್ಕಿ ಒಳಗೆ ನನ್ನ ಗಂಡನ ಮೊಬೈಲ್ ಇದ್ದು ನಾನು ಗಾಬರಿಯಾಗಿ ಅಕ್ಕ-ಪಕ್ಕದವರನ್ನು ವಿಚಾರಿಸಿದಾಗ ಎಲ್ಲಿಯೂ ನನ್ನ ಗಂಡ ಕಾಣಿಸಲಿಲ್ಲ, ನಾನು ನಮ್ಮ ಸಂಬಂಧಿಕರ ಬಳಿ ವಿಚಾರಿಸಲಾಗಿ ಅಲ್ಲಿಗೂ ಸಹ ಅವರು ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ನನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ.
|
20
|
Ramanagara Traffic PS
|
Cr.No:0013/2022
(IPC 1860 U/s 279,337 )
|
02/02/2022
|
MOTOR VEHICLE ACCIDENTS NON-FATAL - Other Roads
|
Under Investigation
|
|
|
ದಿನಾಂಕ:-02.02.2022 ರಂದು ಗಾಯಾಳು ಪ್ರಸನ್ನ ಎಸ್ ಕೆ ರವರು ನಾರಾಯಣ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:-02.02.2022 ರಂದು ಬೆಳಿಗ್ಗೆ ನನ್ನ ಬಾಬ್ತು ಕೆಎ-42 ಈ.ಬಿ-7297 ಹೊಂಡಾ ದ್ವಿ ಚಕ್ರ ವಾಹನದಲ್ಲಿ ರಾಮನಗರಕ್ಕೆ ಹೋಗಲು ಶ್ಯಾನುಭೋಗನಹಳ್ಳಿ ಇಂದ ಹೊರಟು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ಚನ್ನೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಬಳಿ ರಸ್ತೆಯ ಎಡಭಾಗದಲ್ಲಿ ರಾಮನಗರದ ಕಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-06 ಬಿ-5304 ಟಾಟಾ ಗೂಡ್ಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ದ್ವಿ ಚಕ್ರ ವಾಹನದಿಂದ ಮೇಲಕ್ಕೆ ಎಗರಿ ಕೆಳಗೆ ಬಿದ್ದು ನನ್ನ ಬಲಗೈ, ಬಲಗಾಲಿಗೆ ತೀವ್ರ ಗಾಯಗಳಾಗಿರುತ್ತವೆ. ಸ್ಥಳದಲ್ಲಿದ್ದ ಸಾರ್ವಜನಿಕರು ನನ್ನನ್ನು ಉಪಚರಿಸಿ ಚಿಕಿತ್ಸೆಗಾಗಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಅಪಘಾತಕ್ಕೀಡಾದ ಎರಡೂ ವಾಹನಗಳು ಅಪಘಾತದ ಸ್ಥಳದಲ್ಲಿದ್ದು, ಈ ಅಪಘಾತಕ್ಕೆ ಕೆಎ-06 ಬಿ-5304 ಟಾಟಾ ಗೂಡ್ಸ್ ವಾಹನ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಕಾರಣವಾಗಿದ್ದು ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂಬುದು ಕೋರಿ ನೀಡಿದ ಹೇಳಿಕೆ ಮೇರೆಗೆ
|
21
|
Sathanoor PS
|
Cr.No:0026/2022
(INDIAN MOTOR VEHICLES ACT, 1988 U/s 192(A),177 ; PREVENTION OF CRUELTY TO ANIMALS ACT, 1960 U/s 11(1) (A) ; Transportation of Animal Act 1978 U/s 97 ; THE KARNATAKA PREVENTION OF SLAUGHTER AND PRESERVATION OF CATTLE ACT-2020 U/s 4,5,12 )
|
02/02/2022
|
KARNATAKA STATE LOCAL ACTS - Karnataka Prevention of Slaughter and Preservation of Cattle Act 2020
|
Under Investigation
|
|
|
ಪಿರ್ಯಾದಿ ಸಂಜಯ್ ಕುಲಕರ್ಣಿ ರವರು ದಿನಾಂಕ: 02.02.2022 ರಂದು ಬೆಳಿಗ್ಗೆ 04:30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರು ಏನೆಂದರೆ ಪಿರ್ಯಾದಿರವರು ಗೌಗ್ಯಾನ್ ಫೌಂಡೇಷನ್ ನ ಎನ್ಜಿಓ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 02.02.2022 ರಂದು ಬೆಳಗಿನ ಜಾವ 04:20 ಗಂಟೆ ಸಮಯದಲ್ಲಿ ಈಚರ್ ಕ್ಯಾಂಟರ್ ವಾಹನ ನಂ KA-01 AD-5183 ವಾಹನದಲ್ಲಿ ಸುಮಾರು 26 ಜಾನುವಾರುಗಳನ್ನು ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಸಾಗಾಣೆ ಮಾಡುತ್ತಿದ್ದು ವಿಚಾರವನ್ನು ಪೊಲೀಸ್ ಕಂಟ್ರೋಲ್ ರೂಂ ಗೆ ತಿಳಿಸಿದ್ದು ಸಾತನೂರು ಪೊಲೀಸ್ ರವರು ಸಾತನೂರು ಸರ್ಕಲ್ ಬಳಿ ತಡೆದು ತಮ್ಮ ವಶಕ್ಕೆ ಪಡೆದಿರುತ್ತಾರೆ, ಅಕ್ರಮವಾಗಿ ಜಾನುವಾರುಗಳನ್ನು ಈಚರ್ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದ KA-01 AD-5183 ಹೀಚರ್ ಕ್ಯಾಂಟರ್ ವಾಹನದ ಮಾಲೀಕ ಹಾಗೂ ಚಾಲಕನ ಮೇಲೆ ಕಾನೂನು ರೀತಿ ಕ್ರಮಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.
|